Home
ಸುದ್ದಿಜಾಲ

ಲೈಂಗಿಕ ಕಿರುಕುಳ ಆರೋಪಕ್ಕೆ 48 ಜನ 'ಗೂಗಲ್‌' ಉದ್ಯೋಗಿಗಳು ಕಿಕ್‌ ಔಟ್!!

ದೇಶದಲ್ಲಿ ಮೀಟೂ ಅಭಿಯಾನ ಸದ್ಯ ಚರ್ಚೆಯ ಕೇಂದ್ರ ಬಿಂದುವಾಗಿರುವ ಸಂದರ್ಭದಲ್ಲೇ, ಟೆಕ್​ ದೈತ್ಯ ಗೂಗಲ್​ ಕಂಪೆನಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಕಳೆದೆರಡು ವರ್ಷಗಳಲ್ಲಿ 48 ನೌಕರರನ್ನು ಕೆಲಸದಿಂದ ತೆಗೆದುಹಾಕಿದೆ. ಗೂಗಲ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ 13 ಹಿರಿಯ ಅಧಿಕಾರಿಗಳೂ ಸಹ ಈ ಲೀಸ್ಟ್‌ನಲ್ಲಿದ್ದಾರೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.

ಕೆಲ ದಿನಗಳ ಹಿಂದೆ ಗೂಗಲ್​​ನ ಹಿರಿಯ ಉದ್ಯೋಗಿ ಆಂಡಿ ರುಬಿನ್​ರನ್ನು ಲೈಂಗಿಕ ಕಿರುಕುಳ ಆರೋಪದಲ್ಲಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗೂಗಲ್​ ಈ ಮಾಹಿತಿಗಳನ್ನು ನೀಡಿದ್ದು, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ 48 ನೌಕರರನ್ನು ಕಳೆದ 2 ವರ್ಷಗಳ ಅವಧಿಯಲ್ಲಿ ವಜಾ ಮಾಡಲಾಗಿದೆ ಎಂದು ಗೂಗಲ್​ ತಿಳಿಸಿದೆ.

ಲೈಂಗಿಕ ಕಿರುಕುಳ ಆರೋಪಕ್ಕೆ 48 ಜನ 'ಗೂಗಲ್‌' ಉದ್ಯೋಗಿಗಳು ಕಿಕ್‌ ಔಟ್!!

ನಮ್ಮ ಕಂಪೆನಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮತ್ತು ಲೈಂಗಿಕ ಕಿರುಕುಳ ಆರೋಪ ಎದುರಿಸುವ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿದ್ದೇವೆ ಎಂದು ಗೂಗಲ್​ನ ಸಿಇಒ ಸುಂದರ್​ ಪಿಚಯ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಯಸ್ಥಳದಲ್ಲಿ ಸಂಪೂರ್ಣ ಸುರಕ್ಷತೆ ನೀಡುವುದಾಗಿ ಭರವಸೆ ನೀಡುವುದು ಕೊಂಚ ಕಷ್ಟ. ಆದರೆ ಲೈಂಗಿಕ ಕಿರುಕುಳದ ಯಾವುದೇ ಮಾಹಿತಿ ನಮ್ಮ ಬಳಿ ಬಂದಲ್ಲಿ ಅದನ್ನು ಅತ್ಯಂತ ಗಂಭೀರವಾಗಿ ತನಿಖೆ ನಡೆಸುತ್ತೇವೆ. ಲೈಂಗಿಕ ಕಿರುಕುಳ ದೂರನ್ನು ಕೂಲಂಕಶವಾಗಿ ಪರಿಶೀಲಿಸಿ, ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೂಗಲ್​ ಮುಖ್ಯಸ್ಥ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪಕ್ಕೆ 48 ಜನ 'ಗೂಗಲ್‌' ಉದ್ಯೋಗಿಗಳು ಕಿಕ್‌ ಔಟ್!!

ಅನುಚಿತ ಲೈಂಗಿಕ ನಡವಳಿಕೆಯ ದೂರುಗಳ ನಂತರ, ಕಳೆದ ದಶಕದಲ್ಲಿ ಗೂಗಲ್ ರಕ್ಷಿಸಿದ ಮೂವರು ಹಿರಿಯ ಕಾರ್ಯನಿರ್ವಾಹಕರಲ್ಲಿ ರೂಬಿನ್ ಒಬ್ಬರು ಎಂದು ನ್ಯೂಯಾರ್ಕ್ ಟೈಮ್ಸ್ ನ್ಯಾಯಾಲಯದ ದಾಖಲೆಗಳು ಮತ್ತು ಸಂದರ್ಶನಗಳಲ್ಲಿ ಉಲ್ಲೇಖಿಸಿದೆ. ಇನ್ನು ಇವರ ವಿರುದ್ಧ ದೂರು ಸಲ್ಲಿಸಿದ್ದ ಮಹಿಳೆಯ ಆರೋಪ ವಿಶ್ವಾಸಾರ್ಹ ಎಂದು ಗೂಗಲ್ ತನಿಖೆ ಕಂಡುಹಿಡಿದಿದೆ.

ಓದಿರಿ: ಎಂಜಿನಿಯರಿಂಗ್‌ನಲ್ಲಿ ಈ ಕೋರ್ಸ್ ಮಾಡಿದರೆ ಬೇಗ ಉದ್ಯೋಗ!..'ಲಿಂಕ್ಡ್ಇನ್' ವರದಿ!!

Best Mobiles in India

English summary
The US tech giant issued the statement from chief executive Sundar Pichai in response to a New York Times report about an employee.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+