ಫೇಸ್‌ಬುಕ್‌ನಲ್ಲಿ ನಿರ್ವಹಿಸಬಹುದಾದ 11 ಸಿಕ್ರೇಟ್ ಚಟುವಟಿಕೆಗಳು

By Suneel
|

ಫೇಸ್‌ಬುಕ್ ಅನ್ನು ದಿನನಿತ್ಯ ಬಳಸುವವರ ಸಂಖ್ಯೆ ಹೆಚ್ಚಾಗೆ ಇದೆ. ಆದರೆ ಅವರು ಸಹ ನಿರ್ವಹಿಸಲು ಮರೆಯುವ ಹಲವು ಚಟುವಟಿಕೆಗಳು ಇವೆ. ಕಾರಣ ಅವು ದಿನನಿತ್ಯ ಬಳಕೆಗೆ ಬರುವ ಫೀಚರ್‌ಗಳಲ್ಲ. ದಿನನಿತ್ಯ ಬಳಸದಿದ್ದರೂ ಸಹ ನಾವು ತಿಳಿಸುವ ಈ ಫೀಚರ್‌ಗಳನ್ನು ತಿಳಿಯಲೇಬೇಕು. ಕಾರಣ ಇವುಗಳು ನಿಮ್ಮ ಫೇಸ್‌ಬುಕ್‌ ವೈಯಕ್ತಿಕ ಮಾಹಿತಿ ಸುರಕ್ಷತೆ ಮತ್ತು ಇತರೆ ಕೆಲವು ಫೀಚರ್‌ಗಳು ಜಸ್ಟ್ ಫನ್‌ಗಾಗಿಯೂ ಇವೆ.

ಫೇಸ್‌ಬುಕ್‌ ಬಳಕೆದಾರರೂ ಇದುವರೆಗೆ ತಿಳಿಯದ 11 ಸಿಕ್ರೇಟ್ ಫೀಚರ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಫೇಸ್‌ಬುಕ್‌ ಟೈಮ್‌ಲೈನ್‌ನಲ್ಲಿ ಹಳೆಯ ಪೋಸ್ಟ್‌ಗಳ ಡಿಲೀಟ್‌ ಹೇಗೆ?

ಸಿಕ್ರೇಟ್‌ ಇಂಬಾಕ್ಸ್

ಸಿಕ್ರೇಟ್‌ ಇಂಬಾಕ್ಸ್

ಫೇಸ್‌ಬುಕ್‌ ಬಳಕೆದಾರರಿಗೆ ಕೇವಲ ಪ್ರಮುಖ ಮೆಸೇಜ್‌ಗಳನ್ನು ಮಾತ್ರ ತಿಳಿಸುತ್ತದೆ. ಆದರೆ ಇನ್ನೂ ಹಲವು ಮೆಸೇಜ್‌ಗಳನ್ನು ನಿಮಗೆ ತಿಳಿಯದಂತೆ ಸಿಕ್ರೇಟ್‌ ಇಂಬಾಕ್ಸ್‌ನಲ್ಲಿ ಸ್ಟೋರ್‌ ಮಾಡಿರುತ್ತದೆ. ಸಿಕ್ರೇಟ್‌ ಇಂಬಾಕ್ಸ್‌ನಲ್ಲಿನ ಮೆಸೇಜ್‌ಗಳನ್ನು ನೋಡಲು Message>>Message Requests>> See Filtered Requests ಕ್ಲಿಕ್ ಮಾಡಿ.

ಡೌನ್‌ಲೋಡಿಂಗ್‌ ಆಲ್ಬಂಮ್‌ಗಳು

ಡೌನ್‌ಲೋಡಿಂಗ್‌ ಆಲ್ಬಂಮ್‌ಗಳು

ಫೇಸ್‌ಬುಕ್‌ನಲ್ಲಿನ ಆಲ್ಬಂಮ್ ಫೋಟೋಗಳನ್ನು ಡೌನ್‌ಲೋಡ್‌ ಮಾಡಲು ಹಲವು ಟೂಲ್‌ಗಳು ಇವೆ. ಆದರೆ ಪ್ರಸ್ತುತದಲ್ಲಿ ಫೇಸ್‌ಬುಕ್‌ನಿಂದಲೇ ಸರಳ ಫೀಚರ್‌ ಒಂದು ಇದ್ದು ಆಲ್ಬಂಮ್‌ ಇರುವ ಪೋಸ್ಟ್‌ನ ಕಾರ್ನರ್‌ನಲ್ಲಿ ಕ್ಲಿಕ್‌ ಮಾಡಿ 'Save Post' ಆಯ್ಕೆ ಮಾಡಿದರೆ ಆಲ್ಬಂಮ್‌ನ ಎಲ್ಲಾ ಫೋಟೋಗಳು ನಿಮ್ಮ ಹಾರ್ಡ್‌ಡ್ರೈವ್‌ನಲ್ಲಿ ಸೇವ್‌ ಆಗುತ್ತವೆ.

ಉಬರ್ ಕರೆ

ಉಬರ್ ಕರೆ

ಫೇಸ್‌ಬುಕ್‌ ಮೆಸೇಂಜರ್‌ನಲ್ಲಿ ಹಲವು ಗೌಪ್ಯ ಟ್ರಿಕ್ಸ್‌ಗಳಿದ್ದು, ಕಾರ್‌ ಇರುವ ಐಕಾನ್‌ ಕ್ಲಿಕ್ ಮಾಡುವ ಮುಖಾಂತರ ಅಥವಾ ಕಾರ್‌ ಬೋಟ್‌ಗೆ ಮೆಸೇಜ್‌ ಮಾಡುವ ಮುಖಾಂತರ ಒಂದೇ ಸ್ಟೆಪ್‌ನಿಂದ ಉಬರ್‌ ಬುಕ್ ಮಾಡಬಹುದು.

 ಗೇಮ್‌ ರಿಕ್ವೆಸ್ಟ್‌  ಬ್ಲಾಕ್ ಮಾಡುವುದು

ಗೇಮ್‌ ರಿಕ್ವೆಸ್ಟ್‌ ಬ್ಲಾಕ್ ಮಾಡುವುದು

ಹಲವರು ಬಹುಸಂಖ್ಯಾತ ಗೇಮ್‌ ರಿಕ್ವೆಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಪಡೆಯಬಹುದು. ಕಿರಿ ಕಿರಿ ಎನಿಸುವ ಗೇಮ್‌ ರಿಕ್ವೆಸ್ಟ್‌ಗಳನ್ನು ಬ್ಲಾಕ್‌ ಮಾಡಬಹುದು ಅಥವಾ ಯಾವುದೇ ರಿಕ್ವೆಸ್ಟ್‌ಗಳು ಸಹ ಬರದ ರೀತಿಯಲ್ಲಿ ಆಹ್ವಾನಗಳನ್ನೇ ಬ್ಲಾಕ್‌ ಮಾಡಬಹುದು.

ಲಾಗಿನ್ ಬಗ್ಗೆ ನೋಟಿಫಿಕೇಶನ್‌ ಪಡೆಯಿರಿ

ಲಾಗಿನ್ ಬಗ್ಗೆ ನೋಟಿಫಿಕೇಶನ್‌ ಪಡೆಯಿರಿ

ಫೇಸ್‌ಬುಕ್‌ ಸುರಕ್ಷತೆ ಸಲುವಾಗಿ ಫೇಸ್‌ಬುಕ್‌ ಲಾಗಿನ್ ಆದಾಗ ತಮ್ಮ ಇಮೇಲ್‌ಗಳಿಗೆ ಆಗಿನ್‌ ನೋಟಿಫಿಕೇಶನ್‌ ಪಡೆಯಬಹುದಾಗಿದೆ. ಇತರರು ನಿಮ್ಮ ಫೇಸ್‌ಬುಕ್ ಖಾತೆಗೆ ಇತರೆ ಬ್ರೌಸರ್‌ ಮತ್ತು ಡಿವೈಸ್‌ಗಳಲ್ಲಿ ಲಾಗಿನ್‌ ಆದಲ್ಲಿ ಇಮೇಲ್‌ಗೆ ಮೆಸೇಜ್‌ ಪಡೆಯಬಹುದಾಗಿದೆ. ಇದರಿಂದ ತಕ್ಷಣ ನಿಮ್ಮ ಫೇಸ್‌ಬುಕ್‌ ಪಾಸ್‌ವರ್ಡ್ ಬದಲಿಸಿ ಸುರಕ್ಷತೆ ಪಡೆಯಬಹುದು.

ಆಲ್ಬಂಮ್‌ ಶೇರಿಂಗ್

ಆಲ್ಬಂಮ್‌ ಶೇರಿಂಗ್

ನೀವು ಶೇರ್‌ ಮಾಡುತ್ತಿರುವ ಆಲ್ಬಂಮ್ ಕೊಡುಗೆ ನಿಮ್ಮ ಎಲ್ಲ ಸ್ನೇಹಿತರದ್ದು ಆಗಿದ್ದಲ್ಲಿ ಅವರನ್ನು ಸಹ ಆಡ್‌ ಮಾಡಿ ಶೇರ್‌ ಮಾಡಿ. ಈ ಚಟುವಟಿಕೆ ಸರಳ ಫೀಚರ್ ‌ಆಗಿದೆ.

ಆತ್ಯಾಧುನಿಕ ಚಾಟ್ ಸೆಟ್ಟಿಂಗ್ಸ್ ಬಳಸಿ

ಆತ್ಯಾಧುನಿಕ ಚಾಟ್ ಸೆಟ್ಟಿಂಗ್ಸ್ ಬಳಸಿ

ಫೇಸ್‌ಬುಕ್‌ ಬಳಸುವ ವೇಳೆಯಲ್ಲಿ ಚಾಟಿಂಗ್ ಮಾಡಲು ಬಯಸುವ ಸ್ನೇಹಿತರನ್ನು ಹೊರತುಪಡಿಸಿ, ಇತರರಿಗೆ ನೀವು ಆನ್‌ಲೈನ್‌ನಲ್ಲಿರುವುದು ತಿಳಿಯುವುದು ಬೇಡ ಎಂದಾದಲ್ಲಿ, ಮೆಸೇಂಜರ್ ಆಪ್‌ನಲ್ಲಿ ಅವರಿಗೆ ಮಾತ್ರ ಆನ್‌ಲೈನ್‌ನಲ್ಲಿರುವಂತೆ ತಿಳಿಯಲು ಆಯ್ಕೆ ಇದೆ. ಮೆಸೇಂಜರ್‌ ಆಪ್‌ನ ಮೆಸೇಜ್‌ ಪೇಜ್‌ ಕೆಳಗೆ 'Option' ಎಂಬ ಬಟನ್‌ ಇದ್ದು, ಅದರಲ್ಲಿ ವ್ಯವಸ್ಥೆಗೊಳಿಸಬಹುದು.

ನಿಮ್ಮ ಲೈಕ್‌ಗಳನ್ನು ಯಾರು ವೀಕ್ಷಿಸಿದ್ದಾರೆ ನೋಡಿ

ನಿಮ್ಮ ಲೈಕ್‌ಗಳನ್ನು ಯಾರು ವೀಕ್ಷಿಸಿದ್ದಾರೆ ನೋಡಿ

ನಿಮ್ಮ ಆಸಕ್ತಿಯ ಸಿನಿಮಾ, ಗೇಮ್‌, ನಟ, ನಟಿ, ಪ್ರವಾಸಿ ತಾಣ, ಇತರೆ ಯಾವ ಪೇಜ್‌ಗಳನ್ನು ಲೈಕ್ ಮಾಡಿದ್ದೀರಿ ಎಂದು ಇತರರು ಯಾರು ನೋಡಿದ್ದಾರೆ ಎಂದು ತಿಳಿಯಲು http://Facebook.com/{YourName}/likes ಟೈಪಿಸಿ ಕ್ಲಿಕ್ ಮಾಡಿ ಎಲ್ಲಾ ವಿಧದ ಪೇಜ್‌ಗಳಲ್ಲಿ ಪ್ರೈವೆಸಿ ನಿರ್ವಹಣೆ ನೋಡಿರಿ.

ನಿಮ್ಮ ಫೇಸ್‌ಬುಕ್ ಪ್ರೋಫೈಲ್ ಅನ್ನು ಪೇಜ್‌ ಆಗಿ ಕನ್ವರ್ಟ್‌ ಮಾಡಿ

ನಿಮ್ಮ ಫೇಸ್‌ಬುಕ್ ಪ್ರೋಫೈಲ್ ಅನ್ನು ಪೇಜ್‌ ಆಗಿ ಕನ್ವರ್ಟ್‌ ಮಾಡಿ

ನೀವು ಇತರೆ ಉದ್ಯಮಗಳನ್ನು ನೆಡೆಸುತ್ತಿದ್ದಲ್ಲಿ ನಿಮ್ಮ ಪ್ರೋಫೈಲ್‌ ಅನ್ನೇ ಫೇಸ್‌ಬುಕ್ ಪೇಜ್‌ ಆಗಿ ಕನ್ವರ್ಟ್‌ ಮಾಡಬಹುದು.

ಫೇಸ್‌ಬುಕ್‌ ಲೈವ್‌ ವೀಡಿಯೊ

ಫೇಸ್‌ಬುಕ್‌ ಲೈವ್‌ ವೀಡಿಯೊ

ಯಾವುದೇ ಪ್ರಸ್ತುತ ಘಟನೆಗಳನ್ನು, ಕಾರ್ಯಕ್ರಮಗಳನ್ನು ಫೇಸ್‌ಬುಕ್‌ನಲ್ಲಿ ಲೈವ್‌ ಆಗಿ ಸೆರೆಹಿಡಿಯಬಹುದು. ಫೇಸ್‌ಬುಕ್‌ ಲೈವ್‌ ವೀಡಿಯೊ ಫೀಚರ್‌ ಅನ್ನು ಬಿಡುಗಡೆಗೊಳಿಸಿದೆ.

ಪೂರ್ವಾರ್ಜಿತ ಸಂಪರ್ಕ ಸೇರಿಸುವಿಕೆ

ಪೂರ್ವಾರ್ಜಿತ ಸಂಪರ್ಕ ಸೇರಿಸುವಿಕೆ

ಅಂದಹಾಗೆ ಫೇಸ್‌ಬುಕ್ ಬಳಕೆದಾರರು ಜೀವ ಕಳೆದುಕೊಂಡ ನಂತರ ಫೇಸ್‌ಬುಕ್ ಅದನ್ನು ವಶಪಡಿಸಿಕೊಳ್ಳುತ್ತದೆ. ಆದರೆ ಅದೇ ಫೇಸ್‌ಬುಕ್ ಆಕ್ಸೆಸ್‌ ಅನ್ನು ಕಾನೂನು ಬದ್ಧವಾಗಿ ನಿಮ್ಮ ನೆಚ್ಚಿನವರು ಆಕ್ಸೆಸ್‌ ಪಡೆಯಲು ಪೂರ್ವಾರ್ಜಿತವಾಗಿ ಸಂಪರ್ಕ ಸೇರಿಸಬಹುದು. Settings>>Security>>Legacy Contact.

Best Mobiles in India

Read more about:
English summary
11 things you didn't know you could do on Facebook. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X