ಬಲೂನ್‌ಗಳ ಹಾರಾಟದಿಂದ ಇಂಟರ್ನೆಟ್ ವ್ಯವಸ್ಥೆ

By Shwetha
|

ದೊಡ್ಡ ಬಲೂನ್‌ಗಳ ಮೂಲಕ ಇಂಟರ್ನೆಟ್ ವ್ಯವಸ್ಥೆಯನ್ನು ಒದಗಿಸುವ ಪೈಲೆಟ್ ಯೋಜನೆಯಲ್ಲಿ ಗೂಗಲ್ ಕಾರ್ಯನಿರ್ವಹಿಸುತ್ತಿದ್ದು ಸರಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ತನ್ನ ಪ್ರಾಜೆಕ್ಟ್ ಲೂನ್ ಯೋಜನೆಯಡಿಯಲ್ಲಿ 20 ಕಿಲೋಮೀಟರ್‌ಗಳ ಎತ್ತರದಲ್ಲಿ ದೊಡ್ಡ ಬಲೂನ್‌ಗಳನ್ನು ಇಂಟರ್ನೆಟ್ ಸೇವೆಯನ್ನು ಒದಗಿಸುವುದಕ್ಕಾಗಿ ಕಂಪೆನಿ ಬಳಸಿಕೊಳ್ಳುತ್ತಿದೆ. ಈ ಹೊಸ ತಂತ್ರಜ್ಞಾನವನ್ನು ನ್ಯೂಜಿಲೆಂಡ್, ಕ್ಯಾಲಿಫೋರ್ನಿಯಾ ಮತ್ತು ಬ್ರೆಜಿಲ್‌ನಲ್ಲಿ ಗೂಗಲ್ ಪರೀಕ್ಷಿಸಿದೆ.

ಓದಿರಿ: ವಿಜ್ಞಾನಿಗಳನ್ನೇ ಬಲಿತೆಗೆದುಕೊಂಡ ಮಾರಕ ಅನ್ವೇಷಣೆಗಳು

ಇಂದಿನ ಲೇಖನದಲ್ಲಿ ಪ್ರಾಜೆಕ್ಟ್ ಲೂನ್ ಕುರಿತ ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ.

ಸರಕಾರ ಅಂಗೀಕಾರ

ಸರಕಾರ ಅಂಗೀಕಾರ

ಲೂನ್ ಪ್ರಾಜೆಕ್ಟ್ ಮತ್ತು ಡ್ರೋನ್ ಆಧಾರಿತ ಇಂಟರ್ನೆಟ್ ವರ್ಗಾವಣೆಗಾಗಿ ಗೂಗಲ್ ಸರಕಾರವನ್ನು ಸಂಪರ್ಕಿಸಿದೆ. ಇದಿಗ ತನ್ನ ಪ್ರಾಜೆಕ್ಟ್ ಲೂನ್ ಅನ್ನು ಪರಿಶೀಲಿಸುವುದಕ್ಕಾಗಿ ಸರಕಾರ ಅಂಗೀಕಾರವನ್ನು ನೀಡಿದೆ.

ಬಿಎಸ್‌ಎನ್‌ಎಲ್‌ ಪಾಲುದಾರಿಕೆ

ಬಿಎಸ್‌ಎನ್‌ಎಲ್‌ ಪಾಲುದಾರಿಕೆ

ಬಿಎಸ್‌ಎನ್‌ಎಲ್‌ನೊಂದಿಗೆ ಗೂಗಲ್ ಆರಂಭದಲ್ಲಿ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು ಬ್ರಾಡ್‌ಬ್ಯಾಂಡ್ ಸ್ಪೆಕ್ಟ್ರಮ್ 2.6 GHZ ಬ್ಯಾಂಡ್ ಅನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದೆ.

4ಜಿ ಸೇವೆ

4ಜಿ ಸೇವೆ

ಈ ತಂತ್ರಜ್ಞಾನವು 4ಜಿ ಸೇವೆಗಳನ್ನು ಬಳಸಿಕೊಳ್ಳುತ್ತಿದ್ದು, 4ಜಿ ಮೊಬೈಲ್ ಫೋನ್‌ಗಳಲ್ಲಿ ಸಿಗ್ನಲ್‌ಗಳನ್ನು ನೇರವಾಗಿ ವರ್ಗಾಯಿಸುವಾಗ ಮೊಬೈಲ್ ಟವರ್‌ಗಳನ್ನು ಸ್ಥಾನಾಂತರಿಸುವ ಸಾಮರ್ಥ್ಯ ಇದಕ್ಕಿದೆ.

40 ಕಿಲೋಮೀಟರ್ ಪ್ರದೇಶ

40 ಕಿಲೋಮೀಟರ್ ಪ್ರದೇಶ

ಗೂಗಲ್ ಪ್ರಕಾರ, ಪ್ರತೀ ಬಲೂನ್ ಕೂಡ 40 ಕಿಲೋಮೀಟರ್ ಪ್ರದೇಶದಲ್ಲಿ ಇದು ಸಂಪರ್ಕವನ್ನು ಒದಗಿಸುತ್ತದೆ. ತಮ್ಮ ಫೋನ್‌ನಲ್ಲೇ ನೇರವಾಗಿ ಎಲ್ಲಿ ಬೇಕಾದರೂ ಇಂಟರ್ನೆಟ್ ಪಡೆದುಕೊಳ್ಳುವ ಸೌಲಭ್ಯವನ್ನು ಇದು ಜನರಿಗೆ ಒದಗಿಸುತ್ತದೆ.

ಸೋಲಾರ್ ಪ್ಯಾನೆಲ್

ಸೋಲಾರ್ ಪ್ಯಾನೆಲ್

ಗೂಗಲ್ ಸೋಲಾರ್ ಪ್ಯಾನೆಲ್ ಅನ್ನು ಬಳಸುತ್ತಿದ್ದು ವಿಂಡ್ ಪವರ್‌ನ ಶಕ್ತಿಯನ್ನು ಇದಕ್ಕಾಗಿ ಉಪಯೋಗಿಸುತ್ತಿದೆ.

ಟೆಕ್ನಾಲಜಿ ಸರ್ವೀಸ್ ಪ್ರೊವೈಡರ್‌

ಟೆಕ್ನಾಲಜಿ ಸರ್ವೀಸ್ ಪ್ರೊವೈಡರ್‌

ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ನಂತೆ ಕಾರ್ಯನಿರ್ವಹಿಸದೇ ಗೂಗಲ್ ಟೆಕ್ನಾಲಜಿ ಸರ್ವೀಸ್ ಪ್ರೊವೈಡರ್‌ನಂತೆ ಕಾರ್ಯನಿರ್ವಹಿಸಲಿದೆ.

ಸ್ಥಾನಗಳನ್ನು ಗುರುತಿಸುವುದು

ಸ್ಥಾನಗಳನ್ನು ಗುರುತಿಸುವುದು

ಸ್ಥಾನಗಳನ್ನು ಗುರುತಿಸುವುದು, ಹಲವಾರು ಏಜೆನ್ಸಿಗಳೊಂದಿಗೆ ಒಗ್ಗೂಡುವುದು ಮೊದಲಾದ ಕಾರ್ಯಗಳನ್ನು ನಡೆಸುವುದಕ್ಕಾಗಿ DEITY ಸಮಿತಿ ಎದುರು ನೋಡುತ್ತಿದೆ.

Best Mobiles in India

English summary
Internet giant Google is working with the government on a pilot project for providing Internet connectivity by using large balloons.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X