Home
ಸುದ್ದಿಜಾಲ

ಗೂಗಲ್‌ ಮ್ಯಾಪ್‌ ಸೇರಿದ ಮೂರು ಪಬ್ಲಿಕ್‌ ಟ್ರಾನ್ಸ್‌ಫೋರ್ಟ್‌ ಫೀಚರ್ಸ್‌!

ಟೆಕ್‌ ಗುರು ಗೂಗಲ್ ಹಲವು ಹೊಸ ಅಪ್‌ಡೇಟ್‌ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಲೇ ಸಾಗಿ ಬಂದಿದ್ದು, ಆ ನಿಟ್ಟಿನಲ್ಲಿಗ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. ಈಗಾಗಲೇ ಹಲವು ಹೊಸ ಫೀಚರ್ಸ್‌ಗಳನ್ನು ಕಂಡಿರುವ ಗೂಗಲ್‌ ಮ್ಯಾಪ್‌ಗೆ ಇದೀಗ ಮತ್ತೆ ಮೂರು ಹೊಸ ಫೀಚರ್ಸ್‌ಗಳನ್ನು ಸೇರಿಸಿದ್ದು, ಭಾರತೀಯ ಬಳಕೆದಾರರಿಗೆ ಈ ಫೀಚರ್ಸ್‌ಗಳು ಬಹು ಉಪಯುಕ್ತ ಎನಿಸಲಿವೆ.

ಗೂಗಲ್‌ ಮ್ಯಾಪ್‌ ಸೇರಿದ ಮೂರು ಪಬ್ಲಿಕ್‌ ಟ್ರಾನ್ಸ್‌ಫೋರ್ಟ್‌ ಫೀಚರ್ಸ್‌!

ಹೌದು, ಗೂಗಲ್‌ ಸಂಸ್ಥೆಯು ತನ್ನ ಗೂಗಲ್‌ ಮ್ಯಾಪ್‌ ನಲ್ಲಿ ಮೂರು ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದ್ದು, ಇನ್ಮುಂದೆ ಬಳಕೆದಾರರು ಬಸ್‌ ಲೈವ್‌ ಪ್ರಯಾಣ ಸಮಯವನ್ನು, ಟ್ರೈನ್‌ಗಳ ಲೈವ್‌ ಮಾಹಿತಿಯನ್ನು ಮತ್ತು ಆಟೋ ರಿಕ್ಷಾ ಸಾರಿಗೆಗಳ ಮಾಹಿತಿಗಳನ್ನು ತಿಳಿಸುವ ಆಯ್ಕೆಗಳು ಗೂಗಲ್‌ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳಲಿವೆ. ಹಾಗಾದರೇ ಗೂಗಲ್‌ ಮ್ಯಾಪ್‌ ಸೇರಿರುವ ಮೂರು ಹೊಸ ಫೀಚರ್ಸ್‌ಗಳು ಯಾವುವು ಮತ್ತು ಭಾರತದ ಯಾವ ನಗರಗಳಲ್ಲಿ ಲಭ್ಯ ಎನ್ನುವ ಮಾಹಿತಿಯನ್ನು ಮುಂದೆ ನೋಡೋಣ.

ಬಸ್ ಪ್ರಯಾಣದ ಸಮಯ

ಬಸ್ ಪ್ರಯಾಣದ ಸಮಯ

ಗೂಗಲ್‌ ಮ್ಯಾಪ್‌ನಲ್ಲಿ ಬಸ್‌ ಪ್ರಯಾಣದ ಸಮಯ ಆಯ್ಕೆ ಸೇರ್ಪಡೆ ಆಗಿದ್ದು, ಈ ಆಯ್ಕೆ ಮೂಲಕ ಬಳಕೆದಾರರು ಬಸ್‌ ನಿಗದಿತ ಸ್ಥಳ ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿಯಬಹುದು. ಚಲಿಸುವ ಮಾರ್ಗದಲ್ಲಿನ ಟ್ರಾಫಿಕ್‌ ಬಗ್ಗೆ ಮಾಹಿತಿ ಸೀಗಲಿದೆ. ಟ್ರಾಫಿಕ್‌ನಿಂದ ಪ್ರಯಾಣ ಅವಧಿಯಲ್ಲಿ ಎಷ್ಟು ವಿಳಂಬ ಆಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಲಿದೆ.

ಲೈವ್‌ ಟ್ರೈನ್‌ ಸ್ಟೇಟಸ್

ಲೈವ್‌ ಟ್ರೈನ್‌ ಸ್ಟೇಟಸ್

ಬಳಕೆದಾರರಿಗೆ ಗೂಗಲ್‌ ಮ್ಯಾಪ್‌ನಲ್ಲಿ ಇನ್ನು ಭಾರತೀಯ ಟ್ರೈನ್‌ಗಳ ಲೈವ್‌ ಸ್ಟೇಟಸ್‌ ಮಾಹಿತಿ ದೊರೆಯಲಿದ್ದು, ಟ್ರೈನ್‌ಗಳ ಆಗಮನದಲ್ಲಿನ ವಿಳಂಬ, ನಿಗದಿತ ಸ್ಥಳ ತಲಪುವ ಸಮಯ ಸೇರಿದಂತೆ ಒಟ್ಟಾರೆ ಟ್ರೈನ್‌ನ ರಿಯಲ್‌ ಟೈಮ್‌ ಲೈವ್‌ ಮಾಹಿತಿಗಳು ಲಭ್ಯ. ಗೂಗಲ್ ಮೈ ಟ್ರೈನ್‌ ಆಪ್‌ನ ಸಂಯೋಜನೆಯೊಂದಿಗೆ ಈ ಫೀಚರ್‌ ಅಭಿವೃದ್ದಿ ಮಾಡಿದೆ.

ಆಟೋ-ರಿಕ್ಷಾ ಮಾಹಿತಿ

ಆಟೋ-ರಿಕ್ಷಾ ಮಾಹಿತಿ

ಗೂಗಲ್ ಮ್ಯಾಪ್‌ ಆಟೋ-ರಿಕ್ಷಾ ಮತ್ತು ಇತರೆ ಸಾರ್ವಜನಿಕ ಸಾರಿಗೆಗಳ ಸಂಯೋಜನೆ ಮಾಡಿದ್ದು, ಇವುಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ಸೀಗಲಿದೆ. ನಿಗದಿತ ಸ್ಥಳದಿಂದ ತಲುಪಬೇಕಿರುವ ಸ್ಥಳಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಯಾವ ನಿಲ್ದಾಣದಿಂದ ಆಟೋ ಲಭ್ಯತೆ ಸೂಚಿಸಲಿದೆ. ಹಾಗೆಯೇ ಅಂದಾಜು ಆಟೋ ಮೀಟರ್ ಎಷ್ಟಾಗಲಿದೆ ಎನ್ನುವುದನ್ನು ತಿಳಿಸುತ್ತದೆ.

10 ನಗರಗಳಲ್ಲಿ ಲಭ್ಯ

10 ನಗರಗಳಲ್ಲಿ ಲಭ್ಯ

ಗೂಗಲ್‌ ಮ್ಯಾಪ್‌ನಲ್ಲಿ ಸೇರಿರುವ ಮೂರು ಹೊಸ ಫೀಚರ್ಸ್‌ಗಳು ಆರಂಭದಲ್ಲಿ ಭಾರತದಲ್ಲಿನ 10 ನಗರಗಳಲ್ಲಿನ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಅವುಗಳೆಂದರೇ ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಪುಣೆ, ಲಕ್ನೋ, ಚೆನ್ನೈ, ಮೈಸೂರು, ಕೊಯಮತ್ತೂರು ಮತ್ತು ಸೂರತ್. ಈ ನಗರಗಳ ಬಳಕೆದಾರರು ಪ್ರಯಾಣ ಸಮಯದ ಲೈವ್‌ ಮಾಹಿತಿ ತಿಳಿಯಬಹುದು.

Best Mobiles in India

English summary
Google Maps launches three new public transport features in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+