Google: ವಾಹನ ಚಾಲಕರ ಜೀವ ಉಳಿಸಲಿದೆ ಗೂಗಲ್‌ನ ಈ ಹೊಸ ಫೀಚರ್ಸ್! ಆಕ್ಟಿವ್ ಮಾಡೋದೇಗೆ?
ಭಾರತದಲ್ಲಿ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಅದರಂತೆ ಅಪಘಾತಗಳ (accident) ಸಂಖ್ಯೆ ಸಹ ಮಿತಿ ಮೀರುತ್ತಿದೆ. ಈ ಕಾರಣಕ್ಕೆ ಸಾಕಷ್ಟು ಜನರು ಸಮಸ್ಯೆಗಳಿಗೆ ಸಿಲುಕುತ್ತಿರುವುದು ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಚಾರ. ಈ ಕಾರಣಕ್ಕೆ ಗೂಗಲ್ (Google) ಹೊಸ ಸೌಲಭ್ಯವೊಂದನ್ನು ಭಾರತದಲ್ಲಿ ಪರಿಚಯಿಸಿದೆ. ಈ ಮೂಲಕ ಕಾರು ಚಾಲಕರ ಜೀವ ಉಳಿಯಲಿದೆ.
ಹೌದು, ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಪ್ರತಿದಿನ ಸಾವಿರಾರು ಸಣ್ಣ ಮತ್ತು ದೊಡ್ಡ ರಸ್ತೆ ಅಪಘಾತಗಳು ಜರುಗುತ್ತಲೇ ಇರುತ್ತವೆ. ಅದರಲ್ಲೂ ಬೆಂಗಳೂರಂತ ಮಹಾನಗರಗಳಲ್ಲಿ ಅಪಘಾತಗಳಿಗೇನೂ ಕೊರತೆಯಿಲ್ಲ. ಈ ರೀತಿಯ ಅಪಘಾತಕ್ಕೆ ಒಳಗಾದ ಅದೆಷ್ಟೋ ಜನರು ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಸಾಯುತ್ತಾರೆ. ಆದರೆ, ಇನ್ಮುಂದೆ ಈ ಸಮಸ್ಯೆ ಆಗುವುದಿಲ್ಲ. ಹಾಗಿದ್ರೆ, ಏನಿದು ಗೂಗಲ್‌ನ ಹೊಸ ಫೀಚರ್ಸ್?, ಇದನ್ನು ಸಕ್ರಿಯಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಕಾರ್ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್: ಭಾರತದಲ್ಲಿ ಆಗುವ ಕಾರು ಅಪಘಾತಗಳಲ್ಲಿ ಸಿಲುಕಿದ ಪ್ರಯಾಣಿಕರ ಜೀವವನ್ನು ಉಳಿಸುವಲ್ಲಿ ಇನ್ಮುಂದೆ ಗೂಗಲ್‌ನ ಕಾರ್ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್ (Car crash detection features) ಬಳಕೆ ಆಗಲಿದೆ. ಈ ಫೀಚರ್ಸ್ ಅನ್ನು ಗೂಗಲ್ 2019 ರಲ್ಲಿಯೇ ಘೋಷಣೆ ಮಾಡಿತ್ತು. ಆದರೆ, ಈವರೆಗೂ ಯುಎಸ್ ಬಳಕೆದಾರರು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು.
ಆದರೆ ಇನ್ಮುಂದೆ ಗೂಗಲ್‌ನ ಈ ಕಾರ್ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್ ಭಾರತ, ಆಸ್ಟ್ರಿಯಾ, ಬೆಲ್ಜಿಯಂ, ಪೋರ್ಚುಗಲ್ ಮತ್ತು ಸ್ವಿಟ್ಜರ್ಲೆಂಡ್‌ನ ಜನರಿಗೆ ಲಭ್ಯ ಇರಲಿದೆ. ಆದರೆ ನೀವಿಲ್ಲಿ ಗನಿಸಬೇಕಾದ ವಿಷಯ ಏನೆಂದರೆ ಈ ವಿಶೇಷ ಫೀಚರ್ಸ್ ಗೂಗಲ್‌ನ ಪಿಕ್ಸೆಲ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಅಂದರೆ ಪಿಕ್ಸೆಲ್ 4A, ಪಿಕ್ಸೆಲ್ 6A, ಪಿಕ್ಸೆಲ್ 7, ಪಿಕ್ಸೆಲ್ 7 ಪ್ರೊ, ಪಿಕ್ಸೆಲ್ 7A, ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್‌ಗಳಲ್ಲಿ (Pixel 4A, Pixel 6A, Pixel 7, Pixel 7 Pro, Pixel 7A, Pixel 8 and Pixel 8 Pro phones) ಲಭ್ಯವಿರುತ್ತದೆ.
ಗೂಗಲ್ ಕಾರ್ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್ ಹೇಗೆ ಕೆಲಸ ಮಾಡಲಿದೆ?: ಈ ವಿಶೇಷ ಫೀಚರ್ಸ್ ಕಾರು ಅಪಘಾತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ವೈಯಕ್ತಿಕ ಭದ್ರತಾ ಫೀಚರ್ಸ್ ಅನ್ನು ಆಯ್ದ ಪಿಕ್ಸೆಲ್ ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್ ಮಾಡಲಾಗಿದೆ. ಈ ಫೀಚರ್ಸ್ ಕಾರ್ಯನಿರ್ವಹಿಸಲು ಫೋನ್‌ಗೆ ಲೊಕೇಶನ್, ಮೈಕ್ರೋಫೋನ್ ಸೇರಿದಂತೆ ಅಗತ್ಯ ಅನುಮತಿಗಳನ್ನು ನೀಡಬೇಕಾಗಿದೆ.

ಇನ್ನು ವಿಶೇಷ ಫೀಚರ್ಸ್ ಸರಿಯಾಗಿ ಕಾರ್ಯನಿರ್ವಹಿಸಲು ಫೋನ್ ಸಿಮ್ ಅಗತ್ಯವಾಗಿದ್ದು, ಈ ಫೀಚರ್ಸ್ ಆಕ್ಟಿವೇಟೆಡ್ ಫೋನ್ ಅನ್ನು ಬಳಕೆ ಮಾಡುವ ವ್ಯಕ್ತಿಗೆ ಕಾರು/ಇತರ ವಾಹನದಲ್ಲಿ ಪ್ರಯಾಣಿಸುವಾಗ ಅಪಘಾತವಾದರೆ ಅಕ್ಸೆಲೆರೊಮೀಟರ್, ಲೊಕೇಶನ್ ಮತ್ತು ಮೈಕ್ರೊಫೋನ್ ಬಳಕೆ ಮಾಡಿ ಅಪಘಾತವನ್ನು ಪತ್ತೆ ಮಾಡಲಾಗುತ್ತದೆ. ನಂತರದಲ್ಲಿ ಪಿಕ್ಸೆಲ್ ಫೋನ್ ಆಟೋಮ್ಯಾಟಿಕ್ ಆಗಿ ಸ್ಥಳೀಯ ತುರ್ತು ಸೇವೆಗಳಿಗೆ ಕರೆ ಮಾಡುತ್ತದೆ.
ಇದಾದ ನಂತರದಲ್ಲಿ ಫೋನ್‌ನಲ್ಲಿ ಹೊಂದಿಸಲಾದ ತುರ್ತು ಮೆಸೆಜ್‌ಗಳನ್ನು ತುರ್ತು ಸೇವೆಗಳಿಗೆ ರವಾನಿಸಲಾಗುತ್ತದೆ. ಫೋನ್‌ನಲ್ಲಿ ಮೊದಲೇ ಹೊಂದಿಸಲಾದ ಸಂಖ್ಯೆಗಳಿಗೆ ತುರ್ತು ಮೆಸೆಜ್ ರವಾನೆ ಆಗಲಿದ್ದು, ಆ ಮೂಲಕ ಫೋನ್ ಅಪಘಾತಕ್ಕೆ ಒಳಗಾದ ವ್ಯಕ್ತಿಯ ಆತ್ಮೀಯರು ತಕ್ಷಣದಲ್ಲೇ ಮಾಹಿತಿ ಪಡೆದುಕೊಳ್ಳಬಹುದು. ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಿದರೆ, ಫೋನ್ ಅನ್ನು ನಿರ್ವಹಿಸುವ ಯಾರಾದರೂ ಅಪಘಾತದ ನಂತರ ಫೋನ್ ಲಾಕ್ ಆಗಿದ್ದರೂ ಸಹ ಲಾಕ್ ಸ್ಕ್ರೀನ್ ಮೆಸೆಜ್ ಮತ್ತು ತುರ್ತು ವಿವರಗಳನ್ನು ನೋಡಬಹುದಾಗಿದೆ.
ಅಪಘಾತವಾದಾಗ ಫೋನ್‌ನಲ್ಲಿ ಮೂರು ಆಯ್ಕೆಗಳು ಬರುತ್ತವೆ. ಅಂದರೆ ಬಳಕೆದಾರರು ತುರ್ತು ಡಯಲ್ ಅನ್ನು ನಿಲ್ಲಿಸಲು 60 ಸೆಕೆಂಡುಗಳನ್ನು ನೀಡಲಾಗುತ್ತದೆ. ಅದರಲ್ಲಿ ನೋ ಕ್ರ್ಯಾಶ್ , ಮೈನರ್ ಕ್ರ್ಯಾಶ್, ಮತ್ತು ಕಾಲ್ 112 (No crash, minor crash, call 112) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತವೆ. ಈ ವೇಳೆ ತುರ್ತು ಡಯಲ್‌ನೊಂದಿಗೆ ಮುಂದುವರಿದರೆ ವೈದ್ಯಕೀಯ, ಅಗ್ನಿಶಾಮಕ ಅಥವಾ ಪೊಲೀಸ್ ಸಹಾಯವನ್ನು ಈ ವೇಳೆ ಸುಲಭವಾಗಿ ಪಡೆದುಕೊಳ್ಳಬಹುದು.

ಪಿಕ್ಸೆಲ್ ಫೋನ್ ಬಳಕೆ ಮಾಡುತ್ತಿದ್ದರೆ ವೈಯಕ್ತಿಕ ಸುರಕ್ಷತೆ ಆಪ್ ವಿಭಾಗಕ್ಕೆ ಹೋಗಿ ಮತ್ತು ಫೀಚರ್ಸ್‌ಗಳ ಮೇಲೆ ಟ್ಯಾಪ್ ಮಾಡಿದ ನಂತರ ಕಾರ್ ಕ್ರ್ಯಾಶ್ ಡಿಟೆಕ್ಷನ್ ಆಯ್ಕೆಗಾಗಿ ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿ. ಇದಾದ ನಂತರದಲ್ಲಿ ಟಾಗಲ್ ಆನ್ ಮಾಡಿದಾಗ ಲೊಕೇಶನ್, ಮೈಕ್ರೊಫೋನ್ ಮತ್ತು ದೈಹಿಕ ಚಟುವಟಿಕೆಯನ್ನು ಪ್ರವೇಶಿಸಲು ಅನುಮತಿ ನೀಡಬೇಕಾಗುತ್ತದೆ.


Click it and Unblock the Notifications








