Home
ಸುದ್ದಿಜಾಲ

Google Maps: ಗೂಗಲ್‌ ಮ್ಯಾಪ್ಸ್‌ನಲ್ಲಿ ವಿಶೇಷ ಫೀಚರ್ಸ್‌: ನಿಮ್ಮ ವಾಹನದ ಇಂಧನ ಉಳಿತಾಯ ಪಕ್ಕಾ, ಬಳಕೆ ಹೇಗೆ?

ಗೂಗಲ್‌ ಮ್ಯಾಪ್ಸ್ (Google Maps) ಬಳಕೆ ಮಾಡದವರು ಯಾರು ತಾನೇ ಇದ್ದಾರೆ ಹೇಳಿ. ಬೆಳೆಯುತ್ತಿರುವ ನಗರ ಹಾಗೂ ಪಟ್ಟಣಗಳಲ್ಲಿ ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ ಹೋಗಬೇಕು ಎಂದರೂ ಸಹ ಗೂಗಲ್‌ ಮ್ಯಾಪ್ಸ್‌ ಅಗತ್ಯವಾಗಿದೆ. ಅದರಂತೆ ಈ ಆಪ್‌ನಲ್ಲಿ ಸಾಕಷ್ಟು ವಿಶೇಷ ಫೀಚರ್ಸ್‌ ಆಯ್ಕೆ ನೀಡಲಾಗಿದ್ದು, ಇದೀಗ ಘೋಷಣೆ ಮಾಡಲಾದ ಹೊಸ ಫೀಚರ್ಸ್‌ ನೀವು ಸಂಚಾರ ಮಾಡಲು ಬಳಕೆ ಮಾಡುವ ವಾಹನದ ಇಂಧನ ಉಳಿಸಲಿದೆ.

ಹೌದು, ಇದೀಗ ಗೂಗಲ್‌ ಮ್ಯಾಪ್ಸ್‌ ನಿಮ್ಮ ವಾಹನದ ಇಂಧನವನ್ನು ಉಳಿಸುವ ಕೆಲಸ ಮಾಡುತ್ತದೆ. ಅಂದರೆ ಭಾರತದಲ್ಲಿ ಇಂಧನ ಉಳಿತಾಯ ಫೀಚರ್ಸ್‌ ಅನ್ನು ಗೂಗಲ್‌ (Google ) ಪರಿಚಯಿಸುತ್ತಿದೆ. ವಿವಿಧ ಮಾರ್ಗಗಳಿಗೆ ಇಂಧನ ಅಥವಾ ಶಕ್ತಿಯ ದಕ್ಷತೆಯ ಮೇಲೆ ಅಂದಾಜುಗಳನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹಾಗಿದ್ರೆ, ಏನಿದು ಫೀಚರ್ಸ್‌, ಇದನ್ನು ಸಕ್ರಿಯಗೊಳಿಸಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

 ಗೂಗಲ್‌ ಮ್ಯಾಪ್ಸ್‌ನಲ್ಲಿ ವಿಶೇಷ ಫೀಚರ್ಸ್‌: ನಿಮ್ಮ ವಾಹನದ ಇಂಧನ ಉಳಿತಾಯ ಪಕ್ಕಾ..

ಗೂಗಲ್ ಮ್ಯಾಪ್‌ನಲ್ಲಿ ವಿಶೇಷ ಸೌಲಭ್ಯ: ಗೂಗಲ್ ಮ್ಯಾಪ್ಸ್‌ ನಲ್ಲಿ ಇಂಧನ ಉಳಿತಾಯ ಫೀಚರ್ಸ್‌ ಅನ್ನು ಪರಿಚಯಿಸಲಾಗುತ್ತಿದೆ. ಈ ಮೊದಲು ಈ ವಿಶೇಷ ಫೀಚರ್ಸ್‌ ಯುಎಸ್‌ ಹಾಗೂ ಕೆನಡಾ, ಯುರೋಪ್‌ನಲ್ಲಿ ಮಾತ್ರ ಲಭ್ಯ ಇತ್ತು. ಆದರೆ ಈಗ ಭಾರತದಲ್ಲೂ ಲಭ್ಯ ಇರಲಿದೆ. ಭಾರತದಲ್ಲಿ ವಾಹನ ಬಳಕೆದಾರರು ಪ್ರಮುಖವಾಗಿ ಇಂಧನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಈ ಫೀಚರ್ಸ್‌ ಸಾಕಷ್ಟು ಅನುಕೂಲ ನೀಡಲಿದೆ.

ಇನ್ನು ಈ ವಿಶೇಷ ಫೀಚರ್ಸ್‌ ಲೈವ್ ಟ್ರಾಫಿಕ್ ಅಪ್‌ಡೇಟ್‌ಗಳು ಮತ್ತು ರಸ್ತೆ ಪರಿಸ್ಥಿತಿಗಳನ್ನು ಪರಿಗಣಿಸಿ, ವಿಭಿನ್ನ ಮಾರ್ಗಗಳಲ್ಲಿ ಸಂಚಾರ ಮಾಡಲು ಇಂಧನ ದಕ್ಷತೆಯ ಅಂದಾಜುಗಳನ್ನು ನೀಡುವ ಕೆಲಸ ಮಾಡುತ್ತದೆ. ಇದಕ್ಕಾಗಿ ಗೂಗಲ್‌ ಮ್ಯಾಪ್‌ನಲ್ಲಿ 'ಇಂಧನ-ಸಮರ್ಥ ಮಾರ್ಗಗಳಿಗೆ ಆದ್ಯತೆ' (Prefer fuel-efficient routes) ಎಂಬ ಆಯ್ಕೆ ನೀಡಲಾಗುದ್ದು, ಇದನ್ನು ಆನ್‌ ಮಾಡುವ ಮೂಲಕ ಇದರ ಸೌಲಭ್ಯ ಪಡೆಯಬಹುದಾಗಿದೆ.

 ಗೂಗಲ್‌ ಮ್ಯಾಪ್ಸ್‌ನಲ್ಲಿ ವಿಶೇಷ ಫೀಚರ್ಸ್‌: ನಿಮ್ಮ ವಾಹನದ ಇಂಧನ ಉಳಿತಾಯ ಪಕ್ಕಾ..

ಸೆಪ್ಟೆಂಬರ್ 2022 ರಲ್ಲಿ, ಇಂಧನ ಉಳಿತಾಯ ಫೀಚರ್ಸ್‌ ಬಗ್ಗೆ ಘೋಷಣೆ ಮಾಡಲಾಗಿದ್ದು. ಇದೀಗ ಭಾರತಕ್ಕೆ ಕಾಲಿಟ್ಟಿದೆ. ಈ ಫೀಚರ್ಸ್‌ ನಿಮ್ಮ ವಾಹನದ ಎಂಜಿನ್ ಪ್ರಕಾರಕ್ಕೆ ಅನುಗುಣವಾಗಿ ವಿವಿಧ ಮಾರ್ಗಗಳಿಗೆ ಇಂಧನ ಅಥವಾ ಶಕ್ತಿಯ ದಕ್ಷತೆಯ ಮೇಲೆ ಅಂದಾಜುಗಳನ್ನು ನೀಡುತ್ತದೆ. ಇದು ವೇಗ ಮತ್ತು ಇಂಧನ ಸಂರಕ್ಷಣೆ ಎರಡನ್ನೂ ಪರಿಗಣಿಸಿ ಅತ್ಯಂತ ಸೂಕ್ತವಾದ ಮಾರ್ಗವನ್ನು ಲೆಕ್ಕಾಚಾರ ಮಾಡುವ ಕೆಲಸ ಮಾಡುತ್ತದೆ.

ಈ ವಿಶೇಷ ಫೀಚರ್ಸ್‌ ಅನ್ನು ಆನ್ ಮಾಡಲು ಮಾರ್ಗ ಅನುಸರಿಸಿ:
ಹಂತ 1 : ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್ಸ್‌ ಆಪ್ ಓಪನ್‌ ಮಾಡಿ. ನಂತರ ನಿಮ್ಮ ಪ್ರೊಫೈಲ್ ಚಿತ್ರದ ಟ್ಯಾಪ್ ಮಾಡುವ ಮೂಲಕ ಸೆಟ್ಟಿಂಗ್‌ ವಿಭಾಗಕ್ಕೆ ಹೋಗಿ. ಇದಾದ ಬಳಿಕ ನಿಮಗೆ ಮಾರ್ಗ ಆಯ್ಕೆಗಳು ಎಂಬುದರ ಮೇಲೆ ಟ್ಯಾಪ್‌ ಮಾಡಿ.

