ಏಕಕಾಲದಲ್ಲಿ 20 ಸ್ಮಾರ್ಟ್‌ಫೋನ್ ಬಳಸುತ್ತಾರೆ ಸುಂದರ್ ಪಿಚೈ! ಯಾಕೆ ಗೊತ್ತಾ?
ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದರೂ ಸಹ ಇಲ್ಲಿನ ಅದೆಷ್ಟೋ ಪ್ರತಿಭಾವಂತರು ಮುಂದುವರೆದ ದೇಶಗಳಲ್ಲಿ ಅಥವಾ ಜಗತ್ತನ್ನೇ ಆಳುತ್ತಿರುವ ಟೆಕ್ನಾಲಜಿ ವಿಭಾಗದಲ್ಲಿ ದೊಡ್ಡ ಸ್ಥಾನ ಪಡೆದಿದ್ದಾರೆ. ಈ ವಿಭಾಗದಲ್ಲಿ ಗೂಗಲ್ ಸಿಇಒ (Google CEO) ಪ್ರಮುಖರು. ಜೊತೆಗೆ ಇವರ ಬಗ್ಗೆ ಭಾರತವಷ್ಟೇ ಅಲ್ಲದೆ ಜಾಗತಿಗವಾಗಿ ಗೌರವದ ಭಾವನೆ ಇದೆ. ಇದಕ್ಕೆ ಕಾರಣ ಇವರ ಜ್ಞಾನ.
ಹೌದು, ಭಾರತ ವಿಶ್ವ ಗುರು ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಜಗತ್ತಿನ ದೈತ್ಯ ಕಂಪೆನಿಗಳ ಮುಖ್ಯ ಹುದ್ದೆಗಳಲ್ಲಿ ಭಾರತದ ಮೂಲದವರು ಇದ್ದಾರೆ. ಅವರಲ್ಲಿ ಪ್ರಮುಖರಾದ ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ (Google and Alphabet CEO Sundar Pichai) ಬಗ್ಗೆ ಪ್ರತಿ ನಿತ್ಯ ಸಾಕಷ್ಟು ಮಾಹಿತಿಯನ್ನು ಜನರು ಕಲೆ ಹಾಕುತ್ತಲೇ ಇದ್ದಾರೆ. ಹಾಗಿದ್ರೆ, ಬನ್ನಿ ಇವರ ಬಳಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿವೆ?, ಇವರ ಸಂಬಳ ಎಷ್ಟು? ತಂತ್ರಜ್ಞಾನದ ಬಗ್ಗೆ ಇವರ ಅಭಿಪ್ರಾಯ ಏನು ಅನ್ನೋದನ್ನು ಈ ಲೇಖನದ ಮೂಲಕ ತಿಳಿಯೋಣ.

ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ: ಈ ಹೆಸರು ಕೇಳಿದ್ರೆ ಖಂಡಿತಾ ಯುವಕ ಯುವತಿಯರಲ್ಲಿ ಪ್ರೇರೆಪಣೆಯ ಮನೋಭಾವನೆ ಬೆಳೆಯುತ್ತದೆ. ನಾವು ಸಹ ಆ ರೀತಿ ಸಾಧನೆ ಮಾಡಬೇಕು ಅನ್ನೋ ಛಲ ಹುಟ್ಟುತ್ತದೆ. ಅಷ್ಟರ ಮಟ್ಟಿಗೆ ಇವರ ಮೇಲೆ ಕ್ರೇಜ್ ಇದೆ. ಈ ನಡುವೆ ಸುಂದರ್ ಪಿಚೈ ಅವರು ಬಿಬಿಸಿಗೆ ಸಂದರ್ಶನ ನೀಡಿದ್ದು, ಕೆಲವು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ತಾವು ವಿವಿಧ ಉದ್ದೇಶಗಳಿಗಾಗಿ ಏಕಕಾಲದಲ್ಲಿ 20 ಕ್ಕೂ ಹೆಚ್ಚು ಫೋನ್‌ಗಳನ್ನು ಬಳಸುತ್ತೇನೆ ಎಂದಿದ್ದಾರೆ.
ಇನ್ನು ಒಂದು ಫೋನ್ ಅನ್ನು ಬಳಕೆ ಮಾಡುವುದೇ ದೊಡ್ಡ ಕೆಲಸ. ಅದರಲ್ಲೇ ಬಹುಪಾಲು ಜನರು ತಲ್ಲೀನರಾಗಿ ಬಿಟ್ಟಿರುತ್ತಾರೆ. ಆದರೆ ಇವರು ಏಕಕಾಲದಲ್ಲಿ ಬರೋಬ್ಬರಿ 20 ಕ್ಕೂ ಹೆಚ್ಚು ಫೋನ್‌ಗಳನ್ನು ಬಳಕೆ ಮಾಡುತ್ತಾರೆ ಎಂದರೆ ನೀವು ಊಹೆ ಮಾಡಿಕೊಳ್ಳಿ, ಅವರ ಜ್ಞಾನದ ಹಸಿವು ಎಷ್ಟಿದೆ ಎಂದು. ಜೊತೆಗೆ ಈ ಎಲ್ಲಾ ಫೋನ್‌ಗಳೊಂದಿಗಿನ ಅವರ ಬಹುಕಾರ್ಯಕವು ಗೂಗಲ್ ಉತ್ಪನ್ನಗಳ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳುವುದೇ ಆಗಿದೆ.

ಜೊತೆಗೆ ಇದೇ ವೇಳೆ ಅವರ ಮಕ್ಕಳ ಸ್ಕ್ರೀನ್ ಟೈಮ್ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಕಠಿಣ ನಿಯಮಗಳನ್ನು ಜಾರಿಗೊಳಿಸುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕ ಗಡಿಗಳನ್ನು ಹೊಂದಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಅಲ್ಲದೆ ಹೊಸ ಪೀಳಿಗೆಯು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಕಲಿಯಬೇಕಾಗಿದೆ ಎಂದೂ ಸಹ ಇದೇ ವೇಳೆ ತಿಳಿಸಿದ್ದಾರೆ.
ಇದರೊಂದಿಗೆ ಖಾತೆಯ ಸುರಕ್ಷತೆಯ ಬಗ್ಗೆ ಕೇಳಿದಾಗ, ಪಿಚೈ ಅವರು ತಮ್ಮ ಪಾಸ್‌ವರ್ಡ್ ಅನ್ನು ಆಗಾಗ್ಗೆ ಬದಲಾಯಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ ರಕ್ಷಣೆ ಸಂಬಂಧ ಮಲ್ಟಿ ಲೇಯರ್ ಅನ್ನು ಖಚಿತಪಡಿಸಿಕೊಳ್ಳಲು ಎರಡು ಅಂಶಗಳ ದೃಢೀಕರಣವನ್ನು ಶಿಫಾರಸು ಮಾಡಿದ್ದಾರೆ. ಈ ಮೂಲಕ ನಿಮ್ಮ ಯಾವುದೇ ಖಾತೆಯನ್ನು ಹೆಚ್ಚಿನ ಭದ್ರತೆಯೊಂದಿಗೆ ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.
ಸುಂದರ್ ಪಿಚೈ ಅವರು ಎಐ ಮಾನವಕುಲವು ಇದುವರೆಗೆ ಸೃಷ್ಟಿಸುವ ಅತ್ಯಂತ ಪ್ರಮುಖ ತಂತ್ರಜ್ಞಾನವಾಗಿದೆ. ಅದರ ಪರಿಣಾಮವನ್ನು ಬೆಂಕಿ ಮತ್ತು ವಿದ್ಯುತ್‌ನಂತಹ ವಿಷಯಗಳಿಗೆ ಹೋಲಿಸಬಹುದಾಗಿದೆ ಎಂದಿದ್ದಾರೆ. ಜೊತೆಗೆ ಇವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿದ್ದರೂ, ಭಾರತೀಯ ಪರಂಪರೆಯೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದ್ದು, ಈ ಸಾಂಸ್ಕೃತಿಕ ಪ್ರಭಾವವು ಅವರ ನಾಯಕತ್ವದ ಶೈಲಿಯನ್ನು ಉತ್ಕೃಷ್ಟಗೊಳಿಸುತ್ತದಂತೆ.

ಸುಂದರ್ ಪಿಚೈಗೆ ಸಂಬಳ ಎಷ್ಟು?: ಈ ವಿಷಯ ಮಾತ್ರ ಎಲ್ಲರಲ್ಲೂ ಮೂಡಿರುತ್ತದೆ.ಇಷ್ಟು ದೊಡ್ಡ ಕಂಪೆನಿಯನ್ನು ಸಿಇಒ ಆಗಿದ್ದಾರೆ ಎಂದರೆ ತಿಂಗಳಿಗೆ ಕೋಟ್ಯಂತರ ಹಣ ಬರಬಹುದು ಎಂದು ನೀವು ಅಂದುಕೊಂಡಿರಬಹುದು. ಇದು ಸತ್ಯ ಆದರೆ ತಿಂಗಳಿಗೆ ಅಲ್ಲ ಬದಲಾಗಿ ಸುಂದರ್ ಪಿಚೈ ಅವರ ಒಂದು ಗಂಟೆಯ ಗಳಿಕೆಯು 66,666.29 ರೂ.ಗಳಾಗಿದೆ. ಅಂದರೆ ಅವರು ದಿನಕ್ಕೆ 5 ಕೋಟಿ ಪಡೆಯುತ್ತಿದ್ದಾರೆ.


Click it and Unblock the Notifications








