ಚೀನಾದಲ್ಲಿ ಓಡಲಿರುವ 4000 ಕಿ.ಮಿ ವೇಗದ 'ಫ್ಲೈಯಿಂಗ್ ಟ್ರೈನ್'!..ಹೇಗಿದೆ ಗೊತ್ತಾ?!

|

ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವ ಒಂದು ಬೈಕ್ ವೇಗಕ್ಕೆ ನಾವು ಭಯ ಪಡುತ್ತೇವೆ. ಆದರೆ, ನಮ್ಮ ನೆರೆ ರಾಷ್ಟ್ರ ಚೀನಾದಲ್ಲಿ ಗಂಟೆಗೆ 4000 ಕಿ.ಮಿ ವೇಗದಲ್ಲಿ ಚಲಿಸುವ ಟ್ರೈನ್ ಒಂದನ್ನು ಅಭಿವೃದ್ದಿಪಡಿಸುತ್ತಿರುವ ಸುದ್ದಿ ನಿಮಗಿನ್ನೆಷ್ಟು ಆಶ್ಚರ್ಯವಾಗಬಹುದು. ಹೌದು, ಇಂತಹದೊಂದು ಕಿವಿಗೆ ಬಿದ್ದರೆ ಯಾರೂ ನಂಬುವುದಿಲ್ಲ. ಆದರೆ, ಎಲ್ಲರೂ ನಂಬಲೇಬೇಕು.!

ಚೀನಾದ ಏರರೋಸ್ಪೇಸ್ ಅಂಡ್ ಇಂಡಸ್ಟ್ರಿ ಕಾರ್ಪೋರೇಷನ್ ಸಂಸ್ಥೆ ಇಂತಹದೊಂದು ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಪ್ರಸ್ತುತ ಚೀನಾದಲ್ಲಿನ ಟ್ರೈನ್ ವೇಗಕ್ಕಿಂತ ನಲವತ್ತು ಪಟ್ಟು ವೇಗದಲ್ಲಿ ಚಲಿಸುವ ಫ್ಲೈಯಿಂಗ್ ಟ್ರೈನ್ ಒಂದನ್ನು ಅಭಿವೃದ್ದಿಪಡಿಸಲು ಮುಂದಾಗಿದೆ. ತನ್ನ ಸುಧೀರ್ಘ ಸಂಶೋಧನೆಯ ನಂತರ ಭವಿಷ್ಯದ ಟ್ರೈನ್ ಅನ್ನು ತಯಾರಿಸಲು ಚೀನಾ ಮುಂದಾಗಿದೆ.

ಚೀನಾದಲ್ಲಿ ಓಡಲಿರುವ 4000 ಕಿ.ಮಿ ವೇಗದ 'ಫ್ಲೈಯಿಂಗ್ ಟ್ರೈನ್'!..ಹೇಗಿದೆ ಗೊತ್ತಾ?!

2018ನೇ ಮಾಸ್ ಇನ್ನೋವೇಶನ್ ಮತ್ತು ಎಂಟರ್ಪ್ರೆನ್ಯೂರ್ಶಿಪ್ ವೀಕ್‌ನಲ್ಲಿ ಭವಿಷ್ಯದ ಫ್ಲೈಯಿಂಗ್ ಟ್ರೈನ್ ಮಾದರಿಯೊಂದನ್ನು ಸಹ ಪರಿಚಯಿಸಿದೆ. ಹಾಗಾದರೆ, ಏನಿದು ಫ್ಲೈಯಿಂಗ್ ಟ್ರೈನ್ ಯೋಜನೆ?, ಫ್ಲೈಯಿಂಗ್ ಟ್ರೈನ್ ಯಾವ ತಂತ್ರಜ್ಞಾನವನ್ನು ಹೊತ್ತು ಬರುತ್ತಿದೆ? ಫ್ಲೈಯಿಂಗ್ ಟ್ರೈನ್ ತಯಾರಿಕೆಯಲ್ಲಿರುವ ಚೀನಾದ ಉದ್ದೇಶಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಈಗ ಕಲ್ಪನೆಯಾಗಿ ಉಳಿದಿಲ್ಲ.

ಈಗ ಕಲ್ಪನೆಯಾಗಿ ಉಳಿದಿಲ್ಲ.

ಚೀನಾದ ಏರೋಸ್ಪೇಸ್ ಅಂಡ್ ಇಂಡಸ್ಟ್ರಿ ಮುಖ್ಯ ಕಾರ್ಯನಿರ್ವಾಹಕ ಲಿಯು ಶಿಖಾನ್ ಅವರು ಇಂತಹದೊಂದು ಕಲ್ಪನೆಯನ್ನು ಅನಾವರಣಗೊಳಿಸಿದಾಗ ಯಾರೂ ಕೂಡ ನಂಬಿರಲಿಲ್ಲ. ಆದರೆ, ಪ್ಯಾಸೆಂಜರ್ ವಿಮಾನಗಳಿಗೂ ತಲುಪಲಾಗದಷ್ಟು ವೇಗದ ಟ್ರೈನ್ ಈಗ ಕಲ್ಪನೆಯಾಗಿ ಉಳಿದಿಲ್ಲ. ಏಕೆಂದರೆ, ಈಗ ಫ್ಲೈಯಿಂಗ್ ಟ್ರೈನ್ ಯಶಸ್ವಿ ಮಾದರಿ ಪ್ರದರ್ಶನಕ್ಕೆ ಬಂದಿದೆ.

2015ರಿಂದಲೇ ನಡೆದಿದೆ ಅಭಿವೃದ್ದಿ!

2015ರಿಂದಲೇ ನಡೆದಿದೆ ಅಭಿವೃದ್ದಿ!

018ನೇ ಮಾಸ್ ಇನ್ನೋವೇಶನ್ ಮತ್ತು ಎಂಟರ್ಪ್ರೆನ್ಯೂರ್ಶಿಪ್ ವೀಕ್‌ನಲ್ಲಿ ಪ್ರದರ್ಶನವಾಗಿರುವ ಭವಿಷ್ಯದ ಫ್ಲೈಯಿಂಗ್ ಟ್ರೈನ್ ಮಾದರಿ ಈಗ ಬಿಡುಗಡೆಯಾಗಿದೆ. ಆದರೆ, ಇಂತಹದೊಂದು ಯೋಜನೆಯನ್ನು 2015 ರಿಂದಲೇ ಚೀನಾದ ಏರೋಸ್ಪೇಸ್ ಸೈನ್ಸ್ ಆಂಡ್ ಇಂಡಸ್ಟ್ರಿ ಕಾರ್ಪೊರೇಷನ್ ಲಿಮಿಟೆಡ್ ಅಭಿವೃದ್ಧಿ ಪಡಿಸುತ್ತಾ ಬಂದಿರುರುವುದನ್ನು ನಾವು ನೋಡಬಹುದು.

4000 ಕಿ.ಮಿ ವೇಗದ ಟ್ರೈನ್!

4000 ಕಿ.ಮಿ ವೇಗದ ಟ್ರೈನ್!

ಏರೋಸ್ಪೇಸ್ ಸೈನ್ಸ್ ಆಂಡ್ ಇಂಡಸ್ಟ್ರಿ ಕಾರ್ಪೊರೇಷನ್ ಲಿಮಿಟೆಡ್ ತಯಾರಿಸಲು ಮುಂದಾಗಿರುವ ಈ ಹೈಪರ್ ಪ್ಲೈಟ್ ಯೋಜನೆ ಮೂರು ಹಂತಗಳನ್ನು ಹೊಂದಿದೆ. 1000 ಕಿ.ಮೀ ರೀಜಿನಲ್ ನೆಟ್ವರ್ಕ್, 2000 ಕಿ.ಮೀ ವೇಗದಲ್ಲಿ ನ್ಯಾಷನಲ್ ನೆಟ್ವರ್ಕ್ ಹಾಗೂ 4000 ಕಿ.ಮೀ ವೇಗದಲ್ಲಿ ಅಂತರಾಷ್ಟ್ರೀಯ ನೆಟ್ವರ್ಕ್ ಅನ್ನು ಬೆಸೆಯುವ ಗುರಿಯನ್ನು ಹಾಕಿಕೊಂಡಿದೆ.

2025ಕ್ಕೆ 1000 ಕಿ.ಮೀ ಪ್ಲೈಯಿಂಗ್ ಟ್ರೈನ್!

2025ಕ್ಕೆ 1000 ಕಿ.ಮೀ ಪ್ಲೈಯಿಂಗ್ ಟ್ರೈನ್!

ಚೀನಾದಲ್ಲಿ ಈಗ ಗಂಟೆಗೆ 350 ಕಿ.ಮೀ ವೇಗದಲ್ಲಿ ಕ್ರಮಿಸುವ ಬುಲೆಟ್ ಟ್ರೈನ್ ಬಳಕೆಯಲ್ಲಿದ್ದು, 2025 ರ ವೇಳೆಗೆ ಚೀನಾದಲ್ಲಿ 1000 ಕಿ.ಮೀ ಪ್ಲೈಯಿಂಗ್ ಟ್ರೈನ್ ಓಡಿಸುವ ಗುರಿಯನ್ನು ಏರೋಸ್ಪೇಸ್ ಸೈನ್ಸ್ ಆಂಡ್ ಇಂಡಸ್ಟ್ರಿ ಕಾರ್ಪೊರೇಷನ್ ಲಿಮಿಟೆಡ್ ಹಾಕಿಕೊಂಡಿದೆ. ಈ ಗುರಿಯನ್ನು ಮುಟ್ಟಲು 30 ಕ್ಕಿಂತ ಹೆಚ್ಚು ವಿಜ್ಞಾನಿಗಳ ತಂಡಗಳು ಕಾರ್ಯದಲ್ಲಿ ತೊಡಗಿಕೊಂಡಿವೆ.

