ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವ ಗೂಗಲ್ ಡೂಡಲ್

Posted By: Varun
ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವ ಗೂಗಲ್ ಡೂಡಲ್

ಸಂಗೀತ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಮ್ಯೂಸಿಕ್ ಇಷ್ಟ ಆಗುತ್ತೆ. ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಪಾಪ್, ರಾಪ್, ರಾಕ್, ಆಪ್ರಾ, ಜಾಜ್, ಹೀಗೆ ಜಗತ್ತಿನಲ್ಲಿ ಹಲವಾರು ರೀತಿಯ ಸಂಗೀತ ಇರಬಹುದು, ಆದರೆ ರಾಗಕ್ಕೆ ಮನಸ್ಸು ಸೋಲುತ್ತದೆ, ಎದೆಯೊಳಗಿನ ಗಿಟಾರು ರಿಂಗ್ ರಿಂಗ್ ರಿಂಗ್ ರಿಂಗ್ ಅನ್ನುತ್ತೆ.

ಇಂತಹ ಹುಚ್ಚು ಇರುವುದರಿಂದಲೇ ಅಲ್ಲವಾ ಎಷ್ಟೋ ಜನ ಸಂಗೀತಕ್ಕೆ ಜೀವನವನ್ನು ಮುಡಿಪಾಗಿಟ್ಟಿದ್ದಾರೆ, ಹೊಸ ಹೊಸ ರಾಗಗಳನ್ನು, ವಾದ್ಯಗಳನ್ನು ಕಂಡುಹಿಡಿದಿದ್ದಾರೆ. ಅಂಥವರಲ್ಲಿ ಒಬ್ಬರಾದ, ಇವತ್ತು ಸಂಗೀತಗಾರರು ಉಪಯೋಗಿಸುವ "moog synthesizer" ಅನ್ನು ಕಂಡುಹಿಡಿದ ರಾಬರ್ಟ್ ಮೂಗ್ ರ 78ನೆ ಹುಟ್ಟುಹಬ್ಬಕ್ಕೆ ಗೂಗಲ್ ತುಂಬಾ ಕ್ರಿಯಾಶೀಲವಾದ ಡೂಡಲ್ ಒಂದನ್ನು ಪ್ರಕಟಿಸಿದೆ.

ಅಂದಹಾಗೆ ಈ "ಮೂಗ್ ಸಿನ್ತೆಸೈಜರ್" ನ ವಿಶೇಷತೆ ಏನೆಂದರೆ ಇದು ಯಾವುದೇ ಸಂಗೀತ ವಾದ್ಯದ ಸಂಗೀತವನ್ನು ಇದರಲ್ಲಿ ಅನುಕರಣೆ ಮಾಡಬಹುದು. ಹಾಗಾಗಿ ಇವತ್ತಿನ ಸಂಗೀತ ನಿರ್ದೇಶಕರಿಗೆ ಇದು ಒಂದು ವರದಾನವಿದ್ದಂತೆ.

ಈ ದಿನದ ಡೂಡಲ್ ಅನ್ನು ಮೂಗ್ ಸಿನ್ತೆಸೈಜರ್ ರೀತಿ ಡಿಸೈನ್ ಮಾಡಲಾಗಿದ್ದು, ನೀವು ನಿಮ್ಮ ಕೀಬೋರ್ಡ್ ಮೂಲಕ ಅದನ್ನು ಪ್ಲೇ ಮಾಡಬಹುದು ಇಲ್ಲವೆ ಮೌಸ್ ಮೂಲಕ ಕ್ಲಿಕ್ ಮಾಡಿದರೆ ಸಂಗೀತ ಹೊಮ್ಮುತ್ತದೆ. ನೀವು ಪ್ಲೇ ಮಾಡಿದ ಸಂಗೀತವನ್ನು ಬಲಭಾಗದಲ್ಲಿರುವ ಕೆಂಪು ಬಟನ್ ಒತ್ತಿ ಸೌಂಡ್ ಕೂಡಾ ಅಡ್ಜಸ್ಟ್ ಮಾಡಿ ರೆಕಾರ್ಡ್ ಮಾಡಬಹುದಾಗಿದೆ.

ಮತ್ತೊಂದು ವಿಶೇಷವೇನೆಂದರೆ ನೀವು ರೆಕಾರ್ಡ್ ಮಾಡಿ ನಿಮ್ಮ ಸ್ನೇಹಿತರಿಗೂ ತೋರಿಸಬಹುದು, ಗೂಗಲ್ ಪ್ಲಸ್ ಗೆ ಶೇರ್ ಮಾಡಬಹುದು ಹಾಗು ಲಿಂಕ್ ಮೂಲಕ ನಿಮಗೆ ಬೇಕಾದವರಿಗೆ ಕಳುಹಿಸಬಹುದಾಗಿದೆ. ನೀವು ಇದರ ವೀಡಿಯೋವನ್ನು ನೋಡಿ ಆನಂದಿಸಿ ನಂತರ ಗೂಗಲ್ ಡೂಡಲ್ ನೋಡಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot