Loan app: ಲೋನ್ ಆಪ್ ಮೂಲಕ ಇನ್ಮುಂದೆ ಕಣ್ಮುಚ್ಚಿಕೊಂಡು ಸಾಲ ಪಡೆಯಬಹುದು; ಯಾಕಂದ್ರೆ!?
ಭಾರತದಲ್ಲಿ ಆಪ್‌ಗಳ ಮೂಲಕ ಲೋನ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಲೋನ್ ನೀಡುವ ಆಪ್‌ಗಳು ಸಹ ಹೆಚ್ಚಾಗುತ್ತಿವೆ. ಈ ನಡುವೆ ಈ ಆಪ್‌ಗಳು (Loan app) ಸಾಲಗಾರರಿಗೆ ನೀಡುವ ಕಿರುಕುಳದಿಂದಾಗಿ ಅದೆಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಆದರೆ, ಲೋನ್ ಆಪ್ ಮೂಲಕ ಸಾಲ ಪಡೆಯುವವರು ಸಂತಸ ಪಡುವ ಸುದ್ದಿ ಹೊರಬಿದ್ದಿದೆ.
ಹೌದು, ಲೋನ್ ಆಪ್ ಎಂಬುದು ಕೇವಲ ಲೋನ್ ಕೊಟ್ಟು ಸುಮ್ಮನಾಗುತ್ತಿರಲಿಲ್ಲ. ಬಳಕೆದಾರರ ಮೊಬೈಲ್‌ನಲ್ಲಿ ಎಲ್ಲಾ ಮಾಹಿತಿಗೂ ಅದು ಅನುಮತಿ ಪಡೆಯುವ ಮೂಲಕ ಸಾಲವನ್ನು ಸರಿಯಾದ ಸಮಯಕ್ಕೆ ವಾಪಸ್ ನೀಡಲಿಲ್ಲ ಎಂದರೆ ಚಿತ್ರ ಹಿಂಸೆ ನೀಡಲು ಆ ಮಾಹಿತಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದವು. ಆದರೆ, ಇನ್ಮುಂದೆ ಈ ರೀತಿಯ ಘಟನೆಗಳು ಜರುಗುವುದಿಲ್ಲ. ಹಾಗಿದ್ರೆ ಲೋನ್ ಆಪ್ ನಲ್ಲಿ ಏನೆಲ್ಲಾ ಬದಲಾವಣೆ ಆಗಿದೆ, ಇದರಿಂದ ಬಳಕೆದಾರರಿಗೆ ಆಗುವ ಅನುಕೂಲ ಏನು ಎಂಬ ಮಾಹಿತಿ ತಿಳಿಸಿಕೊಡಲಾಗಿದೆ ಓದಿರಿ.

ಲೋನ್ ಆಪ್‌ನಲ್ಲಿ ಬದಲಾವಣೆ: ಭಾರತದಲ್ಲಿ ಡಿಜಿಟಲ್ ಲೋನ್ ಅಪ್ಲಿಕೇಶನ್‌ಗಳು ಬಳಕೆದಾರರ ಸ್ಥಳ ಮತ್ತು ಕರೆ ಲಾಗ್‌ಗಳಿಗೆ ಪ್ರವೇಶವನ್ನು ಇನ್ಮುಂದೆ ನಿರಾಕರಿಸಲಾಗಿದೆ. ಗೂಗಲ್‌ನ ಇತ್ತೀಚಿನ ಮಾರ್ಗಸೂಚಿ ಅನ್ವಯ ಈ ನಿರ್ಧಾರ ಕೈಕೊಳ್ಳಲಾಗಿದ್ದು, ಹಣ ಬೇಕಾದವರು ಇನ್ಮುಂದೆ ಯಾವುದೇ ಅಳುಕಿಲ್ಲದೆ ಲೋನ್ ಆಪ್ ಮೂಲಕ ಸಾಲ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಅಕ್ರಮವಾಗಿ ಹಣ ನೀಡುವ ಆಪ್‌ಗಳ ವಿರುದ್ಧವೂ ಗೂಗಲ್ ಸಮರ ಸಾರಿದೆ.
ಈ ಲೋನ್ ಆಪ್‌ಗಳಿಂದ ಆಗುತ್ತಿದ ಅನಾಹುತಗಳನ್ನು ಕೂಲಕಂಷವಾಗಿ ಪರಿಶೀಲನೆ ನಡೆಸಿದ ಗೂಗಲ್ ಹಾಗೂ ಭಾರತ ಸರ್ಕಾರ ಇದಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಇದನ್ನು ಮೇ 31 ರಿಂದ ಜಾರಿಗೆ ಬರುವಂತೆ ಘೋಷಣೆ ಮಾಡಲಾಗಿತ್ತು. ಅದರಂತೆ ಈ ಆಪ್‌ಗಳು ಇನ್ಮುಂದೆ ಪ್ಲೇ ಸ್ಟೋರ್‌ನಲ್ಲಿ ಇರಬೇಕು ಎಂದರೆ ಕಡ್ಡಾಯವಾಗಿ ಈ ಮಾರ್ಗಸೂಚಿಗಳನ್ನು ಪಾಲನೆ ಮಾಡಲೇಬೇಕಾಗಿದೆ.
ಅದರಂತೆ ಈ ಲೋನ್ ಆಪ್‌ಗಳು ಇನ್ನು ಮುಂದೆ ಸಂಪರ್ಕಗಳು, ಫೋಟೋಗಳು, ವಿಡಿಯೋಗಳು, ಸ್ಥಳ ಮಾಹಿತಿ ಮತ್ತು ಬಳಕೆದಾರರ ಡಿವೈಸ್‌ಗಳಿಂದ ಕರೆ ಲಾಗ್‌ಗಳು ಸೇರಿದಂತೆ ಸೂಕ್ಷ್ಮ ಡೇಟಾಗೆ ಪ್ರವೇಶವನ್ನು ಹೊಂದುವಂತಿಲ್ಲ. ಈ ಕಾರಣಕ್ಕೆ ಸಾಲ ಪಡೆದವರ ಫೋಟೋವನ್ನು ಕೆಟ್ಟದಾಗಿ ಚಿತ್ರಿಸುವ ಹಾಗೂ ಅವರನ್ನು ಬೆದರಿಸುವ ಪ್ರಕರಣಗಳಿಗೆ ಕಡಿವಾಣ ಹಾಕಿದಂತಾಗಿದ್ದು, ಹಲವಾರು ಸಾಲಗಾರರು ನೆಮ್ಮದಿಯಾಗಿ ನಿಟ್ಟುಸಿರು ಬಿಡಬಹುದು.