ಹೇಗಿದೆ ಪ್ಲೈಯಿಂಗ್ ಟ್ರೈನ್?

ಹೇಗಿದೆ ಪ್ಲೈಯಿಂಗ್ ಟ್ರೈನ್?

ಬಿಡುಗಡೆಯಾಗಿರುವ 1000ಕಿ.ಮೀ ವೇಗದಲ್ಲಿ ಚಲಿಸುವ ಮಾದರಿ ಪ್ಲೈಯಿಂಗ್ ಟ್ರೈನ್ ವಿಶೇಷತೆ ಎಂದರೆ, ಈ ಫ್ಲೈಯಿಂಗ್ ಟ್ರೈನ್ 29.2 ಮೀಟರ್ ಉದ್ದ ಮತ್ತು 3 ಮೀಟರ್ ಅಗಲವಿದೆ. ಟ್ರೈನಿನ ಮಾದರಿಯಲ್ಲಿ ಬೆಳಕು ಮತ್ತು ಶಾಖ-ನಿರೋಧಕ ಕ್ಯಾಬಿನ್ ವ್ಯವಸ್ಥೆ ಇರುವಂತೆ ರೂಪಿಸಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಟ್ರೈನ್ ಒಳಬಾಗದಲ್ಲಿ ನೀಡಲಗಿದೆ.

ಪ್ಲೈಯಿಂಗ್ ಟ್ರೈನ್ ತಂತ್ರಜ್ಞಾನವೇನು?

ಪ್ಲೈಯಿಂಗ್ ಟ್ರೈನ್ ತಂತ್ರಜ್ಞಾನವೇನು?

ಪ್ರಸ್ತಾಪವಾಗಿರುವ ಪ್ಲೈಯಿಂಗ್ ಟ್ರೈನ್ ವಾಕ್ಯೂಮ್ ರೈಲ್ವೇ ಎನ್ವಿರನ್‍ಮೆಂಟ್ ಮತ್ತು ಮ್ಯಾಗ್ನೆಟಿಕ್ ಲೆವಿಟೇಷನ್ ತಂತ್ರಜ್ಞಾನವನ್ನು ಬಳಸಿ ಚಲಿಸುತ್ತದೆ ಎಂದು ಹೇಳಲಾಗಿದೆ. ಈ ತಂತ್ರಜ್ಞಾನದಲ್ಲಿ ಪ್ಲೈಯಿಂಗ್ ಟ್ರೈನ್ ರೈಲ್ವೆ ಕಂಬಿಗಳಿಗಿಂದ 100 ಮಿಲಿಮೀಟರ್ ಎತ್ತರದಲ್ಲಿ ಸಂಚರಿಸಲಿದೆಯಂತೆ. ಈ ರೈಲು ನಿಧಾನವಾಗಿ ತನ್ನ ವೇಗವನ್ನ ಹೆಚ್ಚಿಸಿಕೊಳ್ಳಿದೆಯಂತೆ.

ಫ್ಲೈಯಿಂಗ್ ಟ್ರೈನ್ ತಯಾರಿಕೆ ಉದ್ದೇಶವೇನು?

ಫ್ಲೈಯಿಂಗ್ ಟ್ರೈನ್ ತಯಾರಿಕೆ ಉದ್ದೇಶವೇನು?

ವಿಶ್ವ ದಿಗ್ಗಜ ರಾಷ್ಟ್ರ ಎಂದು ಗುರುತಿಸಿಕೊಳ್ಳಬೇಕು ಎಂದು ಪಣತೊಟ್ಟಿರುವ ಚೀನಾ ಭವಿಷ್ಯದ ಪ್ಲೈಯಿಂಗ್ ಟ್ರೈನ್ ತಯಾರಿಕೆಗೆ ನಿಂತಿದೆ. ವಿಶ್ವ ಸಾರಿಗೆಯ ಮೇಲೆ ತನ್ನ ನಿಯಂತ್ರಣ ಹೇರಲು ಚೀನಾ ಈ ಯೋಜನೆ ಮೇಲೆ ಭಾರೀ ವೆಚ್ಚ ಮಾಡುತ್ತಿದೆ. ಈಗಲೂ ವಿಶ್ವದಲ್ಲೇ ಅತಿ ದೊಡ್ಡ ಹೈ ಸ್ಪೀಡ್ ರೈಲಿನ ಜಾಲವನ್ನು ಹೊಂದಿರುವ ಚೀನಾ ಇದರಲ್ಲಿ ಯಶಸ್ವಿಯಾಗುವ ಅಭಿಲಾಷೆಯನ್ನು ಸಹ ಹೊಂದಿದೆ.

Best Mobiles in India

English summary
China has unveiled a scale model of new high-speed flight train that is expected to travel at 1,000 kms an hour by 2025, the state-run media reported on Friday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X