Subscribe to Gizbot

ಗೂಗಲ್ ಶಾಪಿಂಗ್ ಹಬ್ಬ ಇಂದಿನಿಂದ ಆರಂಭ

Posted By:

ಗೂಗಲ್‌ನ ಹೆಚ್ಚು ಕಾತರದ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ (GOSF) ಇಂದಿನಿಂದ ಆರಂಭಗೊಂಡು ಶುಕ್ರವಾರದವರೆಗೆ ನಡೆಯಲಿದೆ. 400 ಪಾಲುದಾರರು ಡೀಲ್‌ಗಳು ಮತ್ತು ಡಿಸ್ಕೌಂಟ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: ನಿಮ್ಮ ಜೀವನವನ್ನೇ ಬದಲಾಯಿಸುವ ಅತ್ಯುತ್ತಮ ಟೆಕ್ ಸಲಹೆಗಳು

ಜಿಓಎಸ್‌ಎಫ್ ಅತಿ ವಿಶೇಷವಾಗಿ ಲಾಂಚ್ ಮಾಡಿರುವ ಉತ್ಪನ್ನಗಳನ್ನು ಗೂಗಲ್ ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿದೆ. ಇದೇ ಸಮಾರಂಭದಲ್ಲಿ ಗೂಗಲ್ ನೆಕ್ಸಸ್ 6 ಅನ್ನು ಬಿಡುಗಡೆ ಮಾಡುವ ತಯಾರಿಯನ್ನು ಭರದಿಂದ ಹಮ್ಮಿಕೊಂಡಿದೆ. ಗ್ರಾಹಕರಿಗೆ ವಿಶೇಷ ರೀತಿಯ ಕೊಡುಗೆಗಳನ್ನು ಕಂಪೆನಿ ಹಮ್ಮಿಕೊಂಡಿದ್ದು 14 ನಿಮಿಷಗಳ ಉಚಿತ ಶಾಪಿಂಗ್ ಅನ್ನು ಗೆಲ್ಲುವ ಅದ್ಭುತ ಅವಕಾಶವನ್ನು ಗ್ರಾಹಕ ಪಡೆದುಕೊಳ್ಳಬಹುದಾಗಿದೆ. ಏಷ್ಯನ್ ಪೇಂಟ್ಸ್, ಜೆಟ್ ಏರ್‌ವೇಸ್, ಬಿಗ್ ಬಝಾರ್ ಮೊದಲಾದ ಬ್ರ್ಯಾಂಡ್‌ಗಳು ಈ ಅವಕಾಶವನ್ನು ಹೋಸ್ಟ್ ಮಾಡಲಿವೆ.

ಗೂಗಲ್ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್

ಈ ವರ್ಷದ ಈವೆಂಟ್‌ಗಾಗಿ ಗೂಗಲ್ ಆದಿತ್ಯ ಬಿರ್ಲಾ ಮನಿ ಮೈ ಯುನಿವರ್ಸ್ ಅನ್ನು ಪಾಲುದಾರನನ್ನಾಗಿ ಮಾಡಿಕೊಂಡಿದೆ. ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ ತನ್ನ ಮೂರನೇ ಸಂಭ್ರಮಾಚರಣೆಯಲ್ಲಿದೆ. ಇದನ್ನು 2012ರಲ್ಲಿ ಪ್ರಾರಂಭಿಸಲಾಗಿತ್ತು. ಕಳೆದ ವರ್ಷ ಇದು 2 ಮಿಲಿಯನ್ ಗ್ರಾಹಕರನ್ನು ಸೆಳೆದಿತ್ತು. ವರ್ಷದಿಂದ ವರ್ಷಕ್ಕೆ ಪ್ರತೀ ಈವೆಂಟ್‌ನಲ್ಲಿ ಈ ಸಂಖ್ಯೆ ಹೆಚ್ಚುತ್ತಿದೆ ಎಂದು ಕಂಪೆನಿ ತಿಳಿಸಿದೆ. ಅದರಲ್ಲೂ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ಗೂಗಲ್ ಅಭಿಪ್ರಾಯವಾಗಿದೆ.

English summary
This article tells about Google's much-awaited Great Online Shopping Festival (GOSF) will kick off on Wednesday and will feature more than 400 partners offering deals and discounts. The GOSF will be a three day event starting Wednesday and will end on Friday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot