Home
ಸುದ್ದಿಜಾಲ

Google Gemini: ಅತ್ಯಂತ ಶಕ್ತಿಶಾಲಿ ಎಐ ಟೂಲ್ಸ್‌ ಪರಿಚಯಿಸಿದ ಗೂಗಲ್, GPT-4 ಜೊತೆ ನೇರ ಸ್ಪರ್ಧೆ

ಇತ್ತೀಚಿನ ದಿನಗಳಲ್ಲಿ ಎಐ ಆಧಾರಿತ ಚಟುವಟಿಕೆಗಳಿಗೆ ಹೆಚ್ಚಿನ ಮಾನ್ಯತೆ ಇದೆ. ಈ ನಡುವೆ ಚಾಟ್‌ಜಿಪಿಟಿ (chatGPT) ಎಲ್ಲಾಕಡೆ ವ್ಯಾಪಿಸಿದ್ದು, ಈ ಮೂಲಕ ಹಲವಾರು ಕಾರ್ಯಗಳನ್ನು ಮಾಡಲಾಗುತ್ತಿದೆ. ಆದರೆ, ಈಗ ಚಾಟ್‌ಜಿಪಿಟಿಗೆ ನೇರ ಸ್ಪರ್ಧೆ ನೀಡಲು ಗೂಗಲ್ ಜೆಮಿನಿ ಎಐ ಟೂಲ್ಸ್‌ (Google Gemini AI Tools) ಅನ್ನು ಪರಿಚಯಿಸಿದೆ.

ಹೌದು, ಗೂಗಲ್ ತನ್ನ ಹೊಸ ಭಾಷಾ ಮಾದರಿ (LLM) ಜೆಮಿನಿ (Gemini) ಯನ್ನು ಜಾಗತಿಕವಾಗಿ ಪರಿಚಯಿಸಿದೆ. ಈ ಹೊಸ ಹೊಸ ಭಾಷಾ ಮಾದರಿಯಲ್ಲಿ ಟೆಕ್ಸ್ಟ್, ಕೋಡ್, ಆಡಿಯೋ, ಚಿತ್ರಗಳು ಮತ್ತು ವೀಡಿಯೊ ಸೇರಿದಂತೆ ವಿವಿಧ ರೀತಿಯ ಮಾಹಿತಿಯನ್ನು ಸಂಯೋಜಿಸಬಹುದು. ಇದರ ತಾಂತ್ರಿಕ ಹೆಸರು ಜೆಮಿನಿ 1.0(Gemini 1.0),ಇದು ಹೊಸ ಯುಗದ ಆರಂಭ ಎಂದು ಜೆಮಿನಿ ಬಗ್ಗೆ ಗೂಗಲ್ ಹೇಳಿದ್ದು, ಇದರ ನೇರ ಸ್ಪರ್ಧೆಯು ಓಪನ್‌ಎಐನ ಇತ್ತೀಚಿನ ಎಐ ಟೂಲ್ಸ್‌ ಆದ ಜಿಪಿಟಿ-4 (GPT-4) ನೊಂದಿಗೆ ಇರುತ್ತದೆ ಎಂದು ತಿಳಿಸಲಾಗಿದೆ. ಹಾಗಿದ್ರೆ, ಇದರ ವಿಶೇಷತೆ ಏನು?, ಯಾವೆಲ್ಲಾ ವೇರಿಯಂಟ್‌ನಲ್ಲಿ ಲಭ್ಯ ಇದೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಅತ್ಯಂತ ಶಕ್ತಿಶಾಲಿ ಎಐ ಟೂಲ್ಸ್‌ ಪರಿಚಯಿಸಿದ ಗೂಗಲ್, GPT-4 ಜೊತೆ ನೇರ ಸ್ಪರ್ಧೆ

ಗೂಗಲ್‌ ಜೆಮಿನಿ: ಜೆಮಿನಿ ನೀವು ಅಂದುಕೊಂಡ ಹಾಗೆ ಕೇವಲ ಒಂದು ಮಾದರಿಯಲ್ಲ ಬದಲಾಗಿ ಇದು ಮೂರು ಬಗೆಯ ಮಾದರಿಯನ್ನು ಹೊಂದಿರುವ ಒಂದು ಗುಚ್ಛ. ಅದರಲ್ಲಿ ಜೆಮಿನಿ ಅಲ್ಟ್ರಾ, ಜೆಮಿನಿ ಪ್ರೊ ಮತ್ತು ಜೆಮಿನಿ ನ್ಯಾನೊ (Gemini Ultra, Gemini Pro and Gemini Nano) ಇವೆ. ಈ ಸಂಬಂಧ ಗೂಗಲ್‌ ಮಾಹಿತಿ ನೀಡಿದ್ದು, ಪ್ರತಿಯೊಂದೂ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿರುತ್ತದೆ. ಡೇಟಾ ಕೇಂದ್ರಗಳಿಂದ ಹಿಡಿದು ಮೊಬೈಲ್ ಡಿವೈಸ್‌ಗಳವರೆಗೆ ಎಲ್ಲದರಲ್ಲೂ ರನ್ ಮಾಡಲು ಇವು ಯೋಗ್ಯವಾಗಿದೆ ಎಂದು ತಿಳಿಸಿದೆ.

ಹಾಗೆಯೇ ನಾವು ಜೆಮಿನಿಯನ್ನು ಸ್ಥಳೀಯವಾಗಿ ಮಲ್ಟಿಮೋಡಲ್ ಆಗಿ ವಿನ್ಯಾಸಗೊಳಿಸಿದ್ದೇವೆ, ಆರಂಭದಿಂದ ವಿಭಿನ್ನ ವಿಧಾನಗಳ ಬಗ್ಗೆ ಪೂರ್ವ ತರಬೇತಿ ಪಡೆದಿದ್ದೇವೆ. ನಂತರ ನಾವು ಅದರ ದಕ್ಷತೆಯನ್ನು ಇನ್ನಷ್ಟು ಪರಿಷ್ಕರಿಸಲು ಹೆಚ್ಚುವರಿ ಮಲ್ಟಿಮೋಡಲ್ ಡೇಟಾದೊಂದಿಗೆ ಅದನ್ನು ಉತ್ತಮಗೊಳಿಸಿದ್ದೇವೆ ಎಂದು ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ಸಿಇಒ ಸುಂದರ್ ಪಿಚೈ ಅವರು ಉಲ್ಲೇಖ ಮಾಡಿದ್ದಾರೆ. ಹಾಗಿದ್ರೆ, ಈ ಜೆಮಿನಿಯಲ್ಲಿ ಇರುವ ಮೂರು ಎಐ ಮಾದರಿಗಳು ಹೇಗೆಲ್ಲಾ ಕೆಲಸ ಮಾಡಲಿವೆ ಅನ್ನೋದನ್ನು ತಿಳಿಯೋಣ ಬನ್ನಿ.

ಅತ್ಯಂತ ಶಕ್ತಿಶಾಲಿ ಎಐ ಟೂಲ್ಸ್‌ ಪರಿಚಯಿಸಿದ ಗೂಗಲ್, GPT-4 ಜೊತೆ ನೇರ ಸ್ಪರ್ಧೆ

ಜೆಮಿನಿ ನ್ಯಾನೊ: ಗೂಗಲ್‌ನ ಜೆಮಿನಿ ನ್ಯಾನೊ ಹಗುರವಾದ ಎಐ ಮಾದರಿಯಾಗಿದ್ದು, ವಿಶೇಷವಾಗಿ ಮೊಬೈಲ್ ಡಿವೈಸ್‌ಗಳಿಗೆ ಅದರಲ್ಲೂ ಪಿಕ್ಸೆಲ್‌ 8 (Pixel 8) ಗೆ ಬೆಂಬಲ ನೀಡಲಿದೆ. ಈ ಮಾದರಿಯು ಡಿವೈಸ್‌ ಆಫ್‌ಲೈನ್‌ನಲ್ಲಿ ಇದ್ದಾಗಲೂ ಸಹ ಕೆಲಸ ಮಾಡುವ ಸಾಮರ್ಥ್ಯ ಪಡೆದಿದೆ. ಇದು ಚಾಟ್ ಆಪ್‌ಗಳಲ್ಲಿ ಸಂಬಂಧಿತ ಪ್ರತ್ಯುತ್ತರಗಳನ್ನು ಸೂಚಿಸುವುದು ಹಾಗೂ ಟೆಕ್ಸ್ಟ್‌ ಕಂಟೆಂಟ್‌ನ ಸಾರಾಂಶವನ್ನು ತಿಳಿಸುವ ಎಲ್ಲಾ ರೀತಿಯ ಕೆಲಸವನ್ನು ಸರಳ ರೀತಿಯಲ್ಲಿ ಮಾಡಲಿದೆಯಂತೆ. ಇದರೊಂದಿಗೆ ಈ ಜೆಮಿನಿ ನ್ಯಾನೊ ಬಾಹ್ಯ ಸರ್ವರ್‌ಗಳನ್ನು ಅವಲಂಬಿಸದೆ ಪ್ರಬಲ ಎಐ ಸಾಮರ್ಥ್ಯಗಳನ್ನು ನೀಡುತ್ತದೆ ಎಂದು ತಿಳಿಸಲಾಗಿದೆ.

