Home
ಸುದ್ದಿಜಾಲ

ನೀವು ಖರೀದಿಸುವ ಪ್ರತಿ ವಸ್ತುವನ್ನು 'ಜಿ-ಮೇಲ್' ಟ್ರಾಕ್‌ ಮಾಡಲಿದೆ!

ಪ್ರಸ್ತುತ ಆನ್‌ಲೈನ್‌ ಶಾಪಿಂಗ್ ಮಾಡುವುದು ಹೆಚ್ಚಾಗಿದ್ದು, ಹಾಗೆಯೇ ಆಫ್‌ಲೈನ್‌ ಮಾರುಕಟ್ಟೆಯು ತನ್ನ ಕಳೆಯನ್ನು ಕಳೆದುಕೊಂಡಿಲ್ಲ. ಈ ಮಾರುಕಟ್ಟೆಗಳಲ್ಲಿ ನೀವು ಹಲವು ಉತ್ಪನ್ನಗಳನ್ನು ಖರೀದಿಸುತ್ತಿರಿ. ಆದರೆ ಎಷ್ಟೋ ಸಲ ಎಲ್ಲಿ ಖರೀದಿಸಿದಿರಿ, ಯಾವಾಗ ಖರೀದಿಸಿದ್ದು ಎಂಬುದನ್ನು ಮರೆತು ಹೋಗಿರುತ್ತಿರಿ. ಆದರೆ ಟೆಕ್‌ ದಿಗ್ಗಜ್ ಗೂಗಲ್ ನೀವು ಖರೀದಿಸುವ ಪ್ರತಿಯೊಂದು ಉತ್ಪನ್ನಗಳ ಕಂಪ್ಲಿಟ್‌ ರೆಕಾರ್ಡ್‌ ಮಾಡಿಟ್ಟುಕೊಳ್ಳಲಿದೆ.

ನೀವು ಖರೀದಿಸುವ ಪ್ರತಿ ವಸ್ತುವನ್ನು 'ಜಿ-ಮೇಲ್' ಟ್ರಾಕ್‌ ಮಾಡಲಿದೆ!

ಹೌದು, ಗೂಗಲ್ ಸಂಸ್ಥೆಯು ಹೊಸದೊಂದು ವೆಬ್‌ ಟೂಲ್‌ ಗ್ರಾಹಕರು ಖರೀದಿಸುವ ಪ್ರತಿವಸ್ತುವಿನ ಮಾಹಿತಿಯನ್ನು ದಾಖಲು ಮಾಡಿಕೊಳ್ಳಲಿದೆ. ಗ್ರಾಹಕರು ಆನ್‌ಲೈನ್‌ನಲ್ಲಿಯಾದರೂ ಖರೀದಿಸಲಿ ಅಥವಾ ಆಫ್‌ಲೈನ್‌, ರಿಟೈಲ್‌ ಶಾಪ್‌ಗಳಲ್ಲಿಯಾದರೂ ಖರೀದಿಸಲಿ ಒಟ್ಟಾರೇ ಗೂಗಲ್ ಪ್ರತಿ ಖರೀದಿಯನ್ನು ಟ್ರಾಕ್‌ ಮಾಡಲಿದೆ. ಮಾಹಿತಿಗಳನ್ನು ಸುರಕ್ಷತುವಾಗಿ ಇರಿಸಲಿದೆ ಎನ್ನಲಾಗಿದೆ.

ನೀವು ಖರೀದಿಸುವ ಪ್ರತಿ ವಸ್ತುವನ್ನು 'ಜಿ-ಮೇಲ್' ಟ್ರಾಕ್‌ ಮಾಡಲಿದೆ!

ಗೂಗಲ್‌ನ ಈ ಆಯ್ಕೆಯು ಜಿಮೇಲ್‌ ಅಕೌಂಟ್‌ ಲಿಂಕ್ ಆಗಿರುವ ಗ್ರಾಹಕರಿಗೆ ಬಳಕೆಯಾಗಲಿದ್ದು, ಗ್ರಾಹಕರು ಯಾವಾಗ ಅಗತ್ಯವಿರುತ್ತದೆ ಆವಾಗ ಖರೀದಿಯ ಕುರಿತು ಮಾಹಿತಿಯನ್ನು ಸರಳವಾಗಿ ನೋಡಬಹುದಾಗಿದೆ. ಖರೀದಿಸಿದ ಉತ್ಪನ್ನಗಳ ಟ್ರಾಕ್‌ ರೆಕಾರ್ಡ್‌ ಅನ್ನು ಗ್ರಾಹಕರು ವೈಯಕ್ತಿಕವಾಗಿ ವೀಕ್ಷಿಸಬಹುದಾದ ಆಯ್ಕೆಯನ್ನು ಇದ್ದು, ಗ್ರಾಹಕರ ಖರೀದಿಸಿದ ಉತ್ಪನ್ನಗಳ ಮಾಹಿತಿ ಭದ್ರತೆ ನೀಡುವುದಾಗಿದೆ.

ನೀವು ಖರೀದಿಸುವ ಪ್ರತಿ ವಸ್ತುವನ್ನು 'ಜಿ-ಮೇಲ್' ಟ್ರಾಕ್‌ ಮಾಡಲಿದೆ!

ಸದ್ಯ ಬಹುತೇಕ ಗ್ರಾಹಕರು ಅಮೆಜಾನ್ ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಮತ್ತು ಇನ್ನಿತರೆ ಆನ್‌ಲೈನ್‌ ಸೈಟ್‌ಗಳಲ್ಲಿ ಹೆಚ್ಚಾಗಿ ಉತ್ಪನ್ನಗಳನ್ನು ಖರೀದಿಸುತ್ತಿದ್ದು, ಅಲ್ಲಿ ಜಿಮೇಲ್‌ ಲಿಂಕ್ ಮಾಡಲಾಗಿರುತ್ತದೆ. ಹೀಗೆ ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸುವಾಗ ತಮ್ಮ ಜಿಮೇಲ್ ಲಿಂಕ್ ಮಾಡಿದರೇ ಅದು ಗೂಗಲ್ ಟ್ರಾಕ್‌ಗೆ ಸೀಗಲಿದ್ದು, ಪ್ರತಿ ಖರೀದಿಯ ಕುರಿತು ಗೂಗಲ್ ಮಾಹಿತಿ ಕಲೆಹಾಕಿ ಇಟ್ಟುಕೊಳ್ಳಲಿದೆ.

ಗೂಗಲ್ ಪರಿಚಯಿಸಿರುವ ಈ ಆಯ್ಕೆಯಲ್ಲಿ ದಾಖಲಾಗಿರುವ ಮಾಹಿತಿಗಳನ್ನು ನೋಡಲು ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ myaccount.google.com ಭೇಟಿ ನೀಡಿ, ಪರ್ಚಸ್‌ ಆಯ್ಕೆಯಲ್ಲಿ ಮಾಹಿತಿ ವೀಕ್ಷಿಸಬಹುದಾಗಿದೆ. ಗ್ರಾಹಕರು ಖರೀದಿಸಿದ ಉತ್ಪನ್ನ, ಖರೀದಿಸಿದ ದಿನಾಂಕ, ಬೆಲೆ ಮತ್ತು ಇನ್ನಿತರೆ ಅಗತ್ಯ ಮಾಹಿತಿಗಳನ್ನು ಈ ಆಯ್ಕೆಯಲ್ಲಿ ನೋಡಬಹುದಾಗಿದೆ.

Best Mobiles in India

English summary
Google knows about every single purchase you ever made.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+