Subscribe to Gizbot

ಆಪಲ್‌ಗೆ ಗೂಗಲ್‌ ನೀಡಲಿದೆ ತೀವ್ರ ಪೈಪೋಟಿ

Written By:

ಗೂಗಲ್‌ನ ವಾರ್ಷಿಕ I/O ಡೆವಲಪರ್ಸ್ ಕಾನ್ಫರೆನ್ಸ್ ತಂತ್ರಜ್ಞಾನ ಕ್ಷೇತ್ರಲ್ಲೇ ಹೆಚ್ಚು ಪ್ರತೀಕ್ಷೆಯ ಈವೆಂಟ್ ಎಂದೆನಿಸಿದೆ. ಈ ಬಾರಿಯ ಕಾರ್ಯಾಗಾರ ಕೂಡ ನಿರೀಕ್ಷೆಯ ಮಟ್ಟವನ್ನು ತಲುಪಿದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡಿದೆ.

ಓದಿರಿ: ಫೋನ್ ಖರೀದಿಯೇ ಈ ಫೋನ್‌ಗಳು ನಿಮ್ಮ ಪಟ್ಟಿಯಲ್ಲಿವೆಯೇ?

ಇಂದಿನ ಲೇಖನದಲ್ಲಿ ಈ ಕಾರ್ಯಾಗಾರದಲ್ಲಿ ಘೋಷಣೆಯಾಗಿರುವ ಕೆಲವೊಂದು ಅಂಶಗಳ ಕಡೆಗೆ ನಾವು ನೋಟ ಹರಿಸಲಿದ್ದು ಬಳಕೆದಾರರಿಗೆ ಇದು ಯಾವ ರೀತಿಯಲ್ಲಿ ಪ್ರಯೋಜನವನ್ನು ಉಂಟುಮಾಡಲಿದೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ಎಮ್

ಆಂಡ್ರಾಯ್ಡ್ ಎಮ್

ಆಂಡ್ರಾಯ್ಡ್‌ನ ಹೆಚ್ಚು ಶಕ್ತಿಯುತ ರಿಲೀಸ್ ಇದಾಗಿದ್ದು ಡೆವಲಪರ್ ಪ್ರಿವ್ಯೂ ಈಗ ಡೌನ್‌ಲೋಡ್‌ಗಾಗಿ ಲಭ್ಯವಿದೆ ಎಂದು ಗೂಗಲ್‌ನ ಉತ್ಪನ್ನಗಳ ಹಿರಿಯ ಉಪಾಧ್ಯಕ್ಷ ಸುಂದರ ಪಿಚೈ ತಿಳಿಸಿದ್ದಾರೆ.

ಬ್ಯಾಟರಿ

ಬ್ಯಾಟರಿ

ಡೋಸ್ ಎಂಬ ಅಂಶವನ್ನು ಇದು ಹೊಂದಿದ್ದು, ಫೋನ್‌ನ ಮೋಶನ್ ಸೆನ್ಸಾರ್ ನಿಷ್ಕ್ರಿಯಗೊಂಡಾಗ ಇದು ಪತ್ತೆಹಚ್ಚುತ್ತದೆ. ಇದು ಹಿನ್ನಲೆಯಲ್ಲಿ ಚಾಲ್ತಿಯಲ್ಲಿರುವ ಅಪ್ಲಿಕೇಶನ್ ಸಕ್ರಿಯತೆಯನ್ನು ಕಡಿತಗೊಳಿಸಿ ಬ್ಯಾಟರಿ ದೀರ್ಘತೆಯನ್ನು ಉಳಿಸುತ್ತದೆ.

ಅನುಮತಿಗಳು

ಅನುಮತಿಗಳು

ಅಪ್ಲಿಕೇಶನ್‌ನೊಳಗೆ ಅನುಮತಿಗಳನ್ನು ಪಡೆದುಕೊಳ್ಳುವ ಹೊಸ ಶಕ್ತಿಗಳನ್ನು ಬಳಕೆದಾರರು ಪಡೆದುಕೊಂಡಿದ್ದಾರೆ.

ಅಪ್ಲಿಕೇಶನ್ ಲಿಂಕ್‌ಗಳು

ಅಪ್ಲಿಕೇಶನ್ ಲಿಂಕ್‌ಗಳು

ಡೆವಲಪರ್‌ಗಳಿಗೆ ಅಪ್ಲಿಕೇಶನ್ ಅನ್ನು ಇನ್ನಷ್ಟು ಸುಲಭವಾಗಿ ಅಪ್ಲಿಕೇಶನ್ ಅನ್ನು ಅನ್ವೇಷಿಸಲು ಈ ಅಪ್ಲಿಕೇಶನ್ ಲಿಂಕ್ ಅನ್ನು ಜೊತೆಯಾಗಿ ವಿನ್ಯಾಸಗೊಳಿಸಲಾಗಿದೆ.

ನ್ಯೂ ಆನ್ ಟಾಪ್

ಸ್ಪರ್ಶದಲ್ಲೇ ಎಲ್ಲವೂ

ನ್ಯೂ ಆನ್ ಟಾಪ್ ಎಂಬ ಹೊಸ ಫೀಚರ್ ಅನ್ನು ಪ್ರಸ್ತುತಪಡಿಸಿದ್ದು, ಹೋಮ್ ಬಟನ್ ಅನ್ನು ಪ್ರೆಸ್ ಮಾಡುವ ಮೂಲಕ ಪರದೆಯಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಆಂಡ್ರಾಯ್ಡ್ ಪೇ ಮತ್ತು ಬೆರಳಚ್ಚು

ಆಂಡ್ರಾಯ್ಡ್ ಪೇ ಮತ್ತು ಬೆರಳಚ್ಚು

ಗೂಗಲ್ ವಾಲೆಟ್ ಬದಲಿಗೆ ಮತ್ತು ಆಪಲ್ ಪೇಗೆ ಪ್ರತಿಸ್ಪರ್ಧಿಯಾಗಿ ಆಂಡ್ರಾಯ್ಡ್ ಪೇಯನ್ನು ಪ್ರಸ್ತುತಪಡಿಸಲಾಗಿದೆ. ಇನ್ನು ಆಪಲ್ ಟಚ್ ಐಡಿಯಂತೆಯೇ ಆಂಡ್ರಾಯ್ಡ್‌ನಲ್ಲೂ ಬಳಕೆದಾರರು ಕೆಲವೊಂದು ಫೀಚರ್‌ಗಳನ್ನು ಬಳಸಬಹುದಾಗಿದ್ದು, ಇದಕ್ಕಾಗಿ ತಮ್ಮ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅನ್ನು ಇದಕ್ಕೆ ಲಿಂಕ್ ಮಾಡಬೇಕಾಗುತ್ತದೆ.

ಪ್ರಾಜೆಕ್ಟ್ ಬ್ರಿಲ್ಲೊ

ಪ್ರಾಜೆಕ್ಟ್ ಬ್ರಿಲ್ಲೊ

ಇಂಟರ್ನೆಟ್‌ನಾದ್ಯಂತ ಕೆಲಸ ನಿರ್ವಹಿಸಲು ಅಗತ್ಯವಾಗಿರುವ ಪ್ಲಾಟ್‌ಫಾರ್ಮ್ ಆಗಿ ಪ್ರಾಜೆಕ್ಟ್ ಬ್ರಿಲ್ಲೊ ಕಾರ್ಯನಿರ್ವಹಿಸುತ್ತದೆ. ಈ ವರ್ಷದ ನಂತರ ಈ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಲಾಗುತ್ತದೆ.

ಗೂಗಲ್ ಫೋಟೋಸ್

ಗೂಗಲ್ ಫೋಟೋಸ್

ನಿಮ್ಮೆಲ್ಲಾ ಫೋಟೋಗಳನ್ನು ಟೈಮ್‌ಲೈನ್‌ಗೆ ಬ್ಯಾಕಪ್ ಮಾಡುವ ಹೊಸ ಅಪ್ಲಿಕೇಶನ್ ಗೂಗಲ್ ಫೋಟೋಸ್ ಇದು ಉಚಿತವಾಗಿ ಅನಿಯಮಿತ ಸಂಗ್ರಹಣಾ ಸಾಮರ್ಥ್ಯವನ್ನು ಒದಗಿಸುತ್ತದೆ.

ಆಂಡ್ರಾಯ್ಡ್ ವೇರ್

ಆಂಡ್ರಾಯ್ಡ್ ವೇರ್

ತನ್ನ ವೇರಿಯೇಬಲ್‌ಗಳಿಗಾಗಿ ಗೂಗಲ್‌ನ ಆಪರೇಟಿಂಗ್ ಸಿಸ್ಟಮ್ ಆಗಿರುವ ಆಂಡ್ರಾಯ್ಡ್ ವೇರ್, ಹೆಚ್ಚು ಸಂಖ್ಯೆಯ ಅಪ್‌ಗ್ರೇಡ್‌ಗಳನ್ನು ಸಹ ಸ್ವೀಕರಿಸುತ್ತದೆ.

ಆಫ್‌ಲೈನ್ ಮ್ಯಾಪ್ಸ್

ಆಫ್‌ಲೈನ್ ಮ್ಯಾಪ್ಸ್

ಅತ್ಯಾಧುನಿಕ ಸೇವೆಯಾದ ಆಫ್‌ಲೈನ್ ಮ್ಯಾಪ್ಸ್ ಗೂಗಲ್‌ಗೆ ಸೇರ್ಪಡೆಗೊಂಡಿದ್ದು, ಸ್ಥಾನ ಹುಡಕಾಡುವಿಕೆಗೆ, ನಿರ್ದೇಶನಗಳನ್ನು ಪಡೆದುಕೊಳ್ಳಲು ಇದು ನಿಮಗೆ ನೆರವಾಗಲಿದೆ. ಇದಕ್ಕೆ ಇಂಟರ್ನೆಟ್ ಸಂಪರ್ಕವನ್ನು ನೀವು ಹೊಂದಬೇಕಾಗಿಲ್ಲ.

ಗೂಗಲ್ ಕಾರ್ಡ್‌ಬೋರ್ಡ್ ಮತ್ತು ಜಂಪ್

ಗೂಗಲ್ ಕಾರ್ಡ್‌ಬೋರ್ಡ್ ಮತ್ತು ಜಂಪ್

ಗೂಗಲ್ ಕಾರ್ಡ್‌ಬೋರ್ಡ್ ಗೂಗಲ್‌ನ ವರ್ಚುವಲ್ ರಿಯಾಲಿಟಿ ಪ್ರಾಜೆಕ್ಟ್ ಆಗಿದ್ದು ಐಓಎಸ್‌ಗಾಗಿ ಪ್ರಥಮ ಬಾರಿಗೆ ಲಭ್ಯವಾಗುತ್ತಿದೆ. ಗೂಗಲ್ ಎಚ್‌ಆರ್ ವೀಡಿಯೋದಲ್ಲಿ ಜಗತ್ತನ್ನೇ ಗೂಗಲ್ ಹೇಗೆ ಹಿಡಿದಿಡುತ್ತದೆ ಎಂಬುದನ್ನು ಹೊಸ ಪ್ರಾಜೆಕ್ಟ್ ಜಂಪ್ ತಿಳಿಸಿಕೊಡಲಿದೆ. ಇದು ವೃತ್ತಾಕಾರದ ಮಾದರಿಯಲ್ಲಿ 16 ಕ್ಯಾಮೆರಾ ಮಾಡ್ಯುಲ್‌ಗಳನ್ನು ಬಳಸಿಕೊಂಡು 3ಡಿ 360 ಡಿಗ್ರಿಯಲ್ಲಿ ಸುತ್ತಲಿನ ಪರಿಸರವನ್ನು ಹಿಡಿದಿಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google's annual I/O developers conference is one of the most hotly-anticipated events in the technology calender, and 2015's event did not disappoint.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot