Subscribe to Gizbot

ಗೂಗಲ್ ಟೈಮ್‌ಲೈನ್: ನಿಮ್ಮ ಪ್ರಯಾಣದ ಜೊತೆಗಾರ

Written By:

ಗೂಗಲ್ ಕಳೆದ ವಾರವಷ್ಟೇ ತನ್ನ ಗೂಗಲ್ ಮ್ಯಾಪ್‌ಗಳಲ್ಲಿ ಹೊಸ ಫೀಚರ್ ಆದ ಟೈಮ್‌ಲೈನ್ ಅನ್ನು ಪರಿಚಯಿಸಿದೆ. ನಿಮ್ಮಿಂದ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳದೆಯೇ ನಿಮ್ಮ ಲೊಕೇಶನ್ ಇತಿಹಾಸವನ್ನು ಈ ಹೊಸ ಫೀಚರ್ ಸ್ವಯಂಚಾಲಿತವಾಗಿ ಟ್ರ್ಯಾಕ್ ಮಾಡುತ್ತದೆ.

ಓದಿರಿ: ರೂ 5,000 ದ ಒಳಗಿನ ಫೋನ್ ಖರೀದಿಯೇ ಇದುವೇ ಬೆಸ್ಟ್!

ನೀವು ಎಲ್ಲಿಗೆ ಹೋಗಿದ್ದೀರಿ ಮತ್ತು ಆ ಸಮಯದಲ್ಲಿ ಗೂಗಲ್ ಪ್ರವೇಶಿಸಲು ನೀವು ಡಿವೈಸ್ ಅನ್ನು ಬಳಸಿದ್ದೀರಾ ಎಂಬುದನ್ನು ಇದು ಟ್ರ್ಯಾಕ್ ಮಾಡುತ್ತದೆ. ನೀವು ನಿಮ್ಮ ಜೀವನ ಕಾಲದಲ್ಲಿ ಗೂಗಲ್ ಮ್ಯಾಪ್ಸ್ ಅನ್ನು ಬಳಸಿಲ್ಲ ಎಂದಾದಲ್ಲಿ, ನೀವು ಲಾಗಿನ್ ಮಾಡಿರುವ ಡಿವೈಸ್‌ಗಳಲ್ಲಿ ಟೈಮ್‌ಲೈನ್ ಹೊಂದಿರುತ್ತೀರಿ.

ಓದಿರಿ: ಗ್ರಾಮೀಣ ಭಾಗಕ್ಕೂ ಉಚಿತ ಇಂಟರ್ನೆಟ್: ಗೂಗಲ್‌ನ ಬಲೂನ್ ಕಮಾಲು

ವೆಬ್ ಬ್ರೌಸರ್‌ನಲ್ಲಿ ಗೂಗಲ್ ಮ್ಯಾಪ್ಸ್ ಟೈಮ್‌ಲೈನ್ ಪೇಜ್‌ಗೆ ಭೇಟಿ ನೀಡುವ ಮೂಲಕ ಮತ್ತು ಗೂಗಲ್ ಖಾತೆಯೊಂದಿಗೆ ಲಾಗಿನ್ ಮಾಡಿ ನಿಮ್ಮ ಟೈಮ್‌ಲೈನ್ ಅನ್ನು ಕಾಣಬಹುದು. ಇಂದಿನ ಲೇಖನದಲ್ಲಿ ಗೂಗಲ್ ಟೈಮ್‌ಲೈನ್ ಕುರಿತ ಮತ್ತಷ್ಟು ವಿವರವಾದ ಅಂಶಗಳನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೈಮ್‌ಲೈನ್ ವ್ಯೂ
  

ಗೂಗಲ್ ಮ್ಯಾಪ್ಸ್ ಟೈಮ್‌ಲೈನ್‌ಗೆ ಲಾಗಿನ್ ಮಾಡಿದಾಗ, ಇದುವರೆಗಿನ ಸಂಪೂರ್ಣ ಲೊಕೇಶನ್ ಇತಿಹಾಸ ನಿಮಗೆ ದೊರೆಯುತ್ತದೆ. ನೀವು ಭೇಟಿ ನೀಡಿರುವ ಸ್ಥಳಗಳನ್ನು ಟೈಮ್‌ಲೈನ್ ತೋರಿಸುತ್ತದೆ.

ಹಲವಾರು ವರ್ಷಗಳ ಟೈಮ್‌ಲೈನ್ ವೀಕ್ಷಣೆ
  

ಹಲವಾರು ವರ್ಷಗಳ ಹಿಂದಿನ ಲೊಕೇಶನ್ ಇತಿಹಾಸವನ್ನು ಟೈಮ್‌ಲೈನ್ ತೋರಿಸುತ್ತದೆ.

ಆ ಕಾಲದಲ್ಲಿ ಮಾಡಿದ ಪ್ರಯಾಣಗಳು
  

ನಿಮ್ಮ ನಗರದಿಂದ ಹೊರಪ್ರದೇಶಕ್ಕೆ ಭೇಟಿ ಮಾಡಿದ ಸ್ಥಳಗಳನ್ನು ಟ್ರಿಪ್ಸ್ ಎಂಬ ಹೆಸರಿನಿಂದ ಟೈಮ್‌ಲೈನ್ ಕರೆಯುತ್ತದೆ. ನಗರದೊಳಗೆ ನೀವು ಪ್ರಯಾಣ ಮಾಡಿರುವ ಮಾಹಿತಿ ಇಲ್ಲಿ ದೊರೆಯುವುದಿಲ್ಲ

ಟ್ರಿಪ್ ವಿವರಗಳು
  

ನೀವು ಭೇಟಿ ಮಾಡಿರುವ ಎಲ್ಲಾ ವಿವರಗಳನ್ನು ಟ್ರಿಪ್ ಡೀಟೈಲ್ಸ್ ತೋರಿಸುತ್ತದೆ. ನಿರ್ದಿಷ್ಟ ದಿನಾಂಕದಲ್ಲಿ ನೀವು ಭೇಟಿ ಮಾಡಿರುವ ಸ್ಥಳಗಳ ವಿವರಗಳನ್ನು ದಿನಾಂಕ ಮತ್ತು ಸಮಯದ ಮೂಲಕ ವಿಂಗಡಿಸಲಾಗುತ್ತದೆ.

ಹೆಚ್ಚು ಭೇಟಿ ನೀಡಿದ ಸ್ಥಳಗಳು
  

ನೀವು ಹೆಚ್ಚು ಭೇಟಿ ಮಾಡಿರುವ ಸ್ಥಳಗಳನ್ನು ಟೈಮ್‌ಲೈನ್ ತೋರಿಸುತ್ತದೆ.

ನೀವು ತೆಗೆದ ಚಿತ್ರಗಳು
  

ಪ್ರಯಾಣದ ವೇಳೆಯಲ್ಲಿ ನೀವು ತೆಗೆದ ಚಿತ್ರಗಳನ್ನು ಇದು ತೋರಿಸುತ್ತದೆ.

ಬಾರ್ ಗ್ರಾಫ್
  

ಪ್ರತೀ ದಿನವನ್ನು ಪ್ರತ್ಯೇಕಿಸುವ ಗ್ರಾಫಿಕಲ್ ಪ್ರಸ್ತುತಿಯನ್ನು ಬಾರ್ ಗ್ರಾಫ್ ತೋರಿಸುತ್ತದೆ

ಲೊಕೇಶನ್ ಇತಿಹಾಸ ಪಾಸ್ ಮಾಡುವುದು
  

ನೀವು ಲೊಕೇಶನ್ ಇತಿಹಾಸವನ್ನು ಪಾಸ್ ಮಾಡಿದಾಗ, ನೀವು ಹೋಗುವ ಸ್ಥಳಕ್ಕೆಲ್ಲಾ ನಿಮ್ಮ ಡಿವೈಸ್‌ಗಳೊಂದಿಗೆ ಹೋಗುವಾಗ ನಿಮ್ಮ ಲೊಕೇಶನ್ ಇತಿಹಾಸ ಮ್ಯಾಪ್‌ಗೆ ಸೇರಿಸುವುದು ನಿಲ್ಲುತ್ತದೆ.

ಸ್ಟಾಪ್ ಲೊಕೇಶನ್ ಶೇರಿಂಗ್
  

ನಿಮ್ಮ ಡೇಟಾವನ್ನು ಸ್ಥಳೀಯವಾಗಿ ಸಂಗ್ರಹಿಸುವುದನ್ನು ನೀವು ನಿಲ್ಲಿಸಬಹುದು. ಯಾವುದೇ ಡಿವೈಸ್‌ನಿಂದ ಗೂಗಲ್‌ ಸೆಟ್ಟಿಂಗ್ಸ್‌ಗೆ ಪ್ರವೇಶಿಸಿ ಮತ್ತು ಲೊಕೇಶನ್ ಶೇರಿಂಗ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

ಎಲ್ಲಾ ಲೊಕೇಶನ್ ಇತಿಹಾಸ ಅಳಿಸಿ
  

ನಿಮ್ಮ ಎಲ್ಲಾ ಲೊಕೇಶನ್ ಇತಿಹಾಸವನ್ನು ಗೂಗಲ್ ಅಳಿಸುತ್ತದೆ. ಟೈಮ್‌ಲೈನ್‌ಗೆ ಲಾಗಿನ್ ಮಾಡಿ ಮತ್ತು ಕೆಳಬಲಭಾಗದಲ್ಲಿರುವ ಗೇರ್ ಐಕಾನ್ ಕ್ಲಿಕ್ ಮಾಡಿ ಮತ್ತು 'ಡಿಲೀಟ್ ಆಲ್ ಲೊಕೇಶನ್ ಹಿಸ್ಟರಿ' ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
You can find your timeline by visiting the Google Maps Timeline page in the web browser and log in with your Google account. We came up with all the features of the Google Maps Timeline that you have to know. Have a look at the slider below to know more.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot