ಟ್ರೇನ್‌ನಲ್ಲಿ ಖಾಲಿ ಸೀಟ್ ಲಭ್ಯತೆಯ ಮಾಹಿತಿ ಕಲೆಹಾಕಲಿದೆ ಗೂಗಲ್!

|

ಟೆಕ್‌ ದಿಗ್ಗಜ ಗೂಗಲ್‌ ಇತ್ತೀಚಿಗಷ್ಟೆ ತನ್ನ 'ಗೂಗಲ್‌ ಪೇ' ಆಪ್‌ನಲ್ಲಿ ರೇಲ್ವೆ ಟಿಕೆಟ್ ಬುಕ್‌ ಮಾಡುವ ಆಯ್ಕೆಯನ್ನು ಪರಿಚಯಿಸಿದ್ದು, ಅದರ ಬೆನ್ನಲ್ಲೇ ಇದೀಗ ಗೂಗಲ್‌ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್‌ ಒಂದನ್ನು ಪರಿಚಯಿಸಲು ಮುಂದಾಗಿದೆ. ನೀವು ಪ್ರಯಾಣಿಸುವ ಟ್ರೇನ್‌ನಲ್ಲಿ ಎಷ್ಟು ಕ್ರೌಡ್‌ ಇದೆ ಎಂಬುದರ ಮಾಹಿತಿಯನ್ನು ನಿಮ್ಮಿಂದಲೆ ನೋಟಿಫಿಕೇಶನ್‌ ಮೂಲಕ ಕಲೆಹಾಕಲಿದೆ.

ಟ್ರೇನ್‌ನಲ್ಲಿ ಖಾಲಿ ಸೀಟ್ ಲಭ್ಯತೆಯ ಮಾಹಿತಿ ಕಲೆಹಾಕಲಿದೆ ಗೂಗಲ್!

ಹೌದು, ಗೂಗಲ್ ಮ್ಯಾಪ್‌ ಪ್ರಯಾಣಿಸುವ (ಟ್ರೇನ್‌ ಅಥವಾ ಬಸ್‌) ಸಾರಿಗೆ ಎಷ್ಟು ಗದ್ದಲವಾಗಿದೆ, ಖಾಲಿ ಸೀಟ್ ಇದೆಯಾ ಎಂಬುದನ್ನು ತಿಳಿಯಲು ಮುಂದಾಗಿದ್ದು, ಈ ಕುರಿತು ಬಳಕೆದಾರರಿಂದಲೇ ಮಾಹಿತಿ ಕಲೆಹಾಕಲಿದೆ. ಗೂಗಲ್ ಮಾಹಿತಿ ಪಡೆಯಲು ಗೂಗಲ್ ಮ್ಯಾಪ್‌ನಲ್ಲಿ ನೋಟಿಫಿಕೇಶನ್‌ ನೀಡಲಿದ್ದು, ಅದರಲ್ಲಿ ಸೀಟ್ ಖಾಲಿ ಇರುವ ಕುರಿತು ಹಲವು ಆಯ್ಕೆಗಳನ್ನು ಸಹ ನೀಡಲಿದೆ.

ಟ್ರೇನ್‌ನಲ್ಲಿ ಖಾಲಿ ಸೀಟ್ ಲಭ್ಯತೆಯ ಮಾಹಿತಿ ಕಲೆಹಾಕಲಿದೆ ಗೂಗಲ್!

ಗೂಗಲ್ ಮ್ಯಾಪ್‌ ಅನ್ನು ಸಕ್ರಿಯವಾಗಿ ಬಳಕೆಮಾಡುವ ಮತ್ತು ಲೋಕೆಶನ್ ಆಯ್ಕೆಯನ್ನು ಆನ್ ಮಾಡಿಕೊಂಡಿರುವ ಬಳಕೆದಾರರಿಗೆ ಗೂಗಲ್‌ನಿಂದ ಸೀಟ್ ಕುರಿತಾಗಿ ನೋಟಿಫಿಕೇಶನಗಳು ಬರಲಿದ್ದು, ಬಳಕೆದಾರರು ಆ ನೋಟಿಫಿಕೇಶನಗೆ ಅಲ್ಲಿ ನೀಡಿರುವ ಆಯ್ಕೆಗಳಲ್ಲಿ ಪ್ರತಿಕ್ರಿಯಿಸಬೇಕು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಈ ನೋಟಿಫಿಕೇಶ ಕೆಲವು ಬಳಕೆದಾರರು ಪಡೆದಿದ್ದಾರೆ ಎನ್ನಲಾಗಿದೆ.

ಟ್ರೇನ್‌ನಲ್ಲಿ ಖಾಲಿ ಸೀಟ್ ಲಭ್ಯತೆಯ ಮಾಹಿತಿ ಕಲೆಹಾಕಲಿದೆ ಗೂಗಲ್!

ಗೂಗಲ್‌ನಿಂದ ಬರುವ ನೋಟಿಫಿಕೇಶನಲ್ಲಿ ಬಹಳ ಸೀಟ್ ಖಾಲಿ ಇವೆ, ಕೆಲವು ಸೀಟ್ ಖಾಲಿ ಇವೆ, ಸ್ಟ್ಯಾಂಡಿಂಗ್‌ ರೂಮ್‌ ಮಾತ್ರ, ಮತ್ತು ಕ್ರಶ್‌ಡ್ ಸ್ಟ್ಯಾಂಡಿಂಗ್ ರೂಮ್‌ ಮಾತ್ರ ಎಂಬ ಆಯ್ಕೆಗಳ ಕಾಣಿಸಿಕೊಳ್ಳುತ್ತವೆ ಬಳಕೆದಾರರಿಗೆ ಟ್ರೇನ್‌ನಲ್ಲಿಯ ಸನ್ನಿವೇಶ ನೋಡಿ ಈ ಆಯ್ಕೆಗಳಲ್ಲಿ ಒಂದಕ್ಕೆ ಪ್ರತಿಕ್ರಿಯಿಸಬೇಕು. ಒಂದು ವೇಳೆ ಪ್ರತಿಕ್ರಿಯಿಸಲು ಇಷ್ಟವಿಲ್ಲದಿದ್ದರೇ ಅದಕ್ಕಾಗಿಯು ಕೊನೆಯಲ್ಲಿ ಒಂದು ಆಯ್ಕೆ ನೀಡಿರಲಿದೆ.

ಈ ಹೊಸ ಆಯ್ಕೆಯನ್ನು ಗೂಗಲ್ ಶೀಘ್ರದಲ್ಲೇ ಭಾರತದಲ್ಲಿ ಪರಿಚಯಿಸಲಿದೆ ಎನ್ನಲಾಗುತ್ತಿದ್ದು, ಲೋಕೆಶನ್ ಆನ್‌ ಮಾಡಿಕೊಂಡಿರುವ ಬಳಕೆದಾರರಿಗೆ ಗೂಗಲ್ ನೋಟಿಫಿಕೇಶ ದೊರೆಯಲಿದೆ. ಆ ಬಳಕೆದಾರರ ಪ್ರತಿಕ್ರಿಯೆ ಆಧಾರದ ಮೇಲೆ ಗೂಗಲ್ ಸೀಟ್ ಖಾಲಿ ಇದೆಯಾ ಮತ್ತು ಟ್ರೇನ್ ತುಂಬಿದೆಯಾ ಎನ್ನುವ ಮಾಹಿತಿ ಕಲೆಹಾಕಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಸೀಟ್‌ ಲಭ್ಯತೆ ಬಗ್ಗೆ ಮಾಹಿತಿ ತಿಳಿಸುವ ಫೀಚರ್‌ನ ಪೂರ್ವಭಾವಿ ಕೆಲಸ ಇದಾಗಿರಬಹುದು.

ಓದಿರಿ : ಏರ್‌ಟೆಲ್‌ನ ಡಿಜಿಟಲ್ ನಡೆ!..ಹೊಸದಾಗಿ 'ಇ-ಪುಸ್ತಕ' ಸೇವೆ ಆರಂಭ! ಓದಿರಿ : ಏರ್‌ಟೆಲ್‌ನ ಡಿಜಿಟಲ್ ನಡೆ!..ಹೊಸದಾಗಿ 'ಇ-ಪುಸ್ತಕ' ಸೇವೆ ಆರಂಭ!

Best Mobiles in India

English summary
Google Maps is now gathering information about how crowded your train is.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X