ಜೆಮಿನಿ ಪ್ರೊ: ಜೆಮಿನಿ ಪ್ರೊ ಎಂಬುದು ಜೆಮಿನಿ ಎಐನ ಮುಂದುವರಿದ ವೇರಿಯಂಟ್‌ ಆಗಿದೆ. ಇದು ಹಲವಾರು ಗೂಗಲ್ ಎಐ ಸೇವೆಗಳ ಹಿಂದಿನ ಚಾಲನಾ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ. ಅದರಲ್ಲೂ ಇದು ಬಾರ್ಡ್‌ಗೆ (Bard) ದೊಡ್ಡ ರೀತಿಯಲ್ಲಿ ಬೆಂಬಲವಾಗಿ ಕೆಲಸ ಮಾಡುತ್ತದೆ ಎಂದು ಗೂಗಲ್‌ ತಿಳಿಸಿದೆ. ಈ ಸುಧಾರಿತ ತಂತ್ರಜ್ಞಾನವು ವೇಗದ ಪ್ರತಿಕ್ರಿಯೆ ಮತ್ತು ಸಂಕೀರ್ಣ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಗೂಗಲ್‌ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಅತ್ಯಂತ ಶಕ್ತಿಶಾಲಿ ಎಐ ಟೂಲ್ಸ್‌ ಪರಿಚಯಿಸಿದ ಗೂಗಲ್, GPT-4 ಜೊತೆ ನೇರ ಸ್ಪರ್ಧೆ

ಜೆಮಿನಿ ಅಲ್ಟ್ರಾ: ಜೆಮಿನಿ ಅಲ್ಟ್ರಾ ಗೂಗಲ್‌ನ ಅತ್ಯಂತ ಶಕ್ತಿಶಾಲಿ ಮಾದರಿಯಾಗಿದೆ. ಇದು ಹೆಚ್ಚು ಸಂಕೀರ್ಣವಾದ ಕಾರ್ಯಗಳನ್ನು ನಿಭಾಯಿಸುವ ಕೆಲಸ ಮಾಡಲಿದ್ದು, ಡೇಟಾ ಕೇಂದ್ರಗಳು ಮತ್ತು ಎಂಟರ್‌ಪ್ರೈಸ್ ಅಪ್ಲಿಕೇಶನ್‌ಗಳಿಗೆ ಉತ್ತಮ ಆಯ್ಕೆಯಾಗಿದೆ. ಇದು ವ್ಯಾಪಕವಾಗಿ ಲಭ್ಯವಿಲ್ಲದಿದ್ದರೂ, ಗೂಗಲ್ ಜೆಮಿನಿ ಅಲ್ಟ್ರಾವನ್ನು ಸೀಮಿತ ವಿಭಾಗಗಳಲ್ಲಿ ಬಳಕೆ ಮಾಡಲು ಗೂಗಲ್‌ ಅನುಕೂಲ ಮಾಡಿಕೊಡಲಿದೆ. ಹಾಗೆಯೇ ಇದನ್ನು ಸಂಕೀರ್ಣ ಕಾರ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಜೆಮಿನಿ ಅಲ್ಟ್ರಾ ತನ್ನ ಪ್ರಸ್ತುತ ಪರೀಕ್ಷಾ ಹಂತವನ್ನು ಮುಗಿಸಿದ ನಂತರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಜೆಮಿನಿ ಲಭ್ಯತೆ : ಜೆಮಿನಿ ನ್ಯಾನೊ ವನ್ನು ಪಿಕ್ಸೆಲ್ 8 ಪ್ರೊನಲ್ಲಿ ಬಳಕೆ ಮಾಡಬಹುದಾಗಿದೆ. ರೆಕಾರ್ಡರ್ ಅಪ್ಲಿಕೇಶನ್‌ನಲ್ಲಿ ಸಾರಾಂಶ ಮತ್ತು ಜಿಬೋರ್ಡ್‌ನಲ್ಲಿ ಸ್ಮಾರ್ಟ್ ಪ್ರತ್ಯುತ್ತರಗಳಂತಹ ವರ್ಧಿತ ಸೌಲಭ್ಯವನ್ನು ಇದು ನೀಡುತ್ತದೆ. ಇದನ್ನು ಆರಂಭದಲ್ಲಿ ವಾಟ್ಸಾಪ್‌ ನಲ್ಲಿ ಅಳವಡಿಸಲಾಗಿದೆ ಎಂದು ಗೂಗಲ್‌ ತಿಳಿಸಿದೆ. ಜೆಮಿನಿಯು ಮುಂದಿನ ದಿನಗಳಲ್ಲಿ ಸರ್ಚ್‌, ಜಾಹೀರಾತುಗಳು, ಕ್ರೋಮ್ ಮತ್ತು ಡ್ಯುಯೆಟ್ ಎಐ ಸೇರಿದಂತೆ ವಿವಿಧ ಗೂಗಲ್‌ ಉತ್ಪನ್ನಗಳಲ್ಲಿ ಕಾಣಿಸಿಕೊಳ್ಳಲಿದೆ.

ಅತ್ಯಂತ ಶಕ್ತಿಶಾಲಿ ಎಐ ಟೂಲ್ಸ್‌ ಪರಿಚಯಿಸಿದ ಗೂಗಲ್, GPT-4 ಜೊತೆ ನೇರ ಸ್ಪರ್ಧೆ

ಹಾಗೆಯೇ ಡಿಸೆಂಬರ್ 13 ರಿಂದ ಡೆವಲಪರ್‌ಗಳು ಮತ್ತು ಎಂಟರ್‌ಪ್ರೈಸ್ ಬಳಕೆದಾರರು ಗೂಗಲ್‌ ಎಐ ಸ್ಟುಡಿಯೋ ಅಥವಾ ಗೂಗಲ್‌ ಕ್ಲೌಡ್ ವರ್ಟೆಕ್ಸ್ ಎಐ ನಲ್ಲಿ ಜೆಮಿನಿ ಎಪಿಐ ಮೂಲಕ ಜೆಮಿನಿ ಪ್ರೊ ಅನ್ನು ಬಳಕೆ ಮಾಡಬಹುದು. ಹಾಗೆಯೇ ಆಂಡ್ರಾಯ್ಡ್‌ ಡೆವಲಪರ್‌ಗಳು ಎಐಕೋರ್‌ ಮೂಲಕ ಜೆಮಿನಿ ನ್ಯಾನೋವನ್ನು ಬಳಕೆ ಮಾಡಬಹುದು ಎಂದು ಗೂಗಲ್‌ ತಿಳಿಸಿದ್ದು, ಆಯ್ದ ಗ್ರಾಹಕರು, ಡೆವಲಪರ್‌ಗಳು, ಪಾಲುದಾರರು ಮತ್ತು ಸುರಕ್ಷತಾ ತಜ್ಞರು ಆರಂಭಿಕ ಪರೀಕ್ಷೆ ಮತ್ತು ಪ್ರತಿಕ್ರಿಯೆಗಾಗಿ ಈ ಸೇವೆಗೆ ಎಂಟ್ರಿ ಪಡೆದಿರುತ್ತಾರೆ ಎಂದು ಗೂಗಲ್‌ ಹೇಳಿದೆ.

Best Mobiles in India

English summary
Google has just launched a special and powerful AI tool called Gemini. This tool comes in three variants namely Gemini Ultra, Gemini Pro and Gemini Nano.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+