Home
ಸುದ್ದಿಜಾಲ

Google: ಏನೂ...ಇನ್ಮುಂದೆ ಗೂಗಲ್‌ ಸರ್ಚ್‌ಗೆ ಪಾವತಿ ಮಾಡಬೇಕೆ? ಏನಿದು ಹೊಸ ನಿಯಮ?

ನಾವು ಯಾವುದೇ ಮಾಹಿತಿಯನ್ನು ಪಡೆಯಲು ಮೊದಲು ಇಣುಕಿ ನೋಡುವುದು ಗೂಗಲ್‌ನಲ್ಲಿ. ಗೂಗಲ್‌ (Google) ಎಲ್ಲಾ ರೀತಿಯ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ನೀಡುತ್ತದೆ. ಅದರಲ್ಲೂ ಇತ್ತೀಚೆಗೆ ವಿಶೇಷ ಫೀಚರ್ಸ್‌ ಆಯ್ಕೆ ಸಹ ನೀಡಿದ್ದು, ಹಿಂದೆಂದಿಗಿಂತಲೂ ಈಗ ಹೆಚ್ಚಿನ ಅನುಭವ ಪಡೆಯಬಹುದಾಗಿದೆ.

ಹೌದು, ಗೂಗಲ್‌ ನಲ್ಲಿ ಸರ್ಚ್‌ ಮಾಡಿದ್ರೆ ಯಾವ ವಿಷಯ ತಾನೆ ಇಲ್ಲ ಎಂದು ಹೇಳುತ್ತದೆ ಹೇಳಿ. ಅಷ್ಟರ ಮಟ್ಟಿಗೆ ಇದು ಬಳಕೆದಾರರಿಗೆ ಅಗತ್ಯ ಇರುವ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ಆದರೆ ಈಗ ಈ ವಿಷಯದಲ್ಲಿ ಕೆಲವು ಬದಲಾವಣೆ ಆಗಲಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅದುವೇ ಚಂದಾದಾರಿಕೆ (Subscription). ಹಾಗಿದ್ರೆ ಏನಿದು ಹೊಸ ವಿಚಾರ?, ಯಾರೆಲ್ಲಾ ಪಾವತಿ ಮಾಡಬೇಕು?, ಇನ್ಮುಂದೆ ಫ್ರೀಯಾಗಿ ಈ ಸೇವೆ ಸಿಗುವುದಿಲ್ಲವೇ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಏನೂ...ಇನ್ಮುಂದೆ ಗೂಗಲ್‌ ಸರ್ಚ್‌ಗೆ ಪಾವತಿ ಮಾಡಬೇಕೆ? ಏನಿದು ಹೊಸ ನಿಯಮ?

ಎಐ ಚಾಲಿತ ಸರ್ಚ್‌ಗಾಗಿ ಶುಲ್ಕ: ಎಐ ಇಂದು ವ್ಯಾಪಕವಾಗುತ್ತಿದೆ. ಎಲ್ಲಾ ಕಡೆ ಇದನ್ನು ಒಂದಲ್ಲಾ ಒಂದು ರೀತಿ ಬಳಕೆ ಮಾಡಲಾಗುತ್ತಿದ್ದು, ಇದೀಗ ಗೂಗಲ್‌ ಸಹ ಈ ಎಐ ಬಳಕೆ ಮಾಡಿಕೊಂಡು ಬಳಕೆದಾರರಿಗೆ ವಿಭಿನ್ನ ಅನುಭವ ನೀಡುತ್ತಿದೆ. ಆದರೆ ಫೈನಾನ್ಷಿಯಲ್ ಟೈಮ್ಸ್‌ನ ವರದಿಯ ಪ್ರಕಾರ, ಗೂಗಲ್‌ ಎಐ ಚಾಲಿತ ಫೀಚರ್ಸ್‌ಗಾಗಿ ಪ್ರೀಮಿಯಂ ಚಂದಾದಾರಿಕೆಯನ್ನು ಪರಿಚಯಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಅಂದರೆ ಇನ್ಮುಂದೆ ಈ ಎಐ ಸೌಲಭ್ಯ ಪಡೆಯಲು ಬಳಕೆದಾರು ಇಂತಿಷ್ಟು ಎಂದು ಹಣ ಪಾವತಿ ಮಾಡಬೇಕಾಗುತ್ತದೆ. ಈ ವಿಷಯ ಕೇಳಿ ಕೆಲವರಿಗೆ ಗೊಂದಲ ಆಗಿರಬಹುದು. ಅದೇನೆಂದೆರ ನಾವೂ ಪಾವತಿ ಮಾಡಬೇಕೇ ಎಂದು. ವಿಷಯ ಏನೆಂದರೆ ಜಾಹೀರಾತುಗಳೊಂದಿಗೆ ಸಾಂಪ್ರದಾಯಿಕ ಸರ್ಚ್‌ ಸೌಲಭ್ಯ ಎಂದಿನಂತೆ ನಿಮಗೆ ಉಚಿತವಾಗಿ ಲಭ್ಯ ಇರುವುದರಿಂದ ಯಾವುದೇ ಹೆಚ್ಚುವರಿ ಹಣವನ್ನು ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಬದಲಾಗಿ ಎಐ ಫೀಚರ್ಸ್‌ ಅನ್ನು ಬಯಸುವವರು ಮಾತ್ರ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಏನೂ...ಇನ್ಮುಂದೆ ಗೂಗಲ್‌ ಸರ್ಚ್‌ಗೆ ಪಾವತಿ ಮಾಡಬೇಕೆ? ಏನಿದು ಹೊಸ ನಿಯಮ?

ಇನ್ನು ಸುಧಾರಿತ ಎಐ ಚಾಲಿತ ಕಾರ್ಯಚಟುವಟಿಕೆಗಳನ್ನು ಅದರ ಚಂದಾದಾರಿಕೆ ಸೇವೆಗಳಾದ ಜೆಮಿನಿ ಅಡ್ವಾನ್ಸ್ಡ್ ಅಥವಾ ಗೂಗಲ್ ಒನ್‌ಗಳಲ್ಲಿ ಸಂಯೋಜಿಸಲಾಗುವುದು ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ. ಗಮನಿಸಬೇಕಾದ ವಿಷಯ ಏನೆಂದರೆ ಪ್ರೀಮಿಯಂ ಆವೃತ್ತಿಯಲ್ಲಿ ಜಾಹೀರಾತುಗಳನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಆದರೆ ಸ್ಟ್ಯಾಂಡರ್ಡ್‌ ಆವೃತ್ತಿಯಲ್ಲಿ ಮಾತ್ರ ಇದು ಇರುವುದಿಲ್ಲ ಎಂದು ವರದಿಯಾಗಿದೆ.

ಈ ನಡುವೆ ಗೂಗಲ್ ತನ್ನ ಹೊಸ ಅತ್ಯಾಧುನಿಕ ಎಐ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ತನ್ನ ಸರ್ಚ್‌ ಎಂಜಿನ್ ಅನ್ನು ಉತ್ತಮಗೊಳಿಸಲು ಮುಂದಾಗಿದೆ. ಇದೆಲ್ಲವೂ ಗೂಗಲ್‌ಗೆ ಗಳಿಕೆಯ ಭಾಗವಾಗಿದೆ. ಯಾಕೆಂದರೆ ಕಳೆದ ವರ್ಷ ಗೂಗಲ್ ತನ್ನ ಸರ್ಚ್‌ ವಿಭಾಗದ ಜಾಹೀರಾತುಗಳಿಂದ $175 ಬಿಲಿಯನ್ ಗಳಿಸಿಕೊಂಡಿದೆ. ಇದರೊಂದಿಗೆ ಎಐ ಡೊಮೇನ್‌ನ ವಿಷಯದಲ್ಲಿ ಓಪನ್‌ಎಐ ನಂತಹ ಕಂಪನಿಗಳು ತೀವ್ರ ಸ್ಪರ್ಧೆಯನ್ನು ನೀಡುತ್ತಿವೆ. ಈ ಕಾರಣಕ್ಕೆ ಬಳಕೆದಾರರಿಗೆ ಉತ್ತಮವಾದದ್ದನ್ನು ನೀಡುವ ಮೂಲಕ ಗೂಗಲ್‌ ತನ್ನದೇ ಆದ ರೀತಿಯಲ್ಲಿ ಸ್ಪರ್ಧೆ ನೀಡುತ್ತಿದೆ.

ಏನೂ...ಇನ್ಮುಂದೆ ಗೂಗಲ್‌ ಸರ್ಚ್‌ಗೆ ಪಾವತಿ ಮಾಡಬೇಕೆ? ಏನಿದು ಹೊಸ ನಿಯಮ?

ಸರ್ಚ್ ಜನರೇಟಿವ್ ಎಕ್ಸ್‌ಪೀರಿಯನ್ಸ್: ಕಳೆದ ವರ್ಷದ ಮೇ ತಿಂಗಳಲ್ಲಿ ಗೂಗಲ್‌ನಲ್ಲಿ ಈ ರೀತಿಯ ದೊಡ್ಡ ಮಟ್ಟದ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಗೂಗಲ್‌ನ ಎಐ-ಚಾಲಿತ ಸರ್ಚ್‌ ಸೇವೆ, ಸರ್ಚ್ ಜನರೇಟಿವ್ ಎಕ್ಸ್‌ಪೀರಿಯನ್ಸ್ (SGE) ಪ್ರಾರಂಭದೊಂದಿಗೆ ಈ ಪ್ರಯಾಣವು ಪ್ರಾರಂಭವಾಗಿದ್ದು, ಈ ಎಸ್‌ಇಜಿ ಸಾಂಪ್ರದಾಯಿಕ ಸರ್ಚ್‌ ಫಲಿತಾಂಶಗಳು ಮತ್ತು ಜಾಹೀರಾತುಗಳ ಜೊತೆಗೆ ಸಂಕ್ಷಿಪ್ತ ಮಾಹಿತಿ ಮತ್ತು ಪ್ರತಿಕ್ರಿಯೆಗಳನ್ನು ನೀಡಲು ಎಐ ಅಲ್ಗಾರಿದಮ್‌ ಅನ್ನು ಬಳಕೆ ಮಾಡುತ್ತದೆ.

ಎಸ್‌ಇಜಿ ಯ ಅಳವಡಿಕೆಯು ಉತ್ತಮ ಬಳಕೆದಾರ ಅನುಭವಗಳನ್ನು ನೀಡುತ್ತದೆ. ಇದು ಗೂಗಲ್‌ನ ಸ್ಥಾಪಿತ ವ್ಯವಹಾರ ಮಾದರಿಗೆ ಮೂಲಭೂತ ಸವಾಲನ್ನು ಸಹ ಒಡ್ಡುತ್ತದೆ ಎಂದು ಕಂಡುಕೊಳ್ಳಲಾಗಿದೆ. ಅಂದರೆ ಎಐ ಸರ್ಚ್‌ ಸಾರಾಂಶಗಳ ರೂಪದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದರೆ ಜನರು ಇತರೆ ವೆಬ್‌ಸೈಟ್ ಲಿಂಕ್‌ಗಳನ್ನು ಕ್ಲಿಕ್ ಮಾಡುವುದಿಲ್ಲ. ಇದರಿಂದಾಗಿ ಗೂಗಲ್‌ ಕಡಿಮೆ ಜಾಹೀರಾತು ಇಂಪ್ರೆಶನ್‌ಗಳನ್ನು ಪಡೆಯುತ್ತದೆ.

Best Mobiles in India

English summary
Google is plan to introduce a premium subscription for AI-powered search features. But traditional Google search is free.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+