Subscribe to Gizbot

ಹಾಲಿ ಲೋಕಸಭಾ ಸದಸ್ಯರ ಸಾಧನೆಯನ್ನು ಗೂಗಲ್‌ನಲ್ಲಿ ಹುಡುಕಿ

Posted By:

ಗೂಗಲ್‌ ಇಂಡಿಯಾ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಸುದ್ದಿಗಳಿಗಾಗಿ ಹೊಸ ವೆಬ್‌ ಪುಟವನ್ನು ಈಗಾಗಲೇ ತೆರೆದಿದ್ದು ಇದಕ್ಕೆ ಹೊಸದಾಗಿ ಹಾಲಿ ಲೋಕಸಭಾ ಅಭ್ಯರ್ಥಿ‌ಗಳ ಬಗ್ಗೆ ಮಾಹಿತಿ ತಿಳಿಸಲು ಲೋಕಸಭಾ ಚುನಾವಣಾ ನಕ್ಷೆಯನ್ನು ಸೇರಿಸಿದೆ.

ನಕ್ಷೆಯಲ್ಲಿ ಏನಿದೆ?

* ಹಾಲಿ ಲೋಕಸಭಾ ಸದಸ್ಯರ ವಿವರ.
* ಲೋಕಸಭಾ ಕ್ಷೇತ್ರದಲ್ಲಿರುವ ತಾಲೂಕುಗಳ ಮಾಹಿತಿ.
* ಹಾಲಿ ಲೋಕಸಭಾ ಸದಸ್ಯರ ಕಲಾಪ ಹಾಜರಾತಿ ವಿವರ.
* ಲೋಕಸಭಾ ಸದಸ್ಯರು ಎಷ್ಟು ಪ್ರಶ್ನೆ ಕೇಳಿದ್ದಾರೆ,ಯಾವ ಚರ್ಚೆ‌ಯಲ್ಲಿ ಭಾಗಿಯಾಗಿದ್ದಾರೆ,ಯಾವೆಲ್ಲಾ ಪ್ರಶ್ನೆ ಕೇಳಿದ್ದಾರೆ ಇವುಗಳ ಮಾಹಿತಿ.
* ಪಿನ್‌ಕೋಡ್‌ ನಂಬರ್‌ ಟೈಪ್‌ ಮಾಡಿ ಲೋಕಸಭಾ ಕ್ಷೇತ್ರವನ್ನು ಹುಡುಕುವ ವ್ಯವಸ್ಥೆ.

ಈಗಷ್ಟೇ ಈ ಹೊಸ ಚುನಾವಣಾ ನಕ್ಷೆ ಸಿದ್ದಗೊಂಡಿದ್ದು ಕೆಲವೇ ದಿನಗಳಲ್ಲಿ ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿ‌ಸುತ್ತಿರುವ ಅಭ್ಯರ್ಥಿ‌ಗಳ ವಿವರವನ್ನು ಸೇರಿಸುವುದಾಗಿ ಗೂಗಲ್‌ ಹೇಳಿದೆ.

ಗೂಗಲ್‌ನ ಲೋಕಸಭಾ ಅಭ್ಯರ್ಥಿ‌ಗಳ ಬಗ್ಗೆ ಮಾಹಿತಿ ತಿಳಿಸುವ ನಕ್ಷೆಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ:www.google.co.in/elections/ed/in/districts

ಇದನ್ನೂ ಓದಿ: 2014 ಲೋಕಸಭಾ ಚುನಾವಣೆ-ಉಪಯುಕ್ತ ಜಾಲತಾಣಗಳು

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

 ಹಾಲಿ ಲೋಕಸಭಾ ಸದಸ್ಯರ ಸಾಧನೆಯನ್ನು ಗೂಗಲ್‌ನಲ್ಲಿ ಹುಡುಕಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot