Google Chrome: ಕ್ರೋಮ್ ಬಳಕೆದಾರರಿಗೆ ಇನ್ಮುಂದೆ ಆತಂಕ ಬೇಡ.. ಡೇಟಾ ಡಿಲೀಟ್‌ಗೆ ಮುಂದಾದ ಗೂಗಲ್
ಯಾವುದೇ ಬೇಕು ಬೇಡದ ಮಾಹಿತಿಗೆ ಗೂಗಲ್ ಕ್ರೋಮ್ (Google Chrome) ಅನ್ನು ಸಾಕಷ್ಟು ಜನರು ಆಶ್ರಯಿಸಿದ್ದಾರೆ. ಈ ಮೂಲಕ ಕ್ಷಣ ಮಾತ್ರದಲ್ಲಿ ತಮಗೆ ಬೇಕಾದ ಮಾಹಿತಿ, ಮನರಂಜನೆ ಪಡೆಯುತ್ತಾರೆ. ಇನ್ನೂ ಕೆಲವೊಂದಷ್ಟು ಜನರು ತುಂಬಾ ಖಾಸಗಿಯಾಗಿ ಮಾಹಿತಿ ಪಡೆಯಲು ಅಜ್ಞಾತ ಮೋಡ್ (incognito mode) ಮೊರೆ ಹೋಗುತ್ತಾರೆ.
ಹೌದು, ಕ್ರೋಮ್ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸಹಕಾರಿ ಆಗಿದೆ. ಈ ನಡುವೆ ಅಜ್ಞಾತ ಮೋಡ್ ಬಳಕೆ ಮಾಡಿಕೊಂಡು ಕ್ರೋಮ್ ಬಳಕೆ ಮಾಡುವ ಬಳಕೆದಾರರಿಗೆ ಕೆಲವು ದಿನಗಳ ಹಿಂದೆ ಶಾಕಿಂಗ್ ಸುದ್ದಿ ನೀಡಲಾಗಿತ್ತು. ಅಂದರೆ ನೀವು ಸರ್ಚ್ ಮಾಡುವ ಮಾಹಿತಿ ನಮಗೆ ತಿಳಿಯಲಿದೆ ಎಂದು ತಿಳಿಸಿತ್ತು. ಈ ಹೇಳಿಕೆ ಜಾಗತಿಕವಾಗಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದ್ದು, ಇದೀಗ ಗುಡ್ ನ್ಯೂಸ್ ಹೊರಬಿದ್ದಿದೆ. ಹಾಗಿದ್ರೆ ಏನಿದು ಹೊಸ ವಿಚಾರ?, ಅಜ್ಞಾತ ಮೋಡ್‌ನಲ್ಲಿ ಆದ ಬದಲಾವಣೆಗಳು ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಅಜ್ಞಾತ ಮೋಡ್ ಸಂಬಂಧ ಗೂಗಲ್ ಹೊಸ ನಿರ್ಧಾರ: ಗೂಗಲ್ ನಲ್ಲಿನ ಕ್ಲಾಸ್ ಆಕ್ಷನ್ ಮೊಕದ್ದಮೆಯಲ್ಲಿ ಅಜ್ಞಾತ ಮೋಡ್ ನಾವು ಅಂದುಕೊಂಡಷ್ಟು ಖಾಸಗಿಯಾಗಿಲ್ಲ ಎಂದು ಆರೋಫ ಮಾಡಲಾಗಿತ್ತು. ಅಲ್ಲದೆ ಗೂಗಲ್ ಅಜ್ಞಾತ ಮೋಡ್ ಬಳಕೆ ಮಾಡಿಕೊಂಡು ಮಾಡುವ ಎಲ್ಲಾ ಮಾಹಿತಿಯನ್ನು ಗೂಗಲ್ ರಹಸ್ಯವಾಗಿ ಸಂಗ್ರಹಿಸುತ್ತಿದೆ ಎಂದು ಹೈಲೈಟ್ ಮಾಡಲಾಗಿತ್ತು. ಆದರೆ ಮೊಕದ್ದಮೆಯ ಇತ್ಯರ್ಥದ ಭಾಗವಾಗಿ ಸಂಗ್ರಹಿಸಿದ ಎಲ್ಲಾ ಡೇಟಾವನ್ನು ಅಳಿಸಲು ಗೂಗಲ್ ಒಪ್ಪಿಕೊಂಡಿದೆ.
ಈ ಒಪ್ಪಿಗೆಯ ಪ್ರಕಾರ ಗೂಗಲ್ ಶತಕೋಟಿ ಬಳಕೆದಾರರ ಡೇಟಾವನ್ನು ಅಳಿಸಿಹಾಕಲಿದೆ. ಜೊತೆಗೆ ಅಜ್ಞಾತ ಮೋಡ್‌ನ ಬಳಕೆಯ ಮೇಲೆ ಗೂಗಲ್ ಕೆಲವು ಹೊಸ ಸೌಲಭ್ಯಗಳನ್ನು ಸಹ ನೀಡಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ನಿಮ್ಮ ಡೇಟಾವನ್ನು ಯಾರಾದರೂ ಟ್ರ್ಯಾಕ್ ಮಾಡುತ್ತಾರೆ ಎಂಬ ಭಯದಿಂದ ಇನ್ಮುಂದೆ ಇದನ್ನು ಬಳಕೆ ಮಾಡುವ ಅಗತ್ಯ ಇರುವುದಿಲ್ಲ. ಅದರಂತೆ ಹೆಚ್ಚು ಪಾರದರ್ಶಕತೆಯನ್ನು ಇದರಿಂದ ಪಡೆಯಬಹುದಾಗಿದೆ.

ಈ ಸಂಬಂಧ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಗೂಗಲ್ ಪಾರದರ್ಶಕತೆಯ ಕೊರತೆಯನ್ನು ಎತ್ತಿ ತೋರಿಸಿರುವ ಪ್ರಕರಣವನ್ನು 2020 ರಲ್ಲಿ ದಾಖಲಿಸಲಾಗಿತ್ತು. ಅದರಂತೆ ಟೆಕ್ ದೈತ್ಯ ಬಿಲಿಯನ್‌ಗಟ್ಟಲೆ ಡೇಟಾವನ್ನು ನಾಶಮಾಡಲು ಈಗ ಒಪ್ಪಿಕೊಂಡಿದೆ. ಬಳಕೆದಾರರ. ಇದಲ್ಲದೆ ಅಜ್ಞಾತ ಮೋಡ್ ಬಳಕೆದಾರರಿಗೆ ಥರ್ಡ್ ಪಾರ್ಟಿ ಕುಕೀಗಳನ್ನು ನಿಷ್ಕ್ರಿಯಗೊಳಿಸಲು ಸಹ ಇನ್ಮುಂದೆ ಅನುಮತಿಸಲಾಗುತ್ತದೆ ಎಂದು ತಿಳಿಸಿದೆ.
ಗೂಗಲ್ ಮೇಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಹಕರನ್ನು ಪ್ರತಿನಿಧಿಸಿದ್ದ ಅಟಾರ್ನಿ ಡೇವಿಡ್ ಬಾಯ್ಸ್, ಈ ಹೊಸ ನಿಯಮ ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯ ಅಗತ್ಯವಿರುವ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಗೂಗಲ್ ಕಳೆದ 8 ವರ್ಷಗಳಿಂದ ಡೇಟಾವನ್ನು ಅಳಿಸುತ್ತದೆ. ಅದಾಗ್ಯೂ ಈ ಸಂಬಂಧ ಯಾವುದೇ ವ್ಯಕ್ತಿಗಳಿಗೆ ಹಾನಿಯನ್ನು ಮಾಡಿಲ್ಲ. ಆದರೆ, ಯಾರಾದರೂ ಈ ವಿಷಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಅನುಭವಿಸಿದ್ರೆ, ತಮ್ಮ ದೂರನ್ನು ಸಲ್ಲಿಸಬಹುದು, ಈಗಾಗಲೇ 50 ದೂರುಗಳು ದಾಖಲಾಗಿವೆ ಎಂದಿದ್ದಾರೆ.

ದೂರಿನಲ್ಲಿ ಯಾವುದರ ಬಗ್ಗೆ ಉಲ್ಲೇಖ ಮಾಡಲಾಗಿತ್ತು?: ಬಳಕೆದಾರರ ಡೇಟಾವನ್ನು ಟ್ರ್ಯಾಕಿಂಗ್ ಮಾಡಲಾಗುತ್ತಿದೆ ಎಂದು ಗೂಗಲ್ ವಿರುದ್ಧ ಆರೋಪ ಮಾಡಲಾಗಿತ್ತು. ಈ ಕುರಿತು 2020ರಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಅಂದರೆ ಗೂಗಲ್ ಕ್ರೋಮ್ ಬ್ರೌಸರ್‌ನ ಅಜ್ಞಾತ ಮೋಡ್‌ನಲ್ಲಿ ಬಳಕೆದಾರರು ಯಾವುದನ್ನು ಹುಡುಕಿದರೂ ಅದನ್ನು ಗೂಗಲ್ ಟ್ರ್ಯಾಕ್ ಮಾಡುತ್ತದೆ ಎಂದು ಹೇಳಲಾಗಿತ್ತು.
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗೂಗಲ್ ಬಳಕೆದಾರರ ಅನುಭವವನ್ನು ಸುಧಾರಿಸಲು ಇದನ್ನು ಮಾಡಲಾಗುತ್ತದೆ ಎಂದು ಹೇಳಿತ್ತು. ಇದು ಬಳಕೆದಾರರಿಗೆ ತಮ್ಮ ಆಯ್ಕೆಯ ವಿಷಯಗಳನ್ನು ಹುಡುಕಲು ಸುಲಭವಾಗುತ್ತದೆ. ಬಳಕೆದಾರರು ಬಯಸಿದರೆ, ಅವರು ತಮ್ಮ ಡೇಟಾ ಟ್ರ್ಯಾಕಿಂಗ್ ಅನ್ನು ನಿಲ್ಲಿಸಬಹುದು ಎಂದು ಗೂಗಲ್ ಹೇಳಿತ್ತು. ಈ ಎಲ್ಲಾ ಕಾರಣಕ್ಕೆ ವಾದ ಪ್ರತಿವಾದಗಳು ನಡೆದಿದ್ದು, ಈಗ ಅಂತಿಮ ಆದೇಶ ಹೊರಬಿದ್ದಿದೆ.
ಈ ಸಂಬಂಧ ದೂರು ದಾಖಲು ಮಾಡಿದ್ದವರು ಗೂಗಲ್ ನಿಂದ $5bn ನಷ್ಟವನ್ನು ಕೋರಿದ್ದಾರೆ. ಆದರೆ, ಟೆಕ್ ದೈತ್ಯ ಗೂಗಲ್ ತನ್ನ ಗ್ರಾಹಕರಿಗೆ ಪರಿಹಾರದ ಭಾಗವಾಗಿ ಯಾವುದೇ ಪಾವತಿಯನ್ನು ನೀಡಲು ಮುಂದಾಗಿಲ್ಲ. ಬದಲಾಗಿ ಎಲ್ಲಾ ಡೇಟಾವನ್ನು ಅಳಿಸಿಹಾಕಲಿದೆ.


Click it and Unblock the Notifications








