"ಅಮ್ಮ ನೀನು ನಮಗಾಗಿ", ಎಂದ ಗೂಗಲ್ ಡೂಡಲ್

Posted By: Varun

"ಅಮ್ಮ ಎಂದರೆ ಏನೋ ಹರುಷವು, ನಮ್ಮ ಪಾಲಿಗೆ ಅವಳೇ ದೈವವು". ಆಹಾ, ಎಂತಹ ಅದ್ಭುತ ಸಾಲುಗಳು ಇವು. ಇಂತಹ ಎಷ್ಟೇ ಹಾಡುಗಳನ್ನು ಹಾಡಿ ಹೊಗಳಿದರೂ, ಆಕೆಯ ಪ್ರೀತಿ, ತ್ಯಾಗವನ್ನು ಅಳೆಯಲು ಸಾಧ್ಯವಿಲ್ಲ.

ನಮ್ಮಲ್ಲಿ ತಾಯಿಯನ್ನು ದಿನನಿತ್ಯ ಪೂಜಿಸುತ್ತೇವೆ, ಗೌರವಿಸುತ್ತೇವೆ. ಅದೇ ರೀತಿ ಬೇರೆ ದೇಶಗಳಲ್ಲೂ, ತಾಯಿಯ ಮೇಲಿನ ಪ್ರೀತಿ, ಗೌರವವನ್ನು ಜ್ಞಾಪಿಸಿಕೊಳ್ಳಲು ಪ್ರತಿ ವರ್ಷ ಮೇ ತಿಂಗಳ 2ನೆ ಭಾನುವಾರದಂದು "ಅಮ್ಮನ ದಿನ" (Mother's Day) ವನ್ನಾಗಿ ಆಚರಿಸುತ್ತಾರೆ.ಅಮ್ಮನಿಗಾಗಿ ಆ ದಿನ ಗಿಫ್ಟ್ ಕೊಡುತ್ತವೆ, ಆಕೆಗೆ ಇಷ್ಟವಾದ ಏನು ಬೇಕೋ ಅದನ್ನು ಕೊಡಿಸುತ್ತೇವೆ, ಹಾಗೆಯೇ ಆಕೆ ಇರುವವರೆಗೂ ಚೆನ್ನಾಗಿ ನೋಡಿಕೊಳ್ಳುತ್ತವೆ ಎಂದು ಆಕೆಗೆ ಪ್ರಾಮಿಸ್ ಮಾಡುತ್ತೇವೆ.

ನೆನ್ನೆ ಮೇ ತಿಂಗಳ 2ನೆ ಭಾನುವಾರವಾಗಿದ್ದರಿಂದ (ಮೇ 13) ವಿಶ್ವದೆಲ್ಲೆಡೆ ಅಮ್ಮನ ದಿನವನ್ನು ಆಚರಿಸಲಾಯ್ತು. ಅದರ ಅಂಗವಾಗಿ ಗೂಗಲ್ ಸಹ "ಅಮ್ಮನ ದಿನ"ಕ್ಕಾಗಿ ಡೂಡಲ್ ಒಂದನ್ನು ಪ್ರಕಟಿಸಿತು. GOOGLE ಪದದಲ್ಲಿ ಇರುವ ಎರಡನೆ G ಅನ್ನು, ಹೂವನ್ನು ಹಿಡಿದುಕೊಂಡಿರುವ ತಾಯಿಯಂತೆ ಚಿತ್ರಿಸಲಾಗಿತ್ತು. ನೀವು ಗೂಗಲ್ ಅನ್ನು ನೋಡಿದ ತಕ್ಷಣ, ಆ ತಾಯಿಯ ಮಕ್ಕಳು ಓಡಿ ಬಂದು ಆಕೆಗೆ ಶುಭಾಶಯ ಕೋರಿ, ಹೂವನ್ನು ಕೊಟ್ಟು, ತಾಯಿಯನ್ನು ತಬ್ಬಿಕೊಂಡು ಆಕೆಯ ಬಳಿಯೇ ಇರುತ್ತಾರೆ. ಓಡಿಬರುವ ಅ ಮಕ್ಕಳನ್ನು GOOGLE ನ O ಅಕ್ಷರದಿಂದ ಸೃಷ್ಟಿ ಮಾಡಿರುವುದು ತುಂಬಾ ಚೆನ್ನಾಗಿ ಮೂಡಿಬಂದಿದೆ.

ಗೂಗಲ್ ನ ಹಲವಾರು ಡೂಡಲ್ ಗಳ ಬಗ್ಗೆ ನಮ್ಮ ವೆಬ್ಸೈಟಿನಲ್ಲಿ ಓದಬಹುದಾಗಿದ್ದು, ಡೂಡಲ್ ಮೂಲಕ ವಿಶ್ವದ ಪ್ರಮುಖ ವ್ಯಕ್ತಿಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ನೀವೂ ಕೂಡ ನಿಮ್ಮ ತಾಯಿಗೆ ಈ ಡೂಡಲ್ ಅನ್ನುಯೂಟ್ಯೂಬ್ ನಲ್ಲಿ ತೋರಿಸಿ ಖುಷಿಪಡಿಸಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot