ಪ್ರಖ್ಯಾತ ಟೆಕ್‌ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳು

By Suneel
|

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯೋಕೆ ಹೊರಟರು ಬಹುಶಃ ಇಂತದೇ ಪ್ರಶ್ನೆಗಳನ್ನು ಕೇಳಬಹುದು ಎಂದು ಭಾಗಶಃ ಊಹಿಸಬಹುದು. ಆದ್ರೆ ಉದ್ಯೋಗಕ್ಕೆ ಸೇರಲು ಎಂದು ಕಂಪನಿಗಳಿಗೆ ಹೋದಾಗ ಸಂದರ್ಶನಕಾರರು ಎಂತಹ ಪ್ರಶ್ನೆ ಕೇಳಬಹುದು ಎಂದು ಊಹಿಸಲು ಸಾಧ್ಯವಿರುವುದಿಲ್ಲ. ಇದುವರೆಗೂ ಸಂದರ್ಶನಕ್ಕೆ ಹಾಜರಾದ ಬಹಳಷ್ಟು ಜನರಿಗೆ ಅನುಭವವಾಗಿರಬಹುದು.

ರಿಲಾಯನ್ಸ್‌ನಿಂದ 93 ರೂ.ಗೆ 10GB 4G ಡಾಟಾ; ಬಂಪರ್‌ ಆಫರ್

ಇನ್ನು ಟೆಕ್ನಾಲಜಿ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರಿಗಂತೂ ಇಂತಹ ಅನುಭವಗಳು ಹೆಚ್ಚು. ಆದ್ರೆ ತಮ್ಮ ಶಿಕ್ಷಣ ಮುಗಿಸಿ ಈಗ ತಾನೆ ಸಂದರ್ಶನಕ್ಕೆ ಹೋಗಲು ಸಿದ್ಧವಾಗುತ್ತಿರುವವರಿಗೆ ಅದೆಂತಹ ಪ್ರಶ್ನೆಗಳನ್ನು ಟೆಕ್‌ ಕಂಪನಿಗಳಲ್ಲಿ ಕೇಳುತ್ತಾರೆ ಎಂಬುದು ಕುತೂಹಲವಾಗಿರುತ್ತದೆ. ಅಂತಹವರು ಟೆಕ್‌ ಕಂಪನಿಗಳಿಗೆ ಹೋಗಿ ಅನುಭವ ಪಡೆಯುವುದು ಕಷ್ಟವಾಗಬಹುದು.

ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಬಯಸುವವರು ಸಂದರ್ಶನಕ್ಕೆ ಹೋಗುವ ಮೊದಲೇ ಅಲ್ಲಿನ ಸಂದರ್ಶನಕಾರರ ಕಠಿಣ ಪ್ರಶ್ನೆಗಳು ಹೇಗಿರುತ್ತವೆ ಎಂದು ತಿಳಿಯಲು ಬಯಸಬಹುದು. ಅಂತಹ ಆಕಾಂಕ್ಷಿಗಳೆಲ್ಲರೂ ಇಂದಿನ ಲೇಖನದಲ್ಲಿ ಪ್ರಖ್ಯಾತ ಟೆಕ್‌ ಕಂಪನಿಗಳಾದ ಆಪಲ್‌, ಟ್ವಿಟರ್‌, ಗೂಗಲ್‌, ಮೈಕ್ರೋಸಾಫ್ಟ್‌ ಮತ್ತು ಇತರೆ ಟೆಕ್‌ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ ಕಠಿಣ ಪ್ರಶ್ನೆಗಳು ಯಾವುವು ಎಂದು ತಿಳಿಯಿರಿ. ಲೇಖನದಲ್ಲಿ ತಿಳಿಸುತ್ತಿರುವ ಪ್ರಶ್ನೆಗಳ ಕೃಪೆಯು ಆಯಾ ಕಂಪನಿಗಳಿಗೆ ಸಲ್ಲುತ್ತದೆ.

ಮಂಗಳ ಗ್ರಹಕ್ಕೆ ಪ್ರವಾಸ ಹೊರಟ ಮಂಗಗಳು ಯಾವುವು ಗೊತ್ತೇ?

ಉದ್ಯೋಗ: ಗೂಗಲ್ ಆಡಳಿತ ಸಹಾಯಕ

ಉದ್ಯೋಗ: ಗೂಗಲ್ ಆಡಳಿತ ಸಹಾಯಕ

ಪ್ರಶ್ನೆ: ಒಂದು ವೇಳೆ ನಾವು ಒಂದು ಬಾಕ್ಸ್‌ ಪೆನ್ಸಿಲ್‌ ಕೊಟ್ಟರೆ ಅವುಗಳನ್ನು 10 ರೀತಿಯಲ್ಲಿ ಬಳಸಿಕೊಳ್ಳಬೇಕು. ಆದರೆ ಸಾಂಪ್ರದಾಯಿಕ ಬಳಕೆಗೆ ಬಳಸಬಾರದು. ಹೇಗೆ ಬಳಸುತ್ತೀರಾ?

ಉದ್ಯೋಗ:ಅಮೆಜಾನ್ ಹಿರಿಯ ನೇಮಕಾತಿ ವ್ಯವಸ್ಥಾಪಕ

ಉದ್ಯೋಗ:ಅಮೆಜಾನ್ ಹಿರಿಯ ನೇಮಕಾತಿ ವ್ಯವಸ್ಥಾಪಕ

ಪ್ರಶ್ನೆ: ನೀವು ಮಂಗಳ ಗ್ರಹದಿಂದ ಬಂದವರೇ ಆಗಿದ್ದಲ್ಲಿ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತೀರಿ?

ಉದ್ಯೋಗ: ಆಪಲ್‌ ಇಂಟರ್ನ್‌

ಉದ್ಯೋಗ: ಆಪಲ್‌ ಇಂಟರ್ನ್‌

ಪ್ರಶ್ನೆ: ಒಂದು ಗಡಿಯಾರ ಮುರಿಯಲು ಅತ್ಯಂತ ಸೃಜನಶೀಲ ಮಾರ್ಗ ಯಾವುದು?

ಉದ್ಯೋಗ: ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್‌ವೇರ್‌ ಅಭಿವೃದ್ದಿ ಇಂಜಿನಿಯರ್‌

ಉದ್ಯೋಗ: ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್‌ವೇರ್‌ ಅಭಿವೃದ್ದಿ ಇಂಜಿನಿಯರ್‌

ಪ್ರಶ್ನೆ: ಒಂದು ಡಿಸ್ಕ್‌ ಆಧಾರತಂತಿಯ ಮೇಲೆ ತಿರುಗುತ್ತಿದೆ. ಆದರೆ ನಿಮಗೆ ಅದು ಯಾವ ಮಾರ್ಗದಲ್ಲಿ ಎಂದು ಗೊತ್ತಿಲ್ಲಾ. ನಿಮಗೆ ಒಂದು ಸೆಟ್‌ ಪಿನ್‌ಗಳನ್ನು ನೀಡಲಾಗುತ್ತದೆ. ಡಿಸ್ಕ್‌ ಯಾವ ಮಾರ್ಗದಲ್ಲಿ ತಿರುಗುತ್ತಿದೆ ಎಂದು ತಿಳಿಯಲು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂದು ವಿವರಿಸಿ?

ಉದ್ಯೋಗ: ಫೇಸ್‌ಬುಕ್‌ನಲ್ಲಿ ವ್ಯವಹಾರ ನಿರ್ವಹಣೆ ಇಂಟರ್ನ್‌

ಉದ್ಯೋಗ: ಫೇಸ್‌ಬುಕ್‌ನಲ್ಲಿ ವ್ಯವಹಾರ ನಿರ್ವಹಣೆ ಇಂಟರ್ನ್‌

ಪ್ರಶ್ನೆ: ಒಂದು ಬ್ಯಾಗ್‌ನಲ್ಲಿ ಏಣಿಕೆ ಮಾಡದ ತಂತಿಗಳು ಇವೆ. ಅವುಗಳಲ್ಲಿ ಮನಬಂದಂತೆ ತಂತಿಗಳನ್ನು ಹೊರ ತೆಗೆಯುತ್ತೀರಿ. ನಂತರ ಬ್ಯಾಗ್‌ನಲ್ಲಿನ ಇತರ ತಂತಿಗಳನ್ನು ಸಹ ಹೊರ ಎಳೆಯುತ್ತೀರಿ. ಅವುಗಳನ್ನು ಒಟ್ಟಿಗೆ ಸೇರಿಸಿ ಕಟ್ಟುತ್ತೀರಿ. ಇದೇ ರೀತಿ ಬ್ಯಾಗ್‌ನಲ್ಲಿನ ತಂತಿಗಳು ಖಾಲಿಯಾಗುವವರೆಗೆ ಕಾರ್ಯನಿರ್ವಹಿಸುತ್ತೀರಿ. ನಿರೀಕ್ಷಿತ ಕುಣಿಕೆಗಳ ಸಂಖ್ಯೆ ಎಷ್ಟು?

ಉದ್ಯೋಗ: ಗೂಗಲ್‌ ಪ್ರಾಡಕ್ಟ್‌ ವ್ಯವಸ್ಥಾಪಕ

ಉದ್ಯೋಗ: ಗೂಗಲ್‌ ಪ್ರಾಡಕ್ಟ್‌ ವ್ಯವಸ್ಥಾಪಕ

ಪ್ರಶ್ನೆ: ನೀವು ಕಿವುಡರಿಗಾಗಿ ಫೋನ್‌ ವಿನ್ಯಾಸ ಮಾಡಲು ಬಯಸುತ್ತೀರಿ ಎಂದಾದಲ್ಲಿ.. ಅದನ್ನು ಹೇಗೆ ಮಾಡುತ್ತೀರಿ?

ಉದ್ಯೋಗ: ಟ್ವಿಟರ್‌ನಲ್ಲಿ ನೇಮಕಾತಿ ಮಾಡುವವರು

ಉದ್ಯೋಗ: ಟ್ವಿಟರ್‌ನಲ್ಲಿ ನೇಮಕಾತಿ ಮಾಡುವವರು

ಪ್ರಶ್ನೆ: ನಿಮ್ಮನ್ನು ನಾವು ಏಕೆ ನೇಮಕಾತಿ ಮಾಡಿಕೊಳ್ಳಬಾರದು?

ಉದ್ಯೋಗ: ಮೈಕ್ರೋಸಾಫ್ಟ್‌ ಇಂಟರ್ನ್‌

ಉದ್ಯೋಗ: ಮೈಕ್ರೋಸಾಫ್ಟ್‌ ಇಂಟರ್ನ್‌

ಪ್ರಶ್ನೆ: ಲಿಫ್ಟ್‌ ಅನ್ನು ಹೇಗೆ ವಿನ್ಯಾಸ(Disign) ಮಾಡುತ್ತೀರಾ?

ಉದ್ಯೋಗ: ಮೈಕ್ರೋಸಾಫ್ಟ್ ಸಹಾಯಕ ಸಲಹೆಗಾರ

ಉದ್ಯೋಗ: ಮೈಕ್ರೋಸಾಫ್ಟ್ ಸಹಾಯಕ ಸಲಹೆಗಾರ

ಪ್ರಶ್ನೆ: "ಹಲವು ಮೈಕ್ರೋಸಾಫ್ಟ್‌ ಪ್ರಾಡಕ್ಟ್‌ಗಳು" ಎಂದು ಹೆಸರು ನೀಡಬಹುದಾ?

ಉದ್ಯೋಗ: ಟ್ವಿಟರ್‌ನಲ್ಲಿ ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್‌

ಉದ್ಯೋಗ: ಟ್ವಿಟರ್‌ನಲ್ಲಿ ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್‌

ಪ್ರಶ್ನೆ: ಅವಳಿ ಮರ ಅದಕ್ಕೆ ಒಂದು ಕನ್ನಡಿ ಇದ್ದ ಹಾಗೆಯೇ ? ( Is this binary tree a mirror of itself?)

ಉದ್ಯೋಗ: ತೆಸ್ಲಾ ಮೋಟಾರ್‌'ನ ಇಂಜಿನಿಯರಿಂಗ್ ತಂತ್ರಜ್ಞ

ಉದ್ಯೋಗ: ತೆಸ್ಲಾ ಮೋಟಾರ್‌'ನ ಇಂಜಿನಿಯರಿಂಗ್ ತಂತ್ರಜ್ಞ

ಪ್ರಶ್ನೆ: 8 ವರ್ಷದ ಮಗುವಿಗೆ ಡೈನಾಮೊಮೀಟರ್ ಬಗ್ಗೆ ಹೇಗೆ ವಿವರಿಸುತ್ತಿರಿ?

ಉದ್ಯೋಗ: ಎಲೆಕ್ಟ್ರಾನಿಕ್ ಆರ್ಟ್ಸ್'ನಲ್ಲಿ ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್

ಉದ್ಯೋಗ: ಎಲೆಕ್ಟ್ರಾನಿಕ್ ಆರ್ಟ್ಸ್'ನಲ್ಲಿ ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್

ಪ್ರಶ್ನೆ: ಎರಡು ಚಲಿಸುವ ಗೋಳಗಳ ಘರ್ಷಣೆ ಬಗ್ಗೆ ಹೇಗೆ ಲೆಕ್ಕಾಚಾರ ಮಾಡುತ್ತೀರಿ? ಇದರ ಪರಿಹಾರಾತ್ಮಕ ಗಣಿತ ಸಮೀಕರಣ ಮತ್ತು ಕ್ರಮಾವಳಿಯ ಅನುಷ್ಠಾನವನ್ನು ನೀಡಿರಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೊ ನೋಡಬಾರದು; 4 ಕಾರಣಆಂಡ್ರಾಯ್ಡ್ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೊ ನೋಡಬಾರದು; 4 ಕಾರಣ

Best Mobiles in India

English summary
13 Tough interview questions heard at Tech companies. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X