Home
ಸುದ್ದಿಜಾಲ

Google: ಗೂಗಲ್ ಭಾರತದಲ್ಲಿ ಈ ಬಳಕೆದಾರರಿಗೆ ಕೇವಲ 35ರೂ.ಗೆ ಈ ಸೇವೆ ನೀಡಲಿದೆ!

ಗೂಗಲ್ (Google) ಈಗಾಗಲೇ ಸಾಕಷ್ಟು ವಿಭಾಗದಲ್ಲಿ ತನ್ನದೇ ಆದ ಸೇವೆ ನೀಡುತ್ತಿದೆ. ಈ ಮೂಲಕ ಜಾಗತಿಕವಾಗಿ ಟೆಕ್‌ನ ಅಗ್ರ ದೈತ್ಯ ಎನಿಸಿಕೊಂಡಿದ್ದು, ಈ ಮೂಲಕ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತಾ ಬರುತ್ತಿದೆ. ಅದರಂತೆ ಈಗ ಕೇವಲ 35ರೂ.ಗೆ ಈ ಸೇವೆ ನೀಡಲು ಸಜ್ಜಾಗಿದೆ.

ಹೌದು, ಗೂಗಲ್‌ ಎಲ್ಲಾ ವಿಭಾಗದಲ್ಲಿ ತನ್ನದೇ ಆದ ಪ್ರಾಬಲ್ಯ ಸಾಧಿಸಿದೆ. ಈ ವಿಭಾಗದಲ್ಲಿ ಗೂಗಲ್‌ ಡ್ರೈವ್‌ (Google Drive) ಸಹ ಮುಖ್ಯವಾಗಿದೆ. ಈ ಮೂಲಕ ಬಳಕೆದಾರರು ಆಂಡ್ರಾಯ್ಡ್‌, ಐಓಎಸ್‌ ಅಥವಾ ಡೆಸ್ಕ್‌ಟಾಪ್‌ನಲ್ಲಿ (Android, iOS, Desktop) ಉತ್ತಮ ಕ್ಲೌಡ್ ಸೇವೆ (Cloud service) ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇದೀಗ ಈ ವಿಭಾಗದಲ್ಲಿ ಗೂಗಲ್‌ ಗುಡ್‌ ನ್ಯೂಸ್ ನೀಡಿದ್ದು, ಪರಿಣಾಮ ಸಾಕಷ್ಟು ಪ್ರಯೋಜನ ಸಿಗಲಿದೆ. ಹಾಗಿದ್ರೆ, ಎಷ್ಟು ಜಿಬಿಗೆ 35 ರೂ.ಗಳು?, ಯಾವೆಲ್ಲಾ ಬಳಕೆದಾರರು ಈ ಸೇವೆ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

Google: ಗೂಗಲ್ ಭಾರತದಲ್ಲಿ ಈ ಬಳಕೆದಾರರಿಗೆ ಕೇವಲ 35ರೂ.ಗೆ ಈ ಸೇವೆ ನೀಡಲಿದೆ!

ಗೂಗಲ್‌ ಡ್ರೈವ್: ಉತ್ತಮ ಹಾಗೂ ಹೆಚ್ಚಿನ ಸೆಕ್ಯೂರಿಟಿ ಇರುವ ಸ್ಟೋರೇಜ್‌ ಪಡೆಯಲು ಸಾಕಷ್ಟು ಜನರು ಗೂಗಲ್‌ ಡ್ರೈವ್ ಬಳಕೆ ಮಾಡುತ್ತಾರೆ. ಅದರಂತೆ ಇದು ಉತ್ತಮ ಮಾರ್ಗವೂ ಹೌದು. ಅದರಲ್ಲೂ ಬಳಕೆದಾರರಿಗೆ ಅವರ ಅಗತ್ಯತೆಗಳು ಮತ್ತು ಬಜೆಟ್‌ಗೆ ಅನುಗುಣವಾಗಿ ಕ್ಲೌಡ್ ಯೋಜನೆಗಳ ಶ್ರೇಣಿಯನ್ನು ಹೊಂದಿದ್ದು, ಭಾರತದಲ್ಲಿ ಅಗ್ಗದ ಗೂಗಲ್‌ ಡ್ರೈವ್ ಪ್ಲ್ಯಾನ್‌ ಅಂದ್ರೆ ಅದು 130 ರೂ.ಗಳು. ಆದರೆ, ಕಂಪನಿಯು 2024 ವರ್ಷವನ್ನು ಸಂತಸದಿಂದ ಆರಂಭ ಮಾಡಲು ಮುಂದಾಗಿದ್ದು, ಪರಿಣಾಮ 35 ರೂ.ಗೆ ಈ ಸೇವೆ ಪಡೆಯಲು ಅನುಕೂಲ ಮಾಡಿಕೊಟ್ಟಿದೆ.

