Home
ಸುದ್ದಿಜಾಲ

ಆಂಡ್ರಾಯ್ಡ್ 14 ಬೀಟಾ ಆವೃತ್ತಿ ಬಿಡುಗಡೆ ಮಾಡಿದ ಗೂಗಲ್: ನೀವು ಪ್ರಯತ್ನಿಸಿ!

ಆಂಡ್ರಾಯ್ಡ್‌ ಡಿವೈಸ್‌ ಬಳಕೆದಾರರಿಗೆ ಹಲವು ರೀತಿಯಲ್ಲಿ ಸುಧಾರಿತ ಫೀಚರ್ಸ್‌ಗಳನ್ನು ಒದಗಿಸುತ್ತಾ ಬರುತ್ತಿರುವ ಗೂಗಲ್‌ ಇದೀಗ ಮುಂಬರುವ ಆಂಡ್ರಾಯ್ಡ್ 14 ರ ಮೊದಲ ಸಾರ್ವಜನಿಕ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಓಎಸ್‌ ಹೇಗೆಲ್ಲಾ ಕೆಲಸ ಮಾಡಲಿದೆ ಎಂದು ಪರೀಕ್ಷಿಸಲು ಆಸಕ್ತಿ ಇರುವವರು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹೌದು, ಗೂಗಲ್‌ ಆಂಡ್ರಾಯ್ಡ್ 14 ಬೀಟಾ ಆವೃತ್ತಿಯನ್ನು ಸಾರ್ವಜನಿಕಗೊಳಿಸಿದ್ದು, ಪ್ರಸ್ತುತ ಪಿಕ್ಸೆಲ್‌ 4a ಮತ್ತು ಹೊಸ ಮಾದರಿಗಳಿಗೆ ಲಭ್ಯವಿದೆ. ಈ ಸಂಬಂಧ ಕಂಪೆನಿಯು ಮಾಹಿತಿ ಹಂಚಿಕೊಂಡಿದ್ದು, ಆಂಡ್ರಾಯ್ಡ್ 14 ಮುಂದಿನ ಎರಡು ತಿಂಗಳವರೆಗೆ ಬೀಟಾ ಹಂತದಲ್ಲಿರುತ್ತದೆ ಮತ್ತು ಜೂನ್ ಮತ್ತು ಜುಲೈ ನಲ್ಲಿ ಓಎಸ್‌ನ ಸ್ಥಿರ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಹಾಗಿದ್ರೆ, ಇದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ.

ಆಂಡ್ರಾಯ್ಡ್ 14 ಬೀಟಾ ಆವೃತ್ತಿ ಬಿಡುಗಡೆ ಮಾಡಿದ ಗೂಗಲ್: ನೀವು ಪ್ರಯತ್ನಿಸಿ!

ಆಂಡ್ರಾಯ್ಡ್ 14 ಬೀಟಾ ಆವೃತ್ತಿ: ಈ ಆಂಡ್ರಾಯ್ಡ್ 14 ಟೆಕ್ ಕಂಪೆನಿಯ ಗೌಪ್ಯತೆ, ಸಿಸ್ಟಮ್ ನ್ಯಾವಿಗೇಶನ್, ಕಾರ್ಯಕ್ಷಮತೆ, ಬಳಕೆದಾರರ ಗ್ರಾಹಕೀಕರಣ ಮತ್ತು ಹೆಚ್ಚಿನ ವಿಷಯಗಳ ಸುತ್ತ ನಿರ್ಮಿಸಲಾದ ಹೊಸ ಫೀಚರ್ಸ್‌ಗಳೊಂದಿಗೆ ಕಾಣಿಸಿಕೊಳ್ಳಲಿದೆ. ಹಾಗೆಯೇ ಹೊಸ ಸಾಫ್ಟ್‌ವೇರ್‌ನ ಫೀಚರ್ಸ್‌ಗಳು ಸ್ಥಿರತೆಯನ್ನು ಪರಿಷ್ಕರಿಸುವಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಗೂಗಲ್ ಹೇಳಿದೆ.

ನಾವು ಆಂಡ್ರಾಯ್ಡ್‌ 14 ನ ಮೊದಲ ಬೀಟಾವನ್ನು ಬಿಡುಗಡೆ ಮಾಡುತ್ತಿದ್ದೇವೆ. ಗೌಪ್ಯತೆ, ಭದ್ರತೆ, ಕಾರ್ಯಕ್ಷಮತೆ, ಬಳಕೆದಾರ ಗ್ರಾಹಕೀಕರಣದ ಥೀಮ್‌ಗಳ ಸುತ್ತಲೂ ಇದನ್ನು ನಿರ್ಮಿಸುತ್ತಿದ್ದೇವೆ. ಜೊತೆಗೆ ಟ್ಯಾಬ್ಲೆಟ್‌ಗಳಲ್ಲಿ ದೊಡ್ಡ ಸ್ಕ್ರೀನ್ ಡಿವೈಸ್‌ನ ಅನುಭವವನ್ನು ಸುಧಾರಿಸುವುದನ್ನು ಮುಂದುವರಿಸುತ್ತೇವೆ. ಅದರಲ್ಲೂ ಫೋಲ್ಡಬಲ್‌ ಫೋನ್‌ಗಳಲ್ಲಿ ಇನ್ನಷ್ಟು ಹೆಚ್ಚಿನ ಆಯ್ಕೆಗಳು ಲಭ್ಯ ಎಂದು ಗೂಗಲ್‌ ತಿಳಿಸಿದೆ.

ಈ ಆವೃತ್ತಿಯಲ್ಲಿ ಹೊಸ ಬ್ಯಾಕ್ ಆರೋ, ಸುಧಾರಿತ ಸಿಸ್ಟಮ್ ಶೇರ್ ಶೀಟ್ ಮತ್ತು ಹೆಚ್ಚಿನ ಗ್ರಾಫಿಕ್ಸ್ ಅನ್ನು ಒಳಗೊಂಡಿರುವ ಸ್ಮಾರ್ಟ್ ಸಿಸ್ಟಮ್ ಯುಐ ಇರಲಿದ್ದು, ಇದು ಉತ್ತಮ ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ಹೆಚ್ಚಿನ ವೈಯಕ್ತೀಕರಣ ಫೀಚರ್ಸ್‌ಗಳನ್ನೂ ಸಹ ಹೊಂದಿರಲಿದೆ. ಅದಾಗ್ಯೂ ಮುಂಬರುವ ಬೀಟಾ ನವೀಕರಣಗಳಲ್ಲಿ ಗೂಗಲ್ ಇನ್ನೂ ಹೆಚ್ಚಿನ ಫೀಚರ್ಸ್‌ಗಳನ್ನು ಪರಿಚಯಿಸಬಹುದು ಎಂದು ನಂಬಲಾಗಿದೆ.

ಗೆಸ್ಚರ್ ನ್ಯಾವಿಗೇಶನ್ ಅಡಿಯಲ್ಲಿ ಆರೋ ನವೀಕರಿಸಲಾಗಿದೆ. ಹಾಗೆಯೇ ಆಪ್‌ಗಳೊಂದಿಗೆ ಸಂವಹನ ಮಾಡುವಾಗ ಬ್ಯಾಕ್ ಗೆಸ್ಚರ್ ಗೌಪ್ಯತೆ ಸುಧಾರಿಸಲು ಸಹಾಯ ಮಾಡಲಿದ್ದು, ಬ್ಯಾಕ್ ಆರೋ ಬಳಕೆದಾರರ ವಾಲ್‌ಪೇಪರ್ ಅಥವಾ ಡಿವೈಸ್‌ನ ಥೀಮ್‌ನೊಂದಿಗೆ ಕೆಲಸ ಮಾಡುತ್ತದೆ ಎನ್ನಲಾಗಿದೆ. ಆದರೆ, ಪ್ರಸ್ತುತ ಬೀಟಾ ಆವೃತ್ತಿಯಲ್ಲಿರುವ ಕೆಲವು ಫೀಚರ್ಸ್‌ಗಳು ಪ್ರಾಯೋಗಿಕ ಹಂತದಲ್ಲಿರುವುದರಿಂದ ಅಂತಿಮ ಓಎಸ್‌ ನಲ್ಲಿ ಇಲ್ಲದೆಯೂ ಇರಬಹುದು ಎಂದು ಹೇಳಲಾಗುತ್ತಿದೆ.

ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯ!?: ಡೆವಲಪರ್ ಪೂರ್ವವೀಕ್ಷಣೆ ಆವೃತ್ತಿಗಳ ನಂತರ ಗೂಗಲ್‌ ಇದೀಗ ಸಾರ್ವಜನಿಕ ಬೀಟಾವನ್ನು ಬಿಡುಗಡೆ ಮಾಡಿದ್ದು, ಪಿಕ್ಸೆಲ್‌ 4A, ಪಿಕ್ಸೆಲ್‌ 5A, ಪಿಕ್ಸೆಲ್‌ 5, ಪಿಕ್ಸೆಲ್‌ 6A, ಪಿಕ್ಸೆಲ್‌ 6, ಪಿಕ್ಸೆಲ್‌ 6 ಪ್ರೊ, ಪಿಕ್ಸೆಲ್‌ 7 ಮತ್ತು ಪಿಕ್ಸೆಲ್‌ 7 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಆಂಡ್ರಾಯ್ಡ್ 14 ಬೀಟಾ ಪ್ರೋಗ್ರಾಂ ಡೌನ್‌ಲೋಡ್ ಮಾಡಬಹುದು ಮತ್ತು ಪರೀಕ್ಷಿಸಬಹುದು.

ಇನ್ನು ಬಳಕೆದಾರರು ತಮ್ಮ ಡಿವೈಸ್ ಅನ್ನು ಪಿಕ್ಸೆಲ್ ಪ್ರೋಗ್ರಾಂನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಬೀಟಾ ಬಿಲ್ಡ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಪಿಕ್ಸೆಲ್ ಸ್ಮಾರ್ಟ್‌ಫೋನ್ ಹೊಂದಿಲ್ಲದವರು ಆಂಡ್ರಾಯ್ಡ್‌ ಎಮ್ಯುಲೇಟರ್ ಸಹಾಯದಿಂದ ಇತರೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಯುಐನಲ್ಲಿ ಆಂಡ್ರಾಯ್ಡ್‌ 14 ಬೀಟಾ ಆವೃತ್ತಿಯನ್ನು ಪಡೆದುಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ 14 ಬೀಟಾ ಆವೃತ್ತಿ ಬಿಡುಗಡೆ ಮಾಡಿದ ಗೂಗಲ್: ನೀವು ಪ್ರಯತ್ನಿಸಿ!

ನೀವು ಆಂಡ್ರಾಯ್ಡ್‌ 14 ಬೀಟಾ ಅಪ್‌ಡೇಟ್ ಅನ್ನು ಪ್ರಯತ್ನಿಸಲು ಇಚ್ಚಿಸಿದರೆ https://www.google.com/android/beta#devices ಲಿಂಕ್‌ ಅನ್ನು ಬಳಕೆ ಮಾಡಿಕೊಳ್ಳಿ. ನಂತರ ಅಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಇದಕ್ಕೂ ಮೊದಲು ನೀವು ಗಮನಿಸಬೇಕಾದ ವಿಷಯ ಏನೆಂದರೆ ಇದು ಪರೀಕ್ಷಾ ಹಂತದಲ್ಲಿ ಇರುವುದರಿಂದ ಕೆಲವು ದೋಷಗಳು ಕಂಡುಬರಬಹುದು ಅಥವಾ ನಿಮ್ಮ ಫೋನ್‌ನಲ್ಲಿ ದೋಷ ಸೃಷ್ಟಿ ಮಾಡಬಹುದು. ಹೀಗಾಗಿ ಎಚ್ಚರಿಕೆ ವಹಿಸಿಕೊಂಡು ಇದನ್ನು ಡೌನ್‌ಲೋಡ್ ಮಾಡುವುದು ಒಳಿತು.

Best Mobiles in India

English summary
Google released the first public Beta of Android 14 which comes with new features like core themes of privacy, system navigation, performance and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+