Home
ಸುದ್ದಿಜಾಲ

ಶಾಕಿಂಗ್‌... ಈ ಜಿಮೇಲ್‌ ಖಾತೆಗಳನ್ನು ಡಿಲೀಟ್‌ ಮಾಡಲು ಮುಂದಾದ ಗೂಗಲ್‌!

ಟೆಕ್‌ ದೈತ್ಯ ಗೂಗಲ್‌ ಈ ಹಿಂದೆ ತನ್ನೆಲ್ಲಾ ಬಳೆಕೆದಾರರಿಗೆ ಎಚ್ಚರಿಕೆಯೊಂದನ್ನು ನೀಡುವ ಮೂಲಕ ಈಗಲೇ ನಿಮ್ಮ ಖಾತೆಗಳಲ್ಲಿ ಇರುವ ಎಲ್ಲಾ ದಾಖಲೆಗಳನ್ನು ಸೇವ್‌ ಮಾಡಿ ಇಟ್ಟುಕೊಳ್ಳಿ. ಕೆಲವೇ ದಿನಗಳಲ್ಲಿ ಅವುಗಳನ್ನು ಗೂಗಲ್‌ ಅಳಿಸಿ ಹಾಕುತ್ತೇವೆ ಎಂದು ಮಾಹಿತಿ ನೀಡಿತ್ತು. ಈಗ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಹೌದು, ಕೆಲವು ಖಾತೆಗಳನ್ನು ಗೂಗಲ್‌ ಅಳಿಸಿಹಾಕುವ ಕೆಲಸಕ್ಕೆ ಮುಂದಾಗಿದೆ. ಅಂದರೆ ಗೂಗಲ್‌ ತನ್ನ ನಿಷ್ಕ್ರಿಯ ಖಾತೆಗಳ ನೀತಿಯನ್ನು ನವೀಕರಿಸಿದ್ದು, ಇದರ ಭಾಗವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ಅಳಿಸಲು ಮುಂದಾಗಿದೆ. ಹಾಗಿದ್ರೆ, ಗೂಗಲ್‌ ಯಾಕೆ ಹೀಗೆ ಮಾಡುತ್ತಿದೆ?, ಗೂಗಲ್‌ನ ಹೊಸ ನೀತಿಯಲ್ಲಿ ಏನೇನಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಶಾಕಿಂಗ್‌... ಈ ಜಿಮೇಲ್‌ ಖಾತೆಗಳನ್ನು ಡಿಲೀಟ್‌ ಮಾಡಲು ಮುಂದಾದ ಗೂಗಲ್‌!

ನಿಷ್ಕ್ರಿಯ ಖಾತೆಗಳನ್ನು ಗೂಗಲ್ ಯಾಕೆ ಡಿಲೀಟ್‌ ಮಾಡುತ್ತಿದೆ?: ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ನಿಷ್ಕ್ರಿಯ ಖಾತೆಗಳನ್ನು ಅಳಿಸಲಾಗುತ್ತಿದೆ ಎಂದು ಗೂಗಲ್ ತಿಳಿಸಿದೆ. ಅಂದರೆ ಈ ಖಾತೆಗಳು ಹೈಜಾಕ್ ಆಗುವ ಬಾಟ್‌ಗಳಾಗಿ ಅಥವಾ ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸುವ ಅಪಾಯ ಇರುವುದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಉಲ್ಲೇಖಿಸಿದೆ. ಅದರಲ್ಲೂ ಇವು ದುರ್ಬಲವಾಗಿರುತ್ತವೆ. ಕಳ್ಳತನದಿಂದ ಯಾವುದಕ್ಕಾದರೂ ಇವನ್ನು ಬಳಸಬಹುದು ಎಂದು ಗೂಗಲ್ ಬ್ಲಾಗ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.

ಗೂಗಲ್‌ ಮೊದಲ ಬಾರಿಗೆ 2020ರಲ್ಲಿ ಇದೇ ರೀತಿಯ ನೀತಿಯನ್ನು ಜಾರಿ ಮಾಡಿತ್ತು. ಆ ವೇಳೆ ನಿಷ್ಕ್ರಿಯ ಖಾತೆಗಳಲ್ಲಿ ಸಂಗ್ರಹವಾಗಿರುವ ಕಂಟೆಂಟ್‌ ಅನ್ನು ಮಾತ್ರ ತೆಗೆದುಹಾಕುವ ಕೆಲಸ ಮಾಡಿತ್ತು. ಆದರೆ, ಈಗ ಹೊಸದಾಗಿ ಘೋಷಣೆಯಾದ ನೀತಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ನಿಷ್ಕ್ರಿಯ ಖಾತೆಗಳನ್ನೆಲ್ಲಾ ಗೂಗಲ್‌ ಡಿಲೀಟ್ ಮಾಡಲು ಮಂದಾಗಿದೆ. ಈ ನವೀಕರಿಸಿದ ನೀತಿಯು ತಕ್ಷಣವೇ ಜಾರಿಗೆ ಬಂದಿದೆಯಾದರೂ ಡಿಸೆಂಬರ್ 1, 2023 ರ ನಂತರ ಖಾತೆಗಳನ್ನು ಅಳಿಸುವ ಕೆಲಸ ಆರಂಭ ಆಗಲಿದೆ ಎಂದು ತಿಳಿದುಬಂದಿದೆ.

ಗೂಗಲ್‌ ಖಾತೆಯಲ್ಲಿ ಏನೇನನ್ನೆಲ್ಲಾ ಅಳಿಸಿ ಹಾಕಲಾಗುತ್ತದೆ?: ಗೂಗಲ್‌ ಮೊದಲೇ ತಿಳಿಸಿದಂತೆ ದೀರ್ಘ ಕಾಲದವರೆಗೆ ಬಳಕೆ ಮಾಡಿರದ ಗೂಗಲ್‌ ಖಾತೆ ಮತ್ತು ಅದರ ಎಲ್ಲಾ ವಿಷಯಗಳನ್ನು ಅಳಿಸುತ್ತದೆ. ಅಂದರೆ ಜಿಮೇಲ್‌, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್ ಮತ್ತು ಗೂಗಲ್‌ ಫೋಟೋಗಳನ್ನು ಅಳಿಸಿಹಾಕಲಾಗುತ್ತದೆ. ಇದರಿಂದಾಗಿಯೇ ಗೂಗಲ್‌ ಪದೇ ಪದೇ ಎಚ್ಚರಿಕೆ ನೀಡುತ್ತಾ ಬರುತ್ತಿದೆ.

ಡೇಂಜರ್‌ ಝೋನ್‌ನಲ್ಲಿರುವ ಖಾತೆಗಳಿವು : ಇನ್ನು ಹೊಸ ನಿಷ್ಕ್ರಿಯ ಖಾತೆಗಳ ನೀತಿಯು ವೈಯಕ್ತಿಕ ಗೂಗಲ್‌ ಖಾತೆಗಳಿಗೆ ಮಾತ್ರ ಅನ್ವಯ ಆಗುತ್ತದೆ. ಬದಲಾಗಿ ಶಾಲೆಗಳು ಮತ್ತು ವ್ಯವಹಾರಗಳಂತಹ ಸಂಸ್ಥೆಗಳ ಖಾತೆಗಳ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಅಷ್ಟು ಮಾತ್ರವಲ್ಲದೆ ವೈಯಕ್ತಿಕ ಗೂಗಲ್‌ ಖಾತೆಗಳನ್ನು ಅಳಿಸಿಹಾಕುವ ಮೊದಲು ಆ ಮೇಲ್‌ಗೆ ಒಂದು ಸಂದೇಶ ಸಹ ಕಳುಹಿಸಲಾಗುತ್ತದೆ.

ಅಂದರೆ ಖಾತೆಯನ್ನು ಅಳಿಸಿಹಾಕುವ ಮುನ್ನ ಇಮೇಲ್ ಅಧಿಸೂಚನೆಗಳನ್ನು ಸೆಂಡ್‌ ಮಾಡಲಿದ್ದು, ಇದರೊಂದಿಗೆ ಈ ಮೇಲ್‌ನ ಮರುಪ್ರಾಪ್ತಿ ಇಮೇಲ್‌ಗೂ ಸಹ ಈ ಬಗ್ಗೆ ಅಧಿಸೂಚನೆಗಳನ್ನು ಕಳುಹಿಸಲಾಗುತ್ತದೆ. ಅದರಂತೆ ಅಪಾಯದಲ್ಲಿರುವ ಬಳಕೆದಾರರಿಗೆ ತಿಳಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಈ ವಾರ ಬಳಕೆದಾರರು ಖಾತೆ ಅಳಿಸುವಿಕೆಯ ಬಗ್ಗೆ ಮೇಲ್‌ಗಳನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಶಾಕಿಂಗ್‌... ಈ ಜಿಮೇಲ್‌ ಖಾತೆಗಳನ್ನು ಡಿಲೀಟ್‌ ಮಾಡಲು ಮುಂದಾದ ಗೂಗಲ್‌!

ಯಾವೆಲ್ಲಾ ಗೂಗಲ್‌ ಖಾತೆಗಳು ಸೇಫ್‌: ಇನ್ನು ಕಾಲಕಾಲಕ್ಕೆ ಬಳಕೆ ಆಗುತ್ತಿರುವ ಖಾತೆಗಳು ಸೇಫ್‌ ಆಗಿರಲಿವೆ. ಅಂದರೆ ಇಮೇಲ್ ಓದುವುದು ಅಥವಾ ಕಳುಹಿಸುವುದು, ಗೂಗಲ್‌‌ ಡ್ರೈವ್ ಬಳಸುವುದು, ಯೂಟ್ಯೂಬ್‌ ವಿಡಿಯೋಗಳನ್ನು ವೀಕ್ಷಿಸುವುದು, ಗೂಗಲ್‌‌ ಪ್ಲೇ ಸ್ಟೋರ್‌ನಲ್ಲಿ ಆಪ್‌ ಅನ್ನು ಡೌನ್‌ಲೋಡ್ ಮಾಡುವುದು, ಗೂಗಲ್‌ ಸರ್ಚ್‌ಗೆ ಬಳಕೆ ಮಾಡುವುದು ಸೇರಿದಂತೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅಥವಾ ಸೇವೆಗೆ ಸೈನ್ ಇನ್ ಮಾಡಲು ಬಳಕೆ ಆಗಿರುವ ಎಲ್ಲಾ ಖಾತೆಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.

Best Mobiles in India

English summary
Google has updated its inactive accounts policy, as part of which it will delete accounts that have been inactive for two or more years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+