ಇದಲ್ಲದೆ, ಎಲ್ಲಾ ಕಾನೂನುಬದ್ಧ ಆಪ್‌ಗಳ ಕಂಪನಿಗಳು ಹಣಕಾಸಿನ ಸೇವೆಗಳನ್ನು ನೀಡುವಲ್ಲಿ ತಮ್ಮ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಪೋಷಕ ದಾಖಲೆಗಳನ್ನು ಒದಗಿಸಬೇಕೆಂದು ಗೂಗಲ್ ಮಾಹಿತಿ ನೀಡಿದೆ. ಅಂದರೆ ಡಿಜಿಟಲ್ ಸಾಲ ನೀಡುವ ಆಪ್ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಪರವಾನಗಿ ಪಡೆದಿರಬೇಕು. ಇದನ್ನು ದೃಢೀಕರಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಗೂಗಲ್ ಭಾರತೀಯ ಆಪ್‌ಗಳಿಗಾಗಿ ನಿರ್ದಿಷ್ಟ ಫಾರ್ಮ್ ಅನ್ನು ಪರಿಚಯಿಸಿದೆ.
ಪ್ಲೇ ಸ್ಟೋರ್ ಅನ್ನು ಬಲಪಡಿಸಲು ಮತ್ತು ಡಿಜಿಟಲ್ ಸಾಲ ನೀಡುವ ಆಪ್‌ಗಳಿಂದ ಉಂಟಾಗುವ ಹೆಚ್ಚಿನ ಅವ್ಯವಸ್ಥೆಯನ್ನು ತಡೆಯುವ ಗುರಿಯನ್ನು ಗೂಗಲ್ ಹೊಂದಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಈ ಅಪ್ಲಿಕೇಶನ್‌ಗಳು ಈ ಹಿಂದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದವು ಮತ್ತು ಗ್ರಾಹಕರ ರುಜುವಾತುಗಳು ಮತ್ತು ಅರ್ಹತೆಯ ಆಧಾರದ ಮೇಲೆ ಸಾಲಗಳನ್ನು ನೀಡುತ್ತಿದ್ದವು.

ಈ ನಡುವೆ ವ್ಯಾಪಕವಾದ ದಾಖಲೆಗಳು ಅಥವಾ ಔಪಚಾರಿಕತೆಗಳ ಯಾವುದೇ ಅಗತ್ಯವಿಲ್ಲದೇ ಸಣ್ಣ ಸಾಲಗಳನ್ನು ಈ ಆಪ್‌ಗಳು ನೀಡುತ್ತಿದ್ದವು. ಈ ಕಾರಣಕ್ಕೆ ಈ ಆಪ್‌ಗಳ ಕಡೆ ಜನರು ಹೆಚ್ಚು ಆಕರ್ಷಿತರಾಗಿದ್ದಾರೆ. ಆದರೆ, ಬಳಕೆದಾರರ ಫೋನ್‌ನ ಎಲ್ಲಾ ಮಾಹಿತಿಯನ್ನು ಅವು ಪಡೆದುಕೊಳ್ಳುತ್ತಿದ್ದವು. ಅದರಲ್ಲೂ ಯಾರೇ ಆದರೂ ತುಂಬಾ ಆರ್ಥಿಕ ಸಂಕಷ್ಟವನ್ನು ಎದುರಿಸುವಾಗ ಈ ಆಪ್‌ಗಳು ಅವರಿಗೆ ಸಹಾಯಕವಾಗಿವೆ.


Click it and Unblock the Notifications








