ಗೂಗಲ್‌ ಡೂಡಲ್‌ನಲ್ಲಿ ಬಚ್ಚಿಡಲಾದ '2016 ರಿಯೋ ಒಲಿಂಪಿಕ್ಸ್' ಸಂಪೂರ್ಣ ಮಾಹಿತಿ!

Written By:

ಗೂಗಲ್‌ "ಡೂಡಲ್' ಪ್ರಪಂಚದ ಪ್ರಖ್ಯಾತ ಆಚರಣೆಗಳ ಸಂದರ್ಭಗಳಲೆಲ್ಲಾ ಬದಲಾಗುತ್ತಿರುತ್ತದೆ. ದಿನನಿತ್ಯ ಕಂಪ್ಯೂಟರ್‌ ಮುಂದೆ ಕುಳಿತು ಗೂಗಲ್‌ ಬ್ರೌಸರ್ ಉಪಯೋಗಿಸುವವರಿಗೆ ಈ ಮಾಹಿತಿ ತಿಳಿದಿರುತ್ತದೆ. ಅಂದಹಾಗೆ ಆಗಸ್ಟ್‌ 5 ರಿಂದ ಬದಲಾಗಿರುವ ಗೂಗಲ್‌ ಡೂಡಲ್ ಬಗ್ಗೆ ಮಾತ್ರ ಬಹುಸಂಖ್ಯಾತರಿಗೆ ಮಾಹಿತಿ ತಿಳಿದಿಲ್ಲ. ಅಂತಹ ವಿಶೇಷತೆ ಇದರಲ್ಲಿ ಅಡಗಿದೆ.

ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಕ್ರೋಮ್‌ ಬ್ರೌಸರ್ ಓಪನ್‌ ಮಾಡಿದರೆ ಡಿಸ್‌ಪ್ಲೇ ಆಗುವುದು ದೊಡ್ಡ ಗೂಗಲ್‌ ಡೂಡಲ್‌. ಇದೇ ಗೂಗಲ್‌ ಡೂಡಲ್‌ನಲ್ಲಿ ಈಗ ವಿಶೇಷತೆಯೊಂದು ಅಡಗಿದೆ. ಗೂಗಲ್‌ ಡೂಡಲ್ ಫೋಟೋ ಗಮನಿಸಿ ಮುಂದೆ ಓದಿರಿ.

ಗೂಗಲ್‌ ಡೂಡಲ್‌ನಲ್ಲಿ ಬಚ್ಚಿಡಲಾದ '2016 ರಿಯೋ ಒಲಿಂಪಿಕ್ಸ್' ಸಂಪೂರ್ಣ ಮಾಹಿತಿ!

ಚಿತ್ರದಲ್ಲಿ ಗೂಗಲ್‌ ಡೂಡಲ್‌ನ ಮಧ್ಯೆ ವೀಡಿಯೊ ಪ್ಲೇ ಬಟನ್‌ ಇರುವುದನ್ನು ಗಮನಿಸಿ. ಅಂದಹಾಗೆ ನಿಮ್ಮ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಪೇಜ್‌ ಓಪನ್‌ ಮಾಡಿದ ನಂತರ ಕಾಣುವ ಗೂಗಲ್‌ ಡೂಡಲ್‌ನ ಮಧ್ಯೆ ಕಾಣುವ ವೀಡಿಯೊ ಬಟನ್‌ ಕ್ಲಿಕ್ ಮಾಡಿರಿ. ಸ್ಮಾರ್ಟ್‌ಫೋನ್‌ ಬಳಕೆದಾರರು ಟ್ಯಾಪ್‌ ಮಾಡಿರಿ. ನಂತರ ನಿಮಗೆ ಕಾಣುವುದು ಗೊಂಬೆಯೊಂದು ಬೈಸಿಕಲ್‌ನ ಮೇಲೆ ಕುಳಿತು ಚಲಿಸುತ್ತಿರುವ ಜಿಫ್ ವೀಡಿಯೊ. ಇದರಲ್ಲೇ ಅಡಗಿರುವುದು ವಿಶೇಷ ಮಾಹಿತಿ. ಚಿತ್ರ ಗಮನಿಸಿ.

ಗೂಗಲ್‌ ಡೂಡಲ್‌ನಲ್ಲಿ ಬಚ್ಚಿಡಲಾದ '2016 ರಿಯೋ ಒಲಿಂಪಿಕ್ಸ್' ಸಂಪೂರ್ಣ ಮಾಹಿತಿ!

ಗೂಗಲ್‌ ಡೂಡಲ್‌ನಲ್ಲಿ ಬೈಸಿಕಲ್‌ ಮೇಲೆ ಕುಳಿತು ಚಲಿಸುತ್ತಿರುವ ಗೊಂಬೆ ಪ್ರವಾಸ ಮಾಡುತ್ತಿರುವುದು 2016 ರಿಯೋ ಒಲಿಂಪಿಕ್ಸ್‌ಗೆ ಎಂದು ಎಲ್ಲರೂ ತಿಳಿಯಲೇಬೇಕು. ವೇಗವಾಗಿ ಚಲಿಸುತ್ತಿರುವ ಆ ಗೊಂಬೆ ಮೇಲೆ ನೀವು ಮತ್ತೊಮ್ಮೆ ಕ್ಲಿಕ್ ಮಾಡಿದರೆ 2016 ರ ರಿಯೋ ಒಲಿಂಪಿಕ್ಸ್‌ ಕುರಿತ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ.

ಗೂಗಲ್‌ ಡೂಡಲ್‌ನಲ್ಲಿ ಬಚ್ಚಿಡಲಾದ '2016 ರಿಯೋ ಒಲಿಂಪಿಕ್ಸ್' ಸಂಪೂರ್ಣ ಮಾಹಿತಿ!

'OVERVIEW', 'SPORTS', 'ON TV', 'SCHEDULE', 'ATHLETES', 'MEDALS', 'COUNTRIES' ಎಂಬ ಮೆನು ಟ್ಯಾಬ್‌ಗಳಿರುವ ಪೇಜ್‌ ಒಂದು ಓಪನ್ ಆಗುತ್ತದೆ. ಈ ಪೇಜ್‌ ಓಪನ್‌ ಮಾಡಿದರೆ '2016 ರಿಯೋ ಒಲಿಂಪಿಕ್ಸ್‌' ಕುರಿತು ಯಾವುದೇ ಮಾಹಿತಿಯನ್ನು ತಿಳಿಯಬಹುದು. ಮುಂದಿನ ಕ್ರೀಡೆಗಳು ಯಾವಾಗ, ಎಲ್ಲಿ, ಫೈನಲ್‌ ಯಾವಾಗ, ಮೆಡಲ್‌ಗಳು ಯಾವ ದೇಶಕ್ಕೆ ಬಂದಿವೆ, ಯಾವ ಕ್ರೀಡಾಪಟು ಮೆಡಲ್ ಗೆದ್ದಿದ್ದಾರೆ ಎಂಬ ಸಂಪೂರ್ಣ ಮಾಹಿತಿ ತಿಳಿಯಬಹುದು. ಅಲ್ಲದೇ ಟಿವಿ ಚಾನೆಲ್‌ಗಳಲ್ಲಿ ಯಾವ ಕ್ರೀಡೆ ಯಾವ ಸಮಯಕ್ಕೆ ಪ್ರಸಾರವಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಸಹ ತಿಳಿಯಬಹುದಾಗಿದೆ. ನೆನಪಿರಲಿ ನೀವು ಗೂಗಲ್‌ ಯುಆರ್‌ಎಲ್‌ ಬಾರ್‌ನಲ್ಲಿ ಏನನ್ನು ಸಹ ಟೈಪಿಸುವ ಅವಶ್ಯಕತೆಯೇ ಇಲ್ಲ.

ರಿಯೋ 2016 ಒಲಿಂಪಿಕ್ಸ್: ಎಂಜಾಯ್‌ಗಾಗಿ ಈ 5 ಆಪ್‌ಗಳು

 

English summary
Google Doodle Hidden '2016 Rio Olympics' Full Updates. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot