ಲಾಲಿಪಪ್‌ಗಿಂತ ಆಂಡ್ರಾಯ್ಡ್ ಎಮ್ ಹೆಚ್ಚು ವಿಶೇಷವಾದುದು ಏಕೆ?

Written By:

ಆಂಡ್ರಾಯ್ಡ್ ಲಾಲಿಪಪ್‌ಗಿಂತಲೂ ಆಂಡ್ರಾಯ್ಡ್ ಎಮ್ ಮಾರುಕಟ್ಟೆಯಲ್ಲಿ ಹೆಚ್ಚು ಪರಿಣಾಮವನ್ನು ಬೀರಲಿದೆ ಎಂದು ಆಂಡ್ರಾಯ್ಡ್ ಎಂಜಿನಿಯರ್ ಡೇವ್ ಬರ್ಕ್ ಗೂಗಲ್ I/O 2015 ರಲ್ಲಿ ನುಡಿದಿದ್ದಾರೆ.

ಓದಿರಿ: ಹುವಾಯಿ ಹೋನರ್ 4ಸಿ ಉತ್ತಮ ಫೋನ್ ಎಂಬುದಕ್ಕೆ 10 ಕಾರಣಗಳು

ಕಳೆದ ವರ್ಷ ಆಂಡ್ರಾಯ್ಡ್ ಲಾಲಿಪಪ್ ಅನ್ನು ಹೊಸ ವಿನ್ಯಾಸ ಮತ್ತು ಇಂಟರ್ಫೇಸ್‌ನೊಂದಿಗೆ ಪರಿಚಯಿಸಿದಾಗ ಗೂಗಲ್ ತನ್ನ ಓಎಸ್ ಅನ್ನು ಮಾರುಕಟ್ಟೆಯಲ್ಲಿ ಬಲಿಷ್ಟವಾಗಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಿತ್ತು ಮತ್ತು ಅದರಲ್ಲಿ ಯಶಸ್ಸನ್ನು ಕಂಡಿತ್ತು. ಆದರೆ ಇನ್ನಷ್ಟು ಸುಧಾರಣೆಗಳೊಂದಿಗೆ ಗೂಗಲ್ ಆಂಡ್ರಾಯ್ಡ್ ಎಮ್ ಅನ್ನು ಪರಿಚಯಿಸಿದೆ.

ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಎಮ್ ಕುರಿತಾದ ವಿಶೇಷತೆಗಳನ್ನು ನಾವು ಕಾಣಲಿದ್ದು ಲಾಲಿಪಪ್‌ನಲ್ಲಿ ಇರದ ಏನು ವಿಶೇಷತೆಗಳು ಎಮ್‌ನಲ್ಲಿ ಇದೆ ಎಂಬುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಿಂಗರ್ ಪ್ರಿಂಟ್ ಬೆಂಬಲ

ಫಿಂಗರ್ ಪ್ರಿಂಟ್ ಬೆಂಬಲ

ನೇಟೀವ್ ಫಿಂಗರ್ ಪ್ರಿಂಟ್ ಬೆಂಬಲ

ಬೆರಳಚ್ಚು ಸ್ಕ್ಯಾನರ್ ತಂತ್ರಜ್ಞಾನವನ್ನು ಹೆಚ್ಚಿನ ಡಿವೈಸ್‌ಗಳಲ್ಲಿ ನಾವು ಕಂಡಿದ್ದರೂ ಗೂಗಲ್ ಆಂಡ್ರಾಯ್ಡ್ ಎಮ್‌ನಲ್ಲಿ ಇನ್ನಷ್ಟು ಸುಧಾರಣೆಗಳನ್ನು ತಂದಿದೆ. ನೇಟೀವ್ ಫಿಂಗರ್ ಪ್ರಿಂಟ್ ಬೆಂಬಲವನ್ನು ಇದು ತಂದಿದ್ದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಒದಗಿಸುವ ಅದೇ ವೈಶಿಷ್ಟ್ಯತೆಯನ್ನು ಇದು ನೀಡಲಿದೆ. ಮೊಬೈಲ್ ಪಾವತಿಗಳಿಗೆ ಇದು ಇನ್ನಷ್ಟು ಸರಳ ವಿಧಾನವನ್ನು ಒದಗಿಸಲಿದ್ದು ಆಂಡ್ರಾಯ್ಡ್ ಫೋನ್ ಬಳಕೆದಾರರು ಆಂಡ್ರಾಯ್ಡ್ ಎಮ್ ಅನ್ನು ಬಳಸುವಾಗ ಹೆಚ್ಚಿನ ವ್ಯವಸ್ಥೆಯನ್ನು ಪಡೆದುಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಎಮ್‌

ಆಂಡ್ರಾಯ್ಡ್ ಎಮ್‌

ಆಂಡ್ರಾಯ್ಡ್ ಪೇ

ಲಾಲಿಪಪ್‌ನಲ್ಲಿ ಇರದ ಆಂಡ್ರಾಯ್ಡ್ ಪೇ ಆಂಡ್ರಾಯ್ಡ್ ಎಮ್‌ನಲ್ಲಿದೆ. ಆಂಡ್ರಾಯ್ಡ್ 4.4 ಡಿವೈಸ್‌ಗಳಲ್ಲಿ ಇದನ್ನು ಪೂರ್ವ ಇನ್‌ಸ್ಟಾಲ್ ಮಾಡಿದ್ದು ಎನ್‌ಎಫ್‌ಸಿ ಚಾಲನೆಯಲ್ಲಿರುವ ಕಿಟ್‌ಕ್ಯಾಟ್ ಮತ್ತು ಮೇಲ್ಪಟ್ಟ ಡಿವೈಸ್‌ಗಳಿಗೆ ಅಪ್ಲಿಕೇಶನ್ ತೆರೆಯದೆಯೇ ಬೆಂಬಲವನ್ನೊದಗಿಸಲಿದೆ.

