ಲೈಂಗಿಕವಾಗಿ ಮಕ್ಕಳನ್ನು ಶೋಷಿಸುವ ಚಿತ್ರಕ್ಕೆ ಗೂಗಲ್‌ ಕಡಿವಾಣ

Posted By:

ಲೈಂಗಿಕವಾಗಿ ಮಕ್ಕಳನ್ನು ಶೋಷಿಸುವ ಅಶ್ಲೀಲ ವಿಡಿಯೋ ಮತ್ತು ಚಿತ್ರಗಳಿಗೆ ಗೂಗಲ್‌ ಕಡಿವಾಣ ಹಾಕಿದೆ. ಈ ಸಂಬಂಧ ಈ ಚೈಲ್ಡ್‌ ಪೋರ್ನ್‌ ಪದಕ್ಕೆ ಸಂಬಂಧಿಸಿದಂತೆ ಹೊಸ ಕ್ರಮಾವಳಿ(algorithm)ವಿಧಾನವನ್ನುಸೇರಿಸಿದ್ದು ಒಂದು ಲಕ್ಷಕ್ಕೂ ಅಧಿಕವಿರುವ ಫಲಿತಾಂಶಗಳನ್ನು ತನ್ನ ಸರ್ಚ್‌ನಿಂದಲೇ ಬ್ಲಾಕ್‌ ಮಾಡಿದೆ.

ಗೂಗಲ್‌ ಕಾರ್ಯನಿರ್ವಾಹಕ ಅಧ್ಯಕ್ಷ ಎರಿಕ್‌ ಸ್ಕಿಮಿಟ್‌ ಬ್ರಿಟಿಷ್‌ ದಿನಪತ್ರಿಕೆ ಡೈಲಿಮೇಲ್‌ಗೆ ಪತ್ರ ಬರೆದು ಈ ವಿಚಾರವನ್ನು ಹೇಳಿದ್ದು,ಒಂದು ಲಕ್ಷಕ್ಕೂ ಅಧಿಕವಿರುವ ಫಲಿತಾಂಶಗಳು ಇನ್ನು ಮುಂದೆ ಗೂಗಲ್‌ ಸರ್ಚ್‌ನಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ.

 ಲೈಂಗಿಕವಾಗಿ ಮಕ್ಕಳನ್ನು ಶೋಷಿಸುವ ಚಿತ್ರಕ್ಕೆ ಗೂಗಲ್‌ ಕಡಿವಾಣ

ಆರಂಭಿಕ ಹಂತವಾಗಿ ಇಂಗ್ಲಿಷ್‌ ಮಾತನಾಡುವ ದೇಶದಲ್ಲಿ ಈ ನಿಷೇಧ ಜಾರಿಯಾಗಲಿದ್ದು, ಮುಂದಿನ ಆರು ತಿಂಗಳಿನೊಳಗಡೆ ಉಳಿದ 158 ದೇಶಗಳಲ್ಲಿ ಈ ನಿಷೇದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.ಕಳೆದ ಜುಲೈನಲ್ಲಿ ಇಂಗ್ಲೆಂಡ್‌ನ ಪ್ರಧಾನಿ ಡೇವಿಡ್ ಕ್ಯಾಮರೂನ್ ಬಿಬಿಸಿಯ ಆಂಡ್ರ್ಯೂ ಮಾರ್ ಶೋನಲ್ಲಿ ಲೈಂಗಿಕವಾಗಿ ಮಕ್ಕಳನ್ನು ಶೋಷಿಸುವ ಚಿತ್ರಗಳಿಗೆ ಗೂಗಲ್‌ ಸೇರಿದಂತೆ ಸರ್ಚ್‌ ಎಂಜಿನ್‌ ಕಂಪೆನಿಗಳು ನಿಷೇಧ ಹಾಕಬೇಕು ಒತ್ತಾಯಿಸಿದ್ದರು.

ಇಂಗ್ಲೆಂಡ್‌ ಪ್ರಧಾನಿ ಹೇಳಿಕೆ ನಂತರ ಗೂಗಲ್‌ನ 200 ಎಂಜಿನಿಯರ್‌ಗಳು ಕಳೆದ ಮೂರು ತಿಂಗಳ ಕಾಲ ಕೋಡಿಂಗ್‌ ಬರೆದು ಸರ್ಚ್‌ ವಿಧಾನದಲ್ಲಿ ಹೊಸ ಕ್ರಮಾವಳಿಯನ್ನು ತಂದಿದ್ದಾರೆ. ತನ್ನ ಪತ್ರದಲ್ಲಿ ಸ್ಕಿಮಿಟ್‌ ಗೂಗಲ್‌ ಚೈಲ್ಡ್‌ ಪೋರ್ನ್‌ಗೆ ಸಂಬಂಧಿಸಿದ ಚಿತ್ರ ವಿಡಿಯೋಗಳನ್ನು ಬ್ಲಾಕ್‌ ಮಾಡಿದ್ದರೂ ಶಿಷುಕಾಮಿಗಳು ಚಿತ್ರಗಳನ್ನು ಅಪ್‌ಲೋಡ್‌ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಸಂಪೂರ್ಣ‌ವಾಗಿ ಬ್ಲಾಕ್‌ ಮಾಡಲು ಸಾಧ್ಯವಿಲ್ಲ.ಆದರೂ ನಮ್ಮ ತಂಡ ಈ ರೀತಿಯ ಫೋಟೋ ವಿಡಿಯೋ ಅಪ್‌ಲೋಡ್‌ ಆಗಿದ್ದಲ್ಲಿ ಸರ್ಚ್‌ನಿಂದ ಡಿಲೀಟ್‌ ಮಾಡಲು ಪ್ರಯತ್ನಿಸುತ್ತಿರುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot