ಎಂಜಿನಿಯರಿಂಗ್‌ನಲ್ಲಿ ಈ ಕೋರ್ಸ್ ಮಾಡಿದರೆ ಬೇಗ ಉದ್ಯೋಗ!

|

ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಯಾವುದು ಬೆಸ್ಟ್ ಎಂಬ ಸಮಸ್ಯೆಗೆ ವಿಶ್ವದ ಅತಿದೊಡ್ಡ ವೃತ್ತಿಪರ ಜಾಲ 'ಲಿಂಕ್ಡ್ಇನ್' ವರದಿ ಉತ್ತರ ನೀಡಿದೆ. 'ಲಿಂಕ್ಡ್ಇನ್' ಪ್ರಕಟಿಸಿರುವ ವರದಿಯೊಂದು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಸಾಫ್ಟ್‌ವೇರ್ ಇಂಜಿನಿಯರ್‌ಗಳು ಹಾಗೂ ಅಪ್ಲಿಕೇಶನ್ ಡೆವಲಪರ್ಸ್ ಭಾರತೀಯ ಕಂಪೆನಿಗಳು ಅತ್ಯಂತ ಇಷ್ಟಪಡುವ ವೃತ್ತಿಪರರು ಎಂದು ತಿಳಿಸಿದೆ.

ಹೌದು, ದೇಶದಲ್ಲಿನ ಸುಮಾರು ದಶಲಕ್ಷ ಸದಸ್ಯರು, 50 ಸಾವಿರಕ್ಕೂ ಅಧಿಕ ಕೌಶಲ್ಯ ಸಂಸ್ಥೆಗಳು ಹಾಗೂ ಒಂದು ದಶಲಕ್ಷ ಕಂಪನಿಗಳ ಸಮೀಕ್ಷೆ ನಡೆಸಿ 'ಲಿಂಕ್ಡ್ಇನ್' ಈ ವರದಿ ತಯಾರಿಸಿದೆ. ತಾಂತ್ರಿಕ ಕೌಶಲ್ಯಗಳ ಬೆಳವಣಿಗೆಯ ಆಧಾರದ ಮೇಲೆ ನಗರಗಳಿಗೆ ಸ್ಥಾನಗಳನ್ನು ನೀಡಿ ತನ್ನ ವರ್ಕ್‌ಫೋರ್ಸ್ ವರದಿ (ವೃತ್ತಿಪರ ಸರಣಿ) ಬಿಡುಗಡೆ ಮಾಡಿರುವುದಾಗಿ ವರದಿಯಲ್ಲಿ ತಿಳಿಸಿದೆ.

 ಎಂಜಿನಿಯರಿಂಗ್‌ನಲ್ಲಿ ಈ ಕೋರ್ಸ್ ಮಾಡಿದರೆ ಬೇಗ ಉದ್ಯೋಗ!

ದೇಶದಲ್ಲಿ ಕೋಡಿಂಗ್ ಮತ್ತು ಡೇಟಾಬೇಸ್‌ನಂತಹ ತಾಂತ್ರಿಕ ಕೌಶಲ್ಯಗಳ ಉದ್ಯೋಗಗಳು, ನಿರ್ವಹಣೆ, ನಾಯಕತ್ವ ಮತ್ತು ತಂಡ ನಿರ್ವಹಣೆಯಂತಹ ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗಾದರೆ, 'ಲಿಂಕ್ಡ್ಇನ್' ತಯಾರಿಸಿರುವ ಈ ವರದಿಯಲ್ಲಿ ತಿಳಿಸಿರುವ ಇನ್ನಿತರ ಮುಖ್ಯ ಅಂಶಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಇಂಜಿನಿಯರ್‌ಗಳಿಗೆ ಹೆಚ್ಚಿದ ಬೇಡಿಕೆ

ಇಂಜಿನಿಯರ್‌ಗಳಿಗೆ ಹೆಚ್ಚಿದ ಬೇಡಿಕೆ

2018ರ ಮೊದಲ ಆರು ತಿಂಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಅತಿ ಹೆಚ್ಚು ಹುದ್ದೆಗಳನ್ನು ಪಡೆದಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್‌ಗಳ ನಂತರದ ಸ್ಥಾನದಲ್ಲಿ ಅಪ್ಲಿಕೇಷನ್ ಡೆವಲಪರ್‌ಗಳು, ಸಲ್ಯೂಷನ್ ಕನ್ಸಲ್ಟೆಂಟ್‌ಗಳು, ಜಾವಾ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಬ್ಯುಸಿನೆಸ್ ಅನಾಲಿಸ್ಟ್‌ಗಳು ಇದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರೀ ಬೇಡಿಕೆ ಯಾವುದಕ್ಕೆ?

ಭಾರೀ ಬೇಡಿಕೆ ಯಾವುದಕ್ಕೆ?

'ಲಿಂಕ್ಡ್ಇನ್' ತಯಾರಿಸಿರುವ ವರದಿ ಪ್ರಕಾರ , ದೇಶದ 14 ನಗರಗಳ ಪೈಕಿ ಎಂಟು ನಗರಗಳಲ್ಲಿ ಸಾಫ್‌ಟ್ವೇರ್ ಎಂಜಿನಿಯರ್‌ಗಳಿಗೆ ಭಾರೀ ಬೇಡಿಕೆ ಇದೆ. ಕ್ಲೌಡ್, ಅನಾಲಿಟಿಕ್, ಆರ್ಟಿಫಿಶಿಯಲ್ ಮತ್ತು ಮಶಿನ್ ಲರ್ನಿಂಗ್ ಇನ್ನಿತರ ಟೆಕ್‌ಸಂಬಂಧಿತ ಹುದ್ದೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಪ್ರಮುಖ ಕೋರ್ಸ್ ಒಂದು ಹಿಂದೆ ಬಿದ್ದಿರುವುದನ್ನು ನೋಡಬಹುದಾಗಿದೆ.

ನೆಟ್‌ವರ್ಕಿಂಗ್ ಹಿಂದೆ ಬಿದ್ದಿದೆ!

ನೆಟ್‌ವರ್ಕಿಂಗ್ ಹಿಂದೆ ಬಿದ್ದಿದೆ!

ಸಾಫ್ಟ್‌ವೇರ್ ಇಂಜಿನಿಯರ್, ಅಪ್ಲಿಕೇಷನ್ ಡೆವಲಪರ್‌ಗಳು, ಸಲ್ಯೂಷನ್ ಕನ್ಸಲ್ಟೆಂಟ್‌ಗಳು, ಜಾವಾ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಬ್ಯುಸಿನೆಸ್ ಅನಾಲಿಸ್ಟ್‌ಗಳು ಪರವಾಗಿಲ್ಲ ಎನ್ನುವಷ್ಟು ಉದ್ಯೋಗ ಪಡೆಯುತ್ತಿದ್ದರೆ, ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ವಿಭಾಗ ಮಾತ್ರ ಉದ್ಯೋಗವನ್ನು ಪಡೆಯುವಲ್ಲಿ ಹಿಂದೆ ಬಿದ್ದಿರುವ ಕೋರ್ಸ್ ಎಂದು ವರದಿಯಲ್ಲಿ ಹೇಳಲಾಗಿದೆ.

ಬೆಂಗಳೂರಿಗೆ ಎರಡನೇ ಸ್ಥಾನ!

ಬೆಂಗಳೂರಿಗೆ ಎರಡನೇ ಸ್ಥಾನ!

ತಾಂತ್ರಿಕ ಕೌಶಲ್ಯಗಳ ಬೆಳವಣಿಗೆಯ ಆಧಾರದ ಮೇಲೆ ಲಿಂಕ್ಡ್‌ಇನ್ ತಯಾರಿಸಿರುವ ವರದಿಯಲ್ಲಿ ದೇಶದ ನಗರಗಳಿಗೂ ಸಹ ಸ್ಥಾನಗಳನ್ನು ನೀಡಿದೆ. ವರದಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೆ, ಕಲ್ಯಾಣನಗರ ದೇಶದಲ್ಲೇ ಮೊದಲನೇ ಸ್ಥಾನವನ್ನು ಅಲಂಕರಿಸಿದೆ. ದೇಶದ ರಾಜಧಾನಿ ನವದೆಹಲಿ ಹಾಗೂ ಗುರುಗ್ರಾಮ ನಗರಗಳು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿವೆ.

ಯಾವೆಲ್ಲಾ ಪ್ರದೇಶಗಳಲ್ಲಿ ಅಧ್ಯಯನ?

ಯಾವೆಲ್ಲಾ ಪ್ರದೇಶಗಳಲ್ಲಿ ಅಧ್ಯಯನ?

'ಲಿಂಕ್ಡ್ಇನ್' ತಯಾರಿಸಿರುವ ಈ ಅರ್ಧವಾರ್ಷಿಕ ವರದಿಯು ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಭಾಗಗಳನ್ನು ಒಳಗೊಂಡಿದೆ. ಬೆಂಗಳೂರು ಸೇರಿದಂತೆ ಅಹ್ಮದಾಬಾದ್, ಚೆನ್ನೈ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ, ನವ ದೆಹಲಿ, ಪುಣೆ, ಚಂಡೀಗಢ, ಜೈಪುರ, ಕಲೈಆಣ್, ಕೊಚ್ಚಿ ಮತ್ತು ನೋಯ್ಡಾದಂತಹ ಭಾರತದ 14 ದೊಡ್ಡ ಮೆಟ್ರೋ ಪ್ರದೇಶಗಳಲ್ಲಿ ಅಧ್ಯಯನ ನಡೆಸಲಾಗಿದೆ.

Best Mobiles in India

English summary
These are the most sought-after professionals on LinkedIn in India.Yes, it is exactly what you thought it was. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X