Google I/O 2024: ಆಂಡ್ರಾಯ್ಡ್ ಫೋನಿನಲ್ಲಿ ಲಭ್ಯವಾಗಲಿವೆ ಈ ಅಚ್ಚರಿಯ ಫೀಚರ್ಸ್!
ಜನಪ್ರಿಯ ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯು ಗೂಗಲ್‌ನ I/O 2024 ಕಾರ್ಯಕ್ರದಲ್ಲಿ ಹಲವು ಹೊಸ ನಮೂನೆಯ ಟೆಕ್ ಉತ್ಪನ್ನಗಳು ಅನಾವರಣ ಆಗಿವೆ. ಅವುಗಳ ಪೈಕಿ AI ಫೀಚರ್ಸ್‌ಗಳು ಸಖತ್ ಹೈಲೈಟ್ ಆಗಿ ಕಾಣಿಸಿಕೊಂಡಿದೆ. ಕೆಲವು ಹೊಸ AI ಫೀಚರ್ಸ್‌ಗಳನ್ನು ತನ್ನ ಆಪರೇಟಿಂಗ್ ಸಿಸ್ಟಮ್‌ಗೆ ತರುವುದಾಗಿ ಗೂಗಲ್ ತಿಳಿಸಿದೆ.
ಹೌದು, ಗೂಗಲ್‌ನ I/O 2024 ಕಾರ್ಯಕ್ರದಲ್ಲಿ ಗೂಗಲ್ ಸಂಸ್ಥೆಯು ನೂತನವಾಗಿ ಜೆಮಿನಿ 1.5 ಲಾಂಗ್ವೇಜ್ ಮಾಡ್ಯುಲ ಮತ್ತು AI ವಾಯಿಸ್ ಅಸಿಸ್ಟಂಟ್ ಸೇರಿದಂತೆ ಕೆಲವು ಹೊಸ AI ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಗೂಗಲ್ ವಿಯೋ ಹಾಗೂ ಇತರೆ ಕೆಲವು ಗೂಗಲ್ ಸೇವೆಗಳು ಅನಾವರಣ ಆಗವೆ.

ಜೆಮಿನಿ ನ್ಯಾನೋ ಮಾಡೆಲ್, ಸರ್ಕಲ್ ಟು ಸರ್ಚ್, ಗೂಗಲ್ ಫೋಟೋಗಳು ಸೇರಿದಂತೆ ಇತರೆ ಕೆಲವು AI ಫೀಚರ್ಸ್‌ಗಳನ್ನು ಆಂಡ್ರಾಯ್ಡ್ ಓಎಸ್ ಗೆ ಸೇರ್ಪಡೆ ಮಾಡುವುದಾಗಿ ದೈತ್ಯ ಗೂಗಲ್ ತಿಳಿಸಿದೆ. ಹಾಗಾದರೇ ಶೀಘ್ರದಲ್ಲೇ ಆಂಡ್ರಾಯ್ಡ್ ಓಎಸ್ ಸೇರಲಿರುವ ಕೆಲವು ಹೊಸ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ನ್ಯಾನೋ AI ಆವೃತ್ತಿಗೆ ಅಪ್‌ಗ್ರೇಡ್ ಆಯ್ಕೆ
ಗೂಗಲ್ ಪಿಕ್ಸೆಲ್ ಹಾಗೂ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಕಂಡುಬರುವ ಆನ್-ಡಿವೈಸ್ AI ಮಾದರಿಯ ಜೆಮಿನಿ ನ್ಯಾನೊಗೆ ಇದು ಸಪೋರ್ಟ್ ನೀಡುತ್ತಿದೆ ಎಂದು ಗೂಗಲ್ ತಿಳಿಸಿದೆ. ನೂತನ ಮಾದರಿಯ ಜೆಮಿನಿ ನ್ಯಾನೋ 1.0 ಮಲ್ಟಿಮೋಡಲ್ ಪವರ್ ಪಡೆದಿದ್ದು, ಟೆಕ್ಸ್ಟ್ ಪ್ರಾಂಪ್ಟ್‌ಗಳ ಅಲ್ಲದೇ ವಿಡಿಯೋ, ಶಬ್ದಗಳು ಮತ್ತು ಮಾತನಾಡುವ ಪದಗಳನ್ನು ಅರ್ಥಮಾಡಿ ಕೊಳ್ಳಬಹುದಾಗಿದೆ.
ಸರ್ಕಲ್ ಟು ಸರ್ಚ್ ಆಯ್ಕೆ
ಗೂಗಲ್ ಸಂಸ್ಥೆಯು ಕಳೆದ ವರ್ಷದಲ್ಲಿ ಸರ್ಕಲ್ ಟು ಸರ್ಚ್ ಆಯ್ಕೆ ಪರಿಚಯಿಸಿತ್ತು. ಬಳಿಕ ಈ ಆಯ್ಕೆಯನ್ನುಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಗೆ ಲಭ್ಯ ಮಾಡಿತು. ಈ ಹೊಸ ಆಯ್ಕೆಯು ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಮತ್ತು ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಮಾರ್ಗದರ್ಶಿ ಎನಿಸಲಿದೆ. ಅಂದಹಾಗೆ ಈ ಆಯ್ಕೆಯು ಈಗಾಗಲೇ 100 ಮಿಲಿಯನ್ ಡಿವೈಸ್‌ಗಳಲ್ಲಿ ಲಭ್ಯವಿದ್ದರೂ, ಇದನ್ನು ಇನ್ನಷ್ಟು ಫೋನ್‌ಗಳಿಗೆ ತರಲು ಯೋಜಿಸುತ್ತಿದೆ ಎಂದು ಗೂಗಲ್ ಹೇಳಿದೆ.
AI ಸ್ಕ್ಯಾಮ್ ಪ್ರೊಟೆಕ್ಷನ್ ಫೀಚರ್
ಸಾಮಾನ್ಯ ಸ್ಕ್ಯಾಮ್‌ಗಳೊಂದಿಗೆ ಸ್ಥಿರವಾದ ಮಾದರಿಯನ್ನು ಪತ್ತೆಹಚ್ಚಿದರೆ ರಿಯಲ್ ಟೈಮ್ ಅಲರ್ಟ್ ಒದಗಿಸಲು ಜೆಮಿನಿ ನ್ಯಾನೊದ ಮಲ್ಟಿಮೋಡಲ್ ಸಾಮರ್ಥ್ಯಗಳನ್ನು ಬಳಸುತ್ತದೆ ಎಂದು ಗೂಗಲ್ ಹೇಳಿದೆ. ಇನ್ನು ಈ AI ಸ್ಕ್ಯಾಮ್ ಪ್ರೊಟೆಕ್ಷನ್ ಫೀಚರ್ ಆಪ್ಟ್-ಇನ್ ಫೀಚರ್ಸ್ ಆಗಿದ್ದು, ಪೂರ್ವನಿಯೋಜಿತವಾಗಿ ಇದು ಆನ್ ಆಗುವುದಿಲ್ಲ. ಅಲ್ಲದೇ ಹೊಸ AI ಉಪಕರಣವನ್ನು ಬಳಸುವ ತಮ್ಮ ಆಯ್ಕೆಯನ್ನು ಬಳಕೆದಾರರು ಮ್ಯಾನುವಲ್ ಆಗಿ ಕನ್ಫರ್ಮ್ ಮಾಡಬೇಕಿರುತ್ತದೆ.
ಜೆಮಿನಿ ಪಾತ್ರ
ಇದು ಬಳಕೆದಾರರ ಫೋನ್ ಸ್ಕ್ರೀನ್ ಮೇಲಿನ ಕಂಟೆಂಟ್ ಅರ್ಥಮಾಡಿಕೊಳ್ಳಲು ಮತ್ತು ಬಳಸಲು ಜೆಮಿನಿಗೆ ಈಗ ಸಾಧ್ಯವಾಗುತ್ತದೆ ಎಂದು ಗೂಗಲ್ ತಿಳಿಸಿದೆ. ಉದಾಹರಣೆಗೆ ಬಳಕೆದಾರರು ಒಂದು ನಿರ್ದಿಷ್ಟ ವೀಡಿಯೊದ ಬಗ್ಗೆ ಜೆಮಿನಿ ಪ್ರಶ್ನೆಗಳನ್ನು ಕೇಳಬಹುದು ಅಥವಾ AI ರಚಿತ ಫೋಟೋಗಳನ್ನು ನೇರವಾಗಿ ಗೂಗಲ್ ಮೆಸೆಜ್ ಅಥವಾ ಜಿಮೇಲ್‌ಗೆ ಸೆಂಡ್ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ.
ನೂತನ AI ಅಸಿಸ್ಟಂಟ್ ಆಯ್ಕೆ
ಗೂಗಲ್ I/O ಕಾರ್ಯಕ್ರಮದಲ್ಲಿನ ಗೂಗಲ್ ಪರಿಚಯಿಸಿರುವ ಕೆಲವು ಹೊಸ ಆಯ್ಕೆಗಳು ಭವಿಷ್ಯದ AI ಅಸಿಸ್ಟೆಂಟ್ ಚಿತ್ರಣ ನೀಡಿದಂತೆ ಎನಿಸಿದೆ. ಗೂಗಲ್ ಪರಿಚಯಿಸಿರುವ ಪ್ರಾಜೆಕ್ಟ್ ಅಸ್ಟ್ರಾದ ಕೆಲವು ಸಾಮರ್ಥ್ಯಗಳು ಈ ವರ್ಷದ ನಂತರ ಜೆಮಿನಿ ಅಪ್ಲಿಕೇಶನ್ ಮತ್ತು ವೆಬ್ ಅನುಭವಕ್ಕೆ ಬರಲಿವೆ ಎಂದು ಗೂಗಲ್ ತಿಳಿಸಿದೆ.


Click it and Unblock the Notifications








