Home
ಸುದ್ದಿಜಾಲ

Google: ಗೂಗಲ್‌ನ ಪಿಕ್ಸೆಲ್ 8, 8 ಪ್ರೊ ಬ್ಯಾಟರಿ ಡೆಡ್‌ ಆದರೂ ಕೆಲಸ ಮಾಡುತ್ತವೆ! ಅದೇಗೆ ಅಂತೀರಾ?

ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳು (Google Pixel smartphone) ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ ಬಹಳ ಭಿನ್ನವಾಗಿ ಗುರುತಿಸಿಕೊಳ್ಳುತ್ತಿವೆ. ಅದರಲ್ಲೂ ಪ್ರೀಮಿಯಂ ಫೋನ್‌ಗಳಿಗೆ ಸೆಡ್ಡು ಹೊಡೆಯುವ ಹೊಸ ಹೊಸ ಫೀಚರ್ಸ್‌ ಅನ್ನು ಈ ಫೋನ್‌ಗಳಲ್ಲಿ ನೀಡಲಾಗುತ್ತಿದೆ.

ಹೌದು, ಗೂಗಲ್‌ ಪಿಕ್ಸೆಲ್‌ ಫೋನ್‌ ಅದರಲ್ಲೂ ಗೂಗಲ್‌ನ ಪಿಕ್ಸೆಲ್ 8, 8 ಪ್ರೊ ಫೋನ್‌ಗಳು (Google Pixel 8, 8 Pro Phone) ಇನ್ಮುಂದೆ ಹೊಸ ಫೀಚರ್ಸ್‌ನಲ್ಲಿ ಕೆಲಸ ಮಾಡಲಿವೆ. ಅಂದರೆ ಅವುಗಳ ಬ್ಯಾಟರಿ ಖಾಲಿಯಾಗಿ ಡೆಡ್‌ ಆದರೂ ಸಹ ಈ ವಿಚಾರದಲ್ಲಿ ಅವು ತಮ್ಮ ಕೆಲಸವನ್ನು ಮಾತ್ರ ಮುಂದುವರೆಸುತ್ತವೆ. ಇದರಿಂದಾಗಿ, ಈ ಫೋನ್‌ಗಳು ಕಳೆದುಹೋದರೂ ಸಹ ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಸೌಲಭ್ಯ?, ಇದು ಹೇಗೆ ಕೆಲಸ ಮಾಡಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್‌ನ ಪಿಕ್ಸೆಲ್ 8, 8 ಪ್ರೊ ಬ್ಯಾಟರಿ ಡೆಡ್‌ ಆದರೂ ಕೆಲಸ ಮಾಡುತ್ತವೆ!

ಗೂಗಲ್‌ ಫೈಂಡ್‌ ಮೈ ಡಿವೈಸ್‌ ನೆಟ್‌ವರ್ಕ್‌: ಗೂಗಲ್‌ನ ಹೊಸ ಫೈಂಡ್‌ ಮೈ ಡಿವೈಸ್‌ ನೆಟ್‌ವರ್ಕ್‌ (Google Find My Device Network) ಬಳಕೆದಾರರಿಗೆ ವಿಭಿನ್ನ ಅನುಕೂಲ ಮಾಡಿಕೊಡಲಿದೆ. ಅಂದರೆ ಪಿಕ್ಸೆಲ್‌ 8 ಸರಣಿಯ ಫೋನ್‌ಗಳು ಪವರ್ ಡೌನ್ ಆಗಿರುವಾಗಲೂ ಅಥವಾ ಅವುಗಳ ಬ್ಯಾಟರಿ ಖಾಲಿಯಾದ ನಂತರವೂ ಆ ಫೋನ್‌ಗಳು ಕಳ್ಳತನ ಆದರೆ ಅಥವಾ ಮರೆತು ಎಲ್ಲಾದರೂ ಇಟ್ಟು ಬಂದರೆ ಸುಲಭವಾಗಿ ಈ ಫೀಚರ್ಸ್‌ ಮೂಲಕ ಪತ್ತೆ ಮಾಡಬಹುದಾಗಿದೆ.

ನವೀಕರಿಸಿದ, ಹೆಚ್ಚು ಸುಧಾರಿತ ಫೈಂಡ್ ಮೈ ಡಿವೈಸ್ ನೆಟ್‌ವರ್ಕ್‌ನ ಭಾಗವಾಗಿ ಈ ಸೌಲಭ್ಯ ಬಳಕೆದಾರರಿಗೆ ಲಭ್ಯವಾಗಲಿದೆ. ಇನ್ನು ಈ ಆಫ್‌ಲೈನ್ ಟ್ರ್ಯಾಕಿಂಗ್ ತನ್ನ ಇತ್ತೀಚಿನ ಎರಡು ಫೋನ್‌ಗಳಲ್ಲಿ ವಿಶೇಷ ಪಿಕ್ಸೆಲ್ ಹಾರ್ಡ್‌ವೇರ್ ಮೂಲಕ ಸಾಧ್ಯವಾಗುವಂತೆ ಮಾಡಲಾಗಿದೆ ಎಂದು ಗೂಗಲ್ ಹೇಳಿಕೆ ನೀಡಿದೆ. ಅಂದರೆ ಬ್ಲೂಟೂತ್ ಚಿಪ್‌ಗೆ ಚಾನೆಲ್ ಮಾಡಲಾದ ಹಲವಾರು ಗಂಟೆಗಳ ಕಾಲ ಡಿವೈಸ್‌ಗಳಲ್ಲಿ ಮೀಸಲು ಬ್ಯಾಟರಿ ಪವರ್‌ ಇರಲಿದೆ ಎಂದು ಗೂಗಲ್‌ ವಕ್ತಾರ ನಟಾಲಿ ಜಾನ್ಸನ್ ದಿ ವರ್ಜ್‌ ಗೆ ಮಾಹಿತಿ ನೀಡಿದ್ದಾರೆ.

ಗೂಗಲ್‌ನ ಪಿಕ್ಸೆಲ್ 8, 8 ಪ್ರೊ ಬ್ಯಾಟರಿ ಡೆಡ್‌ ಆದರೂ ಕೆಲಸ ಮಾಡುತ್ತವೆ!

ಅಲ್ಲದೆ ಇದೇ ಫೀಚರ್ಸ್‌ ಆಯ್ಕೆಯನ್ನು ಭವಿಷ್ಯದ ಪಿಕ್ಸೆಲ್‌ ಫೋಲ್ಡ್‌ 2 ಮತ್ತು ಪಿಕ್ಸೆಲ್‌ 9 / 9 ಪ್ರೊ ಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಆದರೂ ಬಜೆಟ್-ಶ್ರೇಣಿಯ ಪಿಕ್ಸೆಲ್‌ 8A ಈ ಫೀಚರ್ಸ್‌ ಅನ್ನು ಹೊಂದಿರುತ್ತದೆಯೇ ಇಲ್ಲವೇ ಅನ್ನೋದು ದೃಢವಾಗಿಲ್ಲ. ಈ ಫೋನ್‌ ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್‌ ಮಾಡಲು ಗೂಗಲ್‌ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಗಮನಿಸಬೇಕಾದ ವಿಷಯ ಏನೆಂದರೆ ಆಪಲ್‌ನ ಇತ್ತೀಚಿನ ಐಫೋನ್‌ಗಳು ಡೇಟಾ ಸಂಪರ್ಕವಿಲ್ಲದೆ ಇರುವಾಗಲೂ ಸಹ ಅದರಲ್ಲೂ ಪವರ್ ಡೌನ್ ಆಗಿರುವಾಗಲೂ ಸಹ ಅವುಗಳನ್ನು ಪತ್ತೆ ಮಾಡಬಹುದಾಗಿದೆ. ಇದೇ ಫೀಚರ್ಸ್‌ ಅನ್ನು ಸ್ಯಾಮ್‌ಸಂಗ್ ಫೋನ್‌ಗಳಲ್ಲೂ ಸಹ ಕಾಣಬಹುದಾಗಿದೆ. ಆದರೆ ಇನ್ಮುಂದೆ ಪಿಕ್ಸೆಲ್‌ ಫೋನ್‌ಗಳಲ್ಲಿ ಲಭ್ಯ ಆಗುತ್ತಿರುವುದು ಸ್ಮಾರ್ಟ್‌ಫೋನ್‌ ಖರೀದಿ ಮಾಡುವವರಿಗೆ ಸಾಕಷ್ಟು ಆಯ್ಕೆಯನ್ನು ನೀಡಿದಂತೆ ಆಗಲಿದೆ.

ಗೂಗಲ್‌ನ ಪಿಕ್ಸೆಲ್ 8, 8 ಪ್ರೊ ಬ್ಯಾಟರಿ ಡೆಡ್‌ ಆದರೂ ಕೆಲಸ ಮಾಡುತ್ತವೆ!

ಇನ್ನು ಗೂಗಲ್‌ ಈ ಹೊಸ ಫೈಂಡ್ ಮೈ ಡಿವೈಸ್‌ ನೆಟ್‌ವರ್ಕ್ ಅನ್ನು ಯುಎಸ್‌ ಮತ್ತು ಕೆನಡಾದಲ್ಲಿ ಹೊರತರಲಾಗಿದೆ. ಮೇ ತಿಂಗಳಲ್ಲಿ, ಕ್ರೌಡ್‌ಸೋರ್ಸ್ಡ್ ನೆಟ್‌ವರ್ಕ್‌ಗೆ ಟ್ಯಾಪ್ ಮಾಡುವ ಚಿಪೋಲೋ ಮತ್ತು ಇತರ ಕಂಪನಿಗಳ ಟ್ರ್ಯಾಕರ್‌ಗಳು ಲಭ್ಯವಿರುತ್ತವೆ. ಅಜ್ಞಾತ ಟ್ರ್ಯಾಕರ್ ಎಚ್ಚರಿಕೆಗಳು, ಎಂಡ್‌ ಟು ಎಂಡ್‌ ಗೂಢಲಿಪೀಕರಣ, ಸ್ಥಳ ವಿನಂತಿಗಳಿಗೆ ದರ ಸೀಮಿತಗೊಳಿಸುವಿಕೆ ಹಾಗೂ ಇತರ ಕ್ರಮಗಳಂತಹ ಸುರಕ್ಷತೆಗಳೊಂದಿಗೆ ವರ್ಧಿತ ಫೈಂಡ್ ಮೈ ಡಿವೈಸ್‌ ವ್ಯವಸ್ಥೆಯನ್ನು ಹೊರತಂದಿರುವುದರಿಂದ ಭದ್ರತೆ ಮತ್ತು ವೈಯಕ್ತಿಕ ಸುರಕ್ಷತೆಯ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಗೂಗಲ್‌ ಹೇಳಿಕೊಂಡಿದೆ.

Best Mobiles in India

English summary
Google Pixel phone especially Google Pixel 8, 8 Pro Phone will work on new features from now on. Google Find My Device Network facility will be present in these phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+