ಏಕಾಏಕಿ ಈ ಎರಡು ಸರ್ಚ್‌ ಫಿಲ್ಟರ್‌ ಆಯ್ಕೆಗಳನ್ನು ತೆಗೆದುಹಾಕಿದ 'ಗೂಗಲ್‌'!

|

ಟೆಕ್‌ ದಿಗ್ಗಜ ಗೂಗಲ್ ಹಲವು ಅಗತ್ಯ ಸೇವೆಗಳನ್ನು ನೀಡುತ್ತಿದ್ದು, ಮುಖ್ಯವಾಗಿ ಗೂಗಲ್ ಮ್ಯಾಪ್ ಮತ್ತು ಗೂಗಲ್ ಸರ್ಚ್ ಬಳಕೆದಾರರಿಗೆ ಬಹಳ ಅನುಕೂಲಕರವಾಗಿವೆ. ಪ್ರಮುಖ ವ್ಯಕ್ತಿ, ವಿಷಯ, ವಸ್ತು ಹೀಗೆ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್ ಮೋರೆ ಹೋಗುವುದು ಸಾಮಾನ್ಯವಾಗಿದೆ. ಹೀಗೆ ಹತ್ತು ಹಲವು ಅನುಕೂಲತೆಗಳನ್ನು ಒದಗಿಸಿರುವ ಗೂಗಲ್ ಇದೀಗ ಬಳಕೆದಾರರಿಗೆ ದೊಡ್ಡ ಶಾಕ್ ನೀಡಿದೆ.

ಏಕಾಏಕಿ ಈ ಎರಡು ಸರ್ಚ್‌ ಫಿಲ್ಟರ್‌ ಆಯ್ಕೆಗಳನ್ನು ತೆಗೆದುಹಾಕಿದ 'ಗೂಗಲ್‌'!

ಹೌದು, ಗೂಗಲ್ ಸರ್ಚ್‌ನಲ್ಲಿ, ಇಮೇಜ್‌ ಸರ್ಚ್‌ ಮಾಡುವಾಗ ಸರ್ಚ್ ಫಿಲ್ಟರ್‌ನಲ್ಲಿನಲ್ಲಿ ಲಭ್ಯವಿದ್ದ, ಎಗ್ಸಾಕ್ಟ್‌ ಸೈಜ್ (exact sizes) ಮತ್ತು ಲಾರ್ಜರ್ ದೇನ್‌ (larger than) ಆಯ್ಕೆಗಳನ್ನು ಗೂಗಲ್ ತೆಗೆದು ಹಾಕಿದೆ. ಹೀಗಾಗಿ ಇನ್ಮುಂದೆ ಗೂಗಲ್‌ನ ಇಮೇಜ್ ಸರ್ಚ್ ಫಿಲ್ಟರ್‌ನಲ್ಲಿನ ಟೂಲ್‌ ಆಯ್ಕೆಯಲ್ಲಿ, ಸೈಜ್ ಫಿಲ್ಟರ್‌ ತೆರೆದರೇ, ಎನಿ ಸೈಜ್, ಲಾರ್ಜ್‌, ಮೀಡಿಯಮ್ ಮತ್ತು ಐಕಾನ್ ಆಯ್ಕೆಗಳ ಮಾತ್ರ ಕಾಣಿಸುತ್ತದೆ.

ಏಕಾಏಕಿ ಈ ಎರಡು ಸರ್ಚ್‌ ಫಿಲ್ಟರ್‌ ಆಯ್ಕೆಗಳನ್ನು ತೆಗೆದುಹಾಕಿದ 'ಗೂಗಲ್‌'!