ಡೋಜ್ ಫೀಚರ್

ಡೋಜ್ ಫೀಚರ್

ಸುಧಾರಿತ ಬ್ಯಾಟರಿ ಬಾಳ್ವಿಕೆ

ಡೋಜ್ ಎಂಬ ಫೀಚರ್ ಅನ್ನು ಆಂಡ್ರಾಯ್ಡ್ ಎಮ್‌ನಲ್ಲಿ ನಿಮಗೆ ಕಾಣಬಹುದಾಗಿದ್ದು, ಬ್ಯಾಟರಿ ಬಾಳ್ವಿಕೆಯಲ್ಲಿ ಈ ಫೀಚರ್ ಪಾಲು ಪ್ರಧಾನವಾಗಿದೆ. ಹಿನ್ನಲೆಯಲ್ಲಿ ನಿಮಗೆ ಬೇಡದೇ ಇರುವ ಅಪ್ಲಿಕೇಶನ್ ಚಾಲನೆಯನ್ನು ಇದು ಬಳಕೆಯಲ್ಲಿರುವಾಗ ಮಾತ್ರ ರನ್ ಮಾಡುತ್ತದೆ.

ಯುಎಸ್‌ಬಿ ಸಿ

ಯುಎಸ್‌ಬಿ ಸಿ

ಚಾರ್ಜಿಂಗ್

ಯುಎಸ್‌ಬಿ ಸಿ ಬೆಂಬಲದೊಂದಿಗೆ ಆಂಡ್ರಾಯ್ಡ್ ಎಮ್ ವೇಗವಾದ ಚಾರ್ಜಿಂಗ್ ಅನ್ನು ತಂದಿದ್ದು ಹೊಸ ಮಾದರಿಯ ಯುಎಸ್‌ಬಿ ಕನೆಕ್ಟರ್ ಅನ್ನು ಬಳಸಿದೆ.

ಅಪ್ಲಿಕೇಶನ್ ಅನುಮತಿ ವ್ಯವಸ್ಥೆ

ಅಪ್ಲಿಕೇಶನ್ ಅನುಮತಿ ವ್ಯವಸ್ಥೆ

ಅಪ್ಲಿಕೇಶನ್ ಅನುಮತಿಗಳು

ಅಪ್ಲಿಕೇಶನ್ ಅನುಮತಿ ವ್ಯವಸ್ಥೆಗಳಿಗೆ ಹೊಂದುವಂತೆ ಆಂಡ್ರಾಯ್ಡ್ ಎಮ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಭದ್ರತಾ ಅನುಮತಿಗಳನ್ನು ಸ್ವೀಕರಿಸುವುದು ಇಲ್ಲವೇ ನಿರಾಕರಿಸುವುದನ್ನು ಇದರಲ್ಲಿ ನಿರ್ವಹಸಿಬಹುದಾಗಿದೆ. ನಿಮಗೆ ಅಂಗೀಕರಿಸಲು ಇಷ್ಟವಾಗಿಲ್ಲದಿರುವ ನಿಯಮಗಳನ್ನು ನಿರಾಕರಿಸಬಹುದಾಗಿದೆ. ನೀವು ಫೀಚರ್ ಬಳಸುವಾಗ ಅನುಮತಿಗಳನ್ನು ಅಪ್ಲಿಕೇಶನ್ ಕೇಳುತ್ತದೆ.

ಫೀಚರ್‌ಗಳು

ಫೀಚರ್‌ಗಳು

ಹೆಚ್ಚಿನ ಆಂಡ್ರಾಯ್ಡ್ ಎಮ್ ಫೀಚರ್‌ಗಳು

ಪಠ್ಯ ಆಯ್ಕೆ ಹೇಗೆ ಕೆಲಸ ಮಾಡುತ್ತದೆ, ಧ್ವನಿ ನಿಯಂತ್ರಣ ಮೊದಲಾದ ವ್ಯವಸ್ಥೆಗಳನ್ನು ಆಂಡ್ರಾಯ್ಡ್ ಎಮ್ ಉತ್ತಮವಾಗಿ ನಿರ್ವಹಿಸುತ್ತಿದ್ದು ರಿಂಗ್‌ಟೋನ್ ಅಲರಾಮ್ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಧ್ವನಿ ಕರೆಗಳನ್ನು ಇದು ನಿಯಂತ್ರಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Android M is here. During the Google I/O 2015 keynote, Dave Burke, VP engineering of Android at Google, revealed that Android M will succeed Android Lollipop this year.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot