ಭಾರತದಲ್ಲಿ ಉದ್ಯೋಗ ಮಾಡಲು ಅತ್ಯುತ್ತಮ ಕಂಪೆನಿಗಳ ಲೀಸ್ಟ್!!.ಯಾವುವು ಗೊತ್ತಾ?
ಸಂಬಳ, ಉದ್ಯೋಗ ಭದ್ರತೆ ಮತ್ತು ಇನ್ನಿತರ ನೌಕರ ಯೋಗ್ಯ ಸೌಲಭ್ಯಗಳನ್ನು ಒಳಗೊಂಡಿರುವ ಕಂಪೆನಿಗಳು ಯಾವುವು ಎಂಬುದರ ಮೇಲೆ ತನ್ನ ಸಮೀಕ್ಷೆ ನಡೆಸಿ ಈ ಪಟ್ಟಿ ಬಿಡುಗಡೆ!!
ಭಾರತದಲ್ಲಿ ಉದ್ಯೋಗ ಮಾಡಲು ಇರುವ ಅತ್ಯುತ್ತಮ ಕಂಪೆನಿಗಳ ಪಟ್ಟಿಯನ್ನು ಹೆಸರಾಂತ ಉದ್ಯೋಗ ವೆಬ್‌ಸೈಟ್ 'ಇಂಡೀಡ್' ಬಿಡುಗಡೆ ಮಾಡಿದೆ.! ಸಂಬಳ, ಉದ್ಯೋಗ ಭದ್ರತೆ ಮತ್ತು ಇನ್ನಿತರ ನೌಕರ ಯೋಗ್ಯ ಸೌಲಭ್ಯಗಳನ್ನು ಒಳಗೊಂಡಿರುವ ಕಂಪೆನಿಗಳು ಯಾವುವು ಎಂಬುದರ ಮೇಲೆ ತನ್ನ ಸಮೀಕ್ಷೆ ನಡೆಸಿ ಈ ಪಟ್ಟಿ ಬಿಡುಗಡೆ ಮಾಡಿದೆ.!!
'ಇಂಡೀಡ್' ಸಾವಿರಾರು ಕಂಪೆನಿಗಳನ್ನು ಸಮೀಕ್ಷಿಸಿ ಈ ವರದಿಯನ್ನು ಸಿದ್ದಪಡಿಸಿದ್ದು, 'ಇಂಡೀಡ್' ವೆಬ್‌ಸೈಟ್ ನಡೆಸಿರುವ ಸಮೀಕ್ಷೆ ಪ್ರಕಾರ 2017ನೇ ವರ್ಷದಲ್ಲಿ ಭಾರತದಲ್ಲಿ ಉದ್ಯೋಗ ಮಾಡಲು ಇರುವ ಅತ್ಯುತ್ತಮ ಕಂಪೆನಿಗಳಲ್ಲಿ ಜಾಗತಿಕ ಟೆಕ್ ದೈತ್ಯ 'ಗೂಗಲ್' ಮೊದಲನೇ ಸ್ಥಾನ ಪಡೆದುಕೊಂಡಿದೆ.!!

ಇನ್ನು ಎರಡು ಮತ್ತು ಮೂರನೆ ಸ್ಥಾನಗಳು ಕ್ರಮವಾಗಿ ಭಾರತ್ ಹೆವಿ ಎಲೆಕ್ಟ್ರಿಕಲ್(BHEL) ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪಾಲಾಗಿದೆ.!! ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಅಮೆಜಾನ್, ಐದನೇ ಸ್ಥಾನದಲ್ಲಿ ಮಾರಿಯಟ್ ಇಂಟರ್‌ನ್ಯಾಶನಲ್ ಕಂಪೆನಿಗಳು ಸ್ಥಾನ ಪಡೆದಿವೆ.!!

ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಈ ಪಟ್ಟಿಯಲ್ಲಿ 47 ಸ್ಥಾನ ಪಡೆದು ನಿರಾಸೆ ಮೂಡಿಸಿದೆ. ಉಳಿದಂತೆ ಇಂಟೆಲ್ (6), ಅಮೆರಿಕನ್ ಎಕ್ಸ್‌ಪ್ರೆಸ್ 7, ಐಬಿಎಂ 8, ಟಿಸಿಎಸ್ 9, ಹಯಾತ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸ್ವದೇಶಿ ಖಾಸಾಗಿ ಕಂಪೆನಿಗಳಾದ ಟಾಟಾ ಸ್ಟೀಲ್ 17ನೇ ಸ್ಥಾನದಲ್ಲಿದ್ದರೆ, ಭಾರತಿ ಏರ್‌ಟೆಲ್ 20 ಸ್ಥಾನದಲ್ಲಿವೆದೆ.!!
ಓದಿರಿ: ಇನ್ಮುಂದೆ ಮೇಕಪ್ ಮಾಡಿದ ಮುಖ ತೋರಿಸಿದರೂ ತೆರೆಯುತ್ತದೆ ಫೇಸ್‌ಲಾಕ್!!


Click it and Unblock the Notifications








