ಭಾರತದಲ್ಲಿ ಶೀಘ್ರವೇ ಗೂಗಲ್ 'ಶಾಪಿಂಗ್' ಟ್ಯಾಬ್ ಆರಂಭ!!
ಸರ್ಜ್ ಎಂಜಿನ್ ದೈತ್ಯ ಕಂಪೆನಿ ಗೂಗಲ್ ಶೀಘ್ರದಲ್ಲೇ ಭಾರತದಲ್ಲಿ ತನ್ನ 'ಶಾಪಿಂಗ್' ಟ್ಯಾಬ್ ಆರಂಭಿಸುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಇ ಕಾಮರ್ಸ್ ಕಂಪೆನಿಗಳು ಮತ್ತು ವ್ಯಾಪಾರಿ ವೆಬ್‌ಸೈಟ್ ಪ್ಲಾಟ್‌ಫಾರ್ಮ್‌ಗಳಿಗೆ ನಿರ್ದೇಶಿಸಲು ಹಾಗೂ ಬಳಕೆದಾರರಿಗೆ ಉತ್ಪನ್ನಗಳನ್ನು ಹುಡುಕಲು ಅನುವು ಮಾಡಿಕೊಡುವಂತಹ ಟ್ಯಾಬ್ ಇದಾಗಿರಲಿದೆ ಎಂದು ಹೇಳಲಾಗಿದೆ.
ಗೂಗಲ್ ಪರಿಚಯಿಸಲಿರುವ ಈ ನೂತನ ಟ್ಯಾಬ್‌ನಲ್ಲಿ ಬಳಕೆದಾರರು ತಮಗೆ ಬೇಕಾದ ಉತ್ಪನ್ನಗಳನ್ನು ಹುಡುಕಬಹುದಾಗಿದ್ದು, ಗ್ರಾಹಕರನ್ನು ಸಂಬಂಧಿಸಿದ ಇ-ಕಾಮರ್ಸ್ ತಾಣಗಳಿಗೆ ಈ ಟ್ಯಾಬ್ ಕರೆದೊಯ್ಯುತ್ತದೆ ಎನ್ನಲಾಗಿದೆ. ಈ ಬಗ್ಗೆ ಇಮೇಲ್‌ನಲ್ಲಿ ಪ್ರತಿಕ್ರಿಯಿಸಿರುವ ಗೂಗಲ್ ವಕ್ತಾರರು ,ವರ್ಷಾಂತ್ಯದ ವೇಳೆಗೆ ಈ ಟ್ಯಾಬ್ ಬಿಡುಗಡೆಯಾಗುವ ಸಾಧ್ಯತೆ ಬಗ್ಗೆ ಹೇಳಿದ್ದಾರೆ.

ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು ಹುಡುಕಲು ಗೂಗಲ್‌ನ ಶಾಪಿಂಗ್ ಟ್ಯಾಬ್ ವಿಶಿಷ್ಟವಾಗಿ ನೆರವು ನೀಡಲಿದ್ದು, ಸ್ಥಳೀಯ ವರ್ತಕರನ್ನು ಗ್ರಾಹಕರ ಜತೆ ಬೆಸೆಯುವ ಕೆಲಸವನ್ನು ಈ ಟ್ಯಾಬ್ ಮಾಡಲಿದೆ. ದೊಡ್ಡ ಇ-ಕಾಮರ್ಸ್ ಕಂಪೆನಿಗಳ ಹೊರತಾಗಿ, ಸಣ್ಣ ಮತ್ತು ಮಧ್ಯಮ ಆನ್‌ಲೈನ್ ಉದ್ಯಮಗಳನ್ನು ಸಹ ಮೇಲಕ್ಕೆತ್ತುವ ಗುರಿಯನ್ನು ಗೂಗಲ್ ಹಾಕಿಕೊಂಡಿರುವಂತಿದೆ.
ಕಿರಾಣಿ ಸ್ಟೋರ್‌ಗಳಿಂದ ಹಿಡಿದು, ಕೊನೆಯ ಕರಕುಶಲ ಮಳಿಗೆಗಳವರೆಗೆ ಬಳಕೆದಾರರು ಹುಡುಕುತ್ತಿರುವ ಉತ್ಪನ್ನಗಳನ್ನು ಕಂಡುಹಿಡಿಯಲು ಈ ಗೂಗಲ್ 'ಶಾಪಿಂಗ್ ಟ್ಯಾಬ್' ಸಹಾಯ ಮಾಡಲಿದೆ. ಬಳಕೆದಾರರು ತಮ್ಮ ಹುಡುಕಾಟದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಗಳಿಸುತ್ತಾರೆ. ಉತ್ಪನ್ನದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು ಎಂದು ಮಾಹಿತಿಗಳು ತಿಳಿಸಿವೆ.

ಈ ಸುದ್ದಿ ಮತ್ತೊಂದು ರೀತಿಯಲ್ಲಿ ವೈರಲ್ ಆಗಿದ್ದು, ಗೂಗಲ್‌ನ ಶಾಪಿಂಗ್ ಟ್ಯಾಬ್ ಎಂಬುದು ಅಂತಿಮವಾಗಿ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಗೂಗಲ್ ಹೆಜ್ಜೆಯನ್ನಿಡಬಹುದು ಕೆಲವು ತಜ್ಞರು ಭಾವಿಸುತ್ತಿದ್ದಾರೆ. ಜನಪ್ರಿಯ ಇ ಕಾಮರ್ಸ್ ಜಾಲತಾಣ ಅಮೆಜಾನ್ ಬೆಳವಣಿಗೆಯನ್ನು ನೋಡುತ್ತಿರುವ ಗೂಗಲ್ 'ಶಾಪಿಂಗ್' ಟ್ಯಾಬ್ ಆರಂಭಿಸುವ ಉದ್ದೇಶ ಇದೂ ಕೂಡ ಆಗಿರಬಹುದು.
ಓದಿರಿ: ಚೀನಾದಲ್ಲಿ ಓಡಲಿರುವ 4000 ಕಿ.ಮಿ ವೇಗದ 'ಫ್ಲೈಯಿಂಗ್ ಟ್ರೈನ್'!..ಹೇಗಿದೆ ಗೊತ್ತಾ?!


Click it and Unblock the Notifications








