ನಿಮ್ಮ ಫೋನ್ ಮೆಮೊರಿ ಪದೇ ಪದೇ ಫುಲ್ ಆಗುತ್ತಾ?..ಇನ್ನು ಈ ಟೆನ್ಷನ್ ಇರಲ್ಲ ಬಿಡಿ!
ಸದ್ಯ ಸ್ಮಾರ್ಟ್‌ಫೋನ್ ಎಲ್ಲರ ಅಗತ್ಯ ಮತ್ತು ಅವಶ್ಯ ಸಾಧನವಾಗಿದೆ. ಬಹುತೇಕ ಬಳಕೆದಾರರ ಸ್ಮಾರ್ಟ್‌ಫೋನಿನಲ್ಲಿ ಅನೇಕ ಮಾಹಿತಿ, ಫೋಟೊ, ಪಿಡಿಎಫ್ ಫೈಲ್, ವಿಡಿಯೋ ಹಾಗೂ ಅಪ್ಲಿಕೇಶನ್ ಗಳಿಂದ ಫೋನಿನ ಸ್ಟೋರೇಜ್ ಭರ್ತಿ ಆಗಿರುತ್ತದೆ.ಆದ್ರೆ ಈಗ ಚಿಂತೆ ಇಲ್ಲ ಬಿಡಿ, ಗೂಗಲ್ ಹೊಸದೊಂದು ಫೀಚರ್ ಪರಿಚಯಿಸಿದ್ದು, ಇದು ನಿಮ್ಮ ಫೋನಿನ ಅನಗತ್ಯ ಸ್ಟೋರೇಜ್ ತಪ್ಪಿಸಲಿದೆ.
ಹೌದು, ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯು ಬ್ಲಾಗ್ ಪೋಸ್ಟ್ ಮೂಲಕ 'ಸ್ವಯಂ-ಆರ್ಕೈವ್' (auto-archive) ಫೀಚರ್ ಅನ್ನು ಪ್ರಕಟಿಸಿದೆ. ಇದು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡದ ಅಪ್ಲಿಕೇಶನ್‌ನ ಡೇಟಾವನ್ನು ತೆಗೆದುಹಾಕಲು ಸಹಾಯ ಮಾಡಲಿದೆ. ಅಂದಹಾಗೆ ಈ ನೂತನ ಉಪಯುಕ್ತ ಫೀಚರ್ ಆಂಡ್ರಾಯ್ಡ್ (Android) ಸ್ಮಾರ್ಟ್‌ಫೋನ್‌ಗಳಿಗೆ ಆಗಿದೆ.

ಗಮನಿಸಬೇಕಾದ ಅಂಶವೆಂದರೇ, ಈ ನೂತನ ಫೀಚರ್ ಬಳಕೆದಾರರ ಯಾವುದೇ ಡೇಟಾವನ್ನು ತೆಗೆದುಹಾಕುವುದಿಲ್ಲ. ಮುಖ್ಯವಾಗಿ ಹೆಚ್ಚು ಬಳಕೆ ಮಾಡದ ಅಪ್ಲಿಕೇಶನ್‌ಗಳ ಡೇಟಾವನ್ನು ಮಾತ್ರ ಆರ್ಕೈವ್ ಮಾಡುತ್ತದೆ. ಇದು ಫೋನಿನ ಕ್ಲೌಡ್ ಐಕಾನ್‌ನೊಂದಿಗೆ ಅಪ್ಲಿಕೇಶನ್‌ನ ಉಪಸ್ಥಿತಿಯನ್ನು ಗುರುತಿಸುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಏನಿದು ಸ್ವಯಂ ಆರ್ಕೈವ್ ಫೀಚರ್? : ಸ್ವಯಂ-ಆರ್ಕೈವ್ ಎಂಬುದು ಹೊಸ ಫೀಚರ್ ಆಗಿದ್ದು, ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಅನ್‌ಇನ್‌ಸ್ಟಾಲ್ ಮಾಡುವ ಅಗತ್ಯವಿಲ್ಲದೇ ಆಂಡ್ರಾಯ್ಡ್ ಬಳಕೆದಾರರಿಗೆ ತಮ್ಮ ಫೋನಿನಲ್ಲಿ ಸ್ಟೋರೇಜ್ ಅನ್ನು ಮುಕ್ತಗೊಳಿಸಲು ನೆರವಾಗಲಿದೆ. ಬಳಕೆದಾರರು ಒಮ್ಮೆ ಆಯ್ಕೆ ಮಾಡಿದರೆ, ಸ್ಟೋರೇಜ್ ಉಳಿಸಲು ಹೆಚ್ಚಾಗಿ ಬಳಸಿದ ಆಪ್‌ಗಳನ್ನು ಫೋನಿನಂದ ತೆಗೆದುಹಾಕಲಾಗುತ್ತದೆ. ಆದರೆ ಆಪ್ ಐಕಾನ್ ಮತ್ತು ಬಳಕೆದಾರರ ವೈಯಕ್ತಿಕ ಆಪ್ ಡೇಟಾವನ್ನು ಸಂರಕ್ಷಿಸಲಾಗುತ್ತದೆ.
ಒಂದು ವೇಳೆ ಬಳಕೆದಾರರು ಮತ್ತೆ ಆ ಅಪ್ಲಿಕೇಶನ್ ಅನ್ನು ಬಳಸಲು ಬಯಸಿದಾಗ, ಅವರು ಆ ಆಪ್ ಅನ್ನು ರೀ-ಡೌನ್‌ಲೋಡ್ ಮಾಡಲು ಟ್ಯಾಪ್ ಮಾಡಬಹುದು. ಇಲ್ಲವೇ ಅವರು ಗೂಗಲ್ ಪ್ಲೇ (Google Play ನಲ್ಲಿ ಅಪ್ಲಿಕೇಶನ್ ಇನ್ನೂ ಲಭ್ಯವಿರುವವರೆಗೆ) ಆಯ್ಕೆ ಮಾಡಬಹುದು.

ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ? : ಸ್ವಯಂ-ಆರ್ಕೈವ್, ಮೊದಲೇ ಹೇಳಿದಂತೆ ಬಳಕೆದಾರರು ತಮ್ಮ ಫೋನಿನ ಸ್ಟೋರೇಜ್ ಅನ್ನು ನಿರ್ವಹಿಸಲು ಸುಲಭವಾದ ಮಾರ್ಗವಾಗಿದೆ. ಡೆವಲಪರ್‌ಗಳು ತಮ್ಮ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವ ಸಾಧ್ಯತೆಯನ್ನು ಕಡಿಮೆ ಮಾಡಲು ಇದು ಉತ್ತಮ ಮಾರ್ಗವಾಗಿದೆ. ಆಂಡ್ರಾಯ್ಡ್ ಬಳಕೆದಾರರು ಪ್ಲೇ ಸ್ಟೋರ್ ನಿಂದ ಆಪ್ ಅನ್ನು ಇನ್‌ಸ್ಟಾಲ್ ಮಾಡಲು ಪ್ರಯತ್ನಿಸಿದಾಗ ಮತ್ತು ಅವರ ಫೋನ್ ಸಂಗ್ರಹಣೆಯಿಂದ ಹೊರಗಿರುವಾಗ, ಅವರು ಸ್ವಯಂ-ಆರ್ಕೈವಿಂಗ್ ಫೀಚರ್ ಅನ್ನು ಬಳಸಲು ಪ್ರಾಂಪ್ಟ್ ಅನ್ನು ಸ್ವೀಕರಿಸುತ್ತಾರೆ.
ಪ್ರಾಂಪ್ಟ್ ಹೀಗೆ ಹೇಳುತ್ತದೆ, 'ನಿಮ್ಮ ಸಾಧನವು ಸಂಗ್ರಹಣೆಯಿಂದ ಹೊರಗಿದೆ. ಅಲ್ಲದೇ ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಆಪ್ ಆರ್ಕೈವಿಂಗ್ ಆನ್ ಮಾಡಿದಾಗ, ನಿಮ್ಮ ಪೋನ್ ಸಾಕಷ್ಟು ಸ್ಟೋರೇಜ್ ಹೊಂದಿಲ್ಲದಿದ್ದಾಗ ನಿಮ್ಮ ಫೋನ್ ಪತ್ತೆ ಮಾಡುತ್ತದೆ. ಇನ್ನು ನೀವು ಹೊಂದಿರದ ಅಪ್ಲಿಕೇಶನ್‌ಗಳನ್ನು ಸ್ವಯಂಚಾಲಿತವಾಗಿ ಆರ್ಕೈವ್ ಮಾಡುತ್ತದೆ. ನೀವು ಅಪ್ಲಿಕೇಶನ್ ಅನ್ನು ಮತ್ತೊಮ್ಮೆ ಡೌನ್‌ಲೋಡ್ ಮಾಡಿದರೆ ನಿಮ್ಮ ವೈಯಕ್ತಿಕ ಡೇಟಾವನ್ನು ಉಳಿಸಲಾಗುತ್ತದೆ.'
ಹಾಗೆಯೇ ವಾಟ್ಸಾಪ್ ಮೂಲಕ ಸಹ ಫೋನ್ ಸ್ಟೋರೇಜ್ ಉಳಿಸಬಹುದು. ಮೊದಲಿಗೆ ವಾಟ್ಸಾಪ್ ಆಪ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ > ಸ್ಟೋರೇಜ್ ಮತ್ತು ಡೇಟಾ > ಸ್ಟೋರೇಜ್ ಮ್ಯಾನೇಜರ್ ಆಯ್ಕೆ ಮಾಡಿ. ಬಳಿಕ 5MB ಗಿಂತ ದೊಡ್ಡದಾದ ಫೈಲ್‌ಗಳ ವಿಭಾಗವನ್ನು ನೋಡುತ್ತೀರಿ. ನೀವು ಅದರ ಮೇಲೆ ಟ್ಯಾಪ್ ಮಾಡಬಹುದು. ಜೊತೆಗೆ ನಿಮಗೆ ಅನಗತ್ಯ ಎನಿಸುವ ಫೈಲ್‌ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಒಂದೇ ಸಮಯದಲ್ಲಿ ಡಿಲೀಟ್ ಮಾಡಬಹುದು.


Click it and Unblock the Notifications








