Google: ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿದ ಗೂಗಲ್! ಪ್ರಜೆಗಳನ್ನು ವಂಚಿಸಲು ಸಾಧ್ಯವೇ ಇಲ್ಲ
ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ (Lok Sabha Elections) ಘೋಷಣೆ ಆಗಲಿದೆ. ಈ ನಡುವೆ ಚುನಾವಣೆಯ ಸಮಯದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬೆಂಬಲಿಸುವ ಪ್ಲ್ಯಾನ್ ಅನ್ನು ಗೂಗಲ್ ಘೋಷಣೆ ಮಾಡಿದೆ.
ಹೌದು, ಭಾರತದಲ್ಲಿ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ?, ಯಾರಿಗೆ ಒಲವು ಇದೆ ಎಂಬಿತ್ಯಾದಿ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇತರೆಡೆ ತೀವ್ರವಾಗಿದೆ. ಅದರಂತೆ ಲಕ್ಷಾಂತರ ಭಾರತೀಯ ಮತದಾರರು ತಮ್ಮ ಮತ ಚಲಾಯಿಸಲು ರೆಡಿಯಾಗುತ್ತಿದ್ದು, ಇದೀಗ ಈ ಚುನಾವಣೆ ವಿಷಯಕ್ಕೆ ಸಂಬಂದಿಸಿದಂತೆ ಗೂಗಲ್ ಹಾಗೂ ಚುನಾವಣಾ ಆಯೋಗ (Google and Election Commission) ಒಟ್ಟಾಗಿ ಕೆಲಸ ಮಾಡಲಿವೆ. ಹಾಗಿದ್ರೆ, ಏನಿದು ಹೊಸ ವಿಷಯ? ಬನ್ನಿ ತಿಳಿಯೋಣ.

ಚುನಾವಣಾ ಆಯೋಗದೊಂದಿಗೆ ಕೈಜೋಡಿಸಿದ ಗೂಗಲ್: ಅಗತ್ಯ ಚುನಾವಣಾ ಸಂಬಂಧಿತ ಮಾಹಿತಿಯೊಂದಿಗೆ ಮತದಾರರನ್ನು ಸಂಪರ್ಕಿಸಲು, ಗೂಗಲ್ ತನ್ನ ಸರ್ಚ್ ಮತ್ತು ಯೂಟ್ಯೂಬ್ ಫೀಚರ್ಸ್ (Search and YouTube features) ಅನ್ನು ಹೆಚ್ಚಿಗೆ ಮಾಡಲು ಮುಂದಾಗಿದೆ. ಅಂದರೆ ಮತದಾರರ ನೋಂದಣಿ, ಮತದಾನ ಮಾರ್ಗಸೂಚಿಗಳು ಮತ್ತು ಅಭ್ಯರ್ಥಿಗಳ ಪ್ರೊಫೈಲ್‌ಗಳಂತಹ ಪ್ರಮುಖ ವಿವರಗಳಿಗೆ ಪ್ರವೇಶವನ್ನು ನೀಡುವ ಗುರಿಯನ್ನು ಗೂಗಲ್ ಹೊಂದಿದೆ.
ಇನ್ನು ಈ ವಿಶೇಷ ಸೌಲಭ್ಯ ನಿಮಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯ ಇರಲಿದೆ. ಅಲ್ಲದೆ ಯುಟ್ಯೂಬ್ ಅಧಿಕೃತ ಸುದ್ದಿ ಮೂಲಗಳನ್ನು ಹೈಲೈಟ್ ಮಾಡುವ ಕೆಲಸ ಮಾಡಲಿದ್ದು, ಮತ್ತು ತಪ್ಪು ಮಾಹಿತಿ ಇರುವ ಕಂಟೆಂಟ್ ಬಗ್ಗೆ ನಿಮಗೆ ತಿಳಿಸುವ ಕೆಲಸ ಮಾಡುತ್ತದೆ.
ಹಾಗೆಯೇ ತನ್ನ ಪ್ಲಾಟ್‌ಫಾರ್ಮ್‌ಗಳು ದುರುಪಯೋಗ ಆಗದಂತೆ ತಡೆಯಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಚುನಾವಣಾ ಪ್ರಕ್ರಿಯೆಯನ್ನು ದುರ್ಬಲಗೊಳಿಸಬಹುದಾದ ಸುಳ್ಳು ಮಾಹಿತಿ ಹರಡುವಿಕೆಯನ್ನು ತಡೆಗಟ್ಟಲು ನೀತಿಗಳನ್ನು ಜಾರಿಗೊಳಿಸುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಮಾನವ ಪರಿಣಿತಿಯ ಜೊತೆಗೆ ಈ ವೇಳೆ ಎಐ ಅನ್ನೂ ಸಹ ಬಳಕೆ ಮಾಡಲಾಗುತ್ತದಂತೆ. ಇದರಿಂದ ಬಳಕೆದಾರರಿಗೆ ಸುರಕ್ಷಿತ ಡಿಜಿಟಲ್ ಅನುಭವವನ್ನು ಖಾತ್ರಿಪಡಿಸುವ ಮೂಲಕ ನೀತಿ ಉಲ್ಲಂಘನೆಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಕಡಿಮೆ ಮಾಡಲು ಗೂಗಲ್ ಮುಂದಾಗಿದೆ.
ಅದರಲ್ಲೂ ಚುನಾವಣೆ ಜಾಹೀರಾತುಗಳ ಪಾರದರ್ಶಕತೆಗೆ ಹೆಚ್ಚಿನ ಮಹತ್ವ ನೀಡಲಿದೆಯಂತೆ. ಈ ವೇಳೆ ಕಟ್ಟುನಿಟ್ಟಾದ ಪರಿಶೀಲನಾ ಪ್ರಕ್ರಿಯೆಗಳು ಮತ್ತು ಬಳಕೆದಾರರ ನಂಬಿಕೆಯನ್ನು ಕಾಪಾಡಿಕೊಳ್ಳಲು ಗೂಗಲ್ ಎಲ್ಲಾ ತಯಾರಿ ನಡೆಸಿದೆ. ಈ ಒಪ್ಪಂದದ ಭಾಗವಾಗಿ ಗೂಗಲ್ ಮತ್ತೊಂದು ವಿಷಯದ ಮೇಲೆ ಕೆಲಸ ಮಾಡಲಿದೆ. ಅದುವೇ ಎಐ ಕಂಟೆಂಟ್.
ಎಐ ರೂಪಿಸಿದ ಕಂಟೆಂಟ್‌ನಿಂದ ಎದುರಾಗುವ ಸವಾಲುಗಳನ್ನು ಗೂಗಲ್ ಪರಿಹರಿಸುತ್ತದೆ. ಹೊಸ ಟೂಲ್ಸ್ ಮತ್ತು ನೀತಿಗಳೊಂದಿಗೆ ಕಂಟೆಂಟ್‌ನ ಮೂಲದ ಬಗ್ಗೆ ಸ್ಪಷ್ಟತೆಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ವಿಭಾಗದಲ್ಲಿಯೂ ಚುನಾವಣಾ ಸಂಬಂಧಿತ ಜಾಹೀರಾತುಗಳು ಮತ್ತು ಯೂಟ್ಯೂಬ್ ವಿಡಿಯೋ ವಿಭಾಗದಲ್ಲಿ ಕೆಲಸ ಮಾಡಲಿದೆ.
ಇದಿಷ್ಟೇ ಅಲ್ಲದೆ ಇನ್ಮುಂದೆ ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾರು ಚುನಾವಣಾ ಸಂಬಂಧಿತ ಜಾಹೀರಾತನ್ನು ಪ್ರದರ್ಶನ ಮಾಡಬಹುದು ಎಂಬುದರ ಬಗ್ಗೆ ಕಟ್ಟುನಿಟ್ಟಾದ ನೀತಿಗಳು ಮತ್ತು ನಿರ್ಬಂಧಗಳನ್ನು ಹೇರಲಿದೆ. ಅಂದರೆ ಚುನಾವಣಾ ಜಾಹೀರಾತುಗಳನ್ನು ಪ್ರಸಾರ ಮಾಡಲು ಬಯಸುವ ಎಲ್ಲಾ ಜಾಹೀರಾತುದಾರರು ಗುರುತಿನ ಪರಿಶೀಲನೆ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ.

ಇವರು ಅಗತ್ಯವಿರುವಲ್ಲಿ ಪ್ರತಿ ಚುನಾವಣಾ ಜಾಹೀರಾತಿಗಾಗಿ ECI ನೀಡಿದ ಪೂರ್ವ ಅನುಮತಿ ಪ್ರಮಾಣಪತ್ರವನ್ನು ಒದಗಿಸಬೇಕಿದೆ. ಜೊತೆಗೆ ಆಯಾ ಜಾಹೀರಾತಿಗೆ ಯಾರು ಪಾವತಿ ಮಾಡಿದ್ದಾರೆ ಅನ್ನೋದನ್ನು ಸ್ಪಷ್ಟವಾಗಿ ತಿಳಿಸಬೇಕಿದೆ. ಉಳಿದಂತೆ ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿನ ಕ್ರಿಯೇಟರ್ಸ್ ವಾಸ್ತವಿಕ ಬದಲಾದ ಅಥವಾ ಸಿಂಥೆಟಿಕ್ ಕಂಟೆಂಟ್ ಅನ್ನು ಲೇಬಲ್ ಮಾಡುವ ಅಗತ್ಯವಿದೆ.
ಹೊಸ ಜಾಹೀರಾತು ನೀತಿಗಳು ಡೀಪ್‌ಫೇಕ್‌ಗಳಂತ ದಾರಿತಪ್ಪಿಸಲು ಕುಶಲತೆಯ ಬಳಕೆಯನ್ನು ನಿಷೇಧಿಸುತ್ತವೆ. ಇದರೊಂದಿಗೆ ಗೂಗಲ್ ಜೆಮಿನಿಗೆ ತಾನು ಪ್ರತಿಕ್ರಿಯಿಸುವ ಚುನಾವಣಾ-ಸಂಬಂಧಿತ ಪ್ರಶ್ನೆಗಳ ಪ್ರಕಾರಗಳ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸಲಿದೆ ಮತ್ತು ಉತ್ತಮ ಗುಣಮಟ್ಟದ ಮಾಹಿತಿಯನ್ನು ನೀಡಲಿದೆ.


Click it and Unblock the Notifications








