Just In
Don't Miss
- News
Pervez Musharraf death: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ 79 ನಿಧನ
- Movies
Hitler Kalyana: 400 ಸಂಚಿಕೆ ಪೂರೈಸಿದ ಎಜೆ- ಲೀಲಾ ಕಥೆ: ಸಂಭ್ರಮಾಚರಣೆ ಮಾಡಿದ ತಂಡ
- Sports
BGT 2023: ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ; ಮತ್ತೋರ್ವ ಸ್ಟಾರ್ ವೇಗಿ ಮೊದಲ ಟೆಸ್ಟ್ನಿಂದ ಔಟ್!
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೂಗಲ್ ಮ್ಯಾಪ್ ಸೇರಿದ 'ಪಬ್ಲಿಕ್ ಟಾಯ್ಲೆಟ್' ಲೊಕೇಶನ್!
ಟೆಕ್ ದೈತ್ಯ ಗೂಗಲ್ ಸಂಸ್ಥೆಯು ಗೂಗಲ್ ಮ್ಯಾಪ್‌ನಲ್ಲಿ ಇತ್ತೀಚಿಗಷ್ಟೆ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಸೇರಿಸಿದ್ದು, ಬಳಕೆದಾರರಿಗೆ ಗೂಗಲ್ ಮ್ಯಾಪ್ ಈಗ ಮತ್ತಷ್ಟು ಸುಲಭವಾಗಿದೆ. ಆದ್ರೆ ಕಂಪನಿಯು ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಿದ್ದು, ಮಹತ್ತರ ಕ್ಯಾಂಪೈನ್‌ನಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ಮತ್ತೆರಡು ನೂತನ ಫೀಚರ್ಸ್‌ಗಳು ಗೂಗಲ್ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಇವು ಬಳಕೆದಾರರಿಗೆ ಅನುಕೂಲಕರವಾಗಿವೆ.

ಹೌದು, ಗೂಗಲ್ ಸಂಸ್ಥೆಯು ಕೇಂದ್ರ ಸರ್ಕಾರದ 'Loo review' ಕ್ಯಾಂಪೈನ್ ಜೊತೆಗೆ ಕೈಜೋಡಿಸಿದ್ದು, ಸುಮಾರು 45,000 ಕಮ್ಯೂನಿಟಿ ಮತ್ತು ಪಬ್ಲಿಕ್ ಟಾಯ್ಲೆಟ್‌ಗಳ ಲೋಕೆಶನ್ ಅನ್ನು ಗೂಗಲ್ ಮ್ಯಾಪ್‌ನಲ್ಲಿ ಸೇರಿಸಿದೆ. 'Loo review' ಕ್ಯಾಂಪೈನ್ ಇದೊಂದು ಟ್ರಾವೆಲರ್ ಗೈಡ್ ತರಹ ಆಗಿದ್ದು, ಪ್ರಯಾಣಿಕರು ಪಬ್ಲಿಕ್ ಟಾಯ್ಲೆಟ್‌ಗಳ ಬಗ್ಗೆ ರಿವ್ಯೂ ಬರೆಯಲು ಮತ್ತು ರೇಟಿಂಗ್ ನೀಡಲು ಪ್ರೇರೆಪಿಸುವುದಾಗಿದೆ.

ಗೂಗಲ್ ಸಂಸ್ಥೆಯು ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದ ಜೊತೆ ಸೇರಿ ಈಗಾಗಲೇ ಭಾರತದ ಸುಮಾರು 1,700 ನಗರಗಳ ಪಬ್ಲಿಕ್ ಟಾಯ್ಲೆಟ್‌ಗಳ ಲೊಕೇಶನ್ ಸೇರಿಸಲಾಗಿದೆ. ಲೋಕಲ್ ಗೈಡ್‌ಗಳಿಗೆ ಪಬ್ಲಿಕ್ ಟಾಯ್ಲೆಟ್‌ಗಳ ಕುರಿತು ರಿವ್ಯೂ ಬರೆಯಲು ಉತ್ತೇಜಿಸುವುದು. ಪ್ರಯಾಣಿಕರು 'ಪಬ್ಲಿಕ್ ಟಾಯ್ಲೆಟ್ ನಿಯರ್ ಮಿ ಹೆಸರಿನಿಂದ ಸರ್ಚ್ ಮಾಡಬಹುದಾಗಿದೆ.

ಹಾಗೆಯೇ ಗೂಗಲ್ ಹೊಸದಾಗಿ 'ಬೈಕ್ ಶೇರಿಂಗ್ ಸ್ಟೇಶನ್ ಮಾಹಿತಿ' ಆಯ್ಕೆಯನ್ನು ಸಹ ಗೂಗಲ್‌ನ ಮ್ಯಾಪ್‌ನಲ್ಲಿ ಪರಿಚಯಿಸಲಿದ್ದು, ಈ ಆಯ್ಕೆಯಲ್ಲಿ ಬಳಕೆದಾರರಿಗೆ ಶೇರಿಂಗ್ ಬೈಕ್‌ಗಳ ಲಭ್ಯತೆಯ ಬಗ್ಗೆ ಮಾಹಿತಿ ಸೀಗಲಿದೆ. ನ್ಯೂಯಾರ್ಕ ಸಿಟಿಯಲ್ಲಿ ಮೊದಲು ಆರಂಭವಾದ ಈ ಫೀಚರ್ ಈಗ ಲಂಡನ್, ಚಿಕಾಗೊ, ಸ್ಯಾನ್‌ಫ್ರಾನ್ಸಿಸ್ಕೋ, ಬರ್ಲಿನ್, ಬಾರ್ಸಿಲೋನಾ, ಮೆಕ್ಸಿಕೊ ಸಿಟಿ ಸೇರಿದಂತೆ ಸುಮಾರು 23 ರಾಷ್ಟ್ರಗಳಲ್ಲಿ ಲಭ್ಯವಾಗಲಿದೆ.
ITO World ಟ್ರಾನ್ಸಿಸ್ಟ್ ಕಂಪನಿಯ ಸಹಯೋಗದೊಂದಿಗೆ ಗೂಗಲ್ ತನ್ನ 'ಗೂಗಲ್ ಮ್ಯಾಪ್'ನಲ್ಲಿ 'ಬೈಕ್ ಶೇರಿಂಗ್ ಸ್ಟೇಶನ್' ಫೀಚರ್ ಅನ್ನು ಅಳವಡಿಸಿದೆ. ಬಳಕೆದಾರರ ಲೊಕೇಶನ್ ವ್ಯಾಪ್ತಿಯಲ್ಲಿ ಬೈಕ್ ಲಭ್ಯತೆ ಇದೆಯೋ ಅಥವಾ ಇಲ್ಲವೋ ಎನ್ನುವ ಮಾಹಿತಿ ಸೀಗಲಿದೆ. ಈ ಎರಡು ನೂತನ ಫೀಚರ್ಸ್‌ಗಳು ಆಂಡ್ರಾಯ್ಡ್ ಮತ್ತು ಐಫೋನ್ ಆಪರೇಟಿಂಗ್ ಸಿಸ್ಟಮ್ ಬಳಕೆದಾರರಿಬ್ಬರಿಗೂ ಲಭ್ಯವಾಗಲಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470