 ಗೂಗಲ್‌ ಮ್ಯಾಪ್ಸ್‌ನಲ್ಲಿ ವಿಶೇಷ ಫೀಚರ್ಸ್‌: ನಿಮ್ಮ ವಾಹನದ ಇಂಧನ ಉಳಿತಾಯ ಪಕ್ಕಾ..

ಹಂತ 2 : ನಂತರದಲ್ಲಿ ಪರಿಸರ ಸ್ನೇಹಿ ರೂಟಿಂಗ್ ಅನ್ನು ಆನ್ ಮಾಡಲು ಇಂಧನ ಸಮರ್ಥ ಮಾರ್ಗಗಳಿಗೆ ಆದ್ಯತೆ ನೀಡಿ ಎಂಬ ಆಯ್ಕೆ ಬರಲಿದ್ದು, ಅದನ್ನು ಟ್ಯಾಪ್ ಮಾಡಿ. ಈ ವೇಳೆ ನಿಮ್ಮ ಎಂಜಿನ್ ಪ್ರಕಾರವನ್ನು ಆಯ್ಕೆ ಮಾಡಬೇಕಾಗುತ್ತದೆ. ಇದೆಲ್ಲಾ ಆದ ಮೇಲೆ ನಿಮ್ಮ ಗಮ್ಯಸ್ಥಾನವನ್ನು ಹುಡುಕಿದ ಬಳಿಕ ಕೆಳಗಿನ ಎಡಭಾಗದಲ್ಲಿ, ಡೈರೆಕ್ಷನ್ ಎಂಬ ಆಯ್ಕೆ ಕಾಣಿಸಿಕೊಳ್ಳಲಿದ್ದು, ಅದರ ಮೇಲೆ ಮಾಡಿ.

ಹಂತ 3 : ಇದೆಲ್ಲಾ ಮಾಡಿದ ಮೇಲೆ ಕೆಳಗಿನ ಬಾರ್‌ನಲ್ಲಿ ಮೇಲಕ್ಕೆ ಸ್ವೈಪ್ ಮಾಡಿ. ಇಲ್ಲಿ ಎಂಜಿನ್ ಪ್ರಕಾರವನ್ನು ಬದಲಾಯಿಸಿ ಎಂಬ ಆಯ್ಕೆ ಇರುತ್ತದೆ ಅದನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ವಾಹನದ ಇಂಜಿನ್‌ ಯಾವುದು ಅನ್ನೋದನ್ನು ಆಯ್ಕೆ ಮಾಡಿ. ಇದೆಲ್ಲಾ ಆದ ಮೇಲೆ ಮುಗಿದಿದೆ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿದ್ರೆ ಈ ವಿಶೇಷ ಫೀಚರ್ಸ್‌ ಆಕ್ಟಿವ್‌ ಆಗಲಿದೆ.

 ಗೂಗಲ್‌ ಮ್ಯಾಪ್ಸ್‌ನಲ್ಲಿ ವಿಶೇಷ ಫೀಚರ್ಸ್‌: ನಿಮ್ಮ ವಾಹನದ ಇಂಧನ ಉಳಿತಾಯ ಪಕ್ಕಾ..

ಇನ್ನು ಈ ವೇಳೆ ನೀವು ಯಾವುದೇ ಎಂಜಿನ್ ಪ್ರಕಾರವನ್ನು ಆಯ್ಕೆ ಮಾಡದೆ ಇದ್ದರೆ, ಪೆಟ್ರೋಲ್ ಡೀಫಾಲ್ಟ್ ಆಗಿ ಕಾಣಿಸಿಕೊಳ್ಳುತ್ತದೆ. ಪರಿಣಾಮ ಡೀಸೇಲ್‌ ವಾಹನ ಸವಾರರು ಇದರಿಂದ ಗೊಂದಲಕ್ಕೆ ಒಳಗಾಗಬಹುದು. ಹಾಗಿದ್ರೆ, ಮತ್ಯಾಕೆ ತಡ ನೀವು ನಿತ್ಯವೂ ಈ ಮ್ಯಾಪ್ಸ್‌ ಬಳಕೆ ಮಾಡಿಕೊಂಡು ಸಂಚಾರ ಮಾಡುತ್ತಿದ್ದರೆ ಈಗಲೇ ಈ ಸದುಪಯೋಗ ಪಡೆದುಕೊಳ್ಳಿ.

Best Mobiles in India

English summary
An option called 'Prefer fuel-efficient routes' will be given in Google Maps, by turning it on, fuel efficiency can be increased in vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+