ಮೊಬೈಲ್ ಇಡೀ ವಿಶ್ವವನ್ನೇ ಬದಲಿಸಿದೆ ಆದರೆ, ನನ್ನ ಹಾಸ್ಟೆಲ್ ರೂಂ ಮಾತ್ರ ಹಾಗೆ ಇದೆ!!

Written By:

  ಸುಂದರ್ ಪಿಚೈ, ಪ್ರತಿಯೊಬ್ಬ ಭಾರತೀಯರು ಹೆಮ್ಮಪಡಬೇಕಾದ ಹೆಸರು ಇದು. ಹೌದು, ಪ್ರಪಂಚದ ಸರ್ಚ್ ಎಂಜಿನ್ ದೈತ್ಯ ಗೂಗಲ್‌ನಂತರ ಸಂಸ್ಥೆಗೆ ಸಿಇಒ ಆಗಿರುವ ಭಾರತದ ಹೆಮ್ಮೆಯ ಪುತ್ರ ಇವರು.! ಬುಧವಾರ ತಾನು ಓದಿದ್ದ ಹಳೆಯ ಕಾಲೇಜಿಗೆ ಭೇಟಿ ನೀಡಿ ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದರು..

  23 ವರ್ಷಗಳ ಹಿಂದೆ ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಓದಿದ್ದ ಸುಂದರ್ ಪಿಚೈ ಅವರು ಮತ್ತೊಮ್ಮೆ ತಮ್ಮ ಹಳೆಯ ಕಾಲೇಜಿಗೆ ಭೇಟಿ ನೀಡಿದರು. ತಮ್ಮ ಕಾಲೇಜು ದಿನಗಳನ್ನು ನೆನೆದು ಸಂತಸಪಟ್ಟರು, ವಿಧ್ಯಾರ್ಥಿಗಳೊಂದಿಗೆ ಬೆರೆತು ಮಾತನಾಡಿ ತಂತ್ರಜ್ಞಾನದ ಮಹತ್ವವನ್ನು ಹೇಳಿದರು.

  ಮೊಬೈಲ್ ಇಡೀ ವಿಶ್ವವನ್ನೇ ಬದಲಿಸಿದೆ ಆದರೆ,ನನ್ನ ಹಾಸ್ಟೆಲ್ ರೂಂ ಮಾತ್ರ ಹಾಗೆ ಇದೆ!

  ಜಿಯೋಯಿಂದ ಮತ್ತೊಂದು ಆಫರ್!..ಜಿಯೋಗೆ ಪೋರ್ಟ್ ಆಗುವ ಅವಕಾಶ!! ಫೋರ್ಟ್ ಆಗುವುದು ಹೇಗೆ?

  ಇನ್ನು ಇದಕ್ಕೆ ಅಪವಾದವೆಂಬಂತೆ ಮಾತನಾಡಿದ ಪಿಚೈ ಅವರು, ತಂತ್ರಜ್ಞಾನ ಅದರಲ್ಲೂ ವಿಶೇಷವಾಗಿ ಮೊಬೈಲ್ ಇಡೀ ವಿಶ್ವವನ್ನೇ ಬದಲಿಸಿದೆ. ಆದರೂ ಕೆಲ ಸಂಗಂತಿಗಳನ್ನು ಬದಲಿಸಲು ಸಾಧ್ಯವಾಗಿಲ್ಲ. 25 ವರ್ಷಗಳ ಹಿಂದೆ ನನ್ನ ಹಾಸ್ಟೆಲ್ ರೂಂ ಹೇಗಿತ್ತೋ ಈಗಲೂ ಹಾಗೆ ಇದೆ ಎಂದು ಹೇಳಿ ನಗೆಯ ಚಟಾಕಿಯನ್ನು ಹಾರಿಸಿದರು.

  ಮೊಬೈಲ್ ಇಡೀ ವಿಶ್ವವನ್ನೇ ಬದಲಿಸಿದೆ ಆದರೆ,ನನ್ನ ಹಾಸ್ಟೆಲ್ ರೂಂ ಮಾತ್ರ ಹಾಗೆ ಇದೆ!

  ಜೀವನಕ್ಕೆ ತಂತ್ರಜ್ಞಾನದ ಅವಶ್ಯಕತೆ ಎಷ್ಟಿದೆ. ಎಷ್ಟು ಮುಖ್ಯ ಎನ್ನುವುದರ ಜೊತೆಗೆ ಅದರ ಮಿತಿಗಳೇನು ಎಂಬುದನ್ನು ಕೇವಲ ಒಂದೇ ಒಂದು ಉದಾಹರಣೆಯಲ್ಲಿ ಹೇಳಿದರು. ಎಲ್ಲರೂ ಸ್ಮಾರ್ಟ್‌ ಆಗುತ್ತಿರುವ ದಿನಗಳಲ್ಲಿ ನಾವು ಹಿಂದೆ ಬೀಳಬಾರದು ಎಂದು ಎಲ್ಲರಿಗೂ ಸಲಹೆ ನೀಡಿದರು. ಕೊನೆಗೆ, ವಾಸ್ತವ ಮತ್ತು ವಾಸ್ತವವಲ್ಲದ ಜೀವನವನ್ನು ಅನುಭವಿಸಿ ಆಗ ಮಾತ್ರ ನಿಮ್ಮ ಯಶಸ್ಸಿಗೆ ಮೆಟ್ಟಿಲುಗಳು ಸಿಗುತ್ತವೆ ಎಂದು ವಿಧ್ಯಾರ್ಥಿಗಳಿಗೆ ಹಾರೈಸಿದರು.

  English summary
  At IIT Kharagpur, Google CEO Sundar Pichai hosted answered questions from students at an open-air theatre in the campus.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more