ರಾಜ್ಯೋತ್ಸವದ ಸಂಭ್ರದಲ್ಲಿರುವ ಕನ್ನಡಿಗರಿಗೆ ಗೂಗಲ್ ಕೊಟ್ಟ ಉಡುಗೊರೆ ತಿಳಿಯಲೇ ಇಲ್ಲ..!!
ನೆರೆಯ ಆಂಧ್ರ-ತಮಿಳುನಾಡು ಸೇರಿದಂತೆ ಎಲ್ಲಾ ರಾಜ್ಯಗಳ ಮ್ಯಾಪ್‌ನಲ್ಲಿ ಸ್ಥಳೀಯ ರಾಜ್ಯಗಳ ಭಾಷೆಯಲ್ಲಿ ಮಾಹಿತಿಯನ್ನು ನೀಡುತ್ತಿದ್ದ ಗೂಗಲ್ ಮ್ಯಾಪ್, ಇದುವರೆಗೂ ಕನ್ನಡದಲ್ಲಿ ಮಾಹಿತಿಯನ್ನು ನೀಡುತ್ತಿರಲಿಲ್ಲ.
ನವೆಂಬರ್ 01 ಕನ್ನಡ ರಾಜ್ಯೋತ್ಸವ ಆಚರಿಸಿದ ಕನ್ನಡಿಗರಿಗೆ ಸದ್ದಿಲ್ಲದೇ ಸರ್ಚ್ ಇಂಜಿಜನ್ ದೈತ್ಯ ಗೂಗಲ್ ಅದ್ಧೂರಿ ಕೊಡುಗೆಯೊಂದನ್ನು ನೀಡಿದೆ. ಕನ್ನಡಿಗರ ಬಹು ದಿನಗಳ ಬಯಕೆಯನ್ನು ಇಡೇರಿಸಿದ್ದು, ಕನ್ನಡಕ್ಕೆ ವಿಶ್ವ ಮಾನ್ಯತೆ ದೊರೆಯುವಲ್ಲಿ ಸಹಯಕಾರಿಯಾಗಿದೆ.

ಓದಿರಿ: ಡ್ಯುಯಲ್ ಸೆಲ್ಫಿ ಕ್ಯಾಮೆರಾ, 3GB RAM ಇರುವ ZTE ಬ್ಲೆಡ್ A3 ನಂಬಲಾಗದ ಬೆಲೆಯಲ್ಲಿ..!!
ನೆರೆಯ ಆಂಧ್ರ-ತಮಿಳುನಾಡು ಸೇರಿದಂತೆ ಎಲ್ಲಾ ರಾಜ್ಯಗಳ ಮ್ಯಾಪ್‌ನಲ್ಲಿ ಸ್ಥಳೀಯ ರಾಜ್ಯಗಳ ಭಾಷೆಯಲ್ಲಿ ಮಾಹಿತಿಯನ್ನು ನೀಡುತ್ತಿದ್ದ ಗೂಗಲ್ ಮ್ಯಾಪ್, ಇದುವರೆಗೂ ಕನ್ನಡದಲ್ಲಿ ಮಾಹಿತಿಯನ್ನು ನೀಡುತ್ತಿರಲಿಲ್ಲ. ಆದರೆ ನವೆಂವರ್ 1 ರಿಂದ ಕನ್ನಡದಲ್ಲಿ ಗೂಗಲ್ ಮ್ಯಾಪ್ ಸೇವೆ ಆರಂಭವಾಗಿದೆ.

ಕನ್ನಡಿಗರಿಗೆ ಭರ್ಜರಿ ಗಿಫ್ಟ್:
ರಾಜ್ಯೋತ್ಸವದ ಸಂಭ್ರಮದಲ್ಲಿದ್ದ ಕನ್ನಡಿಗರಿಗೆ ಗೂಗಲ್ ಅಚ್ಚರಿಯ ಗಿಫ್ಟ್ ನೀಡುತ್ತಿದೆ. ಈ ಹಿಂದೆಯೇ ಗೂಗಲ್ ಮ್ಯಾಪಿನಲ್ಲಿ ಕನ್ನಡದಲ್ಲಿ ಸ್ಥಳಗಳ ಹೆಸರನ್ನು ನೀಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಆದರೆ ಇದು ಈ ಸಕಾರವಾಗಿದೆ.

ಕನ್ನಡದಲ್ಲಿ ಊರುಗಳ ಹೆಸರು:
ಗೂಗಲ್ ಮ್ಯಾಪಿನಲ್ಲಿ ಕರ್ನಾಟಕದ ಊರುಗಳನ್ನು ಹುಡುಕುವ ಸಂದರ್ಭದಲ್ಲಿ ಇಂಗ್ಲಿಷ್ ನೊಂದಿಗೆ ಕನ್ನಡದಲ್ಲಿಯೂ ಊರುಗಳ ಹೆಸರನ್ನು ತೋರಿಸಲು ಗೂಗಲ್ ಮುಂದಾಗಿದೆ

ಮೊಬೈಲ್‌ನಲ್ಲೂ ಲಭ್ಯ:
ಗೂಗಲ್ ಹೊಸದಾಗಿ ನೀಡುತ್ತಿರುವ ಮ್ಯಾಪ್ ಸೇವೆಯೂ ಕನ್ನಡದಲ್ಲಿ ಮೊಬೈಲ್ ಮತ್ತು ಡೆಸ್ಕ್ ಟಾಪ್ ನಲ್ಲಿಯೂ ದೊರೆಯಲಿದೆ. ಗೂಗಲ್ ಮ್ಯಾಪ್ ಎಲ್ಲಿ ಬಳಕೆಯಾಗುತ್ತದೆಯೋ ಅಲ್ಲಿ ಕನ್ನಡ ಇದೆ.

ಸರ್ಚ್ ನಲ್ಲಿ ಹೆಚ್ಚಿನ ಅವಕಾಶ:
ಗೂಗಲ್ ತನ್ನ ಮ್ಯಾಪಿನಲ್ಲಿ ಕನ್ನಡವನ್ನು ತೋರಿಸಲು ಶುರುಮಾಡಿರುವ ಹಿನ್ನಲೆಯಲ್ಲಿ ಗೂಗಲ್ ಸರ್ಚಿನಲ್ಲಿಯೂ ಕನ್ನಡಕ್ಕೆ ಹೆಚ್ಚು ಅವಕಾಶ ದೊರೆಯಲಿದೆ. ನಾವು ಹೆಚ್ಚು ಕನ್ನದಲ್ಲಿ ಸರ್ಚ್ ಮಾಡಿದಷ್ಟು ಗೂಗಲ್ ಕನ್ನಡಕ್ಕೆ ಆದ್ಯತೆ ನೀಡಲಿದೆ.


ಕನ್ನಡ ಬಳಕೆ ಹೆಚ್ಚಿಸಿ:
ಗೂಗಲ್ ನಲ್ಲಿ ಹೆಚ್ಚು ಹುಡುಕುವವರು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕನ್ನಡವನ್ನು ಬಳಕೆ ಮಾಡಿಕೊಳ್ಳಲು ಮುಂದಾದರೆ ಗೂಗಲ್ ಸಹ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಿದೆ.


Click it and Unblock the Notifications








