Home
ಸುದ್ದಿಜಾಲ

ಕೈ ಜೋಡಿಸಿದ ಗೂಗಲ್‌-ಹೆಚ್‌ಪಿ, ವಿದ್ಯಾರ್ಥಿಗಳಿಗೆ ಇನ್ಮುಂದೆ 20 ಸಾವಿರಕ್ಕೆ ಲ್ಯಾಪ್‌ಟಾಪ್‌ ಲಭ್ಯ!

ಲ್ಯಾಪ್‌ಟಾಪ್‌ಗಳು (Laptops) ಇಂದು ಅಗತ್ಯ ಡಿವೈಸ್‌ಗಳಾಗಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳು ಬಹಳ ಮುಖ್ಯವಾದ ವಸ್ತುಗಳಾಗಿದ್ದರೂ ಸಹ ಹಲವಾರು ವಿದ್ಯಾರ್ಥಿಗಳಿಗೆ ಇವುಗಳನ್ನು ಖರೀದಿ ಮಾಡಲು ಸಾಧ್ಯ ಆಗುವುದಿಲ್ಲ. ಯಾಕೆಂದರೆ ದುಬಾರಿ ಬೆಲೆ. ಆದರೆ, ಇನ್ಮುಂದೆ ಎಲ್ಲಾ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ ಬೆಲೆಗೆ ಲ್ಯಾಪ್‌ಟಾಪ್‌ ಖರೀದಿ ಮಾಡಬಹುದಾಗಿದೆ.

ಹೌದು, ಈಗಾಗಲೇ ಕೆಲವು ಸರ್ಕಾರಗಳು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುತ್ತವೆ. ಆದರೆ, ಕಡಿಮೆ ಸಾಮರ್ಥ್ಯ ಇರುವ ಈ ಲ್ಯಾಪ್‌ಟಾಪ್‌ಗಳ ಮೂಲಕ ಅಗತ್ಯ ಕೆಲಸ ಮಾಡುವುದು ಕಷ್ಟಕರವಾದ ಕೆಲಸ. ಈ ನಡುವೆ ವಿದ್ಯಾರ್ಥಿಗಳಿಗೆ ಅಗ್ಗದ ದರದಲ್ಲಿ ಅತ್ಯುತ್ತಮ ಲ್ಯಾಪ್‌ಟಾಪ್‌ ಪರಿಚಯಿಸಲು ಗೂಗಲ್‌ ಹಾಗೂ ಹೆಚ್‌ಪಿ(Google, HP) ಕೈಜೋಡಿಸಿವೆ. ಹಾಗಿದ್ರೆ, ಏನಿದು ಗುಡ್ ನ್ಯೂಸ್?, ಯಾಕೆ ಈ ನಿರ್ಧಾರ ಮಾಡಲಾಗಿದೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿದ್ಯಾರ್ಥಿಗಳಿಗೆ ಇನ್ಮುಂದೆ 20 ಸಾವಿರಕ್ಕೆ ಲ್ಯಾಪ್‌ಟಾಪ್‌ ಲಭ್ಯ!

ಕ್ರೋಮ್‌ಬುಕ್‌ಗಳನ್ನು ತಯಾರಿಸಲು ಕೈಜೋಡಿಸಿದ ಗೂಗಲ್‌-ಹೆಚ್‌ಪಿ: ವಿದ್ಯಾರ್ಥಿಗಳಿಗೆ ಭಾರತದಲ್ಲಿ ಬಜೆಟ್ ಸ್ನೇಹಿ ಗೂಗಲ್‌ ಕ್ರೋಮ್‌ ಬುಕ್‌ (Google Chrome Book) ಲ್ಯಾಪ್‌ಟಾಪ್‌ಗಳನ್ನು ತಯಾರಿಸಲು ಗೂಗಲ್‌ ಹಾಗೂ ಹೆಚ್‌ಪಿ ಒಂದಾಗಿ ಕಾರ್ಯತಂತ್ರ ರೂಪಿಸಿವೆ. ಈ ಯೋಜನೆಯು ಮೇಕ್ ಇನ್ ಇಂಡಿಯಾ (Make in India) ಉಪಕ್ರಮದ ಭಾಗವಾಗಿದೆ. ಅದರಲ್ಲೂ ಹೆಚ್‌ಪಿ ಯ ಚೆನ್ನೈ ಮೂಲದ ಫ್ಲೆಕ್ಸ್ ಫೆಸಿಲಿಟಿ ಮೂಲಕ ಇವುಗಳನ್ನು ತಯಾರು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಇನ್ನು ಈ ಉಪಕ್ರಮದಡಿಯಲ್ಲಿ ತಯಾರಿಸಲಾದ ಲ್ಯಾಪ್‌ಟಾಪ್‌ಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ 20,000 ರಿಂದ ಪ್ರಾರಂಭವಾಗುವ ಬೆಲೆಯೊಂದಿಗೆ ವಿತರಿಸಲು ಈ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಸಹ ಹೊಂದಲಾಗಿದೆ. ಈ ಉತ್ಪಾದನೆಯು ಅಕ್ಟೋಬರ್ 2 ರಂದು ಪ್ರಾರಂಭವಾಗಲಿದ್ದು, ಪ್ರಾಥಮಿಕವಾಗಿ ಶಿಕ್ಷಣ ವಲಯದಲ್ಲಿ ಕೈಗೆಟುಕುವ ಪಿಸಿಗಳ ಬೇಡಿಕೆಯನ್ನು ಪೂರೈಸುವ ಪ್ರಾಥಮಿಕ ಗುರಿಯನ್ನು ಹೊಂದಲಾಗಿದೆ.

ಈ ಸಂಬಂಧ ಹೆಚ್‌ಪಿ ಇಂಡಿಯಾ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಮಾತನಾಡಿ, ಭಾರತದಲ್ಲಿ ಡಿಜಿಟಲ್ ಇಕ್ವಿಟಿ ಮತ್ತು ಡಿಜಿಟಲ್ ಶಿಕ್ಷಣ ಉಪಕ್ರಮಗಳನ್ನು ಬೆಂಬಲಿಸಲು ಹೆಚ್‌ಪಿ ಯ ಬದ್ಧತೆಯನ್ನು ವ್ಯಕ್ತಪಡಿಸಲಾಗಿದೆ. ಸ್ಥಳೀಯವಾಗಿ ಕ್ರೋಮ್‌ಬುಕ್‌ ಲ್ಯಾಪ್‌ಟಾಪ್‌ಗಳನ್ನು ಉತ್ಪಾದಿಸುವ ಮೂಲಕ, ಭಾರತೀಯ ವಿದ್ಯಾರ್ಥಿಗಳು ವೆಚ್ಚ-ಪರಿಣಾಮಕಾರಿ ವೈಯಕ್ತಿಕ ಕಂಪ್ಯೂಟರ್‌ಗಳಿಗೆ ಹೆಚ್ಚಿನ ಪ್ರವೇಶವನ್ನು ಹೊಂದಲಿದ್ದಾರೆ ಎಂದು ತಿಳಿಸಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಹೆಚ್‌ಪಿ ಯ ಸಮರ್ಪಣೆಯನ್ನು ಈ ಮೂಲಕ ತೋರಿಸಲಾಗಿದೆ.

ಗೂಗಲ್‌ನ ಶಿಕ್ಷಣದ ಮುಖ್ಯಸ್ಥ (ದಕ್ಷಿಣ ಏಷ್ಯಾ) ಬನಿ ಧವನ್‌ ಸಹ ಪ್ರತಿಕ್ರಿಯೆ ನೀಡಿದ್ದು, ಗೂಗಲ್ ಈ ಸಹಯೋಗವನ್ನು ಬಜೆಟ್ ಸ್ನೇಹಿ ನೋಟ್‌ಬುಕ್‌ಗಳೊಂದಿಗೆ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತಷ್ಟು ಸಂಯೋಜಿಸುವ ಅವಕಾಶವಾಗಿ ನೋಡುತ್ತದೆ. ಹೆಚ್‌ಪಿ ಸಹಭಾಗಿತ್ವದಲ್ಲಿ ಕ್ರೋಮ್‌ಬುಕ್‌ ನ ಸ್ಥಳೀಯ ಉತ್ಪಾದನೆಯು ಭಾರತದಲ್ಲಿ ಶಿಕ್ಷಣದ ಡಿಜಿಟಲ್ ರೂಪಾಂತರವನ್ನು ಬೆಂಬಲಿಸುವ ಗೂಗಲ್‌ ನ ಮಿಷನ್‌ನಲ್ಲಿ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

ಈ ಸಹಯೋಗವು ಹೆಚ್ಚಿನ ಶಾಲೆಗಳಲ್ಲಿ ತಂತ್ರಜ್ಞಾನದ ಅಳವಡಿಕೆಯನ್ನು ವೇಗಗೊಳಿಸುತ್ತದೆ ಎಂದು ಧವನ್ ಹೇಳಿದ್ದು, ಹೆಚ್‌ಪಿ ಮತ್ತು ಗೂಗಲ್‌ ನಡುವಿನ ಈ ಜಂಟಿ ಉದ್ಯಮವು ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬೆಂಬಲಿಸುತ್ತದೆ, ಮಾತ್ರವಲ್ಲದೆ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳಿಗೆ ಹೆಚ್ಚು ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ಡಿಜಿಟಲ್ ಶಿಕ್ಷಣ ಪರಿಹಾರಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಇನ್ಮುಂದೆ 20 ಸಾವಿರಕ್ಕೆ ಲ್ಯಾಪ್‌ಟಾಪ್‌ ಲಭ್ಯ!

ಫ್ಲೆಕ್ಸ್ ಫೆಸಿಲಿಟಿ ಮೂಲಕ ತಯಾರು: ಚೆನ್ನೈನಲ್ಲಿರುವ ಫ್ಲೆಕ್ಸ್ ಫೆಸಿಲಿಟಿ (Flex Facility) ಒಂದು ಉತ್ಪಾದನಾ ಕಂಪನಿಯಾಗಿದ್ದು, ಇದು ಬ್ರ್ಯಾಂಡ್‌ಗಳಿಗೆ ನವೀನ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ತಲುಪಿಸಲು ಸಹಾಯ ಮಾಡುತ್ತದೆ. ಜೊತೆಗೆ ವಿವಿಧ ಉತ್ಪನ್ನಗಳನ್ನು ಒದಗಿಸಲಾಗುತ್ತದೆ ಅವುಗಳೆಂದರೆ, ಗ್ರಾಹಕ ಡಿವೈಸ್‌ಗಳು, ಆಪ್ಟಿಕಲ್ ಉತ್ಪನ್ನಗಳು, ವಿದ್ಯುತ್ ಸರಬರಾಜು ವಿನ್ಯಾಸ ಪರಿಹಾರಗಳು, ಸೌರ ಟ್ರ್ಯಾಕರ್ ಮತ್ತು ಸಾಫ್ಟ್‌ವೇರ್ ಪರಿಹಾರಗಳು, ವಿತರಣೆ ಮತ್ತು ಲಾಜಿಸ್ಟಿಕ್ಸ್ ಸೇವೆಗಳು ಹಾಗೂ ಆಪಲ್ ಉತ್ಪನ್ನಗಳನ್ನು ಸಹ ಪೂರೈಸುತ್ತದೆ.

Best Mobiles in India

English summary
Google and HP have joined hands to introduce the best laptops for students at affordable prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+