ಗೂಗಲ್ ಇದೀಗ ಸೀಮಿತ ಅವಧಿಗೆ ಡ್ರೈವ್‌ನಲ್ಲಿ ವಿಶೇಷ ಬೆಲೆಯಲ್ಲಿ ಈ ಸೇವೆ ನೀಡುತ್ತಿದೆ. ಅಂದರೆ ಎಲ್ಲರಿಗೂ ಇದು ಲಭ್ಯ ಇಲ್ಲ ಅನ್ನೋದು ನಿಮ್ಮ ಗಮನಕ್ಕೆ ಇರಲಿ. ಈ ಕಾರಣಕ್ಕೆ ಗೂಗಲ್‌ ಐಡಿ ಮೂಲಕ ನಿಮ್ಮ ಗೂಗಲ್‌ ಡ್ರೈವ್ ಖಾತೆಗೆ ಹೋಗಿ ಮತ್ತು ನಿಮಗೆ ವಿಶೇಷ ರಿಯಾಯಿತಿಯನ್ನು ಗೂಗಲ್‌ ನೀಡುತ್ತದೆಯೇ ಎಂದು ಚೆಕ್‌ ಮಾಡಿಕೊಳ್ಳಬೇಕಿದೆ. ಹಾಗಿದ್ರೆ, ಬನ್ನಿ ಎಷ್ಟು ಜಿಬಿಗೆ ಎಷ್ಟು ಬೆಲೆ ಅನ್ನೋದನ್ನು ತಿಳಿಯೋಣ.

Google: ಗೂಗಲ್ ಭಾರತದಲ್ಲಿ ಈ ಬಳಕೆದಾರರಿಗೆ ಕೇವಲ 35ರೂ.ಗೆ ಈ ಸೇವೆ ನೀಡಲಿದೆ!

ಗೂಗಲ್‌ ಡ್ರೈವ್ ಪ್ಲ್ಯಾನ್‌ಗಳು ಭಾರತದಲ್ಲಿ 100GB ಯಿಂದ ಆರಂಭ ಆಗಲಿದೆ. ಈ ಪ್ಲ್ಯಾನ್‌ಗೆ ತಿಂಗಳಿಗೆ 130 ರೂ.ಗಳನ್ನು ಪಾವತಿ ಮಾಡಬೇಕಿದೆ. ಆದರೆ, ವಿಶೇಷ ಕೊಡುಗೆ ಭಾಗವಾಗಿ ಮೂರು ತಿಂಗಳವರೆಗೆ 35 ರೂ.ಗಳಲ್ಲಿ ಈ ಪ್ಲ್ಯಾನ್‌ಗೆ ಚಂದಾದಾರರಾಗಬಹುದು. ಇದಾದ ನಂತರದಲ್ಲಿ ತಿಂಗಳಿಗೆ 130 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಅದೇ ರೀತಿ 200GB ಡ್ರೈವ್ ಪ್ಲ್ಯಾನ್‌ ಬೇಕು ಎಂದರೆ ಮೂರು ತಿಂಗಳವರೆಗೆ 50 ರೂ.ಗಳನ್ನು ಪಾವತಿ ಮಾಡಬೇಕಿದೆ. ಇದರ ಸಾಮಾನ್ಯ ದರ 210 ರೂ.ಗಳು. ಜೊತೆಗೆ 2TB ಡ್ರೈವ್ ಪ್ಲ್ಯಾನ್‌ ಸಹ ಇದ್ದು, ಇದಕ್ಕೆ ತಿಂಗಳಿಗೆ 650 ರೂ.ಗಳ ಸಾಮಾನ್ಯ ದರ ಇದೆ. ಆದರೆ, ನೀವು ಮೂರು ತಿಂಗಳವರೆಗೆ 160 ರೂ.ಗಳನ್ನು ಪಾವತಿ ಮಾಡುವ ಮೂಲಕ ಈ ಸೇವೆ ಪಡೆಯಬಹುದಾಗಿದೆ.

ಯಾರಿಗೆಲ್ಲಾ ಈ ಸೇವೆಗೆ ಲಭ್ಯ: ಈ ಹೊಸ ಪ್ಲ್ಯಾನ್‌ ದರ ಈವರೆಗೂ ಡ್ರೈವ್‌ಗೆ ಪಾವತಿಸದ ಬಳಕೆದಾರರಿಗೆ ಮಾತ್ರ ಲಭ್ಯ ಇದೆ. ಅಂದರೆ ಹೊಸಬರಿಗೆ ಮಾತ್ರ. ಅದರಲ್ಲೂ ಈ ಆಫರ್ ಅನ್ನು ಭಾರತದಲ್ಲಿ ಹೆಚ್ಚಿನ ಜನರು ಬಳಕೆ ಮಾಡುವ ನಿರೀಕ್ಷೆ ಇದೆ. ಅದರಲ್ಲೂ 2024 ರ ಆರಂಭದಲ್ಲೇ ಈ ಕೊಡುಗೆ ಘೋಷಣೆ ಮಾಡಿರುವುದರಿಂದ ಸಾಕಷ್ಟು ಜನರು ಈ ವರ್ಷದಿಂದ ಡೇಟಾವನ್ನು ಸುರಕ್ಷಿತವಾಗಿ ಸ್ಟೋರ್‌ ಮಾಡಲು ಮುಂದಾಗುತ್ತಾರೆ ಅನ್ನೋದು ಗೂಗಲ್‌ಗೆ ಚೆನ್ನಾಗಿ ತಿಳಿದಿದೆ. ಈ ಕಾರಣಕ್ಕೆ ಈ ಪ್ಲ್ಯಾನ್‌ ಅನ್ನು ಘೋಷಣೆ ಮಾಡಿದೆ.

Google: ಗೂಗಲ್ ಭಾರತದಲ್ಲಿ ಈ ಬಳಕೆದಾರರಿಗೆ ಕೇವಲ 35ರೂ.ಗೆ ಈ ಸೇವೆ ನೀಡಲಿದೆ!

ಅದರಂತೆ 2024 ರ ಆರಂಭದಿಂದ ಸ್ಟೋರೇಜ್‌ ಕೋಟಾವು ಗೂಗಲ್‌ ಡ್ರೈವ್ ಖಾತೆಯಲ್ಲಿ ಸ್ಟೋರ್‌ ಆಗಲಿದೆ. ಹಾಗಿದ್ರೆ, ಮತ್ಯಾಕೆ ತಡ ನಿಮ್ಮ ಅಮೂಲ್ಯ ಮಾಹಿತಿ ಎಲ್ಲೂ ಕಳೆದು ಹೋಗದಂತೆ ಮಾಡಲು ಅಥವಾ ಹೆಚ್ಚಿನ ಸುರಕ್ಷತೆಯನ್ನು ನೀಡಲು ಬಯಸಿದರೆ ಈ ಈಗಲೇ ನೀವು ಈ ಸೇವೆ ಪಡೆದುಕೊಳ್ಳಿ. ಆದರೆ ಈ ಆಫರ್ ಮೂರು ತಿಂಗಳವರೆಗೆ ಮಾತ್ರ ಅನ್ನೋದು ಸಹ ನಿಮ್ಮ ಗಮನಕ್ಕೆ ಇರಲಿ.

Best Mobiles in India

English summary
Google Drive has been announced offer for new users. This service can be availed by paying just Rs.35 for three months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+