ಕುಣಿಯುವ, ಹಾರುತಿರುವ ಗೂಗಲ್ ಡೂಡಲ್

By Varun
|
ಕುಣಿಯುವ, ಹಾರುತಿರುವ ಗೂಗಲ್ ಡೂಡಲ್

ಕಾರ್ಟೂನುಗಳೆಂದರೆ ನಮಗೆಲ್ಲರಿಗೂ ಇಷ್ಟ. ಕೆಲವೊಂದು ಕಾರ್ಟೂನ್ಗಳಂತೂನೋಡಲು ತುಂಬಾ ಫನ್ನಿಯಾಗಿರುತ್ತವೆ. ವಿಶ್ವದಲ್ಲಿ ಹಲವಾರು ವ್ಯಂಗ್ಯಚಿತ್ರಕಾರರು ಇದ್ದು, ಗೊಗಲ್ ಇವತ್ತು ಕೀತ್ ಹರಿಂಗ್ ಎಂಬ ವಿಶ್ವವಿಖ್ಯಾತ ಕಾರ್ಟೂನಿಸ್ಟ್ ನ ಡೂಡಲ್ ಒಂದನ್ನು ಪ್ರಕಟಿಸಿದೆ.

ನಿಮಗೆ ಗೊತ್ತಿರುವ ಹಾಗೆ ಗೂಗಲ್, ಖ್ಯಾತನಾಮರ ಹುಟ್ಟುಹಬ್ಬದಂದು ಡೂಡಲ್ ಮಾಡಿ ಅವರಿಗೆ ಗೌರವ ಸಲ್ಲಿಸುತ್ತದೆ. ಹೋದ ತಿಂಗಳು ಜಿಪ್ ಕಂಡುಹಿಡಿದವನ ಡೂಡಲ್ ನೋಡಿದಿರಿ. ಇವತ್ತು, ಅಂದರೆ ಮೇ 4 ರಂದು ಕೀತ್ ಹರಿಂಗ್ ಹುಟ್ಟಿದ ದಿನ. ಅತ್ಯಂತ ಚಿಕ್ಕ ವಯಸ್ಸಿಗೇ ವರ್ಣಚಿತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಕೀತ್, ತನ್ನ ತಂದೆಯಿಂದ ಕಾರ್ಟೂನ್ ಬರೆಯುವುದನ್ನು ಕಲಿತುಕೊಂಡು ಬಹು ಬೇಗ ಖ್ಯಾತಯನ್ನು ಪಡೆದ. ಹಲವಾರು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ತನ್ನ ವರ್ಣಚಿತ್ರಗಳು ಹಾಗು ಕಾರ್ಟೂನ್ಗಳನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದ. ಚಿತ್ರಕಲೆಯ ಜೊತೆ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಕೀತ್, ಏಡ್ಸ್ ರೋಗಕ್ಕೆ ಬಲಿಯಾಗಿ 31ನೇ ವಯಸ್ಸಿನಲ್ಲಿಯೇ ಸತ್ತ.

ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡಿದ ಕೀತ್ ನ ಹುಟ್ಟುಹಬ್ಬಕ್ಕೆ ಗೂಗಲ್ ಚೆಂದವಾದ, ನೀಲಿ, ಕೆಂಪು,ಹಳದಿ ಹಾಗು ಹಸಿರು ಬಣ್ಣದ ಕಾರ್ಟೂನ್ ಗಳು ಇರುವ ಡೂಡಲ್ (ಮೇಲಿನ ಚಿತ್ರ ಗಮನಿಸಿ) ಪ್ರಕಟಿಸಿದೆ. ಸರಿಯಾಗಿ ಗಮನಿಸಿದರೆ, ಆ ಕಾರ್ಟೂನ್ ಗಳಲ್ಲಿ ಸೂಪರ್ ಮ್ಯಾನ್, ಬೀದಿಯಲ್ಲಿ ಡ್ಯಾನ್ಸ್ ಮಾಡುತ್ತಿರುವ ಕಾರ್ಟೂನ್,ನಿಂತಿರುವ ಮೊಸಳೆ, ಪ್ರೀತಿಯಲ್ಲಿ ಖುಷಿಯಾಗಿರುವ ಹುಡುಗ, ಈ ರೀತಿ ಪ್ರತಿಯೊಂದು GOOGLE ಅಕ್ಷರಕ್ಕೆ ಒಂದೊಂದು ಕಾರ್ಟೂನ್ ಜೋಡಿಸಿ ಪ್ರಕಟಿಸಿದೆ.

ಈಗಲೇ ಗೂಗಲ್ ಪೇಜ್ ಗೆ ಹೋಗಿ ಡೂಡಲ್ ನೋಡಿ ಖುಷಿ ಪಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X