Home
ಸುದ್ದಿಜಾಲ

ಆನ್‌ಲೈನ್‌ ಹಣಕಾಸು ವಂಚನೆ ತಡೆಗೆ ಗೂಗಲ್‌ 'ಡಿಜಿ ಕವಚ್‌' ನೆರವಾಗಲಿದೆ!

ಟೆಕ್ ದೈತ್ಯ ಗೂಗಲ್ ದೆಹಲಿಯಲ್ಲಿ ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದ 9 ನೇ ಆವೃತ್ತಿಯನ್ನು ನಡೆಸಿದೆ. ಈ ಕಾರ್ಯಕ್ರಮದಲ್ಲಿ ಕೆಲವು ಮಹತ್ತರ ಸೇವೆ ಹಾಗೂ ಉತ್ಪನ್ನಗಳ ಬಗ್ಗೆ ಸಂಸ್ಥೆಯು ಮಾಹಿತಿ ಹೊರಹಾಕಿದೆ. ಇದರ ಜೊತೆಗೆ ಡಿಜಿ ಕವಾಚ್ (DigiKavach) ಸೇವೆಯನ್ನು ಪರಿಚಯಿಸಿದ್ದು, ಇದು ಭಾರತದಲ್ಲಿನ ಹಣಕಾಸು ವಂಚನೆಗಳನ್ನು ಗುರುತಿಸಲು ಪೂರಕವಾಗಿದೆ.

ಹೌದು, ಗೂಗಲ್‌ ಸಂಸ್ಥೆಯು ಭಾರತದಲ್ಲಿ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಮಾಡುವ ಸೂಚನೆ ನೀಡಿದೆ. ಅಲ್ಲದೇ ಗೂಗಲ್‌ನ ವಿಸ್ತರಣಾ ಯೋಜನೆಗಳ ಕುರಿತು ಪ್ರಮುಖ ಅಪ್‌ಡೇಟ್‌ಗಳನ್ನು ಸಹ ಪ್ರದರ್ಶಿಸಿತು. ಇವುಗಳ ಮಧ್ಯೆ ದೇಶದಲ್ಲಿನ ಆರ್ಥಿಕ ವಂಚನೆಗಳನ್ನು ಗುರುತಿಸಲು ಮತ್ತು ನಿಭಾಯಿಸಲು ಡಿಜಿ ಕವರ್ ಸೇವೆಯ ಬಗ್ಗೆ ತಿಳಿಸಿದೆ.

ಆನ್‌ಲೈನ್‌ ಹಣಕಾಸು ವಂಚನೆ ತಡೆಗೆ ಗೂಗಲ್‌ 'ಡಿಜಿ ಕವಚ್‌' ನೆರವಾಗಲಿದೆ!

ಡಿಜಿ ಕವಾಚ್ ಗೂಗಲ್ ಫಿನ್‌ಟೆಕ್ ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ಎಂಪವರ್‌ಮೆಂಟ್ (FACE) ನೊಂದಿಗೆ ಪಾಲುದಾರಿಕೆ ಹೊಂದಿದೆ. ಡಿಜಿ ಕವಾಚ್ ದೇಶದಲ್ಲಿ ವಂಚಕರ ವಿಧಾನವನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ಮಾಹಿತಿ ಒದಗಿಸುತ್ತದೆ.

ಗೂಗಲ್‌ನ ಡಿಜಿ ಕವಚ್‌ ದೇಶದಲ್ಲಿ ಹಣಕಾಸಿನ ವಂಚನೆಗಳ ತಡೆಗೆ ಸಹಾಯಕ

ಗೂಗಲ್ ಸಂಸ್ಥೆಯು ಡಿಜಿ ಕವಾಚ್ ಸೇವೆ ಅನ್ನು ಪ್ರಾರಂಭಿಸಿದ್ದು, ಬೆದರಿಕೆ ಪತ್ತೆ ಮತ್ತು ಅಲರ್ಟ್‌ ವ್ಯವಸ್ಥೆಯನ್ನು ದೇಶದಲ್ಲಿ ಹಣಕಾಸು ವಂಚನೆಗಳ ಅನ್ನು ಪತ್ತೆ ಮಾಡುತ್ತದೆ. ಅಂದಹಾಗೆ ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ವಂಚನೆಗಳಿಂದಾಗಿ ಗೂಗಲ್ ಈ ಉಪಕ್ರಮವನ್ನು ಜಾಲನೆಗೆ ಮುಂದಾಗಿದೆ.

ಡಿಜಿ ಕವಾಚ್ ಎಲ್ಲಾ ಹಣಕಾಸು ವಂಚನೆಗಳ ಡೇಟಾವನ್ನು ಸಂಗ್ರಹ ಮಾಡುತ್ತದೆ ಅಲ್ಲದೇ ಕಳ್ಳತನದ ಮಾದರಿಯನ್ನು ರಚಿಸುತ್ತದೆ. ಸಿಸ್ಟಮ್ ನಂತರ ವಂಚನೆಯ ಕೆಲವು ಪ್ರಗತಿಯ ಅಂಶಗಳನ್ನು ಗುರುತಿಸುತ್ತದೆ. ಇದೇ ಮಾದರಿಯ ವಂಚನೆಯ ಪತ್ತೆಯಾದಾಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಈ ಪಾಯಿಂಟರ್‌ಗಳನ್ನು ಬಳಸಲಾಗುತ್ತದೆ ಎಂದು ಹೇಳಲಾಗಿದೆ.

ಆರ್‌ಬಿಐ ಹಾಗೂ ಭಾರತ ಸರ್ಕಾರವು ರೂಪಿಸಿರುವ ನೀತಿಗಳು ಮತ್ತು ಚೌಕಟ್ಟುಗಳನ್ನು ದೇಶದಲ್ಲಿ ಕಾನೂನುಬದ್ಧವಾಗಿ ಜಾರಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳುವ ಫಿನ್‌ಟೆಕ್ ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ಎಂಪವರ್‌ಮೆಂಟ್ ಕಂಪನಿಯು ಟೆಕ್‌ ದೈತ್ಯ ಗೂಗಲ್‌ ಸಹಭಾಗಿತ್ವ ಪಡೆದಿದೆ. ಇದು ಹೆಚ್ಚಿನ ಡೇಟಾಗೆ ಆಕ್ಸಸ್ ಹೊಂದಲು ಡಿಜಿ ಕವಾಚ್‌ಗೆ ನೆರವು ಮಾಡಿಕೊಡುತ್ತದೆ.

ಕಂಪನಿಯ ನೂತನ ಸೇವೆಯಾದ ಡಿಜಿ ಕವಾಚ್ ಸಂಭಾವ್ಯ ವಂಚನೆಯನ್ನು ಗ್ರಹಿಸಿದಾಗ ಸ್ಥಳೀಯ ಪೊಲೀಸ್‌ ಮತ್ತು ಇತರ ಅಧಿಕಾರಿಗಳ ಜೊತೆಗೆ ಸೈಬರ್ ಕ್ರೈಂ ಇಲಾಖೆಯೊಂದಿಗೆ ಸಹ ಸಹಕರಿಸುತ್ತದೆ. ಡಿಜಿ ಕವಾಚ್ ಭಾರತದಲ್ಲಿ ಅಸ್ತಿತ್ವದಲ್ಲಿರುವ ಭದ್ರತಾ ವ್ಯವಸ್ಥೆಗಳೊಂದಿಗೆ ಪೂರಕವಾಗಿ ಹಾಗೂ ಸಹಾಯಕವಾಗಿ ಕೆಲಸ ನಿರ್ವಹಿಸುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ.

ಇಂಟರ್ನೆಟ್ ಹಾಗೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಶೇಡಿ ಮನಿ ಲೇಂಡಿಂಗ್ ಆಪ್‌ಗಳ (shady money lending apps) ಬಗ್ಗೆ ಕಂಪನಿಗೆ ತಿಳಿದಿದೆ ಎಂದು ಗೂಗಲ್ ಹೇಳಿದೆ. ಗೂಗಲ್ ಕಂಪನಿಯು ಸಾಧ್ಯವಾದಷ್ಟು ಅನುಮಾನಾಸ್ಪದ ಹಣಕಾಸು ಆಪ್‌ಗಳನ್ನು ಫಿಲ್ಟರ್ ಮಾಡಲು ಪ್ರಯತ್ನ ಮಾಡುತ್ತಿದೆ. FACE ಜೊತೆಗಿನ ಸಹಯೋಗವು ಗೂಗಲ್ ಗೆ ಇಂತಹ ಆಪ್‌ಗಳನ್ನು ಮತ್ತಷ್ಟು ತ್ವರಿತವಾಗಿ ಪತ್ತೆ ಮಾಡಲು ನೆರವು ಮಾಡುತ್ತದೆ.

ಗೂಗಲ್‌ ಪೇ ಹಣಕಾಸು ಸಾಲ

ದೇಶದ ಪ್ರಮುಖ ಯುಪಿಐ ಪೇಮೆಂಟ್‌ ಆಪ್‌ಗಳ ಪೈಕಿ ಗೂಗಲ್‌ ಪೇ ಕೂಡಾ ಒಂದಾಗಿದ್ದು, ಫೋನ್‌ಪೇ ನಂತರ ಇದು ಶೇ 35% ಮಾರುಕಟ್ಟೆ ಪಾಲನ್ನು ಪಡೆದಿದೆ. ಇದು ಯುಪಿಐ ವರ್ಗಾವಣೆಗಳು, ಬಿಲ್ ಪಾವತಿಗಳು, ರೀಚಾರ್ಜ್‌ ಸೇರಿದಂತೆ ಇತರೆ ಹಲವು ಶ್ರೇಣಿಯ ಸೇವೆಗಳನ್ನು ನೀಡುತ್ತಿದೆ. GPay ಇದರ ಜೊತೆಗೆ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಸ್ಯಾಚೆಟ್ ಲೋನ್‌ಗಳ ಮೂಲಕ ಹಣವನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಗೂಗಲ್ ತಿಳಿಸಿದೆ.

ಗೂಗಲ್‌ ಕಂಪನಿಯು DMI ಫೈನಾನ್ಸ್‌ ಜೊತೆಗೆ ಪಾಲುದಾರಿಕೆ ಹೊಂದಿದ್ದು, ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಅವರ ಕ್ರೆಡಿಟ್ ಹಿಸ್ಟರಿ ಪರಿಶೀಲಿಸಿ ಅದರ ಆಧಾರದ ಮೇಲೆ ಸಣ್ಣ ಮೊತ್ತದ ಸಾಲಗಳನ್ನು ನೀಡಲಿದೆ. ಗೂಗಲ್‌ ಪೇ ಆಪ್‌ ಮೂಲಕವೇ 10,000 ರಿಂದ 1 ಲಕ್ಷದ ವರೆಗಿನ ಸಾಲಗಳನ್ನು ನೀಡುತ್ತದೆ. ಸಾಲದ ಅವಧಿಯು 7 ದಿನಗಳಿಂದ 1 ವರ್ಷದ ವರೆಗೆ ಇರಲಿದೆ.

Best Mobiles in India

English summary
Google introduces DigiKavach to prevent online financial frauds. more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+