3,500ಕ್ಕೂ ಹೆಚ್ಚು ಲೋನ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ ಗೂಗಲ್: ಯಾಕೆ ಗೊತ್ತಾ!?
ಟೆಕ್ ದೈತ್ಯ ಗೂಗಲ್ ತಂತ್ರಜ್ಞಾನ ವಲಯದಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ. ಈ ನಡುವೆ ಗೂಗಲ್ ಪ್ಲೇ ಸ್ಟೋರ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅಗತ್ಯ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಿದ್ದು, ಬಳಕೆದಾರರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಹಲವಾರು ರೀತಿಯಲ್ಲಿ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಿದೆ. ಇದರ ಭಾಗವಾಗಿಯೇ ಗೂಗಲ್ ಅಚ್ಚರಿ ವರದಿಯೊಂದನ್ನು ಪ್ರಕಟಿಸಿದೆ.
ಹೌದು, ಗೂಗಲ್ ತನ್ನ ವಾರ್ಷಿಕ ಗೂಗಲ್ ಪ್ಲೇ ಪ್ರೊಟೆಕ್ಟ್ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಜೊತೆಗೆ ಮಾಲ್‌ವೇರ್ ಮತ್ತು ಅನಗತ್ಯ ಸಾಫ್ಟ್‌ವೇರ್‌ನಂತಹ ಬೆದರಿಕೆಗಳಿಂದ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಶತಕೋಟಿ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಈ ಕ್ಷಣಕ್ಕೂ ಸಹ ಸ್ಕ್ಯಾನ್ ಮಾಡುವುದನ್ನು ಮುಂದುವರಿಸಿದೆ. ಹಾಗಿದ್ರೆ, ಆ ವರದಿಯಲ್ಲಿ ಏನಿದೆ?, ಗೂಗಲ್ ಪ್ಲೇ ಪ್ರೊಟೆಕ್ಟ್ ಎಂದರೇನು ಎಂದು ತಿಳಿದುಕೊಳ್ಳಿ.

ಗೂಗಲ್ ಪ್ಲೇ ಪ್ರೊಟೆಕ್ಟ್ ಎಂದರೇನು? : ಗೂಗಲ್ ತಾನು ನೀಡುವ ಹಲವಾರು ಸೇವೆಗಳಲ್ಲಿ ಇದೂ ಒಂದು. ಇದು ಹಾನಿಕಾರಕ ನಡವಳಿಕೆಗಾಗಿ ಎಲ್ಲಾ ಆಂಡ್ರಾಯ್ಸ್ ಅಪ್ಲಿಕೇಶನ್‌ಗಳು ಮತ್ತು ಡಿವೈಸ್‌ಗಳನ್ನು ನಿರಂತರವಾಗಿ ಪರಿಶೀಲನೆ ನಡೆಸುತ್ತದೆ. ಅಂದರೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ಗೆ ಆಪ್ ಇನ್‌ಸ್ಟಾಲ್ ಮಾಡುವ ಮುನ್ನ ಆ ಆಪ್‌ಗಳ ಸುರಕ್ಷತೆಯ ಬಗ್ಗೆ ಗೂಗಲ್ ಪ್ಲೇ ಪ್ರೊಟೆಕ್ಟ್ ಮೊದಲು ಪರಿಶೀಲನೆ ನಡೆಸುತ್ತದೆ.
ಈ ಪರಿಶೀಲನೆ ವೇಳೆ ಸಂಭಾವ್ಯ ಹಾನಿಕಾರಕ ವಿಷಯಗಳ ಕುರಿತು ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಈ ಮೂಲಕ ಬಳಕೆದಾರರು ಇದನ್ನು ಇನ್‌ಸ್ಟಾಲ್ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧಾರ ಮಾಡಬಹುದು. ಹಾಗೆಯೇ ಡಿವೈಸ್‌ಗಳಿಂದ ಹಾನಿಕಾರಕ ಆಪ್‌ಗಳನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ತೆಗೆದುಹಾಕಬಹುದು. ಹಾಗಿದ್ರೆ, ಬನ್ನಿ ಗೂಗಲ್‌ನ ಈ ವರದಿಯನ್ನು ತಿಳಿದುಕೊಳ್ಳೋಣ.
1.43 ಮಿಲಿಯನ್ ಆಪ್‌ಗಳ ವಿರುದ್ಧ ಕ್ರಮ: 2022 ರಲ್ಲಿ ಆದ ಪ್ರಮುಖ ಕಾರ್ಯಾಚರಣೆ ಎಂದರೆ ಹೊಸ ಮತ್ತು ಸುಧಾರಿತ ಭದ್ರತಾ ಫೀಚರ್ಸ್‌ಗಳು ಮತ್ತು ನೀತಿ ವರ್ಧನೆಗಳ ಪರಿಣಾಮವಾಗಿ 1.43 ಮಿಲಿಯನ್ ನೀತಿ ಉಲ್ಲಂಘಿಸುವ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಈ ರೀತಿಯ ಹಾನಿಕಾರಕ ಆಪ್‌ಗಳನ್ನು ಎಐ ಆಧಾರಿತ ಟೆಕ್ನಾಲಜಿ ಬಳಕೆ ಮಾಡಿಕೊಂಡು ಪತ್ತೆ ಮಾಡಲಾಗುತ್ತದೆ.

173,000 ಅಪಾಯಕಾರಿ ಅಕೌಂಟ್ ಬಂದ್: 173K ಕೆಟ್ಟ ಅಕೌಂಟ್‌ಗಳನ್ನು ನಿಷೇಧಿಸಿದೆ ಎಂದು ಗೂಗಲ್ ಮಾಹಿತಿ ನೀಡಿದೆ. ಇದಕ್ಕೆ ಕಾರಣ ಸಹ ನೀಡಲಾಗಿದ್ದು, ನಾವು ಹೊಸ ಡೆವಲಪರ್‌ಗಳಿಗೆ ಫೋನ್, ಇಮೇಲ್ ಮತ್ತು ಇತರ ಗುರುತಿನ ಪರಿಶೀಲನಾ ವಿಧಾನಗಳೊಂದಿಗೆ ಪ್ಲೇ ಸ್ಟೋರ್ ಪರಿಸರ ವ್ಯವಸ್ಥೆಗೆ ಸೇರಲು ಕಾನೂನನ್ನು ರೂಪಿಸಿದ್ದೇವೆ. ಆದರೆ, ಈ ಕಾನೂನನ್ನು ಉಲ್ಲಂಘಿಸಿದರೆ ಆಪ್‌ಗಳನ್ನು ಪ್ರಕಟಿಸಲು ಬಳಸುವ ಖಾತೆಗಳ ಕಡಿತ ಮಾಡುತ್ತೇವೆ ಎಂದು ತಿಳಿಸಿದೆ.
$2 ಬಿಲಿಯನ್‌ಗೂ ಹೆಚ್ಚು ಮೋಸದ ವಹಿವಾಟುಗಳಿಗೆ ತಡೆ: ಈ ಆಪ್ ಸ್ಟೋರ್‌ನಲ್ಲಿನ ಆಪ್‌ಗಳನ್ನು ಬಳಕೆ ಮಾಡಿಕೊಂಡು ಮಾಡಲಾಗುತ್ತಿದ್ದ $2 ಶತಕೋಟಿಗೂ ಹೆಚ್ಚು ಮೋಸದ ಮತ್ತು ನಿಂದನೀಯ ವಹಿವಾಟುಗಳನ್ನು ತಡೆದಿದೆ ಗೂಗಲ್ ಹೇಳಿಕೊಂಡಿದೆ. ಜೊತೆಗೆ ಸೂಕ್ಷ್ಮ ಬಳಕೆದಾರರ ಡೇಟಾಗೆ ಎಂಟ್ರಿ ಪಡೆಯಲು ಮುಂದಾಗಿದ್ದ ಸುಮಾರು 500,000 ಆಪ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.

3,500 ಸಾಲದ ಅಪ್ಲಿಕೇಶನ್‌ಗಳಿಗೆ ಬ್ರೇಕ್: ಕೊರೊನಾ ನಂತರದಲ್ಲಿ ಸಾಲದ ಆಪ್‌ಗಳು ಹೆಚ್ಚಿನದಾಗಿ ಕಾಣಿಸಿಕೊಂಡಿದ್ದವು. ಈ ಆಪ್‌ಗಳ ಮೂಲಕ ಅದೆಷ್ಟೋ ಜನ ಪ್ರಾಣ ಸಹ ಕಳೆದುಕೊಂಡಿದ್ದರು. ಇದನ್ನೆಲ್ಲಾ ಕೂಲಂಕಷವಾಗಿ ವಿಮರ್ಶಿಸಿ 3,500 ಸಾಲದ ಆಪ್‌ಗಳನ್ನು ನಿಷೇಧಿಸಲಾಗಿದೆ. 2022 ರಲ್ಲಿ ಭಾರತದಲ್ಲಿ ಗೂಗಪ್ ಪ್ಲೇ ಸ್ಟೋರ್ ನೀತಿಯ ಅಗತ್ಯತೆಗಳ ಉಲ್ಲಂಘನೆಗಾಗಿ ನಾವು 3,500 ಕ್ಕೂ ಹೆಚ್ಚು ವೈಯಕ್ತಿಕ ಸಾಲದ ಆಪ್‌ಗಳನ್ನು ತೆಗೆದುಹಾಕಿದ್ದೇವೆ. ಜೊತೆಗೆ ಅಗತ್ಯ ಕ್ರಮವನ್ನು ಜರುಗಿಸಿದ್ದೇವೆ ಎಂದು ಗೂಗಲ್ ಮಾಹಿತಿ ನೀಡಿದೆ.


Click it and Unblock the Notifications








