ಆಂಡ್ರಾಯ್ಡ್ ಸಲಹೆ ಮತ್ತು ತಂತ್ರಗಳಿಗಾಗಿ ಗೂಗಲ್‌ನಿಂದ ಹೊಸ ವೆಬ್‌ಸೈಟ್‌

By Suneel
|

ಆಂಡ್ರಾಯ್ಡ್ ಓಎಸ್ ಇತರೆ ಎಲ್ಲಾ ಓಎಸ್‌ಗಳಿಗಿಂತ ವಿಶೇಷವಾದ ಆಪರೇಟಿಂಗ್ ಸಿಸ್ಟಮ್‌. ಆಂಡ್ರಾಯ್ಡ್‌ ಓಎಸ್‌ ಅನ್ನು ವಿನೂತನವಾಗಿ ದೊಡ್ಡ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಆಂಡ್ರಾಯ್ಡ್‌ ಬಳಕೆದಾರರಿಗೆ ಸಿಹಿ ಸುದ್ದಿ ಎಂದರೆ ಗೂಗಲ್‌ ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ ಹಲವು ಉಪಯೋಗಿ ಸಲಹೆಗಳು ಮತ್ತು ತಂತ್ರಗಳನ್ನು ನೀಡಲು ಹೊಸ ವೆಬ್‌ಸೈಟ್‌ ಅನ್ನು ಕ್ರಿಯೇಟ್‌ ಮಾಡಿದೆ. ಆ ವೆಬ್‌ಸೈಟ್‌ ಯಾವುದು, ಅದರ ಉಪಯೋಗವೇನು, ವಿಶೇಷತೆ ಏನು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಲು ಲೇಖನದ ಸ್ಲೈಡರ್‌ ಅನ್ನು ಓದಿರಿ.

ಪ್ರಖ್ಯಾತ ಟೆಕ್‌ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳು

ಗೂಗಲ್‌

ಗೂಗಲ್‌

ಗೂಗಲ್‌ ಆಂಡ್ರಾಯ್ಡ್‌ನ ಪ್ರಾಮಖ್ಯತೆಯನ್ನು ಮರೆಯದೇ, ಆಂಡ್ರಾಯ್ಡ್‌ ಬಳಕೆದಾರರಿಗೆ ಹಲವು ಸಲಹೆಗಳು ಮತ್ತು ತಂತ್ರಗಳ ಬಗ್ಗೆ ಮಾಹಿತಿ ನೀಡಲು ಹೊಸ ವೆಬ್‌ಸೈಟ್‌ ಒಂದನ್ನು ಕ್ರಿಯೇಟ್‌ ಮಾಡಿದೆ. ಇದರಿಂದ ಹೊಸದಾಗಿ ಅಂಡ್ರಾಯ್ಡ್ ಓಎಸ್‌ ಬಳಸಲು ಪ್ರಾರಂಭಿಸುವವರಿಗೆ ಓಎಸ್‌ ಬಗ್ಗೆ ತಿಳಿಯಲು ಅನುಕೂಲವಾಗಲಿದೆ.

ಪರಿಶೀಲನೆಗಾಗಿ ವೆಬ್‌ಸೈಟ್‌

ಪರಿಶೀಲನೆಗಾಗಿ ವೆಬ್‌ಸೈಟ್‌

ಆಂಡ್ರಾಯ್ಡ್‌ ಬಳಕೆದಾರ ಯಾವುದೇ ಸೆಟ್ಟಿಂಗ್‌ ಮತ್ತು ಸಲಹೆಗಳ ಬಗ್ಗೆ ಪರಿಶೀಲನೆ ನಡೆಸಲು ಗೂಗಲ್‌ನ ಹೊಸ ವೆಬ್‌ಸೈಟ್‌ ಸಹಾಯಕವಾಗಲಿದೆ.

ಹೊಸ ವೆಬ್‌ಸೈಟ್‌ನ ಉದ್ದೇಶ

ಹೊಸ ವೆಬ್‌ಸೈಟ್‌ನ ಉದ್ದೇಶ

ಹೊಸ ವೆಬ್‌ಸೈಟ್‌ನ ಮುಖ್ಯ ಉದ್ದೇಶ ಹೊಸ ಬಳಕೆದಾರರನ್ನು ಸೆಳೆಯುವುದಾಗಿದೆ. ಹೊಸ ಬಳಕೆದಾರರನ್ನು ಹೆಚ್ಚು ಮಾಡಲು ಗೂಗಲ್‌ ಸ್ಮಾರ್ಟ್‌ ಟಿಪ್ಸ್‌ ಮತ್ತು ತಂತ್ರಾಂಶಗಳ ಬಗ್ಗೆ ಮಾಹಿತಿ ನೀಡಲಿದೆಯಂತೆ. ಅಲ್ಲದೇ ಹೊಸ ಫೀಚರ್‌ ಮತ್ತು ಟೂಲ್‌ಗಳನ್ನು ಅಭಿವೃದ್ದಿ ಪಡಿಸಿದ್ದಲ್ಲಿ ಶೀಘ್ರ ಮಾಹಿತಿಯನ್ನು ಈ ವೆಬ್‌ಸೈಟ್‌ ನೀಡಲಿದೆ.

ಸಲಹೆಗಳ ವರ್ಗಗಳು

ಸಲಹೆಗಳ ವರ್ಗಗಳು

ಪ್ರಾಥಮಿಕವಾಗಿ ಗೂಗಲ್‌ನ ಹೊಸ ವೆಬ್‌ಸೈಟ್‌ ಸಲಹೆಗಳು ಮತ್ತು ತಂತ್ರಗಳು "ಫೀಚರ್ಡ್‌, ಪ್ರೈವೆಸಿ ಅಂಡ್‌ ಸೆಕ್ಯೂರಿಟಿ, ವಾಯ್ಸ್‌, ಕ್ಯಾಮೆರಾ ಅಂಡ್‌ ಫೋಟೋ, ಬ್ಯಾಟರಿ, ಕಸ್ಟಮೈಶೇಸನ್‌, ಮೋರ್‌ ಆಪ್ಸ್‌, ಸೆಟ್ಟಿಂಗ್ಸ್) ವರ್ಗಗಳಲ್ಲಿ ಇರಲಿವೆ.

ಬೇಸಿಕ್‌ ಸಲಹೆಗಳು ಲಭ್ಯ

ಬೇಸಿಕ್‌ ಸಲಹೆಗಳು ಲಭ್ಯ

ಅಂದಹಾಗೆ ಸೈಟ್‌ನಲ್ಲಿ ಆಂಡ್ರಾಯ್ಡ್‌ನ ಹೊಸ ಬಳಕೆದಾರರು ಬೇಸಿಕ್‌ ಸಲಹೆಗಳನ್ನು ಸಹ ತಿಳಿದುಕೊಳ್ಳಬಹುದಾಗಿದೆ.

ಹೊಸ ಟೂಲ್‌ಗಳ ಬಗ್ಗೆ

ಹೊಸ ಟೂಲ್‌ಗಳ ಬಗ್ಗೆ

ಆಂಡ್ರಾಯ್ಡ್‌ನ ಹೊಸ ಟೂಲ್‌ಗಳ ಬಗ್ಗೆ ಮಾಹಿತಿ ತಿಳಿಯಲು ವೆಬ್‌ಸೈಟ್‌ನಲ್ಲಿ "Learn More" ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು. ನಂತರ ಓಪನ್‌ ಆಗುವ ವಿಂಡೋದಲ್ಲಿನ ಸೂಚನೆಗಳನ್ನು ಸುಲಭ ರೀತಿಯಲ್ಲಿ ಪಾಲಿಸಬಹುದು.

 ಗೂಗಲ್‌ ಹೊಸ ವೆಬ್‌ಸೈಟ್‌

ಗೂಗಲ್‌ ಹೊಸ ವೆಬ್‌ಸೈಟ್‌

ಗೂಗಲ್‌ನ ಹೊಸ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

www.android.com/phones/tips

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಖ್ಯಾತ ಟೆಕ್‌ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳುಪ್ರಖ್ಯಾತ ಟೆಕ್‌ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳು

18ನೇ ಶತಮಾನದ ನ್ಯೂಯಾರ್ಕ್‌ನ ಗೂಗಲ್‌ ಸ್ಟ್ರೀಟ್ ವ್ಯೂ ಅದ್ಭುತ ಫೋಟೋಗಳು18ನೇ ಶತಮಾನದ ನ್ಯೂಯಾರ್ಕ್‌ನ ಗೂಗಲ್‌ ಸ್ಟ್ರೀಟ್ ವ್ಯೂ ಅದ್ಭುತ ಫೋಟೋಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Google Launches A New Website With Tips And Tricks For Android. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X