Home
ಸುದ್ದಿಜಾಲ

ಆಂಡ್ರಾಯ್ಡ್ ಎಮ್ ಓಎಸ್ ಬಳಕೆದಾರ ಸ್ನೇಹಿ ಹೇಗೆ?

By Shwetha

ತನ್ನ ವಾರ್ಷಿಕ I/O 2015 ರ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್‌ನಲ್ಲಿ ಗೂಗಲ್ ಹಲವಾರು ವೈಶಿಷ್ಟ್ಯತೆಗಳನ್ನು ಘೋಷಿಸಿದ್ದು ಕಂಪೆನಿಯ ಮುಂದಿನ ಮೊಬೈಲ್ ಆಪರೇಟಿಂಗ್ ವ್ಯವಸ್ಥೆಯಲ್ಲಿ ಇವುಗಳು ಬದಲಾವಣೆಯನ್ನು ಮಾಡಲಿವೆ.

ಓದಿ: ಲಾಲಿಪಪ್‌ಗಿಂತ ಆಂಡ್ರಾಯ್ಡ್ ಎಮ್ ಹೆಚ್ಚು ವಿಶೇಷವಾದುದು ಏಕೆ?

ಓಎಸ್‌ನ ಮುಂದಿನ ಆವೃತ್ತಿಯ ಹೆಸರನ್ನು ಗೂಗಲ್ ಆಂಡ್ರಾಯ್ಡ್ ಎಮ್ ಎಂದು ಕರೆದಿದ್ದು ಇದು ಆಂಡ್ರಾಯ್ಡ್ ಬಳಕೆದಾರರ ಅನುಭವವನ್ನು ಸುಧಾರಿಸುವುದು ಖಂಡಿತ. ಇಂದಿನ ಲೇಖನದಲ್ಲಿ ಆ ವಿಶೇಷತೆಗಳೇನು ಎಂಬುದನ್ನು ಕಂಡುಕೊಳ್ಳೋಣ.

ಅಪ್ಲಿಕೇಶನ್ ಸಂವಹನ

ಅಪ್ಲಿಕೇಶನ್ ಸಂವಹನ

ಬಳಕೆದಾರರು ಟ್ವಿಟ್ಟರ್‌ನಲ್ಲಿ ಲಿಂಕ್ ಕ್ಲಿಕ್ ಮಾಡಿದಾಗ, ಕ್ರೋಮ್ ಬ್ರೌಸರ್ ಮತ್ತು ಅಧಿಕೃತ ಟ್ವಿಟ್ಟರ್ ಅಪ್ಲಿಕೇಶನ್ ನಡುವೆ ಆರಿಸಲು ಕೋರಿಕೊಳ್ಳಲಾಗುತ್ತಿತ್ತು. ಆಂಡ್ರಾಯ್ಡ್ ಎಮ್‌ನಲ್ಲಿ, ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ಲಿಂಕ್ ತೆರೆಯಲು ಯಾವ ಅಪ್ಲಿಕೇಶನ್ ಉತ್ತಮ ಎಂಬುದನ್ನು ಆರಿಸುತ್ತದೆ.

ಸ್ಟ್ಯಾಂಡ್ ಬೈ ಬ್ಯಾಟರಿ ಸಮಯ

ಸ್ಟ್ಯಾಂಡ್ ಬೈ ಬ್ಯಾಟರಿ ಸಮಯ

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬ್ಯಾಟರಿ ಸ್ಟ್ಯಾಂಡ್ ಬೈ ಸಮಯವನ್ನು ಗೂಗಲ್ ಸುಧಾರಿಸಿದ್ದು ಡೋಜ್ ಎಂಬ ವಿಶೇಷ ಫೀಚರ್ ಅನ್ನು ಅಳವಡಿಸಿದೆ.

ಯುಎಸ್‌ಬಿ ಟೈಪ್ ಸಿ

ಯುಎಸ್‌ಬಿ ಟೈಪ್ ಸಿ

ಡಿವೈಸ್ ಚಾರ್ಜ್ ಮಾಡುವ ಹೊಸ ಪ್ರಮಾಣಿತ ವಿಧಾನವಾಗಿದೆ. ಈ ಆಪರೇಟಿಂಗ್ ಸಿಸ್ಟಮ್ ಬಳಕೆದಾರರಿಗೆ ತಮ್ಮ ಡಿವೈಸ್‌ಗಳನ್ನು ಚಾರ್ಜ್ ಮಾಡುವುದು ಇಲ್ಲವೇ ಅದನ್ನು ಬಳಸಿ ಇನ್ನೊಂದು ಡಿವೈಸ್ ಅನ್ನು ಚಾರ್ಜ್ ಮಾಡುವ ಆಯ್ಕೆಯನ್ನು ನೀಡುತ್ತದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್

ಫಿಂಗರ್ ಪ್ರಿಂಟ್ ಸ್ಕ್ಯಾನರ್

ಆಂಡ್ರಾಯ್ಡ್ ಎಮ್ ಒದಗಿಸುತ್ತಿರುವ ಇನ್ನೊಂದು ಫೀಚರ್ ಇದಾಗಿದೆ. ಐಫೋನ್‌ನಲ್ಲಿ ಟಚ್ ಐಡಿ ಇರುವಂತೆಯೇ, ಆಂಡ್ರಾಯ್ಡ್ ಎಮ್ ಬಳಕೆದಾರರು ಫೋನ್ ಅನ್ನು ಅನ್‌ಲಾಕ್ ಮಾಡಬಹುದು ಮತ್ತು ಬೆರಳಚ್ಚಿನ ಮೂಲಕ ಅಪ್ಲಿಕೇಶನ್‌ನೊಳಗೆ ಪಾವತಿಗಳನ್ನು ನಿರ್ವಹಿಸಬಹುದಾಗಿದೆ.

ಆಂಡ್ರಾಯ್ಡ್ ಪೇ

ಆಂಡ್ರಾಯ್ಡ್ ಪೇ

ಇನ್ನು ಕಾರ್ಯಾಗಾರದಲ್ಲಿ ಆಂಡ್ರಾಯ್ಡ್ ಪೇ ಅನ್ನು ಗೂಗಲ್ ಘೋಷಿಸಿದೆ. ರೀಟೈಲ್ ಸ್ಟೋರ್‌ಗಳಲ್ಲಿ ಎನ್‌ಎಫ್‌ಸಿ ಪ್ರಮಾಣಿತದಲ್ಲಿ ಪಾವತಿಗಳನ್ನು ಮಾಡಬಹುದಾಗಿದ್ದು ಅಪ್ಲಿಕೇಶನ್‌ನೊಳಗೆಯೇ ನಿರ್ವಹಿಸಬಹುದಾದ ಕಾರ್ಯ ಇದಾಗಿದೆ.

ಕ್ರೋಮ್ ಕಸ್ಟಮ್ ಟ್ಯಾಬ್‌ಗಳು

ಕ್ರೋಮ್ ಕಸ್ಟಮ್ ಟ್ಯಾಬ್‌ಗಳು

ಆಂಡ್ರಾಯ್ಡ್ ಹೊಸ ಫೀಚರ್ ಆದ ಕ್ರೋಮ್ ಕಸ್ಟಮ್ ಟ್ಯಾಬ್ ಅನ್ನು ಒಳಗೊಂಡಿದೆ. ಅಪ್ಲಿಕೇಶನ್‌ನೊಳಗೆಯೇ ಕ್ರೋಮ್ ಬ್ರೌಸರ್ ಅನ್ನು ತೆರೆಯುವ ವ್ಯವಸ್ಥೆಯನ್ನು ಇದು ಒಳಗೊಂಡಿದೆ.

ಅಪ್ಲಿಕೇಶನ್ ಮೇಲೆ ಹೆಚ್ಚು ನಿಯಂತ್ರಣ

ಅಪ್ಲಿಕೇಶನ್ ಮೇಲೆ ಹೆಚ್ಚು ನಿಯಂತ್ರಣ

ಅಪ್ಲಿಕೇಶನ್ ನಿರ್ವಹಣೆ ಮತ್ತು ಡಿವೈಸ್ ಫೀಚರ್ ಅನ್ನು ಹೇಗೆ ಬಳಸುತ್ತದೆ ಎಂಬುದರ ಮೇಲೆ ಬಳಕೆದಾರರ ನಿಯಂತ್ರಣವನ್ನು ಸಾಧಿಸಬಹುದಾಗಿದೆ. ಅಪ್ಲಿಕೇಶನ್ ಮೇಲಿನ ಪರವಾನಗಿಗಳನ್ನು ಬದಲಾಯಿಸುವ ಸಾಮರ್ಥ್ಯ ಬಳಕೆದಾರರಿಗೆ ಆಂಡ್ರಾಯ್ಡ್ ಎಮ್ ಒದಗಿಸಿದೆ.

ಪಠ್ಯ ಆಯ್ಕೆ

ಪಠ್ಯ ಆಯ್ಕೆ

ಪಠ್ಯ ಆಯ್ಕೆ ಫೀಚರ್ ಅನ್ನು ಆಂಡ್ರಾಯ್ಡ್ ಎಮ್ ಸುಧಾರಿಸಿದ್ದು ಬಳಕೆದಾರರು ಆಂಡ್ರಾಯ್ಡ್ ಎಮ್‌ನಲ್ಲಿ ಏನಾದರೂ ಹಂಚಿಕೊಂಡಾಗ, ಹೆಚ್ಚು ಆವರ್ತಿತ ಸಂಪರ್ಕಗಳನ್ನು ಇದು ನೆನಪಿಸುತ್ತದೆ ಹಾಗೂ ಅವನ್ನು ಮೇಲಕ್ಕೆ ತರುವುದರ ಮೂಲಕ ಡೇಟಾವನ್ನು ಹಂಚಿಕೊಳ್ಳುತ್ತದೆ.

Best Mobiles in India

English summary
At its I/O 2015 annual developer conference, Google announced a slew of features that will soon make their way to the next version of company's mobile operating system, Android.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+