ಗೂಗಲ್ ಇಂತಹ ದೊಡ್ಡ ತಪ್ಪು ಮಾಡಿತೇ?; ಆರೋಪ ತಳ್ಳಿಹಾಕಿದ ಟೆಕ್ ದೈತ್ಯ!
ಚಾಟ್‌ಜಿಪಿಟಿ (ChatGPT) ಸದ್ಯಕ್ಕೆ ಟೆಕ್ ವಲಯದಲ್ಲಿ ಭಾರೀ ಸುದ್ದಿಯಾಗುತ್ತಿರುವ ವಿಷಯ. ಅದರಲ್ಲೂ ಚಾಟ್‌ಜಿಪಿಟಿ ಜನಪ್ರಿಯತೆ ಹೆಚ್ಚಾದಂತೆ ಇತರೆ ಪ್ರಮುಖ ಟೆಕ್ ದೈತ್ಯರೂ ಸಹ ಈ ಎಐ ನಲ್ಲಿ ತಮ್ಮದೇ ಆದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ನಡುವೆ ಗೂಗಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಹೌದು, ಕೆಲವು ದಿನಗಳ ಹಿಂದೆ ಪಂಜಾಬ್ ಹೈಕೋರ್ಟ್‌ನಲ್ಲೂ ಸಹ ಜಾಮೀನು ನೀಡುವ ವಿಚಾರಕ್ಕೆ ಅಭಿಪ್ರಾಯ ಪಡೆಯಲು ಚಾಟ್‌ಜಿಪಿಟಿ ಬಳಕೆ ಮಾಡಲಾಗಿತ್ತು. ಅಷ್ಟರ ಮಟ್ಟಿಗೆ ಇಂದು ಚಾಟ್‌ಜಿಪಿಟಿ ಬಳಕೆಯಾಗುತ್ತಿದೆ. ಇದರ ನಡುವೆ ಮೈಕ್ರೋಸಾಫ್ಟ್ ಒಡೆತನದ ಓಪನ್‌ಎಐನ ಚಾಟ್‌ಜಿಪಿಟಿಯು ಗೂಗಲ್ ವಿರುದ್ಧ ಆರೋಪ ಮಾಡಿದ್ದು, ಈ ಆರೋಪವನ್ನು ಗೂಗಲ್ ತಳ್ಳಿಹಾಕಿದೆ. ಹಾಗಿದ್ರೆ, ಗೂಗಲ್ ಮೇಲೆ ಇರುವ ಆರೋಪ ಏನು?, ಮೈಕ್ರೋಸಾಫ್ಟ್ ದೂರುತ್ತಿರುವುದು ಯಾವ ವಿಷಯದಲ್ಲಿ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್ ಮೇಲೆ ಮಾಡುತ್ತಿರುವ ಆರೋಪ ಏನು?: ಮೈಕ್ರೋಸಾಫ್ಟ್ ಟೆಕ್ ವಲಯದಲ್ಲಿ ಗೂಗಲ್‌ನಷ್ಟೇ ಪ್ರಭಾವಿಯಾಗಿದ್ದು, ಜಗತ್ತೇ ಒಂದು ಕ್ಷಣ ಅಚ್ಚರಿಗೆ ಒಳಗಾದ ಚಾಟ್‌ಜಿಪಿಟಿಯನ್ನು ಪರಿಚಯಿಸಿದೆ. ಇದಾದ ನಂತರ ವಿವಿಧ ಪ್ರೀಮಿಯಂ ಆವೃತ್ತಿಗಳನ್ನು ಸಹ ಪರಿಚಯಿಸಿದ್ದು, ಇದನ್ನು ಗಮನಿಸಿದ ಇತರೆ ಕಂಪೆನಿಗಳು ಸಹ ಈ ವಿಶೇಷ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿವೆ. ಅದರಲ್ಲಿ ಗೂಗಲ್ ಸಹ ಒಂದು.
ಮೈಕ್ರೋಸಾಫ್ಟ್ ಚಾಟ್‌ಜಿಪಿಟಿಯನ್ನು ಪರಿಚಯಿಸಿದ ನಂತರದಲ್ಲಿ ಗೂಗಲ್ ತನ್ನದೇ ಆದ ಎಐ ಚಾಟ್‌ಬಾಟ್ ಬಾರ್ಡ್ ಅನ್ನು ಘೋಷಣೆ ಮಾಡಿದ್ದು, ಇದಕ್ಕೆ ತರಬೇತಿ ನೀಡಲು ಚಾಟ್‌ಜಿಪಿಟಿಯನ್ನು ನಕಲಿಸುತ್ತಿದೆ ಎನ್ನುವ ಆರೋಪವನ್ನು ಮೈಕ್ರೋಸಾಫ್ಟ್ ಮಾಡಿದೆ. ಇದು ಜಾಗತಿಕ ವಲಯದಲ್ಲಿ ಭಾರೀ ಸಂಚಲನ ಉಂಟುಮಾಡಿದ್ದು, ಟೆಕ್‌ದೈತ್ಯರಿಬ್ಬರ ಮುಂದಿನ ನಡೆ ಏನು ಎಂದು ಎಲ್ಲರಲ್ಲೂ ಕಾತುರ ಇದೆ.
ಆರೋಪ ತಳ್ಳಿಹಾಕಿದ ಗೂಗಲ್: ಇನ್ನು ಮೈಕ್ರೋಸಾಫ್ಟ್ ಮಾಡಿರುವ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಗೂಗಲ್, ಬಾರ್ಡ್ ಎಂಬ ಎಐ ಚಾಟ್‌ಬಾಟ್‌ಗೆ ತರಬೇತಿ ನೀಡಲು ಮೈಕ್ರೋಸಾಫ್ಟ್ ಒಡೆತನದ ಓಪನ್‌ಎಐನ ಚಾಟ್‌ಜಿಪಿಟಿಯನ್ನು ನಕಲಿಸುತ್ತಿದೆ ಎಂಬ ಆರೋಪಕ್ಕೆ ಗೂಗಲ್ ಉತ್ತರಿಸಿದ್ದು, ಈ ರೀತಿ ನಾವು ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಇನ್ನು ಗೂಗಲ್‌ನ ಪೋಷಕ ಆಲ್ಫಾಬೆಟ್‌ನಲ್ಲಿರುವ ಎರಡು ಎಐ ಸಂಶೋಧನಾ ತಂಡಗಳನ್ನು ಒಟ್ಟಿಗೆ ಕೆಲಸ ಮಾಡಲು ಒತ್ತಾಯಿಸಲಾಗಿದ್ದು, ಇದರಲ್ಲಿ ಗೂಗಲ್‌ನ ಬ್ರೈನ್ ಎಐ ಗ್ರೂಪ್‌ನ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಡೀಪ್‌ಮೈಂಡ್‌ನಲ್ಲಿ ಉದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ವಿಷಯ ಏನೆಂದರೆ ಡೀಪ್‌ಮೈಂಡ್ ಆಲ್ಫಾಬೆಟ್‌ನ ಒಡಹುಟ್ಟಿದ ಕಂಪನಿಯಾಗಿದೆ. ಈ ಬಗ್ಗೆ ದಿ ಇನ್ಫಾರ್ಮೇಶನ್ ವರದಿ ಮಾಡಿದೆ.
ಇತ್ತೀಚಿನ ವಾರಗಳಲ್ಲಿ ಈ ಜಂಟಿ ಪ್ರಯತ್ನವು ಆರಂಭ ಆಗಿದ್ದು, ಆದಾಗ್ಯೂ, ಗೂಗಲ್ ವಕ್ತಾರರು ಶೇರ್‌ಜಿಪಿಟಿ ಅಥವಾ ಚಾಟ್‌ಜಿಪಿಟಿಯಿಂದ ಯಾವುದೇ ಹಂತದಲ್ಲಿ ಬಾರ್ಡ್ ತರಬೇತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಆರಂಭಿಕ ಪ್ರಯೋಗವಾಗಿ ಚಾಟ್‌ಜಿಪಿಟಿ ಪ್ರತಿಸ್ಪರ್ಧಿ ಬಾರ್ಡ್‌ಗೆ ಪ್ರವೇಶವನ್ನು ತೆರೆಯುವುದಾಗಿ ಗೂಗಲ್ ಘೋಷಣೆ ಮಾಡಿದೆ. ಇದನ್ನು ಆರಂಭದಲ್ಲಿ ಯುಎಸ್ ಹಾಗೂ ಯುಕೆಯಲ್ಲಿ ಬಳಕೆಗೆ ಮುಕ್ತವಾಗಿಸುತ್ತದೆ. ಕಾಲಾನಂತರದಲ್ಲಿ ಇದರ ವಿಸ್ತರಣೆ ಆಗಲಿದೆ ಎನ್ನಲಾಗಿದೆ.

ಇನ್ನು ಈ ಬಾರ್ಡ್, ಓಪನ್‌ಎಐ ನ ಚಾಟ್‌ಜಿಪಿಟಿ ಮತ್ತು ಮ್ರೈಕ್ರೋಸಾಫ್ಟ್‌ನ ಬಿಂಗ್‌ಚಾಟ್‌ಬಾಟ್‌ನಂತೆಯೇ ದೊಡ್ಡ ಭಾಷಾ ಮಾದರಿಯನ್ನು (LLM) ಆಧರಿಸಿದ್ದು, ನಿರ್ದಿಷ್ಟವಾಗಿ LaMDA ಯ ಹಗುರವಾದ ಮತ್ತು ಆಪ್ಟಿಮೈಸ್ಡ್ ಆವೃತ್ತಿಯಾಗಿವೆ. ಭವಿಷ್ಯದಲ್ಲಿ ಹೊಸ ಹಾಗೂ ಇನ್ನೂ ಹೆಚ್ಚು ಸಮರ್ಥ ಮಾದರಿಗಳೊಂದಿಗೆ ಬಾರ್ಡ್ ಅನ್ನು ನವೀಕರಿಸಲಾಗುವುದು ಎಂದು ಟೆಕ್ ದೈತ್ಯ ಗೂಗಲ್ ಹೇಳಿದೆ. ಹಾಗೆಯೇ ಬಳಕೆದಾರರು ಪ್ರಶ್ನೆಗಳನ್ನು ಕೇಳುವ ಮೂಲಕ ಮತ್ತು ಮುಂದಿನ ಪ್ರಶ್ನೆಗಳೊಂದಿಗೆ ತಮ್ಮ ಪ್ರತಿಕ್ರಿಯೆಗಳನ್ನು ಪರಿಷ್ಕರಿಸುವ ಮೂಲಕ ಬಾರ್ಡ್‌ನೊಂದಿಗೆ ಸಂವಹನ ನಡೆಸಬಹುದಾಗಿದೆ.


Click it and Unblock the Notifications








