ಶೀಘ್ರ ಮಾಹಿತಿಗಾಗಿ ಗೂಗಲ್‌ನಿಂದ 'ರಿವೀವ್ ಫ್ರಂ ದಿ ವೆಬ್‌' ಫೀಚರ್ ಪರಿಚಯ

Written By:

ಗೂಗಲ್‌ ಮೊಬೈಲ್‌ ಸರ್ಚ್ ರಿಸಲ್ಟ್‌ಗೆ ಹೊಸ ಫೀಚರ್ ಒಂದನ್ನು ಸೇರಿಸಿದೆ. ಇದರ ಹೆಸರು 'ರಿವೀವ್ ಫ್ರಂ ದಿ ವೆಬ್‌' ಎಂದು. ಈ ಹೊಸ ಫೀಚರ್ ಬಳಕೆದಾರರೇ ಜೆನರೇಟ್‌ ಮಾಡಿದ ಮಾಹಿತಿಗಳನ್ನು ಥರ್ಡ್‌ ಪಾರ್ಟಿ ವೆಬ್‌ಸೈಟ್‌ಗಳ ಮೂಲಕ ಮೊಬೈಲ್‌ ಸರ್ಚ್‌ ಇಂಜಿನ್‌ನಲ್ಲಿ ಉತ್ತರವಾಗಿ ನೀಡುತ್ತದೆ. ಕಂಪನಿಯು ಸ್ಥಳಗಳು, ಟಿವಿ ಶೋಗಳು, ರೆಸ್ಟೋರೆಂಟ್‌ಗಳು, ಸಿನಿಮಾ ಮತ್ತು ಇತರೆ ಹಲವು ವಿಷಯಗಳ ಬಗ್ಗೆ ಜನರ ವಿಮರ್ಶೆಗಳನ್ನು ಆರಿಸಿ ಮೂರು ವೆಬ್‌ಸೈಟ್‌ಗಳಲ್ಲಿ ನೀಡುತ್ತದೆ.

ಶೀಘ್ರ ಮಾಹಿತಿಗಾಗಿ ಗೂಗಲ್‌ನಿಂದ 'ರಿವೀವ್ ಫ್ರಂ ದಿ ವೆಬ್‌' ಫೀಚರ್ ಪರಿಚಯ

'ರಿವೀವ್‌ ಫ್ರಂ ದಿ ವೆಬ್‌' ಫೀಚರ್ ಸ್ಥಳೀಯ ತಿಳುವಳಿಕೆಗೆ ಅನುಗುಣವಾಗುವ ಪ್ಯಾನೆಲ್‌ಗೆ ಪರಿಚಯಿಸುತ್ತಿದ್ದು, ಇದು ವಿಮರ್ಶೆಗಳನ್ನು ನೀಡುವ ಫೀಚರ್‌ ಆಗಿದೆ. ವೆಬ್‌ಸೈಟ್‌ಗಳು ಸಂಪಾದಕೀಯ ವಿಮರ್ಶೆಗಳನ್ನು , ಉತ್ತಮ ಸ್ಥಳಗಳ ಬಗ್ಗೆ ಪ್ರಕಟಣೆ ಮಾಡಿದರೆ, ಮಾಹಿತಿಯು ಸಮೂಹವಾಗಿ ಬಳಕೆದಾರರು ರೇಟಿಂಗ್‌ ನೀಡಿದ್ದಲ್ಲಿ, ಮಾಹಿತಿಯು ಇತರರು ಸ್ಥಳದ ಬಗ್ಗೆ ಮಾಹಿತಿ ಸರ್ಚ್‌ ಮಾಡಿದಾಗ 'ಸ್ಥಳೀಯ ಮಾಹಿತಿ ಪ್ಯಾನೆಲ್‌'ನಲ್ಲಿ ರಿಸಲ್ಟ್‌ ಆಗಿ ಬರುತ್ತದೆ ಎಂದು ಗೂಗಲ್‌ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದೆ.

'ರಿವೀವ್‌ ಫ್ರಂ ದಿ ವೆಬ್‌ (Review From The Web)' ಫೀಚರ್‌ ಗೂಗಲ್‌ ಆಪ್‌ಗೆ ಅಪ್‌ಡೇಟ್‌ ಆಗಲಿದೆ. ವೆಬ್‌ಸೈಟ್‌ ಮಾಲೀಕರು ಹೊಸ ಫೀಚರ್‌ಗೆ ರೇಟಿಂಗ್‌ ಅನ್ನು ಹೇಗೆ ಸೇರಿಸುವುದು ಎಂಬ ಮಾಹಿತಿಯನ್ನು ಸಹ ನೀಡಿದೆ.

ಶೀಘ್ರ ಮಾಹಿತಿಗಾಗಿ ಗೂಗಲ್‌ನಿಂದ 'ರಿವೀವ್ ಫ್ರಂ ದಿ ವೆಬ್‌' ಫೀಚರ್ ಪರಿಚಯ

ಕಳೆದ ತಿಂಗಳು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಗೂಗಲ್‌ ಸರ್ಚ್‌ ಮೋಡ್‌ ಅನ್ನು ಪರಿಚಯಿಸಿದೆ. 'ಇನ್‌ ಆಪ್‌'ನಲ್ಲಿ ಹೊಸ ಫೀಚರ್‌ ಬಳಕೆದಾರರು ಶೀಘ್ರವಾಗಿ ಮಾಹಿತಿ ಸರ್ಚ್‌ ಮಾಡಲು ಅನುವು ಮಾಡಿಕೊಡುತ್ತದೆ. ಹೊಸ ಫೀಚರ್ ಆಕ್ಸೆಸ್‌ ಪಡೆಯಲು ಬಳಕೆದಾರರು ಗೂಗಲ್‌ ಆಪ್‌ ಓಪನ್‌ ಮಾಡಿ 'In Apps' ಟ್ಯಾಬ್‌ ಅನ್ನು ಪತ್ತೆಹಚ್ಚಿ. ವಿಶೇಷವೆಂದರೆ 'ರಿವೀವ್‌ ಫ್ರಂ ದಿ ವೆಬ್‌ (Review From The Web)' ಫೀಚರ್ ವೈಫೈ ಮತ್ತು ಸೆಲ್ಯೂಲಾರ್‌ ಡಾಟಾಗೆ ಕನೆಕ್ಟ್ ಆಗದಿದ್ದರೂ ಸಹ ಕಾರ್ಯನಿರ್ವಹಿಸುತ್ತದೆ. 'ಇನ್‌ ಆಪ್ಸ್‌' ಬಳಕೆದಾರರಿಗೆ ಬಾಲಿವುಡ್‌ ಸಂಬಂಧಿತ ಮಾಹಿತಿಯನ್ನು ಸಹ ನೀಡುತ್ತದೆ.

ಫೇಸ್‌ಬುಕ್‌ನಲ್ಲಿ ನಿರ್ವಹಿಸಬಹುದಾದ 11 ಸಿಕ್ರೇಟ್ ಚಟುವಟಿಕೆಗಳು

 

Read more about:
English summary
Google introduces ‘Review from the Web’ feature in search. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot