ಕಾರ್ಮಿಕರ ದಿನಾಚರಣೆಯನ್ನು ಮರೆತ ಗೂಗಲ್

Posted By: Varun
ಕಾರ್ಮಿಕರ ದಿನಾಚರಣೆಯನ್ನು ಮರೆತ ಗೂಗಲ್

ಮೇ 1 ಕ್ಕೆ ವಿಶ್ವದೆಲ್ಲೆಡೆ "ಕಾರ್ಮಿಕರ ದಿನ" ವನ್ನು ಆಚರಿಸಲಾಗುತ್ತೆ ಎಂಬ ವಿಷಯ ನಿಮಗೆಲ್ಲಾ ಗೊತ್ತು. ಭಾರತದಲ್ಲಿ ಕೂಡಾ ಕಾರ್ಮಿಕರ ದಿನವನ್ನು ಮೇ 1, 1923 ರಿಂದಾ ಆಚರಿಸುತ್ತಾ ಬಂದಿದ್ದೇವೆ. ಪ್ರತೀ ವರ್ಷ ಗೂಗಲ್ ತನ್ನ ಡೂಡಲ್ ಮೂಲಕ ವಿಶ್ವದ ಮಹನೀಯರ ಹುಟ್ಟಿದ ಹಬ್ಬ, ಹಬ್ಬಗಳು ಹಾಗು ದಿನಾಚರಣೆಯ ಸಮಯದಲ್ಲಿ ಗೂಗಲ್ ಪ್ರಕಟಿಸುತ್ತದೆ. ಆದರೆ ಈ ಬಾರಿ ಯಾಕೋ ತನ್ನ ಗೂಗಲ್ ಇಂಡಿಯಾ ವೆಬ್ಸೈಟ್ ನಲ್ಲಿ ಕಾರ್ಮಿಕರ ದಿನದ ಡೂಡಲ್ ಅನ್ನು ಪ್ರಕಟಿಸದೆ ನಿರಾಸೆ ಮೂಡಿಸಿತು.

ಅದೇ ರಷಿಯಾ, ಬಹರೈನ್, ಹಾಂಗ್ ಕಾಂಗ್, ಸಿಂಗಾಪುರ್, ಜರ್ಮನಿ ಹೋಮ್ ಪೇಜ್ ಗಳಲ್ಲಿ, ಶಕ್ತಿಶಾಲಿಯಾದ ಹೆಣ್ಣುಮಗಳೊಬ್ಬಳು ಲೋಹದ ಗೂಗಲ್ ಲೋಗೋ ಒಂದನ್ನು ಹೊತ್ತಿರುವಡೂಡಲ್ ಒಂದನ್ನು ಪ್ರಕಟಿಸಿತ್ತು. ಇದೇ ರೀತಿ ಗೂಗಲ್, ಚಾರ್ಲಿ ಚಾಪ್ಲಿನ್ ನ ಹುಟ್ಟುಹಬ್ಬದಂದೂ ಅವರಡೂಡಲ್ ಅನ್ನು ಈ ವರ್ಷ ಪ್ರಕಟಿಸಲೇ ಇರಲಿಲ್ಲ.

ಗೂಗಲ್ ಗೆ ಯಾಕೆ ಈ ರೀತಿಯ ಮರೆವು ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot