Home
ಸುದ್ದಿಜಾಲ

ಆಂಡ್ರಾಯ್ಡ್ 15 ಅಪ್‌ಡೇಟ್‌ನೊಂದಿಗೆ ಹೆಚ್ಚಾಗಲಿದೆ ಬ್ಯಾಟರಿ ಬ್ಯಾಕಪ್! ಫೋನ್‌ಗಳ ಲಿಸ್ಟ್‌ ಚೆಕ್‌ ಮಾಡಿ

ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ (Battery) ಪ್ರಮುಖ ಪಾತ್ರ ವಹಿಸುತ್ತವೆ. ಈ ನಡುವೆ ಕೆಲವು ಫೋನ್‌ಗಳು ಫಾಸ್ಟ್‌ ಚಾರ್ಜಿಂಗ್‌ ಫೀಚರ್ಸ್‌ ಅನ್ನು ಪಡೆಯುತ್ತಿದ್ದು ಕೆಲವೇ ನಿಮಿಷಗಳಲ್ಲಿ ಬ್ಯಾಟರಿಯನ್ನು ಭರ್ತಿ ಮಾಡಲಿವೆ. ಅದಾಗ್ಯೂ ಸಾಕಷ್ಟು ಜನರು ಕೆಲವೇ ಗಂಟೆಗಳಲ್ಲಿ ಈ ಬ್ಯಾಟರಿ ಖಾಲಿ ಮಾಡುತ್ತಾರೆ. ಆದರೆ, ಇನ್ಮುಂದೆ ಇದಕ್ಕೆ ಪರಿಹಾರ ಸಿಗಲಿದೆ.

ಹೌದು, ಮುಂಬರುವ ಆಂಡ್ರಾಯ್ಡ್ 15 ಅಪ್‌ಡೇಟ್‌ನೊಂದಿಗೆ (Android 15 update) ಬ್ಯಾಟರಿ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಯನ್ನು ತರಲು ಗೂಗಲ್‌ (Google) ಮುಂದಾಗಿದೆ. ಈ ಸಂಬಂಧ ಹೇಳಿಕೆಯನ್ನೂ ಸಹ ನೀಡಿದೆ. ಡೋಜ್ ಮೋಡ್ ಫೀಚರ್ಸ್‌ (Doze Mode Features) ಅನ್ನು ಪರಿಷ್ಕರಿಸುವ ಮೂಲಕ, ಹೊಂದಾಣಿಕೆಯ ಡಿವೈಸ್‌ಗಳು ಸ್ಟ್ಯಾಂಡ್‌ಬೈ ಸಮಯದಲ್ಲಿ ಮೂರು ಗಂಟೆಗಳವರೆಗೆ ವಿಸ್ತರಣೆಯನ್ನು ನೀಡಲಿವೆ ಎನ್ನಲಾಗಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳು ಈ ಓಎಸ್ ಅನ್ನು ಪಡೆಯಲಿವೆ?, ಬ್ಯಾಟರಿ ಬ್ಯಾಕಪ್‌ ಹೆಚ್ಚಿಗೆ ಮಾಡಲು ಗೂಗಲ್‌ ಏನೆಲ್ಲಾ ಮಾಡಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಆಂಡ್ರಾಯ್ಡ್ 15 ಅಪ್‌ಡೇಟ್‌ನೊಂದಿಗೆ ಹೆಚ್ಚಾಗಲಿದೆ ಬ್ಯಾಟರಿ ಬ್ಯಾಕಪ್!

ಆಂಡ್ರಾಯ್ಡ್ 15 ಅಪ್‌ಡೇಟ್‌: ಫೋನ್ ಬಳಕೆಯಾಗದೆ ಇರುವಾಗ ಸಾಮಾನ್ಯವಾಗಿ ಬ್ಯಾಟರಿ ಸಹ ಕೆಲಸ ಮಾಡುತ್ತಿರುತ್ತದೆ. ಅಂದರೆ ಹಿನ್ನೆಲೆಯಲ್ಲಿ ಆಪ್‌ಗಳು ಕೆಲಸ ಮಾಡುವುದರಿಂದ ಬ್ಯಾಟರಿ ಖಾಲಿಯಾಗುತ್ತಿರುತ್ತದೆ. ಆದರೆ, ಡೋಜ್ ಮೋಡ್ ನಿಷ್ಕ್ರಿಯ ಆಪ್‌ಗಳು ಮತ್ತು ಪ್ರಕ್ರಿಯೆಗಳನ್ನು ಆಟೋಮ್ಯಾಟಿಕ್‌ ಆಗಿ ಆಪ್ ಮಾಡುತ್ತದೆ ಅಥವಾ ಕೆಲಸ ಮಾಡದಂತೆ ತಡೆಯುತ್ತದೆ. ಈ ಅಪ್‌ಡೇಟ್‌ನ ಗಮನವು ಡೋಜ್ ಮೋಡ್‌ನ ಸಕ್ರಿಯಗೊಳಿಸುವಿಕೆಯನ್ನು ತ್ವರಿತಗೊಳಿಸುವುದಾಗಿದೆ.

ಗೂಗಲ್‌ ನಡೆಸಿದ ಆಂತರಿಕ ಮೌಲ್ಯಮಾಪನಗಳಲ್ಲಿ, ಆಂಡ್ರಾಯ್ಡ್‌ 15 ಡಿವೈಸ್‌ಗಳು ಆಂಡ್ರಾಯ್ಡ್‌ 14 ನಲ್ಲಿ ಚಾಲನೆಯಲ್ಲಿರುವ ಸಾಧನಗಳಿಗಿಂತ 50 ಪ್ರತಿಶತದಷ್ಟು ವೇಗವಾಗಿ ಡೋಜ್ ಮೋಡ್‌ಗೆ ಪ್ರವೇಶಿಸಲು ಯೋಜಿಸಲಾಗಿದೆ. ಡೋಜ್ ಮೋಡ್‌ನ ವೇಗವರ್ಧಿತ ಸಕ್ರಿಯಗೊಳಿಸುವಿಕೆಯು ಬ್ಯಾಟರಿ ಬಾಳಿಕೆಯ ಹೆಚ್ಚಳಕ್ಕೆ ನೇರವಾಗಿ ಸಂಬಂಧಿಸಿದೆ. ನಿರ್ದಿಷ್ಟ ಡಿವೈಸ್‌ಗಳಲ್ಲಿ ಬಳಕೆದಾರರು ಹೆಚ್ಚುವರಿ ಮೂರು ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ಪಡೆಯಬಹುದಾಗಿದೆ.

ಆಂಡ್ರಾಯ್ಡ್ 15 ಅಪ್‌ಡೇಟ್‌ನೊಂದಿಗೆ ಹೆಚ್ಚಾಗಲಿದೆ ಬ್ಯಾಟರಿ ಬ್ಯಾಕಪ್!

ಧರಿಸಬಹುದಾದ ಡಿವೈಸ್‌ಗಳಿಗೂ ಬ್ಯಾಟರಿ ಆಪ್ಟಿಮೈಸೇಶನ್ ಅನ್ನು ವಿಸ್ತರಿಸಲಾಗುತ್ತಿದೆ: ಇನ್ನು ಬ್ಯಾಟರಿ ಆಪ್ಟಿಮೈಸೇಶನ್‌ನಲ್ಲಿ ಗೂಗಲ್‌ನ ಗಮನವು ಸ್ಮಾರ್ಟ್‌ಫೋನ್‌ಗಳನ್ನು ಮೀರಿ ವಿಸ್ತರಿಸಿದೆ. ಅಂದರೆ ಸ್ಮಾರ್ಟ್‌ವಾಚ್ (Smartwatch) ಪ್ಲಾಟ್‌ಫಾರ್ಮ್ ವೇರ್ ಓಎಸ್‌ 6 ಗಾಗಿ ಇದೇ ರೀತಿಯ ಸುಧಾರಣೆಗಳ ಬಗ್ಗೆ ಸುಳಿವು ನೀಡಿದೆ. ಡೋಜ್ ಮೋಡ್ ಕಾರ್ಯವು ಸ್ಮಾರ್ಟ್ ವಾಚ್‌ಗಳಿಗೆ ವರ್ಧಿತ ಬ್ಯಾಟರಿ ಬಾಳಿಕೆಗೆ ಕಾರಣವಾಗಬಹುದು.

ಈ ನಡುವೆ ಆಂಡ್ರಾಯ್ಡ್ 15 ಬೀಟಾ 2 ರೋಲ್‌ಔಟ್ ನಡೆಯುತ್ತಿದ್ದು, ವರ್ಧಿತ ಗೌಪ್ಯತೆ ಮತ್ತು ಸುರಕ್ಷತೆ ಮತ್ತು ಸುಧಾರಿತ ಕಾರ್ಯಕ್ಷಮತೆ ಸೇರಿದಂತೆ ಹೊಸ ಫೀಚರ್ಸ್‌ಗಳ ಶ್ರೇಣಿಯನ್ನು ಪರಿಚಯಿಸುತ್ತಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳು ಈ ಬೀಟಾವನ್ನು ಸ್ವೀಕಾರ ಮಾಡಲು ಅರ್ಹ ಅನ್ನೋ ಲಿಸ್ಟ್‌ ಇಲ್ಲಿದೆ ನೋಡಿ.

ಗೂಗಲ್‌ ಪಿಕ್ಸೆಲ್ 6 ಮತ್ತು ನಂತರದ ಫೋನ್‌ಗಳು
ಒನ್‌ಪ್ಲಸ್‌ 12
ಒನ್‌ಪ್ಲಸ್‌ ಓಪನ್
ವಿವೋ X100
ಐಕ್ಯೂ 12
ನಥಿಂಗ್ ಫೋನ್ 2(a)
ಲೆನೊವೊ ಟ್ಯಾಬ್ ಎಕ್ಸ್‌ಸ್ಟ್ರೀಮ್‌
ನಥಿಂಗ್ ಫೋನ್ (2a)
ಒಪ್ಪೋ ಫೈಂಡ್‌ N3
ರಿಯಲ್‌ಮಿ 12 ಪ್ರೊ+ 5G
ಟೆಕ್ನೋ ಕ್ಯಾಮನ್ 30 ಪ್ರೊ 5G
ಶಿಯೋಮಿ 14
ಶಿಯೋಮಿ 13T ಪ್ರೊ
ಶಿಯೋಮಿ ಪ್ಯಾಡ್‌ 6S ಪ್ರೊ 12.4

ಆಂಡ್ರಾಯ್ಡ್ 15 ಅಪ್‌ಡೇಟ್‌ನೊಂದಿಗೆ ಹೆಚ್ಚಾಗಲಿದೆ ಬ್ಯಾಟರಿ ಬ್ಯಾಕಪ್!

ಹೊಸ ಓಎಸ್‌ನಲ್ಲಿ ಇತರೆ ಸೌಲಭ್ಯಗಳು: ಬ್ಯಾಟರಿ ಬೂಸ್ಟ್ ಜೊತೆಗೆ, ಆಂಡ್ರಾಯ್ಡ್ 15 ಬೀಟಾ 2 ಕೆಲವು ನಿಫ್ಟಿ ಹೊಸ ಫೀಚರ್ಸ್‌ ಅನ್ನು ಪ್ಯಾಕ್ ಮಾಡುತ್ತದೆ. ಮರುವಿನ್ಯಾಸಗೊಳಿಸಲಾದ ವಾಲ್ಯೂಮ್ ಪ್ಯಾನೆಲ್, ಸೂಕ್ಷ್ಮ ಆಪ್‌ಗಳನ್ನು ಲಾಕ್ ಮಾಡಲು ಖಾಸಗಿ ಪ್ಲೇಸ್‌ ಆಯ್ಕೆ, ದೊಡ್ಡ ಡಿಸ್‌ಪ್ಲೇ ಡಿವೈಸ್‌ಗಳಿಗೆ ವರ್ಧಿತ ಬಹುಕಾರ್ಯಕ ಸಾಮರ್ಥ್ಯಗಳು ಸಹ ಸೇರಿವೆ. ಜೊತೆಗೆ, ಪ್ರೆಡಿಕ್ಟಿವ್ ಬ್ಯಾಕ್ ಫೀಚರ್ಸ್‌, ಬ್ಯಾಕ್ ಬಟನ್ ಅನ್ನು ಸಹ ಈ ನವೀಕರಣದಲ್ಲಿ ಕಾಣಬಹುದಾಗಿದೆ.

Best Mobiles in India

English summary
With the upcoming Android 15 update Google is planning to bring a significant improvement in battery performance. A statement has also been issued in this regard.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+