ಗೂಗಲ್‌ ಸರ್ಚ್‌ನಲ್ಲಿ ಆಲ್, ನ್ಯೂಸ್‌, ಇಮೇಜ್, ವಿಡಿಯೊ, ಮ್ಯಾಪ್‌ ಮತ್ತು ಮೋರ್‌ ಆಯ್ಕೆಗಳನ್ನು ನೀವು ನೋಡಿದ್ದಿರಿ. ಇವುಗಳಲ್ಲಿ ಇಮೇಜ್‌ ಸರ್ಚ್‌ ತೆರೆದಾಗ, ಅಲ್ಲಿನ ಟೂಲ್‌ ಆಯ್ಕೆ ಬಳಸಿ ನಮಗೆ ಬೇಕಾದ ಸೈಜ್‌ನ ಫೋಟೋಗಳನ್ನು ಪಡೆಯಬಹುದಾಗಿತ್ತು. ಸೈಜ್‌ ಆಯ್ಕೆಯ ಲಿಸ್ಟ್‌ನಲ್ಲಿದ್ದ ಎಗ್ಸಾಕ್ಟ್‌ ಸೈಜ್‌ ಮತ್ತು ಲಾರ್ಜರ್ ದೇನ್ ಫಿಲ್ಟರ್‌ಗಳನ್ನು ಗೂಗಲ್ ತೆಗೆದಿದೆ. ಆದ್ರೆ ಅದಕ್ಕೆ ನಿಖರ ಕಾರಣವೇನು ಎಂಬ ಮಾಹಿತಿಯನ್ನು ಹೊರಹಾಕಿಲ್ಲ.

ಏಕಾಏಕಿ ಈ ಎರಡು ಸರ್ಚ್‌ ಫಿಲ್ಟರ್‌ ಆಯ್ಕೆಗಳನ್ನು ತೆಗೆದುಹಾಕಿದ 'ಗೂಗಲ್‌'!

ಗೂಗಲ್ ತನ್ನ ಸರ್ಚ್ ಇಂಜಿನ ಫಿಲ್ಟರ್‌ನಲ್ಲಿ ಹೊಸ ಆಯ್ಕೆಗಳನ್ನು ಸೇರಿಸುವ ಉದ್ದೇಶವನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಆದ್ರೆ ಈ ಮೊದಲು ಗೂಗಲ್ ಇಮೇಜ್ ಫಿಲ್ಟರ್‌ ಆಯ್ಕೆಯಲ್ಲಿದ್ದ, ಎಗ್ಸಾಕ್ಟ್‌ ಸೈಜ್ ಆಯ್ಕೆಯು ಬಳಕೆದಾರರಿಗೆ ಅವರಿಗೆ ಅಗತ್ಯವಿರುವ ಸೈಜ್‌ನ ಇಮೇಜ್‌ ಅನ್ನು ರಿಸಲ್ಟ್‌ ನೀಡುತ್ತಿತ್ತು. ಹಾಗೆಯೇ ಲಾರ್ಜರ್ ದೇನ್ ಆಯ್ಕೆಯು ದೊಡ್ಡ ಗಾತ್ರದ ಇಮೇಜ್ ಆಯ್ಕೆಯನ್ನು ಒದಗಿಸುತ್ತಿತ್ತು.

ಗೂಗಲ್ ಸರ್ಚ್‌ನಲ್ಲಿ 'ಎಗ್ಸಾಕ್ಟ್‌ ಸೈಜ್' ಮತ್ತು ಲಾರ್ಜರ್ ದೇನ್‌ ಆಯ್ಕೆಗಳು ಇಲ್ಲವಾಗಿವೆ. ಆದರೆ ಮೈಕ್ರೋಸಾಫ್ಟ್‌ ಬಿಂಗ್ ಸರ್ಚ್‌ ಇಂಜಿನಿನ ಫಿಲ್ಟರ್ ಆಯ್ಕೆಯ ಸೈಜ್‌ ಕೇಟಗೆರಿಯಲ್ಲಿ ಇನ್ನೂ 'ಎಗ್ಸಾಕ್ಟ್‌ ಇಮೇಜ್' ಮತ್ತು 'ಲಾರ್ಜರ್ ದೇನ್' ಆಯ್ಕೆಗಳು ಕಾಣಿಸುತ್ತವೆ. ಈ ಸರ್ಚ್‌ ಇಂಜಿನಲ್ಲಿ ಬಳಕೆದಾರರು ಇಮೇಜನ್ ಸೈಜ್ ಬದಲಿಸಿಕೊಳ್ಳಬಹುದು ಮತ್ತು ರೆಸಲ್ಯೂಶನ್ ಬದಲಿಸಬಹುದು.

Best Mobiles in India

English summary
Google has removed a search filter that allowed users to find images of exact sizes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X