ಲಂಡನ್ ಒಲಿಂಪಿಕ್ಸ್ 2012 ಗೆ ಗೂಗಲ್ ಡೂಡಲ್

Posted By: Varun
ಲಂಡನ್ ಒಲಿಂಪಿಕ್ಸ್ 2012 ಗೆ ಗೂಗಲ್ ಡೂಡಲ್
4 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್ ಅನ್ನು ಈ ಸಲ ಲಂಡನ್ ನಗರ ಆತಿಥ್ಯ ವಹಿಸುತ್ತಿದೆ. ಸುಮಾರು 17 ದಿನಗಳ ಕಾಲ ನಡೆಯುವ 30 ನೆ ಒಲಂಪಿಕ್ಸ್ ಗೆ ಇವತ್ತು 9:00 GMT ಸರಿಯಾಗಿ ವೈಭವೋಪೇತ ಪ್ರಾರಂಭಿಕ ಸಮಾರಭದ ಮೂಲಕ ಒಲಿಂಪಿಕ್ಸ್ ಗೆಅಧಿಕೃತ ಚಾಲನೆ ದೊರೆಯಲಿದ್ದು ಎಲ್ಲರ ಕಣ್ಣೂ ಲಂಡನ್ ನಗರದ ಮೇಲೆ ನೆಟ್ಟಿದೆ.

ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ -ಸ್ಲಂ ಡಾಗ್ ಮಿಲಿಯನೇರ್ ನ ನಿರ್ದೇಶಕ ಡ್ಯಾನಿ ಬಾಯ್ಲ್ ನೇತೃತ್ವದಲ್ಲಿ ಈ ಪ್ರಾರಂಭಿಕ ಸಮಾರಂಭ ನಡೆಯಲಿದ್ದು, ಗೂಗಲ್ ಇದಕ್ಕಾಗಿ ವಿಶೇಷವಾದ ಡೂಡಲ್ ಒಂದನ್ನು ಪ್ರಕಟಿಸಿದೆ.

ವಿಶೇಷವಾದ ಸಂದರ್ಭಗಳಿಗೆ ಗೂಗಲ್ ಡೂಡಲ್ ಮಾಡುವುದು ಸಾಮಾನ್ಯವಾಗಿದ್ದು, ಲಂಡನ್ ಒಲಿಂಪಿಕ್ಸ್ 2012 ಕ್ಕೆ ಮಾಡಿರುವ ಡೂಡಲ್ ನಲ್ಲಿ ಟ್ರ್ಯಾಕ್ ಮೇಲೆ ಫುಟ್ಬಾಲ್, ಸ್ವಿಮ್ಮಿಂಗ್,ರನ್ನಿಂಗ್, ಜಾವೆಲಿನ್ ಎಸೆತ, ಫೆನ್ಸಿಂಗ್ ಹಾಗುಬಾಸ್ಕೆಟ್ ಬಾಲ್ ಆಟದ ಕ್ರೀಡಾಪಟುಗಳು GOOGLE ಅಕ್ಷರವನ್ನು ಹಿಡಿದುಕೊಂಡು ನಿಂತಿರುವ ಚಿತ್ರವನ್ನು ಪ್ರಕಟಿಸಿದೆ.

ಖ್ಯಾತ ಹಾಲಿವುಡ್ ನಟಿ ಆನ್ಜೆಲಿನಾ ಜೋಲಿ, ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ರ ಪತ್ನಿ ಮಿಷೆಲ್, ಜರ್ಮನಿಯ ಚಾನ್ಸಲರ್ ಅಂಜೆಲಾ ಮೆರ್ಕೆಲ್, ಜಪಾನ್ ದೇಶದ ಪ್ರಧಾನಿ ಯೋಶಿಹಿಕೋ ನೋಡ ಸೇರಿದಂತೆ ವಿಶ್ವದ 120 ಕ್ಕೂ ಹೆಚ್ಚು ದೇಶಗಳ ನಾಯಕರು ಪಾಲ್ಗೊಳ್ಳಲಿದ್ದಾರೆ.

ಗೂಗಲ್ ನ ಡೂಡಲ್, ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾಳುವಿನಲ್ಲಿರುವ ಸ್ಪೂರ್ತಿಯನ್ನು ಬಿಂಬಿಸುವಂತಿದ್ದು ಡೂಡಲ್ ನ ವೀಡಿಯೋ ನೋಡಿದರೆ ಗೊತ್ತಾಗುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot