Home
ಸುದ್ದಿಜಾಲ

ಗೂಗಲ್ ಸರ್ಚ್‌ನ ಲೈಟ್‌ ವರ್ಷನ್ 'ಗೂಗಲ್ ಗೋ' ಈಗ ಲಭ್ಯ!

ಏನೇ ಮಾಹಿತಿ ಬೇಕಿದ್ದರೂ ತಕ್ಷಣಕ್ಕೆ ನೆನಪಾಗುವುದು ಟೆಕ್ ದೈತ್ಯ ಗೂಗಲ್ ಸರ್ಚ್. ಅಗತ್ಯ ಮಾಹಿತಿಯ ಒದಗಿಸುವ ತಾಣವಾಗಿರುವ ಗೂಗಲ್ ಸರ್ಚ್, ಸ್ಮಾರ್ಟ್‌ಫೋನ್‌ಗಳಿಗೆ ಒಂದು ರೀತಿ ಮೂಲಭೂತ ಆಪ್‌ ಇದಂತೆ ಆಗಿದೆ. ಹೀಗಾಗಿ ಪ್ರತಿ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಸರ್ಚ್‌ ಖಾಯಂ ಸ್ಥಾನ ಪಡೆದಿದ್ದು, ಆದ್ರೆ ಹೆಚ್ಚಿನ ಆಂತರಿಕ ಸಾಮರ್ಥ್ಯ ಇಲ್ಲದ ಸ್ಮಾರ್ಟ್‌ಫೋನ್‌ಗಳಿಗೆ ಹೊರೆ ಎನಿಸಿಕೊಳ್ಳಲಿದೆ. ಅದಕ್ಕಾಗಿ ಸಂಸ್ಥೆಯು ಗೂಗಲ್ ಗೋ ಪರಿಚಯಿಸಿದೆ.

ಗೂಗಲ್ ಸರ್ಚ್‌ನ ಲೈಟ್‌ ವರ್ಷನ್ 'ಗೂಗಲ್ ಗೋ' ಈಗ ಲಭ್ಯ!

ಹೌದು, ಗೂಗಲ್ ಸಂಸ್ಥೆಯು ಇದೀಗ ತನ್ನ 'ಗೂಗಲ್ ಗೋ ಸರ್ಚ್' ಆಪ್‌ ಅನ್ನು ಪ್ಲೇ ಸ್ಟೋರ್‌ಗೆ ಸೇರಿಸಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಿದೆ. ಗೂಗಲ್ ಗೋ ಆಪ್‌ ಗೂಗಲ್ ಸರ್ಚ್‌ನ ಮಿನಿ ರೂಪಾಂತರ ಆವೃತ್ತಿಯಾಗಿದ್ದು, ಕೇವಲ 7MB ಮೆಮೊರಿ ಸಾಮರ್ಥ್ಯವನ್ನು ಪಡೆದಿದೆ. ಹೀಗಾಗಿ ಕಡಿಮೆ ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ ಗೋ ಆಪ್‌ ಅತ್ಯುತ್ತಮ ಅಪ್ಲಿಕೇಶನ್ ಆಗಿದೆ.

ಗೂಗಲ್ ಸರ್ಚ್‌ನ ಲೈಟ್‌ ವರ್ಷನ್ 'ಗೂಗಲ್ ಗೋ' ಈಗ ಲಭ್ಯ!

ಕಂಪೆನಿಯು ಗೂಗಲ್‌ ಸರ್ಚ್‌ನ ಲೈಟ್‌ ವರ್ಷನ್‌ 'ಗೂಗಲ್ ಗೋ ಸರ್ಚ್‌' ಆಪ್‌ ಅನ್ನು ಕಳೆದ 2017ರಲ್ಲಿಯೇ ಬಿಡುಗಡೆ ಮಾಡಿದ್ದು, ಈ ಆಪ್‌ ಆರಂಭದಲ್ಲಿ ಕೇಲವು ರಾಷ್ಟ್ರಗಳಿಗೆ ಮಾತ್ರ ಸೀಮಿತಗೊಳಿಸಿತ್ತು. ಆದ್ರೆ, ಸಂಸ್ಥೆಯು 'ಗೂಗಲ್ ಗೋ' ಅಪ್ಲಿಕೇಶನ್ ಅನ್ನು ಇದೀಗ ವಿಶ್ವಾದ್ಯಂತ ಮುಕ್ತವಾಗಿಸಿದ್ದು, ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಗೂಗಲ್ ಸರ್ಚ್‌ನ ಲೈಟ್‌ ವರ್ಷನ್ 'ಗೂಗಲ್ ಗೋ' ಈಗ ಲಭ್ಯ!

ಗೂಗಲ್ ಗೋ ಸರ್ಚ್‌ ಆಪ್‌ನ ಪ್ರಮುಖ ಆಕರ್ಷಣೆಯೆಂದರೇ ಅದು 'ಗೂಗಲ್ ಲೆನ್ಸ್‌' ಆಯ್ಕೆಯನ್ನು ಒಳಗೊಂಡಿರುವುದೆ ಆಗಿದೆ. ಆಪ್‌ AI ತಂತ್ರಜ್ಞಾನ ಆಧಾರಿತವಾಗಿದ್ದು, ಭಾಷಾಂತರ ಮಾಡಲು ನೆರವಾಗಲಿದೆ. ಹಾಗೆಯೇ ಲೆನ್ಸ್‌ ಮೂಲಕ ಚಿತ್ರದಲ್ಲಿನ ಪದಗಳನ್ನು ಸಹ ಗ್ರಹಿಸಿ (ರೀಡ್‌ ಔಟ್‌ ಲೌಡ್‌) ಓದುತ್ತದೆ ಮತ್ತು ಆ ಪದಗಳ ಕುರಿತು ಮಾಹಿತಿ ಸರ್ಚ್‌ ಸಹ ಮಾಡುವ ಫೀಚರ್ ಪಡೆದುಕೊಂಡಿದೆ.

ಕಡಿಮೆ ಮೆಮೊರಿ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು ಗೂಗಲ್ ಗೋ ಸರ್ಚ್‌ ಆಪ್ ಬೆಂಬಲ ಪಡೆದುಕೊಂಡಿವೆ. 5.0 ಲಾಲಿಪಾಪ್ ಓಎಸ್‌ (Lollipop OS) ಮತ್ತು ಅದಕ್ಕಿಂತಲೂ ಅಧಿಕ ಸಾಮರ್ಥ್ಯದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್‌ ಮಾಡಲಿದೆ. ಗೂಗಲ್ ಗೋ ಸರ್ಚ್ ಆಪ್‌ ಅನ್ನು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Google Go app support for Android 5.0 Lollipop and higher version of Android OS. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+